ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಕೇಡಿಗಳ ಕಾಟಕ್ಕೆ ಶಕುಂತಲಾ ತತ್ತರ; ಗೌತಮ್ ದಿವಾನ್ ಕೈ ಹಿಡಿಯಲೇಬೇಕು!

Amruthadhaare Serial: ಶಕುಂತಲಾಳನ್ನು ಮನೆಯಿಂದ ಜೈದೇವ್‌ ಆಚೆ ಹಾಕಿರುವ ಬಗ್ಗೆ ಮಾವ, ಗೌತಮ್‌ ಬಳಿ ಹೇಳಿದ್ದಾನೆ. ಅತ್ತ ಶಕುಂತಲಾ ಗೆಳತಿ, ಬೆಂಡುತ್ತಿದ್ದಾಳ. ಕೊಟ್ಟ ಹಣವನ್ನು ವಾಪಸ್‌ ಕೊಡುವಂತೆ ಪೀಡಿಸುತ್ತಿದ್ದಾಳೆ. ಮೊದಲಿಗೆ ಜೈದೇವ್‌ ಕಾಲ್‌ ಮಾಡು ಅಂದಾಗ, ಜೈದೇವ್‌ ಕಿಂಚಿತ್ತು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಗೌತಮ್‌ಗೆ ಕಾಲ್‌ ಮಾಡು ಅಂತ ಗೆಳತಿ ಟಾರ್ಚರ್‌ ಕೊಡುತ್ತಾಳೆ.

Amruthadhaare Serial: ಕೇಡಿಗಳ ಕಾಟಕ್ಕೆ ಶಕುಂತಲಾ ತತ್ತರ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Apr 24, 2026 10:53 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಶಕುಂತಲಾ ಕಥೆ ಅಯೋಮಯವಾಗಿದೆ. ಗೌತಮ್ ದಿವಾನ್ (Gowtham Diwan) ಈಗ ಶಕುಂತಲಾ ಸಹಾಯಕ್ಕೆ ನಿಲ್ಲಲೇ ಬೇಕಿದೆ. ಅಷ್ಟೇ ಅಲ್ಲ ಜೈದೇವ್‌ ಬಳಿ ಸಹಾಯ ಕೇಳಿದ್ದರೂ ಇನ್ನಷ್ಟು ಹೆತ್ತ ತಾಯಿಯನ್ನೇ ಅವಮಾನ ಮಾಡಿದ್ದಾನೆ.

ಗೆಳತಿಗೆ ಟಾರ್ಚರ್‌

ಶಕುಂತಲಾಳನ್ನು ಮನೆಯಿಂದ ಜೈದೇವ್‌ ಆಚೆ ಹಾಕಿರುವ ಬಗ್ಗೆ ಮಾವ, ಗೌತಮ್‌ ಬಳಿ ಹೇಳಿದ್ದಾನೆ. ಅತ್ತ ಶಕುಂತಲಾ ಗೆಳತಿ, ಬೆಂಡುತ್ತಿದ್ದಾಳ. ಕೊಟ್ಟ ಹಣವನ್ನು ವಾಪಸ್‌ ಕೊಡುವಂತೆ ಪೀಡಿಸುತ್ತಿದ್ದಾಳೆ. ಮೊದಲಿಗೆ ಜೈದೇವ್‌ ಕಾಲ್‌ ಮಾಡು ಅಂದಾಗ, ಜೈದೇವ್‌ ಕಿಂಚಿತ್ತು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಗೌತಮ್‌ಗೆ ಕಾಲ್‌ ಮಾಡು ಅಂತ ಗೆಳತಿ ಟಾರ್ಚರ್‌ ಕೊಡುತ್ತಾಳೆ.

ಇದನ್ನೂ ಓದಿ: Agnisakshi Serial: ‘ಅಗ್ನಿಸಾಕ್ಷಿ’ ಧಾರಾವಾಹಿ ಪ್ರೋಮೋ ಔಟ್‌! ಹೊಸ ಲುಕ್‌ನಲ್ಲಿ ಶಮಂತ್ ಬ್ರೋ ಗೌಡ

ಇದಕ್ಕೆ ಶಕುಂತಲಾ ಒಪ್ಪುವುದೇ ಇಲ್ಲ. ಹೀಗಾಗಿ ಗೆಳತಿಯೇ ಅತ್ಯಂತ ಒತ್ತಾಯ ಪೂರ್ವಕವಾಗಿ ಕಾಲ್‌ ಮಾಡುತ್ತಾಳೆ. ಗೌತಮ್‌ ಅಮ್ಮನ ಕರೆ ಬಂದ ತಕ್ಷಣ, ಸಮಾಧಾನ ಮಾತುಗಳನ್ನು ಆಡುತ್ತಾನೆ. ಹೆದರ ಬೇಡಿ ನಾನು ನಿಮ್ಮ ಜೊತೆ ಇರುವೆ ಎಂದಿದ್ದಾನೆ. ಇದನ್ನ ಕೇಳಿ ಶಕುಂತಲಾ ಬಿಕ್ಕಿ ಬಿಕ್ಕಿ ಅಳುತ್ತಾಳೆ.

ಬದುಕಿನ ಪಾಠ ಮಾಡಿದ್ರು ಗೌತಮ್ - ಭೂಮಿ!

ಮಲ್ಲಿ ಮುಂದೆ ಈ ವಿಚಾರವನ್ನು ಗೌತಮ್‌ ಹಾಗೂ ಭೂಮಿಕಾ ಚರ್ಚೆ ಮಾಡುತ್ತಾರೆ. ಮಲ್ಲಿ ಯಾವುದೇ ಕಾರಣಕ್ಕೂ ಅವರ ಸಹವಾಸ ಮಾಡಬೇಡಿ ಅಂದರೂ ಗೌತಮ್‌ - ಭೂಮಿಕಾ ಬದುಕಿನ ಪಾಠ ಹೇಳಿದ್ದಾರೆ. ಮಕ್ಕಳು ಬಂದು ಮೋಸ ವಂಚನೆ ಬಗ್ಗೆ ಪ್ರಶ್ನೆ ಇಟ್ಟಿದ್ದಾರೆ. ಆಗ ಕೂಡ ಗೌತಮ್‌, ಮಕ್ಕಳಿಗೆ ನೀತಿ ಪಾಠ ಮಾಡಿದ್ದಾರೆ. ಜೀವನದಲ್ಲಿ ಯಾವತ್ತೂ ಅತಿ ಆಸೆ ಇರಬಾರದು. ಬಯಕೆಗಳು ಬಂದ ಹಾಗೇ ಆಸೆಗಳನ್ನು ಅತಿಯಾಗಿ ಹೊತ್ತುಕೊಳ್ಳಬಾರದು ಅಂತ ಭೂಮಿ ಹಾಗೂ ಗೌತಮ್‌ ಮಕ್ಕಳಿಗೆ ಪಾಠ ಮಾಡಿದ್ದಾರೆ.

ಮತ್ತೊಂದು ಕಡೆ ಪಾರ್ಥನಿಗೂ ಗೌತಮ್‌ ಕರೆ ಮಾಡಿ ಅಮ್ಮನ ಕಾಲ್‌ ಯಾಕೆ ರಿಸೀವ್‌ ಮಾಡಿಲ್ಲ ಅಂತ ತರಾಟೆ ತೆಗೆದುಕೊಂಡಿದ್ದಾನೆ. ಪಾರ್ಥ ಕೂಡ ಇದ್ದ ವಿಚಾರವನ್ನು ತಿಳಿಸಿದ್ದಾನೆ. ಈಗಾಗಲೇ ನಾವು ಮನೆಯಿಂದ ಆಚೆ ಬಂದಿದ್ದೇವೆ ಎಂದಿದ್ದಾನೆ. ಇದನ್ನೂ ಕೇಳಿಯೂ ಗೌತಮ್‌ ಶಾಕ್‌ ಆಗಿದ್ದಾನೆ.

ಶಕುಂತಲ, ಗೌತಮ್​​ಗೆ ಮಲತಾಯಿ. ಆತನಿಗೆ ಕೆಟ್ಟದಾಗಲಿ ಎಂದೇ ಬಯಸುತ್ತಾ ಬಂದಳು ಶಕುಂತಲ. ಆದರೆ ಗೌತಮ್‌ ಮಾತ್ರ ಕೊನೆಗೂ ಇದ್ದ ಎಲ್ಲ ಆಸ್ತಿಯನ್ನೂ ಮಕ್ಕಳ ಹೆಸರಿಗೆ ಬರೆದು ದೂರ ಹೋಗುತ್ತಾನೆ. ತಾಯಿಯನ್ನು ಅಪಾರ ಗೌರವ ಹಾಗೂ ಪ್ರೀತಿಯಿಂದ ಕಾಣುತ್ತಾನೆ. ತನ್ನ ತಾಯಿಯನ್ನು ಮತ್ತೆ ಕರೆದುಕೊಂಡು ಬರ್ತಾನಾ? ಈಗ ಶಕುಂತಲಾ ಬದಲಾಗಿ ಗೌತಮ್‌ ಪರ ಇರ್ತಾಳಾ? ಜೈದೇವ್‌ಗೂ ಕೇಡು ಕಾಲಬರುತ್ತಾ? ಗೌತಮ್‌ ಮುಂದಿನ ನಡೆಯೇನು ಎನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial: ಹೆತ್ತ ಮಗ ಕೈಬಿಟ್ಟಾಯ್ತು; ಶಕುಂತಲಾಗೆ ಗೌತಮ್ ದಿವಾನ್‌ ಕಾವಲುಗಾರ!

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.