Priyanka Upendra: ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್; ಆರೋಪಿ ಅರೆಸ್ಟ್, ಬಿಹಾರಕ್ಕೆ ಹೋಗಿದ್ದ ಪೊಲೀಸರೇ ಶಾಕ್ ಆಗಿದ್ದೇಕೆ?
ನಟಿ ಪ್ರಿಯಾಂಕ ಉಪೇಂದ್ರ (Priyanka Upendra) ಹಾಗೂ ಉಪೇಂದ್ರ ಅವರ ಮೊಬೈಲ್ ಹ್ಯಾಕ್ (mobile hack) ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್ ಅರೆಸ್ಟ್ (Arrest) ಮಾಡಲಾಗಿದೆ. ಸೈಬರ್ ಫ್ರಾಡ್ ಮಾಡಿ ಲಕ್ಷಾಂತರ ರೂ ಹಣವನ್ನು ಖದೀಮರು ದೋಚಿದ್ದರು. ಇದೀಗ ಸದಾಶಿವನಗರ ಪೊಲೀಸರಿಂದ ಆರೋಪಿ (Sadashiva Nagar Police Station) ಬಂಧನವಾಗಿದೆ. ಪೊಲೀಸರು ತನಿಖೆ ವೇಳೆ ಬಿಹಾರದ ದಶರತಪುರದ ನಿವಾಸಿಗಳು ಅನ್ನೋದು ಗೊತ್ತಾಗಿತ್ತು. 20 ರಿಂದ 25 ವಯಸ್ಸಿನ ಯುವಕರು ಇದೇ ದಂದೆಯಲ್ಲಿ ನಿರತರಾಗಿರೋದು ತಿಳಿದು ಬಂದಿದೆ. ತನಿಖೆ ವೇಳೆ ಬಿಹಾರಕ್ಕೆ ಹೋಗಿದ್ದ ಪೊಲೀಸರೇ (Police) ಶಾಕ್ ಆಗಿದ್ದೇಕೆ?
ಪ್ರಿಯಾಂಕ ಉಪೇಂದ್ರ ದಂಪತಿ -
ಬೆಂಗಳೂರು: ನಟಿ ಪ್ರಿಯಾಂಕ ಉಪೇಂದ್ರ (Priyanka Upendra) ಹಾಗೂ ಉಪೇಂದ್ರ ಅವರ ಮೊಬೈಲ್ ಹ್ಯಾಕ್ (mobile hack) ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್ ಅರೆಸ್ಟ್ ಮಾಡಲಾಗಿದೆ. ಸೈಬರ್ ಫ್ರಾಡ್ ಮಾಡಿ ಲಕ್ಷಾಂತರ ರೂ ಹಣವನ್ನು ಖದೀಮರು ದೋಚಿದ್ದರು. ಇದೀಗ ಸದಾಶಿವನಗರ ಪೊಲೀಸರಿಂದ ಆರೋಪಿ ಬಂಧನವಾಗಿದೆ. ಸೆಪ್ಟೆಂಬರ್15 ರಂದು ಉಪೇಂದ್ರ ದಂಪತಿ ಮೊಬೈಲ್ ಆರೋಪಿಗಳು ಹ್ಯಾಕ್ ಮಾಡಿದ್ದರು.
ಏನಿದು ಪ್ರಕರಣ?
ಪ್ರಿಯಾಂಕ ಉಪೇಂದ್ರ ಅವರು ಆನ್‌ಲೈನ್‌ನಲ್ಲಿ ಕೆಲ ವಸ್ತುಗಳನ್ನು ಬುಕ್ ಮಾಡಿದ್ದರು. ಇದಾದ ನಂತರ ಪ್ರಿಯಾಂಕ ಅವರಿಗೆ ಮೊಬೈಲ್‌ಗೆ ಲಿಂಕ್ ಬಂದಿತ್ತು. OTP ಹೇಳುವಂತೆ ಸೈಬರ್ ಖದೀಮರು ಹೇಳಿದ್ದರು. ಪ್ರಿಯಾಂಕ ಉಪೇಂದ್ರ ಆ ಲಿಂಕ್‌ವನ್ನು ಕ್ಲಿಕ್ ಮಾಡಿದ್ದರು. ಆ ಕೂಡಲೇ ಪ್ರಿಯಾಂಕ ಅವರ ವಾಟ್ಸ್‌ಆಪ್ ಹ್ಯಾಕ್ ಮಾಡಿದ್ದಾರೆ. ಇದಾದ ಬಳಿಕ ಪ್ರಿಯಾಂಕಾ ಕಾಂಟೆಕ್ಟ್‌ನಲ್ಲಿದ್ದವರಿಗೆ 55 ಸಾವಿರ ರೂ ಹಣ ಕಳಿಸುವಂತೆ ಮೇಸೆಜ್ ಮಾಡಿದ್ದಾರೆ ಖದೀಮರು. ಈ ವೇಳೆ ಮ್ಯಾನೇಜರ್ ಹಾಗೂ ಉಪೇಂದ್ರ ಮೊಬೈಲ್ ಕೂಡ ಹ್ಯಾಕ್ ಮಾಡಿದ್ದರು. ಹಣ ಅಗತ್ಯವಿದೆ ಎಂದು ಪ್ರಿಯಾಂಕ ವಾಟ್ಸ್ ಅಪ್ ನಿಂದ ಹಲವರಿಗೆ ಮೆಸೇಜ್ ಕೂಡ ಕಳಿಸಿದ್ರು.
ಇದನ್ನೂ ಓದಿ: Cyber security: ಸೈಬರ್ ಅಪರಾಧ ಕಡಿವಾಣಕ್ಕೆ ಸೈಬರ್ ಸೆಕ್ಯೂರಿಟಿ ಸೆಂಟರ್: ಗೃಹ ಸಚಿವ ಪರಮೇಶ್ವರ್
ಒಂದೂವರೆ ಲಕ್ಷ ರೂ ಹಣ ಪೀಕಿದ ಖದೀಮರು
ಪ್ರಿಯಾಂಕ ಉಪೇಂದ್ರ ಮೆಸೇಜ್ ಮಾಡಿದ್ದಾರೆಂದು ಹಲವರು ಹಣ ಕೂಡ ಹಾಕಿದ್ದಾರೆ. ಪ್ರಿಯಾಂಕ ಉಪೇಂದ್ರ ಅವರ ಮೆಸೇಜ್ ನೋಡಿ ಕರೆ ಮಾಡಿದವರ ಪೋನ್ ಕಾಲ್ ಕಟ್ ಆಗ್ತಿತ್ತು. ಎಮರ್ಜೆನ್ಸಿ ಇದೆ ಹಣ ಹಾಕುವಂತೆ ವಾಟ್ಸ್‌ಅಪ್ ಹ್ಯಾಕ್ ಮಾಡಿ ಸೈಬರ್ ಖದೀಮರು ಮೆಸೆಜ್ ಕಳುಹಿಸುತ್ತಿದ್ದರು.
ಕೆಲವು ಮಂದಿ ತುರ್ತಾಗಿ ಏನೋ ಇರಬೇಕೆಂದು 55 ಸಾವಿರ ಹಣ ಕೂಡ ಕಳುಹಿಸಿ ಬಿಟ್ಟಿದ್ದರು. ಕೂಡಲೇ ಈ ವಿಷಯ ಪ್ರಿಯಾಂಕಗೆ ಗೊತ್ತಾಗಿತ್ತು. ಪುತ್ರ ಕೂಡ ಪ್ರಿಯಾಂಕ ಅವರ ಅಕೌಂಟ್‌ಗೆ ಐವತ್ತು ಸಾವಿರ ರೂ ಹಣಹಾಕಿದ್ರು. ಸ್ನೇಹಿತರು ಕರೆ ಮಾಡಿ ವಿಚಾರ ತಿಳಿಸಿದ್ರು. ಆ ವೇಳೆಗಾಗಲೇ ಒಂದೂವರೆ ಲಕ್ಷ ಹಣ ಅಕೌಂಟ್‌ಗೆ ಸೈಬರ್ ವಂಚಕರು ಕಳುಹಿಸಿಕೊಂಡಿದ್ದರು.
ಪೊಲೀಸರೇ ಶಾಕ್
ಬಳಿಕ ಸದಾಶಿವನಗರ ಠಾಣೆಗೆ ಪ್ರಿಯಾಂಕ ಉಪೇಂದ್ರ ದೂರು ನೀಡಿದ್ದಾರೆ. ಪೊಲೀಸರು ತನಿಖೆ ವೇಳೆ ಬಿಹಾರದ ದಶರತಪುರದ ನಿವಾಸಿಗಳು ಅನ್ನೋದು ಗೊತ್ತಾಗಿತ್ತು. 20 ರಿಂದ 25 ವಯಸ್ಸಿನ ಯುವಕರು ಇದೇ ದಂದೆಯಲ್ಲಿ ನಿರತರಾಗಿರೋದು ತಿಳಿದು ಬಂದಿದೆ. ಬಿಹಾರಕ್ಕೆ ಹೋಗಿದ್ದ ಪೊಲೀಸರೇ ಶಾಕ್ ಆಗಿದ್ದಾರೆ.
ಇದನ್ನೂ ಓದಿ: Rukmini Vasanth: ಕಾಂತಾರ ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಚೀಟಿಂಗ್! ಸೈಬರ್ ವಂಚನೆ ಬಗ್ಗೆ ಕನಕವತಿ ಎಚ್ಚರಿಕೆ
ಊರಿನ 150 ಮಂದಿ ಯುವಕರು ಸೈಬರ್ ಅಪರಾಧದಲ್ಲೇ ನಿರತರಾಗಿರೋದು ವಿಚಾರಣೆ ವೇಳೆ ತಿಳಿದು ಬಂದಿದೆ. ಕೊನೆಗೆ ಪೊಲೀಸರು ಆರೋಪಿ ವಿಕಾಸ್ ಕುಮಾರ್ ಬಂಧಿಸಿ ಕರೆತಂದಿದ್ದಾರೆ .ಸದ್ಯ ಕಸ್ಟಡಿಗೆ ಆರೋಪಿ ವಿಕಾಸ್ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಕೇಂದ್ರ ವಿಭಾಗದ ಸೈಬರ್ ಹಾಗೂ ಸದಾಶಿವನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.