ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻವಾರಣಾಸಿʼ ಚಿತ್ರದಲ್ಲಿ ಮಹೇಶ್‌ ಬಾಬುಗೆ ತಂದೆಯಾದ ʻಕನ್ನಡದ ಆ ಸ್ಟಾರ್‌ ನಟʼ! ಹಿಟ್‌ ಜೋಡಿಗೆ ಮತ್ತೆ ಮಣೆ ಹಾಕಿದ ರಾಜಮೌಳಿ!

Varanasi Movie Cast: ನಿರ್ದೇಶಕ ರಾಜಮೌಳಿ ಮತ್ತು ಸೂಪರ್‌ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನ 'ವಾರಣಾಸಿ' ಚಿತ್ರಕ್ಕೆ ಕರ್ನಾಟಕ ಮೂಲದ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಸೇರ್ಪಡೆಗೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಚಿತ್ರದಲ್ಲಿ ಮಹೇಶ್ ಬಾಬು ಅವರ ತಂದೆಯ ಪಾತ್ರದಲ್ಲಿ ಪ್ರಕಾಶ್ ರಾಜ್ ಅವರು ನಟಿಸಲಿದ್ದಾರೆ ಎನ್ನಲಾಗಿದೆ.

ರಾಜಮೌಳಿಯ ʻವಾರಣಾಸಿʼ ಚಿತ್ರಕ್ಕೆ ಕರುನಾಡ ಮೂಲದ ಖ್ಯಾತ ನಟ ಎಂಟ್ರಿ!

-

Avinash GR
Avinash GR Dec 15, 2025 7:27 PM

ನಿರ್ದೇಶಕ ರಾಜಮೌಳಿ ಮತ್ತು ʻಸೂಪರ್‌ ಸ್ಟಾರ್ʼ ಮಹೇಶ್ ಬಾಬು ಕಾಂಬಿನೇಷನ್‌ನ 'ವಾರಣಾಸಿ' ಚಿತ್ರದ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಗ್ಲೋಬ್ ಟ್ರಾಟರ್ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಮಹೇಶ್ ಬಾಬು ಅವರ ಫಸ್ಟ್ ಲುಕ್ ಮತ್ತು 'ವಾರಣಾಸಿ' ಚಿತ್ರದ ಗ್ಲಿಂಪ್ಸ್‌ಗಳಿಗೆ ಅದ್ಭುತ ಪ್ರತಿಕ್ರಿಯೆ ಪಡೆದಿವೆ. ಇದೀಗ ಈ ಚಿತ್ರದಲ್ಲಿ ಮಹೇಶ್ ಅವರ ತಂದೆಯ ಪಾತ್ರದಲ್ಲಿ ನಟಿಸಲು ಕರ್ನಾಟಕ ಮೂಲದ ಬಹುಭಾಷಾ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

ಮಹೇಶ್ ಬಾಬು ಜೊತೆಗಿನ ರಾಜಮೌಳಿಯ ಮೊದಲ ಸಿನಿಮಾ ಇದಾಗಿರುವುದರಿಂದ ಈ ಚಿತ್ರವು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ಗಮನ ಸೆಳೆದಿದೆ. ಗ್ಲೋಬ್ ಟ್ರಾಟರ್ ಕಾರ್ಯಕ್ರಮವು ವಾರಣಾಸಿ ಚಿತ್ರದ ಹೈಪ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಇದೀಗ ಪ್ರಕಾಶ್‌ ರಾಜ್‌ ಎಂಟ್ರಿ ಸುದ್ದಿ ಸಖತ್‌ ಸದ್ದು ಮಾಡುತ್ತಿದೆ. ಹೌದು, ಈಗಾಗಲೇ ಪ್ರಕಾಶ್‌ ರಾಜ್‌ ಅವರು ವಾರಣಾಸಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಈ ಚಿತ್ರದಲ್ಲಿ ಮಹೇಶ್ ಬಾಬು ತಂದೆಯ ಪಾತ್ರವು ಬಹಳ ಮುಖ್ಯವಾಗಿದ್ದು, ಅದಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ರಾಜಮೌಳಿ ಅವರು ಹಲವು ಹಿರಿಯ ನಟರೊಂದಿಗೆ ಲುಕ್ ಟೆಸ್ಟ್‌ಗಳನ್ನು ನಡೆಸಿದ್ದಾರಂತೆ.

Varanasi title dispute: ರಾಜಮೌಳಿ 'ವಾರಣಾಸಿ' ಸಿನಿಮಾ ಟೈಟಲ್‌ ವಿವಾದ; ದೊಡ್ಡ ಮೊತ್ತದ ಹಣ ವ್ಯರ್ಥ?

ಅಂತಿಮವಾಗಿ ಪ್ರಕಾಶ್ ರಾಜ್ ಅವರನ್ನು ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿದೆ ಇದೆಯಂತೆ. ಒಂದು ಮೂಲದ ಪ್ರಕಾರ, ಪ್ರಕಾಶ್ ರಾಜ್ ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣವೂ ಪ್ರಾರಂಭವಾಗಿದೆ ಎನ್ನಲಾಗುತ್ತಿದೆ. ಅಸಲಿಗೆ ಈ ಸುದ್ದಿ ಮಹೇಶ್‌ ಬಾಬು ಅಭಿಮಾನಿಗಳು ಖುಷಿ ನೀಡಿದೆ. ಯಾಕೆ ಗೊತ್ತಾ?

ಇಬ್ಬರು ಸೇರಿದರೆ ಹಿಟ್‌ ಗ್ಯಾರಂಟಿ!

ಈ ಹಿಂದೆ ಮಹೇಶ್ ಬಾಬು ಮತ್ತು ಪ್ರಕಾಶ್ ರಾಜ್ ಒಟ್ಟಿಗೆ ಒಕ್ಕಡು, ಪೋಕಿರಿ, ಆತಡು, ಅರ್ಜುನ್, ಸೀತಮ್ಮ ವಕಿಟ್ಲೋ ಸಿರಿಮಲ್ಲೆ ಚೆಟ್ಟು ಮತ್ತು ದೂಕುಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವೆಲ್ಲವೂ ಸೂಪರ್‌ ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾಗಳಾಗಿವೆ. ಅದರಲ್ಲೂ ಪೊಕಿರಿ ಅಂತೂ ಇಂಡಸ್ಟ್ರೀ ಹಿಟ್‌ ಆಗಿತ್ತು. ಇನ್ನು, ದೂಕುಡು ಮತ್ತು ಸೀತಮ್ಮ ವಕಿಟ್ಲೋ ಸಿರಿಮಲ್ಲೆ ಚೆಟ್ಟು ಚಿತ್ರಗಳಲ್ಲಿ ಪ್ರಕಾಶ್ ರಾಜ್ - ಮಹೇಶ್ ಬಾಬು ತಂದೆ ಮಗನಾಗಿ ಕಾಣಿಸಿಕೊಂಡಿದ್ದರು. ಈಗ ಅದೇ ರೀತಿ ಮತ್ತೊಮ್ಮೆ ರಾಜಮೌಳಿಯ ವಾರಣಾಸಿಯಲ್ಲೂ ಕಾಣಿಸಿಕೊಳ್ಳುತ್ತಾರೆ ಎಂದಾಗ ಅಭಿಮಾನಿಗಳಿಗೆ ಖುಷಿಯಾಗುತ್ತಿದ್ದಾರೆ. ಸಹಜವಾಗಿ ಅವರಲ್ಲಿ ಸಂತೋಷ ಮೂಡಿದೆ.

SSMB29: ಕೊಟ್ಟ ಮಾತಿಗೆ ತಪ್ಪಿ ನಡೆಯದ ರಾಜಮೌಳಿ; 'ವಾರಣಾಸಿ' ಚಿತ್ರಕ್ಕಿದೆ 15 ವರ್ಷಗಳ ಹಿಂದಿನ ಒಪ್ಪಂದದ ಇತಿಹಾಸ!

ಪ್ರಕಾಶ್‌ ರಾಜ್‌ ಕುರಿತ ಪೋಸ್ಟ್‌



ಅಂದಹಾಗೆ, ಇದೇ ತಂದೆ ಪಾತ್ರವನ್ನು ನಟ ಮಾಧವನ್ ಅವರು ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅದೆಲ್ಲವೂ ಸುಳ್ಳು ಎಂಬುದು ನಂತರ ತಿಳಿಯಿತು. ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿರುವ ವಾರಣಾಸಿ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ಯಾನ್-ವರ್ಲ್ಡ್ ಸಿನಿಮಾವಾಗಿ ತಯಾರಾಗುತ್ತಿರುವ ಈ ಚಿತ್ರವು 2027ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.