Rachita Ram: ಅಭಿಮಾನಿಗಳ ಜೊತೆ ಬರ್ತ್‌ಡೇ ಸೆಲಬ್ರೇಷನ್; ದರ್ಶನ್ ನೆನೆದ ರಚಿತಾ ರಾಮ್
Rachita Ram: ಡಿಂಪಲ್ ಕ್ವೀನ್ ರಚಿತಾ ರಾಮ್ ಅಕ್ಟೋಬರ್ 3ರಂದು 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.ಆರ್‌ಆರ್ ನಗರ ನಿವಾಸದಲ್ಲಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ನಟಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ನಡುವೆ ಜೈಲಲ್ಲಿರುವ ನಟ ದರ್ಶನ್ ನೆನೆದು ಭಾವುಕರಾಗಿದ್ದಾರೆ.
ರಚಿತಾ ರಾಮ್ -
ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅಕ್ಟೋಬರ್ 3ರಂದು 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.ಆರ್‌ಆರ್ ನಗರ ನಿವಾಸದಲ್ಲಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ನಟಿ ಜನ್ಮದಿನವನ್ನು (Birthday) ಆಚರಿಸಿಕೊಂಡಿದ್ದಾರೆ. ಈ ನಡುವೆ ಜೈಲಲ್ಲಿರುವ ನಟ ದರ್ಶನ್ (Actor Darshan) ನೆನೆದು ಭಾವುಕರಾಗಿದ್ದಾರೆ.
ದರ್ಶನ್ ನೆನಪಿಸಿಕೊಂಡ ನಟಿ ರಚಿತಾ
ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ ನಟಿ ಹುಟ್ಟುಹಬ್ಬ ಆಚರಿಸಿಕೊಂಡರು. ನಟ ದರ್ಶನ್ ನೆನಪಿಸಿಕೊಂಡ ನಟಿ ರಚಿತಾ ರಾಮ್, ಮೊನ್ನೆ ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಅದರೆ, ವಾರದಲ್ಲಿ ಎರಡೇ ಭೇಟಿಗೆ ಅವಕಾಶ ಇರೋದು. ಕುಟುಂಬದವರನ್ನ ಭೇಟಿ ಮಾಡಲಿದ್ದಾರೆ. ಅದಕ್ಕಾಗಿ ಅವರನ್ನ ನಾನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಆಗಲಿಲ್ಲ.
ಎರಡೂವರೆ ಗಂಟೆ ಕಾದು ವಾಪಸ್ ಬಂದೆ ಎಂದರು. ಅಭಿಮಾನಿಗಳ ಸಂಭ್ರಮಕ್ಕೆ ನಟಿ ಖುಷಿಯಾದರು. ಎಲ್ಲರೂ ಒಳ್ಳಯದನ್ನೇ ಮಾಡಿ. ಯಾರು ಯಾರಿಗೂ ಕೆಟ್ಟದನ್ನ ಮಾಡಬೇಡಿ. ಇರೋದು ಒಂದು ಜೀವನ, ಚೆನ್ನಾಗಿ ಎಂಜಯ್ ಮಾಡಿ ಎಂದು ಫ್ಯಾನ್ಸ್‌ಗೆ ಹೇಳಿದರು.
ಇದನ್ನೂ ಓದಿ: Bigg Boss Kannada 13: ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ; ಲಿಖಿತ್, ಮಂಜಗೆ ಆಸಿಯಾ ಆವಾಜ್
Rachita Ram about BOSS ❤️
— D CULT (@DBoss_7) October 2, 2026
Happy Birthday @RachitaRamDQ from @dasadarshan Boss Fans #DBoss #Rachitaram pic.twitter.com/XqVOi8IsHT
ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನವೇ ರಚಿತಾ ರಾಮ್ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದರು.ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅರಸಿ’ ಧಾರಾವಾಹಿ ರಚಿತಾ ರಾಮ್ ಅವರ ವೃತ್ತಿಜೀವನದಲ್ಲಿ ಪ್ರಮುಖ ತಿರುವು ನೀಡಿತು. ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಅವರು ತಮ್ಮ ಅಭಿನಯದ ಮೂಲಕ ಅಪಾರ ಸಂಖ್ಯೆಯ ವೀಕ್ಷಕರ ಗಮನ ಸೆಳೆದಿದ್ದರು.
ಇದನ್ನೂ ಓದಿ: Udta Teer Postponed: ದೃಶ್ಯಂ 3 ಎಫೆಕ್ಟ್, ಆಯುಷ್ಮಾನ್ ಖುರಾನಾ ಮೂವಿ ಪೋಸ್ಟ್‌ಪೋನ್!
ದರ್ಶನ್ ಅಭಿನಯದ ‘ಬುಲ್‌ಬುಲ್’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಅವರು ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಗಮನ ಸೆಳೆದರು. ಆ ಬಳಿಕ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.