ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Prithwi Bhat: ಬರಿಗೈಲಿ ಮನೆ ಬಿಟ್ಟು ಬಂದೆ! ಲವ್‌ ಸ್ಟೋರಿ ರಿವೀಲ್‌ ಮಾಡಿದ ಪೃಥ್ವಿ ಭಟ್

Prithwi Bhat abhi: ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಪೃಥ್ವಿ ಭಟ್. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಲ್ಲಿದ್ದರು. ತಂದೆ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಬಳಿಕ ಬೀದಿ ರಂಪಾಟವಾಗಿತ್ತು. ಈಗ ಸಂದರ್ಶನವೊಂದರಲ್ಲಿ ತಮ್ಮ ಲವ್‌ ಸ್ಟೋರಿ ಬಗ್ಗೆ ರಿವೀಲ್‌ ಮಾಡಿದ್ದಾರೆ. ಇವತ್ತಿಗೂ ನಾನು ಮಾಡಿದ್ದು ತಪ್ಪು ಎಂದು ತಂದೆ-ತಾಯಿಯನ್ನು ನೆನೆದು ಆಗಾಗ್ಗೆ ಅಳುತ್ತೇನೆ ಎಂದು ಪೃಥ್ವಿ ಭಟ್ ತಿಳಿಸಿದ್ದಾರೆ.

ಬರಿಗೈಲಿ ಮನೆ ಬಿಟ್ಟು ಬಂದೆ! ಲವ್‌ ಸ್ಟೋರಿ ರಿವೀಲ್‌ ಮಾಡಿದ ಪೃಥ್ವಿ ಭಟ್

ಪೃಥ್ವಿ ಭಟ್ -

Yashaswi Devadiga
Yashaswi Devadiga Apr 24, 2026 6:39 PM

ಗಾಯಕಿ ಪೃಥ್ವಿ ಭಟ್‌ (pruthvi bhat singer), ʻಜೀ ಕನ್ನಡʼ ವಾಹಿನಿಯಲ್ಲಿಯೇ ಪ್ರೊಡಕ್ಷನ್‌ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್‌ (Abhishek) ಎಂಬುವವರ ಜೊತೆ ಮದುವೆ ಆಗಿದ್ದರು. ತಿಂಗಳುಗಳ ಬಳಿಕ ಅದ್ಧೂರಿಯಾಗಿ ಈ ಜೋಡಿ ರಿಸೆಪ್ಶನ್‌ ಮಾಡಿಕೊಂಡಿತ್ತು. ನನ್ನ ಮಗಳ ಮೇಲೆ ವಶೀಕರಣ ಮಾಡಿ ಅಭಿ ಮದುವೆ ಮಾಡಿಕೊಂಡಿದ್ದಾನೆ ಎಂದು ತಂದೆ ಶಿವಪ್ರಸಾದ್ (Shiva Prasad) ಆರೋಪಿಸಿದ್ದರು. ಈ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಆದಷ್ಟು ಬೇಗ ತಂದೆ- ತಾಯಿ ನಮ್ಮಿಬ್ಬರನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಪೃಥ್ವಿ ಭಟ್ ಈಗ ಸಂದರ್ಶನವೊಂದರಲ್ಲಿ (Interview) ಮಾತನಾಡಿದ್ದಾರೆ.

ಗೌರವ ತುಂಬಾ ಇತ್ತು

ಪೃಥ್ವಿ ಭಟ್ ಮಾತನಾಡಿ, ʻಆ ಸಮಯದಲ್ಲಿ ತುಂಬಾ ಕಷ್ಟಕರ ದಿನಗಳು ಆಗಿತ್ತು. 2008ರಲ್ಲಿ ನನ್ನ ಹುಡುಗನನ್ನು ಮೀಟ್‌ ಮಾಡಿದೆ. ಸರಿಗಮಪ ಟೀಂ ಅಲ್ಲಿ ಭೇಟಿ ಮಾಡಿದ್ದೆ. ಮೊದಲಿಗೆ ಲವ್‌ ಏನೂ ಇರಲಿಲ್ಲ. ಅವರು ಅಂದರೆ ಎಲ್ಲರಿಗೂ ಇಷ್ಟ. ಹಾಗೇ ಅವರ ವ್ಯಕ್ತಿತ್ವ ಇತ್ತು. ನಾನು ಮದುವೆ ಆಗೋ ಒಂದು ವರ್ಷಕ್ಕೂ ಮುಂಚೆ, ನೀನು ಇಷ್ಟ ಎಂದಿದ್ದರು. ಮನೆಯಲ್ಲಿ ಒಮ್ಮೆ ಮಾತನಾಡಿ ಎಂದಿದ್ದೆ. ನನಗೆ ಅವರ ಮೇಲೆ ಗೌರವ ತುಂಬಾ ಇತ್ತು. ಅವರ ಜೊತೆ ಇದ್ದರೆ ಖುಷಿ ಆಗಿ ಇರುವೆ ಅನ್ನೋ ಭಾವನೆ ಬಂದಿತ್ತುʼ ಎಂದಿದ್ದಾರೆ.

ಇದನ್ನೂ ಓದಿ: Amruthadhaare Serial: ಕೇಡಿಗಳ ಕಾಟಕ್ಕೆ ಶಕುಂತಲಾ ತತ್ತರ; ಗೌತಮ್ ದಿವಾನ್ ಕೈ ಹಿಡಿಯಲೇಬೇಕು!

ಜಾತಿ ಅನ್ನೋ ವಿಚಾರ ಬಂತು!

ʻಬಳಿಕ ನಾನು ಮನೆಯಲ್ಲಿ ಈ ಬಗ್ಗೆ ಹೇಳಿಕೊಂಡೆ. ಜಾತಿ ಅನ್ನೋ ವಿಚಾರ ಬಂತು. ನನ್ನ ಮುಖಾಂತರ ಬೇರೆ ಅವರು ಹೇಳಿದರೂ ಮನೆಯವರು ಒಪ್ಪಲು ರೆಡಿ ಇರಲಿಲ್ಲ. ಮನೆಯಲ್ಲಿ ಬೇರೆ ಮದುವೆ ಆಗಬೇಕು ಅನ್ನೋ ಆಸೆ ಇತ್ತು. ಅದು ಅವರ ತಪ್ಪಲ್ಲ. ಆದರೆ ಜೀವನ ನಡೆಸುವಳು ನಾನು. ಈ ವಿಚಾರ ಬಗ್ಗೆ ತುಂಬಾ ಯೋಚನೆ ಮಾಡಿದ್ದೆ. ನನಗೆ ನನ್ನ ತಂದೆ ತಾಯಿ ಬಿಟ್ಟು ಹೋಗಲು ಮನಸ್ಸು ಇರಲಿಲ್ಲ. ನನ್ನ ಕರಿಯರ್‌ ಅಂತ ಬಂದರೆ, ನನ್ನ ಗಂಡ ತುಂಬಾ ಸಪೋರ್ಟ್‌ ಮಾಡುತ್ತಿದ್ದರು. ಇನ್ನು ಆ ಸಮಯದಲ್ಲಿ ನಾನು ತುಂಬಾ ಗೊಂದಲದಲ್ಲಿ ಇದ್ದೆ, ನೇರವಾಗಿ ಗಣೇಶ ದೇವಸ್ಥಾನಕ್ಕೆ ಹೋದೆ. ಅಲ್ಲಿ ನಾನು ದೇವರಲ್ಲಿ ಬೇಡಿದೆ. ಅಷ್ಟೇ ಅಲ್ಲ ನನಗೆ ಆ ಸಮಯದಲ್ಲಿ ಮನೆ ಬಿಟ್ಟು ಹೋಗದೇ ಬೇರೆ ದಾರಿಯೇ ಇರಲಿಲ್ಲ. ಗಣೇಶನ ಪ್ರಸಾದ ಆಯ್ತು. ಅರ್ಚಕರು ಹೂವು ಕೊಟ್ಟರು. ಪಾಸಿಟಿವ್‌ ಫೀಲ್‌ ಅಂದು ಆಯ್ತು. ಮುಂದೆ ನನ್ನ ತಂದೆ ತಾಯಿ ನಮ್ಮಿಬ್ಬರನ್ನು ಒಪ್ಪಿಕೊಳ್ಳಬೇಕು. ಅದು ಆಗತ್ತೆ ಅನ್ನೋದು ನನ್ನ ನಂಬಿಕೆʼ ಎಂದಿದ್ದಾರೆ.

ಮನೆಯಿಂದ ಆಚೆ ಬರುವಾಗ ನಾನು ಎನ್ನನ್ನೂ ತಂದಿಲ್ಲ. ಅಂದು ರೆಕಾರ್ಡಿಂಗ್‌ ಇತ್ತು. ನನ್ನ ತಂದೆಯೇ ಬಿಟ್ಟಿದ್ದರು. ಅಲ್ಲಿಂದಲೇ ನಾನು ಬಂದೆ. ಅವತ್ತು ಅಭಿಯನ್ನು ಕಳೆದುಕೊಂಡಿದ್ರೆ ನನಗೆ ಅಭಿ ಸಿಕ್ತಿರಲಿಲ್ಲ. ಆದರೆ ಅಭಿ ಅವರನ್ನು ಮದುವೆ ಆಗಿದ್ದರೂ ತಂದೆ-ತಾಯಿ ಸಿಕ್ತಾರೆ ಎನ್ನುವ ವಿಶ್ವಾಸವಿದೆ ಎಂದು ಪೃಥ್ವಿ ಭಟ್ ಹೇಳಿದ್ದಾರೆ.

ಇದನ್ನೂ ಓದಿ: Actress Riythvika: ಮುರಿದುಬಿದ್ದ ಮದುವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ 'ಬಿಗ್ ಬಾಸ್' ಖ್ಯಾತಿಯ ನಟಿ!

ಬೇರೆ ದಾರಿ ಇಲ್ಲದೇ ಆ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಇವತ್ತಿಗೂ ನಾನು ಮಾಡಿದ್ದು ತಪ್ಪು ಎಂದು ತಂದೆ-ತಾಯಿಯನ್ನು ನೆನೆದು ಆಗಾಗ್ಗೆ ಅಳುತ್ತೇನೆ ಎಂದು ಪೃಥ್ವಿ ಭಟ್ ತಿಳಿಸಿದ್ದಾರೆ.