Varanasi Movie: ರಾಜಮೌಳಿಯನ್ನು ಹೊಗಳಿ, ಕುಂಭ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಪೃಥ್ವಿರಾಜ್
Prithviraj Sukumaran: ಮಹೇಶ್ ಬಾಬು ಈ ಚಿತ್ರದಲ್ಲಿ ಕುಂಭ ಪಾತ್ರದಲ್ಲಿ ನಟಿಸಿದ್ದಾರೆ, ಪ್ರಿಯಾಂಕಾ ಚೋಪ್ರಾ ಮಂದಾಕಿನಿ ಪಾತ್ರದಲ್ಲಿ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರತಿಸ್ಪರ್ಧಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು 2027 ರಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.ಈ ಚಿತ್ರದ ಫಸ್ಟ್ ಲುಕ್‌ನಲ್ಲಿ ನಂದಿಯನ್ನು ಏರಿ, ತ್ರಿಶೂಲ ಹಿಡಿದು ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಗ್ಲೋಬ್ ಟ್ರಾಟರ್ ಕಾರ್ಯಕ್ರಮದಲ್ಲಿ ಪೃಥ್ವಿರಾಜ್ ಹಾಜರಿದ್ದರು. ರಾಜಮೌಳಿ ಅವರೊಂದಿಗಿನ ತಮ್ಮ ಸಹಯೋಗದ ಬಗ್ಗೆ ಮಾತನಾಡಿದರು.
ನಟ ಪೃಥ್ವಿರಾಜ್ -
ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ಚಿತ್ರಕ್ಕೆ ʻವಾರಣಾಸಿʼ (Varanasi) ಎಂದು ಟೈಟಲ್ (Title) ಇಡಲಾಗಿದೆ. ಟೈಟಲ್ ಲಾಂಚ್ (Title Launch) ಮಾಡಲೆಂದೇ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ (Ramoji Film City) ಸಾವಿರಾರು ಅಭಿಮಾನಿಗಳ ನಡುವೆ ಕಾರ್ಯಕ್ರಮ ನಡೆದಿದೆ.
ಈ ತಿಂಗಳ ಆರಂಭದಲ್ಲಿ, ಚಲನಚಿತ್ರ ನಿರ್ಮಾಪಕ ಎಸ್.ಎಸ್. ರಾಜಮೌಳಿ ತಮ್ಮ ಮುಂಬರುವ ಚಿತ್ರ ವಾರಣಾಸಿಯಲ್ಲಿ ಪ್ರಬಲ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿರುವ ಪೃಥ್ವಿರಾಜ್ ಸುಕುಮಾರನ್ (Pruthviraj Sukumar) ಅವರ ಲುಕ್ ಹಂಚಿಕೊಂಡರು. ಮೊದಲ ಲುಕ್‌ವನ್ನು ಅನಾವರಣಗೊಳಿಸುವ ಮೂಲಕ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆ ಛತ್ರ ಅಲ್ಲ; ರಾಶಿಕಾ -ರಿಷಾಗೆ ಕಿಚ್ಚ ಸುದೀಪ್ ಎಚ್ಚರಿಕೆ
ಹೈದರಾಬಾದ್‌ನಲ್ಲಿ ನಡೆದ ಗ್ಲೋಬ್ ಟ್ರಾಟರ್ ಕಾರ್ಯಕ್ರಮದಲ್ಲಿ ಪೃಥ್ವಿರಾಜ್ ಹಾಜರಿದ್ದರು. ರಾಜಮೌಳಿ ಅವರೊಂದಿಗಿನ ತಮ್ಮ ಸಹಯೋಗದ ಬಗ್ಗೆ ಅವರು ದೀರ್ಘವಾಗಿ ಮಾತನಾಡಿದರು.
ಪೃಥ್ವಿರಾಜ್ ಹೇಳಿದ್ದೇನು?
ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ನಟ, "ನನ್ನ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ರಾಜಮೌಳಿ ಅವರು ಜೊತೆಗೆ ಕೆಲಸ ಮಾಡಲು ಬಯಸುತ್ತಿದ್ದೆ. ನನಗೆ ಕುಂಭ ಪಾತ್ರವನ್ನು ನೀಡಿ ಆ ಕನಸು ನನಸಾಗಿಸಿದರು. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಸವಾಲಿನ ಪಾತ್ರಗಳಲ್ಲಿ ಒಂದಾಗಿದೆʼ ಎಂದರು.
ʻಎಸ್.ಎಸ್. ರಾಜಮೌಳಿ ಭಾರತೀಯ ಸಿನಿಮಾವನ್ನು ತಮ್ಮ ಅತ್ಯಂತ ದಿಟ್ಟತನದಿಂದ ಜಗತ್ತಿಗೆ ಕೊಂಡೊಯ್ಯುತ್ತಿರುವುದು ಹೆಮ್ಮೆಯ ವಿಷಯ. ಮೊದಲಿಗೆ ರಾಜಮೌಳಿ ಅವರು ಕಥೆ ಹೇಳಿದಾಗ ನಾನು ಶಾಕ್ ಆಗಿದ್ದೆ. ಕಥೆ ಹೇಳಲು ಶುರು ಮಾಡಿದ ಐದೇ ನಿಮಿಷಕ್ಕೆ ನನಗೆ ಶಾಕ್ ಆಯ್ತು. ಆ ಕಲ್ಪನೆ ಹೇಗೆ ಬರುತ್ತದೆ? ಆ ವಿಷನ್ ಎಲ್ಲಿಂದ ಬರುತ್ತದೆ?" ಎಂದು ಪೃಥ್ವಿರಾಜ್ ಹೇಳಿದರು.
Prithviraj Sukumaran : "PeeCee I'm your biggest fan as I told you. Jhilmil from #Barfi is one of my favourite performances from an Indian actress"#GlobeTrotter #GlobeTrotterEvent #PrithvirajSukumaran #PriyankaChopra #SSMB29 pic.twitter.com/EqJ6WzSzRS
— Krrish (@worldofkrrish) November 15, 2025
ಪ್ರಿಯಾಂಕಾ ಚೋಪ್ರಾ ಮಂದಾಕಿನಿ ಪಾತ್ರ
ಮಹೇಶ್ ಬಾಬು ಈ ಚಿತ್ರದಲ್ಲಿ ಕುಂಭ ಪಾತ್ರದಲ್ಲಿ ನಟಿಸಿದ್ದಾರೆ, ಪ್ರಿಯಾಂಕಾ ಚೋಪ್ರಾ ಮಂದಾಕಿನಿ ಪಾತ್ರದಲ್ಲಿ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರತಿಸ್ಪರ್ಧಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು 2027 ರಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಈ ಚಿತ್ರದ ಫಸ್ಟ್ ಲುಕ್‌ನಲ್ಲಿ ನಂದಿಯನ್ನು ಏರಿ, ತ್ರಿಶೂಲ ಹಿಡಿದು ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ನೋಡಿದವರು ಥ್ರಿಲ್ ಆಗಿದ್ದಾರೆ. ಈ ಹಿಂದೆ ಟಾಲಿವುಡ್‌ನಲ್ಲಿ ಹಲೋ ಬ್ರದರ್, ಕ್ಷಣಕ್ಷಣಂ, ಸಂತೋಷಂ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿ, ʻರಾಕಿʼ ಚಿತ್ರದ ಬಳಿಕ ನಿರ್ಮಾಣದಿಂದ ದೂರವಾಗಿದ್ದ ಕೆ ಎಲ್ ನಾರಾಯಣ ಅವರು ʻವಾರಣಾಸಿʼ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada 12: ಸುದೀಪ್ ಅವರನ್ನೇ ಇಮಿಟೇಟ್ ಮಾಡಿದ ಗಿಲ್ಲಿ! ಬಿದ್ದು ಬಿದ್ದು ನಕ್ಕ ಕಿಚ್ಚ
ಅವರ ಜೊತೆಗೆ ರಾಜಮೌಳಿ ಪುತ್ರ ಎಸ್ ಎಸ್ ಕಾರ್ತಿಕೇಯ ಅವರು ಕೂಡ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಕಥೆ ವಿಚಾರಕ್ಕೆ ಬರೋದಾದರೆ ವಿಶ್ವದ ಅತ್ಯಂತ ಹಳೆಯ ನಗರವೆಂದು ಗುರುತಿಸಲ್ಪಟ್ಟ ವಾರಣಾಸಿ ಕಥೆಯ ಮುಖ್ಯ ಆಧಾರವಾಗಲಿದ್ದು, ನಾಯಕನ ಪ್ರಯಾಣವು ಅಲ್ಲಿಂದ ಪ್ರಾರಂಭವಾಗುತ್ತದೆ ಎಂದು ವರದಿಯಾಗಿದೆ.