ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajath Kishan: ‘ಸುಮನಹಳ್ಳಿ ಬ್ರಿಡ್ಜ್‌ನಲ್ಲಿ ನಾನು ಮಚ್ಚು ಬಿಸಾಕಿದೆ’: ಸತ್ಯ ಬಾಯಿಬಿಟ್ಟ ರಜತ್ ಕಿಶನ್

Rajath Kishan machete case: ರಜತ್ ಕಿಶನ್ ಅವರು ನಿಜವಾದ ಮಚ್ಚು ಬಳಸಿ ರೀಲ್ಸ್ ಮಾಡಿ ಅದನ್ನು ಪೊಲೀಸರಿಗೆ ಸಿಗದಂತೆ ರೇಣುಕಾ ಸ್ವಾಮಿ ಶವ ಸಿಕ್ಕ ಸುಮನಹಳ್ಳಿ ಮೋರಿಯಲ್ಲಿ ಎಸೆದಿದ್ದರು ಎನ್ನಲಾಗಿತ್ತು. ಇದೀಗ ರಜತ್, ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಸುಮನಹಳ್ಳಿ ಬ್ರಿಡ್ಜ್‌ನಲ್ಲಿ ನಾನು ಮಚ್ಚು ಬಿಸಾಕಿದೆ: ಸತ್ಯ ಬಾಯಿಬಿಟ್ಟ ರಜತ್

Profile Vinay Bhat Apr 14, 2025 7:26 AM

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ (Rajath Kishan) ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಒಂದೇ ಒಂದು ರೀಲ್ಸ್​ ಅವರನ್ನು ಸಂಕಷ್ಟಕ್ಕೆ ದೂಡಿದೆ. ಕೇವಲ ರಜತ್ ಮಾತ್ರವಲ್ಲದೆ ವಿನಯ್ ಗೌಡ ಕೂಡ ಇದರಿಂದ ದೊಡ್ಡ ತೊಂದರೆಗೆ ಸಿಲುಕಿಕೊಂಡರು. ಜೈಲಿಗೆ ಹೋಗಬೇಕಾದ ಸಂದರ್ಭ ಕೂಡ ಬಂತು. ಶಸ್ತ್ರಾಸ್ತ್ರ ಕಾಯ್ದೆ ಅಡಿ ಇಬ್ಬರನ್ನೂ ಬಂಧಿಸಲಾಗಿತ್ತು. ಮನೋರಂಜನೆಗಾಗಿ ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ರಜತ್‌ ಹಾಗೂ ವಿನಯ್ ಮೂರು ದಿನಗಳ ಜೈಲುವಾಸ ಅನುಭವಿಸಿದ್ದರು.

ಸದ್ಯ ಈ ಪ್ರಕರಣದಲ್ಲಿ ಇಬ್ಬರಿಗೂ ರಿಲೀಫ್‌ ಸಿಕ್ಕಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ವಿನಯ್ ಅವರು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು. ಆದರೆ, ರಜತ್ ಈ ಕುರಿತು ಎಲ್ಲೂ ಮಾತನಾಡಿರಲಿಲ್ಲ. ಕಳೆದ ವಾರ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ರಜತ್ ಹಾಜರಿದ್ದರು ಆದರೆ, ವಿನಯ್ ಕಾಣಿಸಿಕೊಂಡಿರಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ ರಜತ್ ಕಿಶನ್ ಕೆಲ ಪ್ರಮುಖ ವಿಚಾರ ಹಂಚಿಕೊಂಡಿದ್ದಾರೆ.

ಅವರು ನಿಜವಾದ ಮಚ್ಚು ಬಳಸಿ ರೀಲ್ಸ್ ಮಾಡಿ ಅದನ್ನು ಪೊಲೀಸರಿಗೆ ಸಿಗದಂತೆ ರೇಣುಕಾ ಸ್ವಾಮಿ ಶವ ಸಿಕ್ಕ ಸುಮನಹಳ್ಳಿ ಮೋರಿಯಲ್ಲಿ ಎಸೆದಿದ್ದರು ಎನ್ನಲಾಗಿತ್ತು. ಇದೀಗ ರಜತ್, ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ‘ನಮಗೆ ರೀಲ್ಸ್​ನಿಂದ ಕೇಸ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಬಳಿಸಿದ್ವಿ. ಅದು ಫೈಬರ್ ಮಚ್ಚು. ರೀಲ್ಸ್ ಮಾಡಿದ್ದಾದ್ಮೇಲೆ ಕಾರಲ್ಲಿ ಮಚ್ಚು ಇಡೋದು ಬೇಡ ಅನಿಸಿತು. ಆಗ ನಾನು ವಾಪಸ್ ಹೋಗಿ ಸ್ಟುಡಿಯೋಗೆ ಮಚ್ಚು ಕೊಡಬೇಕಿತ್ತು. ಇಲ್ಲಾಂದ್ರೆ ಲಗ್ಗೆರೆಯಲ್ಲಿ ಸೆಟ್‌ನವರ ಗೋಡೌನ್ ಇದೆ. ಅಲ್ಲಿಗೆ ಹೋಗಿ ಮಚ್ಚು ಕೊಡಬೇಕಿತ್ತು. ಆದರೆ ನನಗೆ ಅಷ್ಟು ಸಮಯ ಇರಲಿಲ್ಲ. ನಾನು ಮಾರನೇಯ ದಿನ ಚಿತ್ರದುರ್ಗಕ್ಕೆ ಹೋಗಬೇಕಿತ್ತು. ಹೀಗಾಗಿ, ಮಚ್ಚು ಬೇಕೇ ಬೇಕಾ ಅಂತ ಕೇಳಿದೆ. ಸೆಟ್‌ನವರು ಅದೇ ತರಹದ್ದು ಇನ್ನೂ 3-4 ಇದೆ ಅಂದರು. ಅದು ಅವಶ್ಯಕತೆ ಇಲ್ಲ ಅಂತ ಹೇಳಿದ್ರಿಂದ ದಾರಿ ಮಧ್ಯೆ ಸುಮನಹಳ್ಳಿ ಬ್ರಿಡ್ಜ್‌ನಲ್ಲಿ ನಾನು ಮಚ್ಚು ಬಿಸಾಕಿದೆ’ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

Karna Serial: ಕರ್ಣ ಧಾರಾವಾಹಿಯ ಮತ್ತೊಂದು ವಿಡಿಯೋ ಲೀಕ್: ಭವ್ಯಾ-ನಮೃತಾ ಏನು ಮಾಡ್ತಿದ್ದಾರೆ ನೋಡಿ

‘ಕಾರಲ್ಲಿ ಮಚ್ಚು ಇರೋದು ಬೇಡ ಅಂತ ನಾನು ಅದನ್ನು ಎಸೆದಿದ್ದು ಬೇರೆಯದೇ ಆಯಾಮವನ್ನು ತೆಗೆದುಕೊಂಡಿದೆ. ಈಗ ದರ್ಶನ್​ ಸರ್ ಅವರ ಕೇಸ್​ಗೂ,​ ರೇಣುಕಾಸ್ವಾಮಿ ಸಾವಿಗೆ ಲಿಂಕ್​ ಮಾಡ್ತಾ ಇದ್ದಾರೆ ಇದು ಸರಿಯಲ್ಲ. ಮಚ್ಚು ಬಿಸಾಕಿದ್ದು ನನಗೆ ಗೊತ್ತಿತ್ತು. ಆದ್ರೆ ಅವರಿಗೆ ಇದರ ಬಗ್ಗೆ ಗೊತ್ತಿರಲಿಲ್ಲ. ಅದೇ ತರದ ಮಚ್ಚನ್ನು ತಂದು ಕೊಟ್ಟರು. ಮತ್ತೆ ಮುಂಜಾನೆ ನೋಡಿದ್ರೆ ಅದು ಮಿಸ್​ ಮ್ಯಾಚ್​ ಆಗಿದೆ ಅಂತ ಹೇಳಿದ್ದಾರೆ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.