ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌ 173ನೇ ಸಿನಿಮಾಕ್ಕೆ ನಿಲ್ಲದ ಸಂಕಷ್ಟ; ಮತ್ತೊಮ್ಮೆ ನಿರ್ದೇಶಕರ ಬದಲಾವಣೆ

Thalaivar 173 Director Issue: ಕಮಲ್ ಹಾಸನ್ ನಿರ್ಮಾಣದಲ್ಲಿ ರಜನಿಕಾಂತ್ ನಟಿಸಲಿರುವ ಹೊಸ ಚಿತ್ರದಿಂದ ನಿರ್ದೇಶಕ ಸಿಬಿ ಚಕ್ರವರ್ತಿ ಹೊರಬಂದಿದ್ದಾರೆ ಎನ್ನಲಾಗಿದೆ. ತೆಲುಗು ನಿರ್ಮಾಪಕರೊಂದಿಗಿನ ಕಾನೂನು ವಿವಾದವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಎರಡನೇ ಬಾರಿಗೆ ಈ ಚಿತ್ರಕ್ಕೆ ಹೀಗೆ ನಿರ್ದೇಶಕರು ಬದಲಾಗುತ್ತಿರುವುದು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ.

ರಜನಿಕಾಂತ್ ಚಿತ್ರಕ್ಕೆ ನಿರ್ದೇಶಕರದ್ದೇ ತಲೆನೋವು; ಮತ್ತೆ ಡೈರೆಕ್ಟರ್ ಚೇಂಜ್

-

Avinash GR
Avinash GR Apr 14, 2026 1:37 PM

ಕಮಲ್ ಹಾಸನ್ ನಿರ್ಮಾಣದದಲ್ಲಿ 'ತಲೈವರ್ 173' ಸಿನಿಮಾವು ಘೋಷಣೆಯಾಗಿದ್ದು, ಇದರಲ್ಲಿ ʻಸೂಪರ್ ಸ್ಟಾರ್ʼ ರಜನಿಕಾಂತ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಕಮಲ್‌ ಮತ್ತು ರಜನಿಯ ಸ್ನೇಹ ಪ್ರತೀಕವಾಗಿ ಮೂಡಿಬರಲಿರುವ ಈ ಸಿನಿಮಾಗೆ ನಿರ್ದೇಶಕರದ್ದೇ ದೊಡ್ಡ ಸಮಸ್ಯೆ ಆಗಿದೆ. 2027ರ ಸಂಕ್ರಾಂತಿ ಹಬ್ಬಕ್ಕೆ ಈ ಚಿತ್ರವನ್ನು ರಿಲೀಸ್‌ ಮಾಡಬೇಕು ಎಂಬುದು ಕಮಲ್‌ ಅವರ ಪ್ಲ್ಯಾನ್‌ ಆಗಿದೆ. ಆದರೆ ಇದಕ್ಕೆ ನಿರ್ದೇಶಕರ ವಿಚಾರವೇ ಸಮಸ್ಯೆ ಆಗಿರುವುದು ವಿಪರ್ಯಾಸ!

ಸಿಬಿ ಚಕ್ರವರ್ತಿ ನಿರ್ದೇಶನ ಮಾಡುವುದು ಡೌಟ್‌

ಡಾನ್‌ ಸಿನಿಮಾ ಖ್ಯಾತಿಯ ಸಿಬಿ ಚಕ್ರವರ್ತಿ ಅವರು ರಜನಿಕಾಂತ್‌ ನಟನೆಯ 173ನೇ ಸಿನಿಮಾಕ್ಕೆ ನಿರ್ದೇಶನ ಮಾಡಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಆಗಿತ್ತು. ಅದಕ್ಕೂ ಮುನ್ನ ಸುಂದರ್‌ ಸಿ. ಅವರು ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸುಂದರ್‌ ಹೊರನಡೆದಿದ್ದರು. ಆ ಬಳಿಕವೇ ಸಿಬಿ ಚಕ್ರವರ್ತಿಗೆ ಈ ಆಫರ್‌ ಸಿಕ್ಕಿತ್ತು. ಎರಡನೇ ಸಿನಿಮಾದಲ್ಲೇ ರಜನಿಕಾಂತ್‌ ಅವರನ್ನು ನಿರ್ದೇಶನ ಮಾಡುವ ಚಾನ್ಸ್‌ ಸಿಕ್ಕಿದ್ದು ಸಿಬಿ ಕರಿಯರ್‌ಗೆ ದೊಡ್ಡ ಪ್ಲಸ್‌ ಪಾಯಿಂಟ್‌ ಆಗಿತ್ತು. ಆದರೆ ಇದೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ರಜನಿಕಾಂತ್‌ ಹೊರನಡೆದಿದ್ದಾರಂತೆ!

Thalaivar 173: ತಲೈವಾ-173 ಸಿನಿಮಾಗಾಗಿ ಒಂದಾದ ರಜನಿಕಾಂತ್-ಕಮಲ್ ಹಾಸನ್

ಸಿಬಿ ಚಕ್ರವರ್ತಿ 'ತಲೈವರ್ 173' ಬಿಟ್ಟಿದ್ದು ಏಕೆ?

'ತಲೈವರ್ 173' ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ವೇಗವಾಗಿ ಸಾಗುತ್ತಿದ್ದವು ಮತ್ತು ಏಪ್ರಿಲ್ ಅಂತ್ಯದ ವೇಳೆಗೆ ಶೂಟಿಂಗ್ ಆರಂಭವಾಗಬೇಕಿತ್ತು. ಸಿಬಿ ಚಕ್ರವರ್ತಿ ಅವರ ನಿರ್ದೇಶನದಲ್ಲೇ ಚಿತ್ರೀಕರಣಕ್ಕೆ ಇಡೀ ತಂಡ ಸಜ್ಜಾಗಿತ್ತು. ಆದರೆ, ಇದೀಗ ಅವರು ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಕಮಲ್ ಹಾಸನ್ ಅವರ 'ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್' ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ತೆಲುಗು ನಟ ನಾನಿ ಅವರ ಚಿತ್ರದಿಂದ ಸಿಬಿ ಹೊರಬಂದ ವಿಚಾರಕ್ಕೆ ಸಂಬಂಧಿಸಿದ ಕಾನೂನು ವಿವಾದವೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

ಹೌದು, ಈ ಹಿಂದೆ ತೆಲುಗಿನ ನಾನಿ ನಟನೆಯ ಚಿತ್ರವನ್ನು ನಿರ್ದೇಶಿಸಲು ಸಿಬಿ ಒಪ್ಪಿಕೊಂಡಿದ್ದರು. ಆದರೆ ಅದು ಅಂದುಕೊಂಡಂತೆ ಸೆಟ್ಟೇರಲಿಲ್ಲ. ಅಷ್ಟರಲ್ಲಾಗಲೇ ಪ್ರಿ-ಪ್ರೊಡಕ್ಷನ್‌ ಕೆಲಸಗಳಿಗಾಗಿಯೇ ನಿರ್ಮಾಪಕರು ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದರು. "ಸಿಬಿ ಚಕ್ರವರ್ತಿ ಜೊತೆ ಸಿನಿಮಾ ಮಾಡಲು ಹೋಗಿ ನಾವು ನಷ್ಟ ಮಾಡಿಕೊಂಡಿದ್ದೇವೆ. ನಮಗೆ 'ತಲೈವರ್ 173' ಚಿತ್ರದಲ್ಲಿ ಪಾಲುದಾರಿಕೆ ಕೊಡಿ" ಎಂದು ಆ ತೆಲುಗು ನಿರ್ಮಾಪಕರು ಕೇಳುತ್ತಿದ್ದಾರೆ. ಆದರೆ ಕಮಲ್‌ ಹಾಸನ್‌ ಅದಕ್ಕೆ ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಸಿಬಿ ತಲೈವರ್‌ 173 ಪ್ರಾಜೆಕ್ಟ್‌ನಿಂದಲೇ ದೂರವಾಗಿದ್ದಾರೆ ಎಂಬ ಮಾತಿದೆ.

ಇದು ಒಂದು ವದಂತಿಯದರೆ, ಮತ್ತೊಂದು ವದಂತಿಯ ಪ್ರಕಾರ, ರಜನಿಕಾಂತ್ ಅವರು ಚಿತ್ರಕಥೆಯಲ್ಲಿ ಬದಲಾವಣೆ ಮಾಡುವಂತೆ ಕೇಳಿದ್ದರು. ಚಿತ್ರದ ಲೈಟ್‌ ಕಾಮಿಡಿ ಜಾನರ್ ಅವರಿಗೆ ಇಷ್ಟವಾಗದ ಕಾರಣ, ಚಿತ್ರವು ಹೆಚ್ಚು ಗಂಭೀರವಾಗಿರಬೇಕೆಂದು ರಜನಿ ಬಯಸಿದ್ದರು. ಅವರು ಇದರಲ್ಲಿ ಪತ್ತೇದಾರನ ಪಾತ್ರದಲ್ಲಿ ನಟಿಸುತ್ತಿರುವುದರಿಂದ, 'ಧುರಂಧರ್' ಚಿತ್ರದಂತೆ ಡಾರ್ಕ್ ಮತ್ತು ಇಂಟೆನ್ಸ್ ಶೈಲಿಯಲ್ಲಿ ಚಿತ್ರವಿರಲಿ ಎಂದು ಸಿಬಿಗೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಆದರೆ ಸಿಬಿ ಚಕ್ರವರ್ತಿ ಈ ಬದಲಾವಣೆಗಳನ್ನು ಮಾಡಲು ನಿರಾಕರಿಸಿದರು ಮತ್ತು ಚಿತ್ರದಿಂದಲೇ ಹೊರನಡೆದರು ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಅಸಲಿಗೆ ಆಗಿದ್ದೇನು ಎಂಬುದನ್ನು ಚಿತ್ರತಂಡವೇ ತಿಳಿಸಬೇಕಿದೆ.

ಯಾರಿಗೆ ಸಿಗಲಿದೆ ಆ ಚಾನ್ಸ್?‌

ಸುಂದರ್‌ ಸಿ. ಬಳಿಕ ಸಿಬಿ ಚಕ್ರವರ್ತಿಗೆ ನಿರ್ದೇಶನ ಮಾಡು ಚಾನ್ಸ್‌ ಸಿಕ್ಕಿತ್ತು. ಈಗ ಸಿಬಿ ಕೂಡ ಹೊರಬಂದಿರುವುದರಿಂದ, ರಜನಿಕಾಂತ್‌ ಅವರನ್ನು ನಿರ್ದೇಶಿಸುವ ಚಾನ್ಸ್‌ ಯಾರಿಗೆ ಸಿಗಲಿದೆ? ʻಓಹ್‌ ಮೈ ಕಡವುಳೆʼ, 'ಡ್ರ್ಯಾಗನ್' ಖ್ಯಾತಿಯ ನಿರ್ದೇಶಕ ಅಶ್ವಥ್ ಮರಿಮುತ್ತುಗೆ ರಜನಿಯನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಅವರು ಚಿತ್ರತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರಂತೆ. ಆದರೂ, ರಜನಿಕಾಂತ್‌ ನಟನೆಯ, ಕಮಲ್‌ ಹಾಸನ್‌ ನಿರ್ಮಾಣದ ಸಿನಿಮಾಕ್ಕೆ ಹೀಗೆ ಪದೇ ಪದೇ ನಿರ್ದೇಶಕರು ಬದಲಾಗುತ್ತಿರುವುದಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.