ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SSMB29: ಕೊಟ್ಟ ಮಾತಿಗೆ ತಪ್ಪಿ ನಡೆಯದ ರಾಜಮೌಳಿ; 'ವಾರಣಾಸಿ' ಚಿತ್ರಕ್ಕಿದೆ 15 ವರ್ಷಗಳ ಹಿಂದಿನ ಒಪ್ಪಂದದ ಇತಿಹಾಸ!

SSMB29: ರಾಜಮೌಳಿ ಅವರು ತಮ್ಮ ಮೆಗಾ ಪ್ರಾಜೆಕ್ಟ್ 'ವಾರಣಾಸಿ' ಸಿನಿಮಾ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಸಾವಿರ ಕೋಟಿ ಬಜೆಟ್‌ನ ಈ ಚಿತ್ರದ ಫಸ್ಟ್‌ ಲುಕ್ ರಿಲೀಸ್ ಆಗಿದ್ದು, ಇದರ ಹಿಂದೆ 15 ವರ್ಷಗಳ ಹಳೆಯ ಕಥೆಯಿದೆ. ಈ ಸಿನಿಮಾ ಮಾಡಲು ನಿರ್ಮಾಪಕ ಡಾ. ಕೆ. ಎಲ್. ನಾರಾಯಣ ಅವರಿಂದ 2010ರ ಆಸುಪಾಸಿನಲ್ಲಿ ರಾಜಮೌಳಿ ಅಡ್ವಾನ್ಸ್ ಪಡೆದು ಕಮಿಟ್ ಆಗಿದ್ದರು.

Rajamouli: 'ವಾರಣಾಸಿ' ಚಿತ್ರಕ್ಕಾಗಿ 15 ವರ್ಷಗಳ ಹಿಂದೆಯೇ ಆಗಿತ್ತು ಒಪ್ಪಂದ

-

Avinash GR
Avinash GR Nov 16, 2025 6:38 PM

ರಾಜಮೌಳಿ ಮತ್ತು ಮಹೇಶ್‌ ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ ʻವಾರಣಾಸಿʼ ಟೀಮ್ ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಗ್ರ್ಯಾಂಡ್‌ ಆಗಿ ಫಸ್ಟ್‌ ಲುಕ್‌ ರಿಲೀಸ್ ಮಾಡಿದೆ. ಇದರ ಬಜೆಟ್‌ ಸಾವಿರ ಕೋಟಿ ಎಂಬ ಮಾತಿದೆ. ಸಿಕ್ಕಾಪಟ್ಟೆ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಸಿನಿಮಾದ ಒಂದು ಇಂಟರೆಸ್ಟಿಂಗ್‌ ಕಥೆ ಇದೆ. ಅದು ಇಂದು ನಿನ್ನೆಯದಲ್ಲ, 15 ವರ್ಷಗಳ ಹಿಂದಿನದು!

15 ವರ್ಷಗಳ ಹಿಂದೆ ಬುಕ್‌ ಆಗಿದ್ದ ರಾಜಮೌಳಿ

ʻವಾರಣಾಸಿʼ ಸಿನಿಮಾದ ನಿರ್ಮಾಪಕರು ಶ್ರೀ ದುರ್ಗಾ ಆರ್ಟ್ಸ್ ಸಂಸ್ಥೆಯ ಡಾ. ಕೆ. ಎಲ್. ನಾರಾಯಣ. ಈಗಿನವರಿಗೆ ಈ ಹೆಸರು ಸಿಕ್ಕಾಪಟ್ಟೆ ಅಪರಿಚಿತ. ಕಾರಣ, ನಾರಾಯಣ ಅವರು ಸಿನಿಮಾ ನಿರ್ಮಾಣ ಮಾಡಿಯೇ 19 ವರ್ಷಗಳಾಗಿವೆ. ಅಂದು ಜೂನಿಯರ್ ಎನ್‌ಟಿಆರ್, ಇಲಿಯಾನಾ, ಚಾರ್ಮಿ ಕೌರ್ ನಟನೆಯ ʻರಾಖಿʼ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅದಕ್ಕೂ ಮುಂಚೆ ಕ್ಷಣ ಕ್ಷಣಂ, ಹಲೋ ಬ್ರದರ್, ಇಂಟ್ಲೋ ಇಲ್ಲಾಲು ವಾಂಟಿಂಟ್ಲೋ ಪ್ರಿಯುರಾಲು, ದೊಂಗಾಟ, ನಿನ್ನೇ ಇಷ್ಟಪಡ್ಡಾನು, ಸಂತೋಷಂ ಮುಂತಾದ ಸಿನಿಮಾಗಳನ್ನು ನಾರಾಯಣ ನಿರ್ಮಾಣ ಮಾಡಿದ್ದರು.

Rajamouli: 120 ದೇಶಗಳಲ್ಲಿ SSMB 29 ರಿಲೀಸ್‌! ಬ್ಯುಸಿ ಶೂಟಿಂಗ್‌ ನಡುವೆಯೇ ಕೀನ್ಯಾ ಸಚಿವರನ್ನು ಭೇಟಿಯಾದ ರಾಜಮೌಳಿ

ನಾರಾಯಣ ಈಗ ವಾರಣಾಸಿ ಮೂಲಕ ಕಮ್‌ಬ್ಯಾಕ್‌ ಮಾಡಿದ್ದಾರೆ. ಅಂದಹಾಗೆ, ರಾಜಮೌಳಿ ಮತ್ತು ಮಹೇಶ್‌ ಬಾಬು ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಬೇಕು ಎಂದು ನಾರಾಯಣ 2010ರ ಅಸುಪಾಸಿನಲ್ಲಿ ಅಡ್ವಾನ್ಸ್‌ ಕೊಟ್ಟಿದ್ದರು. ಆಗಿನ್ನೂ ರಾಜಮೌಳಿ ʻಮಗಧೀರʼ ಸಿನಿಮಾ ಕೂಡ ಮಾಡಿರಲಿಲ್ಲ. ಆನಂತರ ʻಈಗʼ ಸಿನಿಮಾ ಮಾಡಿ ಮತ್ತಷ್ಟು ಫೇಮಸ್‌ ಆದ ರಾಜಮೌಳಿ ʻಬಾಹುಬಲಿʼ ಮೂಲಕ ಇಡೀ ಪ್ರಪಂಚಕ್ಕೆ ಗೊತ್ತಾದರು. ಅವರ ʻಆರ್‌ಆರ್‌ಆರ್‌ʼ ಎಂತಹ ಸಾಧನೆ ಮಾಡಿದೆ ಎಂಬುದು ಕೂಡ ಗೊತ್ತಿದೆ. ಸಹಜವಾಗಿ ಅವರಿಗೆ ಈಗ ಪ್ಯಾನ್‌ ವರ್ಲ್ಡ್‌ ಜನಪ್ರಿಯತೆ ಇದೆ. ಆದರೂ ಅವರು ತಮ್ಮ ಹಳೆಯ ಕಮಿಟ್‌ಮೆಂಟ್‌ ಮರೆಯಲಿಲ್ಲ. "ಒಂದಷ್ಟು ಬೇರೆ ಸಿನಿಮಾಗಳ ಕಮಿಟ್‌ಮೆಂಟ್‌ ಇದೆ. ಅದನ್ನು ಮುಗಿಸಿಕೊಂಡು ನಿಮ್ಮ ಜೊತೆ ಸಿನಿಮಾ ಮಾಡ್ತಿನಿ" ಎಂದು ನಾರಾಯಣಗೆ ರಾಜಮೌಳಿ ಮಾತುಕೊಟ್ಟಿದ್ದರು.

SS Rajamouli: ರಾಜಮೌಳಿಯ ಡ್ರೀಮ್‌ ಪ್ರಾಜೆಕ್ಟ್‌ ʼಮಹಾಭಾರತʼದಲ್ಲಿ ನಾನಿ; ಮತ್ತೆ ಒಂದಾಗಲಿದೆ ʼಈಗʼ ಜೋಡಿ

ಕೊಟ್ಟ ಮಾತನ್ನು ಮರೆಯಲಿಲ್ಲ ರಾಜಮೌಳಿ

ಇವತ್ತು ರಾಜಮೌಳಿ ಅವರಿಗೆ ಇರುವ ಮಾರ್ಕೆಟ್‌ ಎಂತಹದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಮನಸ್ಸು ಮಾಡಿದ್ದರೆ, ಹಾಲಿವುಡ್‌ ಸಿನಿಮಾ ನಿರ್ಮಾಣ ಸಂಸ್ಥೆಗಳ ಜೊತೆಗೆ ಕೈ ಜೋಡಿಸಬಹುದಿತ್ತು. ಪ್ಯಾನ್‌ ವರ್ಲ್ಡ್‌ ಹೀರೋಗಳ ಜೊತೆ ಸಿನಿಮಾ ಮಾಡಬಹುದಿತ್ತು. ರಾಜಮೌಳಿ ಯೆಸ್‌ ಎಂದರೆ, ಸಾವಿರಾರು ಕೋಟಿ ಹೂಡಿಕೆ ಮಾಡಲು ನಿರ್ಮಾಪಕರು ರೆಡಿ ಇದ್ದಾರೆ. ಆದರೂ 15 ವರ್ಷಗಳ ಹಿಂದೆ ಕಮಿಟ್‌ ಆಗಿದ್ದ ಕೆ ಎಲ್‌ ನಾರಾಯಣ ಅವರಿಗಾಗಿಯೇ ರಾಜಮೌಳಿ ವಾರಣಾಸಿ ಸಿನಿಮಾ ಮಾಡುತ್ತಿದ್ದಾರೆ. ಇದುವರೆಗೂ ಒಂದೇ ಒಂದು ಪ್ಯಾನ್‌ ಇಂಡಿಯಾ ಸಿನಿಮಾ ಮಾಡದ ಮಹೇಶ್‌ ಬಾಬು ಅವರನ್ನೇ ತಮ್ಮ ಹೀರೋವನ್ನಾಗಿ ಸೆಲೆಕ್ಟ್‌ ಮಾಡಿದ್ದಾರೆ. ಈ ಮೂಲಕ ಕೊಟ್ಟ ಮಾತನ್ನು ರಾಜಮೌಳಿ ಉಳಿಸಿಕೊಂಡಿದ್ದಾರೆ.

ಒಂಚೂರು ಜನಪ್ರಿಯತೆ ಸಿಕ್ಕರೂ ಸಾಕು ನಡೆದು ಬಂದ ಹಾದಿಯನ್ನೇ ಮರೆಯುವ ನಿರ್ದೇಶಕರು, ಕಲಾವಿದರ ಮಧ್ಯೆ ರಾಜಮೌಳಿ ಅವರು ತುಂಬಾ ಎತ್ತರದ ಸ್ಥಾನದಲ್ಲಿ ನಿಲ್ಲುವುದು ಇದೇ ಕಾರಣಕ್ಕೆ.