ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಜೈಲರ್ 3’ ಸಿನಿಮಾ ಬರುತ್ತಾ? ಟೈಗರ್‌ ಮುತ್ತುವೇಲ್‌ ಪಾಂಡಿಯನ್‌ ಆಗಿ ಮತ್ತೆ ಅಬ್ಬರಿಸುತ್ತಾರಾ ರಜನಿಕಾಂತ್? ಕ್ಲೈಮ್ಯಾಕ್ಸ್‌ನಲ್ಲಿ ಅನಿರೀಕ್ಷಿತ ಟ್ವಿಸ್ಟ್ ಕೊಟ್ಟ ಚಿತ್ರತಂಡ!

Jailer 3 Movie: ನಿರ್ದೇಶಕ ನೆಲ್ಸನ್ ಅವರು ʻಜೈಲರ್‌ 3ʼ ಬರುವ ಸೂಚನೆಯನ್ನು ನೀಡಿದ್ದು, ರಜನಿಕಾಂತ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಅದಕ್ಕೇ ಕಾರಣವಾಗಿರುವುದು ವಿಜಯ್ ಸೇತುಪತಿ ಅವರ ಅನಿರೀಕ್ಷಿತ ಎಂಟ್ರಿ! ಕ್ಲೈಮ್ಯಾಕ್ಸ್‌ನಲ್ಲಿ ಬರುವ ಈ ಟ್ವಿಸ್ಟ್‌ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಹಾಗಾದರೆ, ʻಜೈಲರ್‌ 3ʼ ಬರಲಿದೆಯಾ?

ʻಜೈಲರ್ 3ʼ ಬರುತ್ತಾ? ಕ್ಲೈಮ್ಯಾಕ್ಸ್ ಟ್ವಿಸ್ಟ್‌ಗೆ ರಜನಿ‌ ಫ್ಯಾನ್ಸ್‌ ಶಾಕ್!

-

Avinash GR
Avinash GR Oct 15, 2026 7:46 PM

ʻಸೂಪರ್‌ಸ್ಟಾರ್ʼ ರಜನಿಕಾಂತ್ ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಟೈಗರ್ ಮುತ್ತುವೇಲ್ ಪಾಂಡಿಯನ್‌ನ ಮತ್ತೊಂದು ರೋಚಕ ಮಿಷನ್ ಈ ಚಿತ್ರದೊಂದಿಗೆ ಅಂತ್ಯ ಕಂಡಿದೆ ಎಂದು ಭಾವಿಸುವಷ್ಟರಲ್ಲೇ, ಚಿತ್ರತಂಡ ನೀಡಿರುವ ಕೊನೆಯ ಕ್ಷಣದ ಟ್ವಿಸ್ಟ್‌ಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ‘ಜೈಲರ್’ ಕಥೆ ಇಲ್ಲಿಗೇ ಮುಗಿಯಲಿಲ್ಲ, ಮುಂದೆ ಮೂರನೇ ಭಾಗಕ್ಕೂ ಬಲವಾದ ಮುನ್ನುಡಿ ಬರೆಯಲಾಗಿದೆ ಎಂಬ ಸ್ಪಷ್ಟ ಸುಳಿವನ್ನು ಕ್ಲೈಮ್ಯಾಕ್ಸ್ ದೃಶ್ಯಗಳು ಬಿಟ್ಟುಕೊಟ್ಟಿವೆ. (ಸ್ಪಾಯ್ಲರ್ ಅಲರ್ಟ್: ಮುಂದೆ ʻಜೈಲರ್‌ 2ʼ ಚಿತ್ರದ ಪ್ರಮುಖ ಗುಟ್ಟುಗಳನ್ನು ಬಿಟ್ಟುಕೊಡಲಾಗಿದೆ).

ಕ್ಲೈಮ್ಯಾಕ್ಸ್‌ನಲ್ಲಿ ಏನಾಗುತ್ತದೆ?

ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಮತ್ತು ಕಲ್ಪಕ್ ಕುಟುಂಬದ ನಡುವಿನ ಮುಖಾಮುಖಿ ಅತ್ಯಂತ ರೋಚಕವಾಗಿ ಮೂಡಿಬಂದಿದೆ. ಕಲ್ಪಕ್ (ಮಿಥುನ್ ಚಕ್ರವರ್ತಿ), ಕಾಂತಾ (ವಿದ್ಯಾ ಬಾಲನ್) ಹಾಗೂ ಬೋಧಿ (ಎಸ್.ಜೆ. ಸೂರ್ಯ) ವಿರುದ್ಧದ ಕಾದಾಟದಲ್ಲಿ, ಟೈಗರ್ ಕಲ್ಪಕ್‌ನ ಗಾಲಿಕುರ್ಚಿಗೆ ಅಳವಡಿಸಲಾದ ಬಾಂಬ್ ಸ್ಫೋಟಿಸುತ್ತಾನೆ. ಈ ಭೀಕರ ಸ್ಫೋಟದಲ್ಲಿ ಕಲ್ಪಕ್ ಸಾವನ್ನಪ್ಪಿದರೆ, ಟೈಗರ್ ಮುತ್ತುವೇಲ್‌ ಪಾಂಡಿಯನ್‌ (ರಜನಿಕಾಂತ್‌) ಪ್ರಾಣಾಪಾಯದಿಂದ ಪಾರಾಗುತ್ತಾರೆ. ಅತ್ತ ಕಾಂತಾ ಗಾಯಗೊಳ್ಳುತ್ತಾಳೆ. ಈ ಮೂಲಕ ಟೈಗರ್ ಮತ್ತು ಕಲ್ಪಕ್ ಕುಟುಂಬದ ನಡುವಿನ ರಕ್ತಸಿಕ್ತ ದ್ವೇಷ ಇನ್ನೂ ತಣ್ಣಗಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಕ್ಲೈಮ್ಯಾಕ್ಸ್‌ನಲ್ಲಿ ಹೊಸ ಟ್ವಿಸ್ಟ್‌ ಓಪನ್

ಕಥೆ ಮುಗಿಯಿತು ಎಂದು ಚಿತ್ರಮಂದಿರದಿಂದ ಎದ್ದು ಹೊರಡಲು ಸಿದ್ಧರಾಗುವ ಪ್ರೇಕ್ಷಕರಿಗೆ ನಿರ್ದೇಶಕ ನೆಲ್ಸನ್ ಅಸಲಿ ಸರ್ಪ್ರೈಸ್ ಇಟ್ಟಿರುವುದೇ ಆನಂತರದ ದೃಶ್ಯಗಳಲ್ಲಿ. ಸ್ಫೋಟದಲ್ಲಿ ತೀವ್ರ ಗಾಯಗೊಂಡಿದ್ದ ಕಾಂತಾ, ವ್ಹೀಲ್‌ ಚೇರ್‌ ಮೇಲೆ ಕುಳಿತು ಸ್ಟೈಲ್ ಆಗಿ ಸಿಗರೇಟ್ ಸೇದುತ್ತಾ ಮಾಸ್ ಎಂಟ್ರಿ ಕೊಡುತ್ತಾಳೆ. ಈ ಒಂದು ದೃಶ್ಯ ಆಕೆಯ ಸೇಡಿನ ಆಟ ಇನ್ನೂ ಮುಗಿದಿಲ್ಲ, ಅಸಲಿ ಯುದ್ಧ ಇನ್ನಷ್ಟೇ ಶುರುವಾಗಬೇಕಿದೆ ಎಂಬುದನ್ನು ಸೂಚಿಸುತ್ತದೆ. ಇದರ ಬೆನ್ನಲ್ಲೇ, ತನ್ನ ಮಗ ಅರ್ಜುನ್‌ನನ್ನು ಕೊಂದ ಆರೋಪದ ಮೇಲೆ ಮುತ್ತುವೇಲ್‌ ಕಾನೂನಿಗೆ ಗೌರವ ನೀಡಿ ಪೊಲೀಸರಿಗೆ ಶರಣಾಗುತ್ತಾನೆ. ಬೇಡಿ ಧರಿಸಿ ಆತ ಪೊಲೀಸ್ ವಾಹನದಲ್ಲಿ ಕುಳಿತಿರುವಾಗ ಖಡಕ್ ಜೈಲರ್‌ನ ಅಧ್ಯಾಯ ಮುಗಿಯಿತು ಎಂದೆನಿಸುವಷ್ಟರಲ್ಲೇ ಮತ್ತೊಂದು ಟ್ವಿಸ್ಟ್‌ ಓಪನ್‌ ಆಗುತ್ತದೆ.

Jailer 2 Movie: 'ಜೈಲರ್‌ 2' ಚಿತ್ರದಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌; ರಜನಿಕಾಂತ್‌ ಮಗಳ ಪಾತ್ರಕ್ಕೆ ಕನ್ನಡತಿ ಆಯ್ಕೆ?

ʻಜೈಲರ್‌ 3ʼ ಬರಲಿದೆ ಎಂಬ ಸುಳಿವು

ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವ ವಿಜಯ್ ಸೇತುಪತಿ, ಟೈಗರ್‌ಗೆ ಫೋನ್ ನೀಡಿ, ಕಾಂತಾ ಕಳುಹಿಸಿರುವ "ಗುಡ್ ಮಾರ್ನಿಂಗ್" ಸಂದೇಶಕ್ಕೆ ಉತ್ತರಿಸುವಂತೆ ಹೇಳುತ್ತಾರೆ. ಈ ಒಂದು ಸಣ್ಣ ಸಂಭಾಷಣೆಯೇ ಚಿತ್ರದ ಅಂತ್ಯಕ್ಕೆ ಊಹಿಸಲಾಗದ ಟ್ವಿಸ್ಟ್‌ ನೀಡುತ್ತದೆ. ಕಾಂತಾ ಮತ್ತೆ ಕಣಕ್ಕಿಳಿದಿರುವುದು ಮತ್ತು ವಿಜಯ್ ಸೇತುಪತಿ ಪಾತ್ರದ ನಿಗೂಢ ಎಂಟ್ರಿ, ಟೈಗರ್ ಅರೆಸ್ಟ್‌ ಆಗುವುದು.. ಇವೆಲ್ಲವೂ ‘ಜೈಲರ್ 3’ ಸಿನಿಮಾ ಬರಲಿದೆ ಎಂಬ ಸುಳಿವು ನೀಡಿವೆ.

ಸದ್ಯ ‘ಜೈಲರ್ 3’ ಚಿತ್ರ ಬರುವುದರ ಬಗ್ಗೆ ನಿರ್ಮಾಣ ಸಂಸ್ಥೆಯಾಗಲಿ ಅಥವಾ ನಿರ್ದೇಶಕರಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲವಾದರೂ, ಕಥೆಯನ್ನು ಅರ್ಧಕ್ಕೆ ಮುಗಿಸಿ, 3ನೇ ಭಾಗಕ್ಕೆ ಮುನ್ನಡಿಯನ್ನು ಸಿನಿಮಾದಲ್ಲಿ ನೀಡಿರುವುದು ರಜನಿಕಾಂತ್‌ ಫ್ಯಾನ್ಸ್‌ಗೆ ಕುತೂಹಲ ಹೆಚ್ಚಿಸಿದೆ. ಮತ್ತೊಮ್ಮೆ ಟೈಗರ್‌ ಮುತ್ತುವೇಳ್‌ ಪಾಂಡಿಯನ್ ಅಬ್ಬರ ನೋಡಲು ಸಿಗಬಹುದೇ? ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿರುವ ಚಿತ್ರತಂಡವೇ ಇದಕ್ಕೆ ಉತ್ತರ ನೀಡಬೇಕು.