Chaithra Kundapura: ಬಿಗ್ ಬಾಸ್ನಿಂದ ಹೊರಬಂದ ಬಳಿಕವೂ ನಿಲ್ಲದ ರಜತ್-ಚೈತ್ರಾ ಕಿತ್ತಾಟ: ವಿಡಿಯೋ ನೋಡಿ
ದೊಡ್ಮನೆಯೊಳಗಡೆ ಪ್ರತಿದಿನ ರಜತ್-ಚೈತ್ರಾ ಇವರಿಬ್ಬರ ನಡುವೆ ಒಂದಲ್ಲ ಒಂದು ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು. ಇದೀಗ ಅಚ್ಚರಿ ಎಂದರೆ ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಬಳಿಕ ಹೊರಬಂದ ಮೇಲೂ ರಜತ್-ಚೈತ್ರಾ ಜಗಳ ಮುಂದುವರೆದಿದೆ. ಇವರು ಏಲ್ಲಿ ಜಗಳ ಆಡಿದ್ದು?, ಈ ಕುರಿತ ಮಾಹಿತಿ ಇಲ್ಲಿದೆ ಓದಿ
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯಗೊಂಡು ಒಂದು ವಾರ ಆಗಿದೆ. ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದರೆ, ತ್ರಿವಿಕ್ರಮ್ ರನ್ನರ್-ಅಪ್ ಆದರು. ಈ ಬಾರಿಯ ಸೀಸನ್ನಲ್ಲಿ ಕಾಮಿಡಿ, ಹಾಡಿನ ಜೊತೆಗೆ ಜಗಳ ಕೂಡ ಭಾರೀ ಸದ್ದು ಮಾಡಿತು. ಈ ಜಗಳದಲ್ಲಿ ಅತಿ ಹೆಚ್ಚು ಸೌಂಡ್ ಮಾಡಿದ್ದು ಎಂದರೆ ಅದು ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್. ದೊಡ್ಮನೆಯೊಳಗಡೆ ಪ್ರತಿದಿನ ಇವರಿಬ್ಬರ ನಡುವೆ ಒಂದಲ್ಲ ಒಂದು ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು. ಇದೀಗ ಅಚ್ಚರಿ ಎಂದರೆ ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಬಳಿಕ ಇವರಿಬ್ಬರು ಹೊರಬಂದ ಮೇಲೂ ರಜತ್-ಚೈತ್ರಾ ಜಗಳ ಮುಂದುವರೆದಿದೆ.
ಫೈರ್‌ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ತಮ್ಮ ಜೋರು ದನಿಯಿಂದಲೇ ಹೆಸರು ಮಾಡಿದರು. ಯಾವುದೇ ಸಂದರ್ಭದಲ್ಲಿ ಇವರು ಬಿಟ್ಟುಕೊಡುತ್ತಿರಲಿಲ್ಲ. ಮಾತಿನ ಮೂಲಕವೇ ಎಲ್ಲ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದ್ದರು. ಇತ್ತ ವೈಲ್ಡ್‌ಕಾರ್ಡ್ ಮೂಲಕ ದಿಢೀರ್ ಎಂಟ್ರಿ ಕೊಟ್ಟ ರಜತ್ ಕಿಶನ್ ಕೂಡ ಕಡಿಮೆಯೇನಿರಲಿಲ್ಲ. ತಮ್ಮ ನೇರ ಮಾತು ಹಾಗೂ ಫಿಲ್ಟರ್ ಇಲ್ಲದೆ ಕೊಡುವಂತಹ ಕೌಂಟರ್ಗಳಿಗೆ ಎದುರಾಳಿ ನಡುಗುತ್ತಿದ್ದರು.
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಹಾಗೂ ರಜತ್ ಇಬ್ಬರೂ ಮಾತಿಗೆ ಮಾತು ಎನ್ನುತ್ತಾ ತೊಡೆ ತಟ್ಟಿ ಎಲ್ಲರಿಗೂ ಗಾಬರಿ ತರಿಸುತ್ತಿದ್ದರು. ಆದರೆ, ಫಿನಾಲೆಗೂ ಮುನ್ನವೇ ಚೈತ್ರಾ ಕುಂದಾಪುರ ಮನೆಯಿಂದ ಎಲಿಮಿನೇಟ್ ಆಗಿದ್ದರು. ಆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದ ಚೈತ್ರಾ ಇದೀಗ ಬಿಗ್ ಬಾಸ್ನಿಂದ ಹೊರಬಂದ ರಜತ್ ಜೊತೆ ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಬಳಿಕ ಹೊಸದಾಗಿ ವೀಕೆಂಡ್ನಲ್ಲಿ ಹೊಸ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಶುರುವಾಗಿದೆ. ರಜತ್ ಹಾಗೂ ಚೈತ್ರಾ ಈ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿದ್ದು, ರಜತ್‌ಗೆ ಪೇಟ ಹಾಕಿ ಸನ್ಮಾನಿಸುವ ಮೂಲಕ ಚೈತ್ರಾ ಕುಂದಾಪುರ ಅವರು, ರಜತ್‌ಗೆ ಪ್ರೀತಿಯ ಬಾಸ್ ಮಾಡುವ ಸಮಸ್ಕಾರಗಳು ಎಂದು ಕಾಲೆಳೆದಿದ್ದಾರೆ. ಇನ್ನು ಹಾರ ಹಾಕಿದ್ದನ್ನು ಕಂಡು ಇದು ಕುರಿಯನ್ನ ಬಲಿ ಕೊಡಂಗಿದೆ ಎಂದು ರಜತ್‌ಗೆ ಜೋಕ್ ಮಾಡಿದ್ದಾರೆ.
ಇಲ್ಲೂ ಜಗಳ ಶುರುಮಾಡಿಕೊಂಡ ಇವರಿಬ್ಬರು, ಈ ಶೋನಲ್ಲಿ ಹೇಗೋ ನೆಮ್ಮದಿಯಾಗಿರ್ತಿದ್ದೆ ಎಂದು ರಜತ್ ಹೇಳಿದ್ದು, ಇದಕ್ಕೆ ನೀನು ನೆಮ್ಮದಿಯಾಗಿ ಇರಬಾರ್ದು ಅಂತಾನೇ ನಾನು ಬಂದಿರೋದು ಎಂದು ಚೈತ್ರಾ ಹೇಳಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಮನೆಯೊಳಗೆ ಚೈತ್ರಾ-ರಜತ್ ಜಗಳ ಸಾಕಷ್ಟು ಸೌಂಡ್ ಮಾಡಿದ್ದು ನಿಜ. ಈಗ ಇದೇ ಜೋಡಿ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋಗೆ ಬಂದಿದ್ದು, ಇಲ್ಲೂ ಬೆಂಕಿ ಹತ್ತಿಕೊಳ್ಳುವುದು ಖಚಿತ ಎಂದು ವೀಕ್ಷಕರು ಹೇಳುತ್ತಿದ್ದಾರೆ.
Gauthami Jadav, BBK 11: ಇನ್ಸ್ಟಾ ಸ್ಟೇಟಸ್ನಲ್ಲಿ ಫೋಟೋ ಹಾಕಿ ಟ್ರೋಲಿಗರ ಬಾಯಿ ಮುಚ್ಚಿಸಿದ ಗೌತಮಿ ಜಾಧವ್