ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KC Rudregowda: ರಾಜ್ ಕಮಲ್ ಚಿತ್ರಮಂದಿರದ ಮಾಲೀಕ, ನಿರ್ಮಾಪಕ ಕೆ. ಸಿ. ರುದ್ರೇಗೌಡ ನಿಧನ

KC Rudregowda: ಕನ್ನಡ ಚಿತ್ರ ರಂಗದ ಖ್ಯಾತ ನಿರ್ಮಾಪಕ ಕೆ. ಸಿ. ಎನ್. ಗೌಡರ ಸಹೋದರ, ರಾಜಕಮಲ್ ಚಿತ್ರಮಂದಿರದ ಮಾಲೀಕರಾದ ಕೆ. ಸಿ. ರುದ್ರೇಗೌಡರು ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಿನಿಮಾ ಮಂದಿರಗಳ ಮಾಲೀಕರಾಗಿ ಕೆ.ಸಿ. ರುದ್ರೇಗೌಡರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

KC Rudregowda: ನಿರ್ಮಾಪಕ ಕೆ. ಸಿ. ರುದ್ರೇಗೌಡ ನಿಧನ

ಕೆ. ಸಿ. ರುದ್ರೇಗೌಡ -

Yashaswi Devadiga
Yashaswi Devadiga Feb 18, 2026 8:15 AM

ಕನ್ನಡ ಚಿತ್ರ ರಂಗದ ಖ್ಯಾತ ನಿರ್ಮಾಪಕ ಕೆ. ಸಿ. ಎನ್. ಗೌಡರ ಸಹೋದರ, ರಾಜಕಮಲ್ (raj kamal) ಚಿತ್ರಮಂದಿರದ ಮಾಲೀಕರಾದ ಕೆ. ಸಿ. ರುದ್ರೇಗೌಡರು ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಿನಿಮಾ ಮಂದಿರಗಳ ಮಾಲೀಕರಾಗಿ ಕೆ.ಸಿ. ರುದ್ರೇಗೌಡರು (KC Rudregowda) ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

ರುದ್ರೇಗೌಡರು ಸಹೋದರ ಕೆ. ಸಿ. ಎನ್ ಗೌಡರೊಂದಿಗೆ ಕನ್ನಡ ಚಿತ್ರೋದ್ಯಮದಲ್ಲಿ ರಾಜ್ ಕಮಲ್ ಆರ್ಟ್ಸ್ ಬ್ಯಾನರ್ ಮೂಲಕ ಕನ್ನಡದ ಬೆಳ್ಳಿ ತೆರೆಗೆ ಯಶಸ್ವಿ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ವಿತರಕರಾಗಿ, ಪ್ರದರ್ಶಕರಾಗಿ ಕನ್ನಡ ಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡು ಖ್ಯಾತ ನಾಮರಾಗಿದ್ದರು.

ಒಂದು ಕಹಿ ಘಟನೆ

'ಬಂಗಾರದ ಮನುಷ್ಯ' ಸಿನಿಮಾದ 358ನೇ ದಿನದ ಪ್ರದರ್ಶನ ಕಾಣುತ್ತಿತ್ತು. ಈ ವೇಳೆ 'ಬಂಗಾರದ ಮನುಷ್ಯ' ಸಿನಿಮಾವನ್ನು ನಿಲ್ಲಿಸಿ, ಮತ್ತೊಂದು ಅಣ್ಣಾವ್ರ ಸಿನಿಮಾವನ್ನ ಪ್ರದರ್ಶನ ಮಾಡುವುದಕ್ಕೆ ಮುಂದಿದ್ದಾರು.

ಅದುವೇ 'ಪಾರ್ವತಿ ಕಲ್ಯಾಣ'.'ಬಂಗಾರದ ಮನುಷ್ಯ' ಸಿನಿಮಾವನ್ನು ತೆಗೆದು 'ಪಾರ್ವತಿ ಕಲ್ಯಾಣ' ಸಿನಿಮಾವನ್ನು ಪ್ರದರ್ಶನ ಮಾಡುತ್ತಾರೆಂಬ ಸುದ್ದಿ ಹಬ್ಬಿತೋ ಆಗಲೇ ಅಭಿಮಾನಿಗಳು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕುವುದಕ್ಕೆ ಶುರು ಮಾಡಿದ್ದರು.

ಇದನ್ನೂ ಓದಿ : Pabbar Movie: 14 ವರ್ಷದ ಬಳಿಕ ಕ್ಲೀನ್ ಶೇವ್; 'ಪಬ್ಬಾರ್' ಚಿತ್ರದಲ್ಲಿ ಅಯ್ಯಪ್ಪ ಶರ್ಮ ಲುಕ್‌ ಹೇಗಿದೆ ಗೊತ್ತಾ?

ಇದೇ ಸಮಯದಲ್ಲಿ ಮೈಸೂರು ಬ್ಯಾಂಕ್ ಸುತ್ತಮುತ್ತ ಕಲ್ಲು ತೂರಾಟ ಆಗಿತ್ತು. ಈ ವೇಳೆ ಕೆ.ಸಿ. ರುದ್ರೇಗೌಡರ ಕಣ್ಣಿಗೆ ಹಾನಿ ಆಯ್ತು ಎಂಬ ವರದಿಗಳೂ ಇವೆ. ಮೃತ ರುದ್ರೇಗೌಡರು ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.