ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ನನ್ನ ಪ್ರತಿಯೊಂದು ಮೈಲುಗಲ್ಲು ಜನತೆಯ ನಂಬಿಕೆಗೆ ಸಾಕ್ಷಿ'; ಜೀವನ ಚರಿತ್ರೆ ಕಂಡು ಭಾವುಕರಾದ ಡಿ.ಕೆ. ಶಿವಕುಮಾರ್

ಭಾರತದಾದ್ಯಂತ ಕಾಂಗ್ರೆಸ್ ರಾಜ್ಯ ಶಾಸಕರನ್ನು ರಕ್ಷಿಸುವಲ್ಲಿ((ಗುಜರಾತ್, ರಾಜಸ್ಥಾನ, ಗೋವಾ ಶಾಸಕರ ರೆಸಾರ್ಟ್ ರಾಜಕಾರಣ) ಅವರ ಉನ್ನತ ಪಾತ್ರಗಳು, ಸಿದ್ದರಾಮಯ್ಯ ಅವರೊಂದಿಗಿನ ಅವರ ತೀವ್ರ ರಾಜಕೀಯ ಪೈಪೋಟಿ ಮತ್ತು ಅಧಿಕಾರ ಹಂಚಿಕೆ ಸೆಟಪ್, 2023 ರ ಚುನಾವಣಾ ತಂತ್ರಗಾರಿಕೆಗಳ ತೆರೆಮರೆಯ ರೋಚಕ ಕಥೆಗಳನ್ನು ರಶೀದ್ ಕಿದ್ವಾಯಿ ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಜೀವನ ಚರಿತ್ರೆ ಕಂಡು ಭಾವುಕರಾದ ಡಿ.ಕೆ. ಶಿವಕುಮಾರ್

D.K. Shivakumar -

Abhilash BC
Abhilash BC Jul 17, 2026 8:59 AM

ಬೆಂಗಳೂರು ಜು.17: ಕರ್ನಾಟಕ ರಾಜಕಾರಣದ ಅತ್ಯಂತ ಪ್ರಭಾವಶಾಲಿ ನಾಯಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಳಮಟ್ಟದ ಹೋರಾಟದಿಂದ ಅಧಿಕಾರದ ಚುಕ್ಕಾಣಿಯವರೆಗೆ, ಪಕ್ಷ, ರಾಜ್ಯ ಮತ್ತು ಜನಸಾಮಾನ್ಯರ ಏಳಿಗೆಗಾಗಿ ಸಾಗಿದ 45 ವರ್ಷಗಳ ನಿರಂತರ ಜನಸೇವೆಯ ಅದ್ವಿತೀಯ ಪಯಣದ ಜೀವನಚರಿತ್ರೆ ‘ಡಿ.ಕೆ. ಶಿವಕುಮಾರ್: ಕಾಂಗ್ರೆಸ್‌ನ ಕ್ರೈಸಿಸ್ ಮ್ಯಾನೇಜರ್, ಕರ್ನಾಟಕದ ಕಿಂಗ್‌ಮೇಕರ್’ (D.K. Shivakumar: Congress’s Crisis Manager, Karnataka’s Kingmaker) ಅಧಿಕೃತವಾಗಿ ಬಿಡುಗಡೆಯಾಗಿದೆ. ಖ್ಯಾತ ರಾಜಕೀಯ ಪತ್ರಕರ್ತ ಮತ್ತು ಲೇಖಕ ರಶೀದ್ ಕಿದ್ವಾಯಿ ಅವರು ಬರೆದಿರುವ ಈ ಪುಸ್ತಕದ ಪ್ರತಿಯನ್ನು ಡಿ.ಕೆ. ಶಿವಕುಮಾರ್ ಅವರು ಸ್ವೀಕರಿಸಿದ ಬಳಿಕ ಭಾವುಕ ಟ್ವೀಟ್‌ ಮಾಡಿದ್ದಾರೆ. 'ನನ್ನ ಪ್ರತಿಯೊಂದು ಮೈಲುಗಲ್ಲು ಜನತೆಯ ನಂಬಿಕೆಗೆ ಸಾಕ್ಷಿ' ಎಂದಿದ್ದಾರೆ.

ಪುಸ್ತಕದ ಪ್ರತಿಯನ್ನು ಲೇಖಕರಿಂದ ಪಡೆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್, “ಖ್ಯಾತ ಲೇಖಕ ರಶೀದ್ ಕಿದ್ವಾಯಿ ಅವರಿಂದ ನನ್ನ ಜೀವನಚರಿತ್ರೆಯನ್ನು ಸ್ವೀಕರಿಸಿದ್ದು ಅತ್ಯಂತ ಸಂತೋಷ ತಂದಿದೆ. ನನ್ನ ಇಡೀ ಜೀವನದ ಪಯಣವನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದಿದ್ದಾರೆ.



ಇದೇ ವೇಳೆ ಭಾವುಕರಾದ ಡಿ ಕೆ ಶಿವಕುಮಾರ್ ಅವರು, "ನನ್ನ ಪ್ರತಿಯೊಂದು ಮೈಲಿಗಲ್ಲು ಜನರ ನಂಬಿಕೆ, ಮಾರ್ಗದರ್ಶಕರ ಮಾರ್ಗದರ್ಶನ ಮತ್ತು ಅಸಂಖ್ಯಾತ ಹಿತೈಷಿಗಳ ಬೆಂಬಲದ ಮೇಲೆ ನಿರ್ಮಿಸಲ್ಪಟ್ಟಿದೆ ಎಂಬುದನ್ನು ಇದು ನನಗೆ ನೆನಪಿಸುತ್ತದೆ. ಪ್ರತಿಯೊಂದು ಅಧ್ಯಾಯವು ನನಗೆ ಸೇರಿರುವಂತೆಯೇ ಕರ್ನಾಟಕದ ಜನರಿಗೂ ಸೇರಿದೆ. ಕರ್ನಾಟಕಕ್ಕೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ನನ್ನ ಬದ್ಧತೆ ಎಂದಿಗಿಂತಲೂ ಬಲವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಕನಕಪುರದ ಯುವಕನ ಸಾಹಸದ ಕತೆ

ಹ್ಯಾಚೆಟ್ ಇಂಡಿಯಾ (Hachette India) ಪ್ರಕಾಶನ ಸಂಸ್ಥೆ ಪ್ರಕಟಿಸಿರುವ ಈ 272 ಪುಟಗಳ ಪುಸ್ತಕವು, ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಏಳುಬೀಳುಗಳನ್ನು ಅತ್ಯಂತ ಆಳವಾಗಿ ವಿಶ್ಲೇಷಿಸಿದೆ. ಕನಕಪುರದಲ್ಲಿ ಅವರ ತಳಮಟ್ಟದ ಮೂಲದಿಂದ ಕರ್ನಾಟಕದ ಮುಖ್ಯಮಂತ್ರಿಯಾಗುವವರೆಗಿನ ಅವರ ಸಂಪೂರ್ಣ ರಾಜಕೀಯ ಚಾಪನ್ನು ವಿವರಿಸುತ್ತದೆ. ಇಡಿ (ED) ದಾಳಿ, ಜೈಲು ವಾಸ ಹಾಗೂ ರಾಜಕೀಯ ಸವಾಲುಗಳನ್ನು ಎದುರಿಸಿ ಅವರು ಮರಳಿ ಪುಟಿದೆದ್ದ ಸಾಹಸದ ಕಥೆಗಳು ಈ ಪುಸ್ತಕದಲ್ಲಿವೆ.

Female Elephant: ಹೆಣ್ಣಾನೆ ದಾನ ಮಾಡುವಂತೆ ಕೇರಳಂ ಸಿಎಂಗೆ ಡಿ.ಕೆ.ಶಿವಕುಮಾರ್‌ ಪತ್ರ

ಭಾರತದಾದ್ಯಂತ ಕಾಂಗ್ರೆಸ್ ರಾಜ್ಯ ಶಾಸಕರನ್ನು ರಕ್ಷಿಸುವಲ್ಲಿ((ಗುಜರಾತ್, ರಾಜಸ್ಥಾನ, ಗೋವಾ ಶಾಸಕರ ರೆಸಾರ್ಟ್ ರಾಜಕಾರಣ) ಅವರ ಉನ್ನತ ಪಾತ್ರಗಳು, ಸಿದ್ದರಾಮಯ್ಯ ಅವರೊಂದಿಗಿನ ಅವರ ತೀವ್ರ ರಾಜಕೀಯ ಪೈಪೋಟಿ ಮತ್ತು ಅಧಿಕಾರ ಹಂಚಿಕೆ ಸೆಟಪ್, 2023 ರ ಚುನಾವಣಾ ತಂತ್ರಗಾರಿಕೆಗಳ ತೆರೆಮರೆಯ ರೋಚಕ ಕಥೆಗಳನ್ನು ರಶೀದ್ ಕಿದ್ವಾಯಿ ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

'ಯೆಜ್ಡಿ' ಬೈಕ್‌ ಸವಿನೆನಪು...

1980ರ ದಶಕದ ಕಾಲೇಜು ದಿನಗಳಲ್ಲಿ ಶಿವಕುಮಾರ್‌ ಓಡಿಸುತ್ತಿದ್ದ 'ಸಿಇಎ 7678' ನೋಂದಣಿ ಸಂಖ್ಯೆಯ ಬೈಕ್‌ ಬಗ್ಗೆಯೂ ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಹಲವು ವರ್ಷಗಳ ಕಾಲ ಮೂಲೆ ಸೇರಿದ್ದ ಈ ಬೈಕನ್ನು ಶಿವಕುಮಾರ್‌ ಆಪ್ತರು ಹಾಗೂ ನುರಿತ ಮೆಕ್ಯಾನಿಕ್‌ಗಳು ಮರುರೂಪಿಸಿದ್ದರು. ತಮ್ಮ ಮೊದಲ ಸವಾರಿಯ ಸನಿನೆನಪಿನ ಈ ಬೈಕನ್ನು ಕೆಲ ವರ್ಷಗಳ ಹಿಂದೆ ಮರಳಿ ಪಡೆದಾಗ ಶಿವಕುಮಾರ್‌ ಭಾವುಕರಾಗಿದ್ದರು. ಇತ್ತೀಚೆಗೆ ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್‌ ಉದ್ಘಾಟನೆ ವೇಳೆ ಇದೇ ಬೈಕ್‌ ಏರಿ ಅವರು ಸವಾರಿ ಮಾಡಿದ್ದರು. ಈ ಬೈಕ್‌ ಮೇಲಿನ ಅವರ ಪ್ರೀತಿಯನ್ನು ಪುಸ್ತಕದಲ್ಲಿ ಸುಂದರವಾಗಿ ವಿವರಿಸಲಾಗಿದೆ. ಪ್ರಸ್ತುತ ಸ್ವಪ್ನಾ ಬುಕ್ ಹೌಸ್ ಸೇರಿದಂತೆ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಹಾಗೂ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಪುಸ್ತಕ ಲಭ್ಯವಿದೆ.