Cyber security: ಸೈಬರ್ ಅಪರಾಧ ಕಡಿವಾಣಕ್ಕೆ ಸೈಬರ್ ಸೆಕ್ಯೂರಿಟಿ ಸೆಂಟರ್: ಗೃಹ ಸಚಿವ ಪರಮೇಶ್ವರ್
Cyber security: ಪೊಲೀಸ್ ಇಲಾಖೆ ಸೇರಿ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಸೈಬರ್ ಸೆಕ್ಯೂರಿಟಿ ವಿಭಾಗದ ಜತೆಗೆ ಸೇರಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯೂರಿಟಿ ಸೆಂಟರ್ ಸದ್ಯವೇ ಆರಂಭಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.


ತುಮಕೂರು: ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 25,000 ಸೈಬರ್ ಅಪರಾಧ ಪ್ರಕರಣಗಳು (Cyber security) ದಾಖಲಾಗುತ್ತಿವೆ. ಇದರಲ್ಲಿ ಶೇ.20 ರಷ್ಟು ಪ್ರಕರಣ ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ. ಇನ್ನುಳಿದ ಪ್ರಕರಣ ಪತ್ತೆಹಚ್ಚಲು ಸಂಶೋಧನಾತ್ಮಕವಾಗಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ. ಅದರ ಜತೆಗೆ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಡಿಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯೂರಿಟಿ ಸೆಂಟರ್ ಅನ್ನು ತುಮಕೂರಿನಲ್ಲಿ ತೆರೆಯಲು ತಯಾರಿ ನಡೆಸಲಾಗಿದೆ ಎಂದು ಗೃಹ ಸಚಿವ ಹಾಗೂ ಸಾಹೇ ವಿಶ್ವವಿದ್ಯಾಲಯ ಕುಲಾಧಿಪತಿಗಳೂ ಅದ ಡಾ. ಜಿ ಪರಮೇಶ್ವರ್ ಅವರು ಹೇಳಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಹಿಂದೆ ಗೃಹ ಸಚಿವನಾಗಿದ್ದ ಕಾಲಘಟ್ಟದಲ್ಲಿ ಇದರ ಸ್ಥಾಪನೆಗೆ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಲಾಗಿತ್ತು. ಈಗ ಪೊಲೀಸ್ ಇಲಾಖೆ ಸೇರಿ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಸೈಬರ್ ಸೆಕ್ಯೂರಿಟಿ ವಿಭಾಗದ ಜತೆಗೆ ಸೇರಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯೂರಿಟಿ ಸೆಂಟರ್ ಸದ್ಯವೇ ಆರಂಭಿಸಲಾಗುವುದು ಎಂದು ತಿಳಿಸಿದರು.
ಸೈಬರ್ ಸೆಕ್ಯೂರಿಟಿ ಕೋರ್ಸ್‌ನ ವಿದ್ಯಾರ್ಥಿಗಳಿಗೂ ಪೂರಕವಾಗುವಂತೆ ಚೆನ್ನೈನ ಕಂಪನಿಯೊಂದರ ಸಹಯೋಗದೊಂದಿಗೆ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯೂರಿಟಿ ಕೇಂದ್ರ ಶೀಘ್ರವಾಗಿ ಉದ್ಘಾಟನೆ ಗೊಳ್ಳಲಿದ್ದು, ಶೈಕ್ಷಣಿಕ ಚಟುವಟಿಕೆ ಜತೆಗೆ ಸಾರ್ವಜನಿಕರಿಗೆ ಆಗುವ ಡಿಜಿಟಲ್ ವ್ಯವಹಾರದ ಮೋಸ, ವಂಚೆನೆ ಪ್ರಕರಣಗಳನ್ನು ಬೇಗ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಡೇಟಾ ಸೈನ್ಸ್ ಮತ್ತು ಸೈಬರ್ ಸೆಕ್ಯೂರಿಟಿಯಂತಹ ವಿನೂತನ ತಂತ್ರಜ್ಞಾನದ ನೂತನ ಕೋರ್ಸ್ ಈಗಾಗಲೇ ಆರಂಭಿಸಿದ್ದು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕವಾಗಿ ಟಾಪ್‌ಎಂಡ್ ಸೌಲಭ್ಯಗಳನ್ನು ನೀಡಿ ಅವರು ವಿಶ್ವಮಟ್ಟದ ಸ್ವರ್ಧಾತ್ಮಕವಾಗಿ ಸಜ್ಜುಗೊಳಿಸುವ ಗರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ನುಡಿದರು.
ಈ ಸುದ್ದಿಯನ್ನೂ ಓದಿ | Chikkaballapur News: ಚಿಕ್ಕಬಳ್ಳಾಪುರದಲ್ಲಿ ಬೆಟ್ಟ ಅಗೆದು ಇಲಿ ಹಿಡಿದಂತಾದ ಬಿ-ಖಾತಾ ಅಭಿಯಾನ!
ಈ ಸಂದರ್ಭದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸದಸ್ಯರಾದ ಕನ್ನಿಕಾ ಪರಮೇಶ್ವರಿ, ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟಾರ್ ಅಶೋಕ್ ಮೆಹ್ತಾ, ಸಾಹೇ ವಿವಿ ಕುಲಾಧಿಪತಿಗಳ ಸಲಹೆಗಾರ ಡಾ.ವಿವೇಕ ವೀರಯ್ಯ, ಎಸ್‌ಎಸ್‌ಐಟಿ ಪ್ರಾಂಶುಪಾಲ ಡಾ. ಎಂ.ಎಸ್. ರವಿಪ್ರಕಾಶ್, ಎಸ್ಟೇಟ್ ಮ್ಯಾನೇಜರ್ ಡಾ.ಜಿ.ಡಿ.ಶಿವರಾಜು, ಮೆಡಿಕಲ್ ಕಾಲೇಜಿನ ಸಾನಿಕೊಪ್ಪ, ಉಪಪ್ರಾಂಶುಪಾಲ ಡಾ.ಪ್ರಭಾಕರ್, ಎಸ್‌ಎಸ್‌ಎಸ್‌ಇ ಕಾಲೇಜಿನ ಪ್ರಾಂಶುಪಾಲ ಡಾ.ಎಲ್ ಸಂಜೀವ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಓ ಜಿ ಪ್ರಭು ಸೇರಿದಂತೆ ವಿವಿಧ ವಿಭಾಗಗಳು ಮುಖ್ಯಸ್ಥರು ಹಾಜರಿದ್ದರು.
ದೇಶದಲ್ಲಿ ಸಾಮಾಜಿಕ ಚಿಂತಕರ ಸಂಖ್ಯೆ ಕಡಿಮೆಯಾಗುತ್ತಿದೆ

ತುಮಕೂರು: ದೇಶದಲ್ಲಿ ಸಾಮಾಜಿಕ ಚಿಂತಕರ ಸಂಖ್ಯೆ ಕಡಿಮೆಯಾಗುತ್ತಿದೆ, ವ್ಯಕ್ತಿಗತ ಚಿಂತನೆಗಳು ಮೇಲುಗೈ ಪಡೆಯುತ್ತಿವೆ ಎಂದು ಜಾನಪದ ವಿದ್ವಾಂಸ ಡಾ.ಜಿ.ವಿ. ಆನಂದಮೂರ್ತಿ ತಿಳಿಸಿದರು.
ಜನಮುಖಿ ಬಳಗ, ಗೋಪಿಕಾ ಪ್ರಕಾಶನ ಸಹಯೋಗದಲ್ಲಿ ನಗರದ ಜನ ಚಳವಳಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಉರಿವ ದೀಪದ ಕೆಳಗೆ ಕಥಾ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ದೇಶದ ಉದ್ದಗಲಕ್ಕೂ ಇಂದು ಸಾಂಸ್ಕೃತಿಕ ಅರಾಜಕತೆ ಹೆಚ್ಚುತ್ತಿದೆ. ಸಾಂಸ್ಕೃತಿಕ ಮತ್ತು ರಾಜಕೀಯ ಅರಾಜಕತೆಯ ನಡುವೆ ಸಾಹಿತ್ಯ ಕ್ಷೇತ್ರದಲ್ಲೂ ಅರಾಜಕತೆ ಸೃಷ್ಟಿಯಾಗಿದೆ. ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವಾಗುತ್ತಿದೆ. ಹಿಂದಿನ ಚಿಂತನೆಗಳು ಮತ್ತು ಚರ್ಚೆಗಳು ಈಗ ನಡೆಯುತ್ತಿಲ್ಲ ಎಂದು ವಿಷಾದಿಸಿದರು.
ದೇಶವ್ಯಾಪಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಜಾತಿ ಆಧಾರಿತ ಸಂಘಟನೆಗಳು ಬೆಳೆಯುತ್ತಿವೆ. ಭಾಷೆ ಕೋಮುವಾದಿಕರಣವಾಗಿ ಮಲೀನವಾಗಿದೆ. ಇದನ್ನು ಮಾನವೀಕರಣಗೊಳಿಸುವ ಕೆಲಸವಾಗಬೇಕು. ದ್ವೇಷದ ಬರಹ, ಮಾತುಗಳನ್ನು ನಿಲ್ಲಿಸಿ ಮಾನವೀಯ ನೆಲೆಗಟ್ಟಿನ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಲೇಖಕರು ಚಿಂತಿಸಬೇಕಿದೆ. ಭಾಷೆಗೆ ಮಾನವೀಯತೆಯ ಸ್ಪರ್ಶ ತಂದುಕೊಡಲು ನಾವೆಲ್ಲಾ ಹೋರಾಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ ಸಾಂಸ್ಕೃತಿಕ ಮನಸ್ಸುಗಳನ್ನು ಕಟ್ಟುವ ಕೆಲಸ ಸಮಜದಲ್ಲಿ ಇಂದು ಅಗತ್ಯವಿದೆ. ಎಲ್ಲ ಕ್ಷೇತ್ರವೂ ಕಲುಷಿತಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಮಾನವೀಯತೆಯ ಬಾಂಧವ್ಯಕ್ಕೆ ಒತ್ತು ಕೊಡಬೇಕಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀಹ, ದಂಡಿನಶಿವರ ಮಂಜುನಾಥ್, ಸಾ.ಚಿ.ರಾಜಕುಮಾರ, ಹಡವನಹಳ್ಳಿ ವೀರಣ್ಣಗೌಡ, ಎನ್.ಕೆ.ಸುಬ್ರಹ್ಮಣ್ಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಲಾಕ್ಷೇತ್ರದ ಡಿ.ಎನ್.ದಿವಾಕರ್, ಶಿಕ್ಷಣ ಕ್ಷೇತ್ರದ ರಾಮಯ್ಯ, ಪುಸ್ತಕೋದ್ಯಮದ ಸಿದ್ದೇಶ್, ಅಗ್ನಿಶಾಮಕ ಸೇವೆಯ ಧರಣೇಶ್, ಶಿಕ್ಷಕಿ ವಿವೇಕ, ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಗಾಯಕ ಎಂ.ವೈ.ಗಂಗಣ್ಣ ಅವರಿಂದ ಭಾವಗೀತೆಗಳ ಗಾಯನ ನಡೆಯಿತು. ಎಚ್.ಎಂ.ವಸಂತಕುಮಾರ್ ಸ್ವಾಗತಿಸಿ, ಕೆ.ಶಿವಮ್ಮ ನಿರೂಪಿಸಿ, ರಾಯಲ್ ರವಿ ವಂದಿಸಿದರು.