ಅಂತೂ ʻಜೈಲರ್ 2ʼ ಸಿನಿಮಾ ಶೂಟಿಂಗ್ ಮುಗೀತು! ಇದರ ಬಜೆಟ್ ಎಷ್ಟು? ಈ ಚಿತ್ರ ರಿಲೀಸ್ ಆಗೋದು ಯಾವಾಗ?
ನಟ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸೀಕ್ವೆಲ್‌ನಲ್ಲಿ ರಮ್ಯಾ ಕೃಷ್ಣನ್, ಶಿವಣ್ಣ, ಮೋಹನ್ ಲಾಲ್ ಅವರೊಂದಿಗೆ ವಿಜಯ್ ಸೇತುಪತಿ ಕೂಡ ಕಾಣಿಸಿಕೊಳ್ಳಲಿದ್ದಾರೆ.
-
2026ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ʻಸೂಪರ್ ಸ್ಟಾರ್ʼ ರಜನಿಕಾಂತ್ ನಟನೆಯ 'ಜೈಲರ್ 2' ಕೂಡ ಒಂದು. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿರುವ ಈ ಸಿನಿಮಾವು 2023ರ ಬ್ಲಾಕ್‌ಬಸ್ಟರ್ 'ಜೈಲರ್' ಚಿತ್ರದ ಸೀಕ್ವೆಲ್ ಆಗಿದೆ. ಕೇವಲ ಘೋಷಣೆಯ ವೀಡಿಯೊದ ಮೂಲಕವೇ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರದ ಬಗ್ಗೆ ಇದೀಗ ಚಿತ್ರತಂಡ ಹೊಸ ಅಪ್‌ಡೇಟ್ ನೀಡಿದೆ. ಅದೇನಪ್ಪ ಅಂದರೆ, ಈ ಚಿತ್ರದ ಶೂಟಿಂಗ್ ಕೊನೆಗೂ ಮುಕ್ತಾಯಗೊಂಡಿದೆ.
ಜೈಲರ್ 2 ಸೆಟ್‌ನಲ್ಲಿ ಸಂಭ್ರಮ
ಜೈಲರ್ 2 ಸಿನಿಮಾದ ಚಿತ್ರೀಕರಣ ಮುಕ್ತಾಯವಾದ ಹಿನ್ನೆಲೆಯಲ್ಲಿ ಆ ಸಂಭ್ರಮವನ್ನು ಸೆಟ್‌ನಲ್ಲಿ ಚಿತ್ರತಂಡವು ಕೇಕ್ ಕತ್ತರಿಸುವ ಮೂಲಕ ಆಚರಿಸಿದೆ. ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಫೋಟೋಗಳಲ್ಲಿ ರಜನಿಕಾಂತ್, ನಿರ್ದೇಶಕ ನೆಲ್ಸನ್ ಸೇರಿದಂತೆ ಹಲವು ತಾಂತ್ರಿಕ ವರ್ಗದವರು ಕಾಣಿಸಿಕೊಂಡಿದ್ದಾರೆ. ಶೂಟಿಂಗ್ ಮುಗಿದಿರುವುದು ಅಭಿಮಾನಿಗಳಿಗೆ ಖುಷಿ ನೀಡಿದ್ದರೂ, ಬಿಡುಗಡೆಯ ದಿನಾಂಕ ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ.
ಜೈಲರ್ 2 ಸಿನಿಮಾ ರಿಲೀಸ್ ಯಾವಾಗ?
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಜೂನ್‌ನಲ್ಲಿಯೇ ಜೈಲರ್ 2 ಬರಬೇಕಿತ್ತು. ಸದ್ಯಕ್ಕೆ ಅದು ಸಾಧ್ಯವಿಲ್ಲ. ಅಲ್ಲದೆ, ಜೈಲರ್ ತೆರೆಕಂಡ ಆಗಸ್ಟ್ ತಿಂಗಳಿನಲ್ಲಿಯೇ ಪಾರ್ಟ್ 2 ಅನ್ನು ಕೂಡ ರಿಲೀಸ್ ಮಾಡಬಹುದೇನೋ ಎಂಬ ನಿರೀಕ್ಷೆ ಇತ್ತು. ಅಲ್ಲದೆ,
ಕಳೆದ ವರ್ಷ ಆಗಸ್ಟ್‌ನಲ್ಲಿ 'ಕೂಲಿ' ಚಿತ್ರ ಬಂದಿತ್ತು. ಅದೇ ರೀತಿ ಈ ವರ್ಷ ಆಗಸ್ಟ್‌ನಲ್ಲಿ 'ಜೈಲರ್ 2' ಬಿಡುಗಡೆ ಆಗಲಿ ಎಂದು ಎಂದು ಈ ಹಿಂದೆ ಸುದ್ದಿ ಕೂಡ ಆಗಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ, ಸೆಪ್ಟೆಂಬರ್‌ನಲ್ಲಿ 'ಜೈಲರ್ 2' ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆಯಂತೆ.
Jailer 2 Movie: ಮತ್ತೊಮ್ಮೆ ಆ್ಯಕ್ಷನ್ ಅವತಾರದಲ್ಲಿ ರಜನಿಕಾಂತ್; 'ಜೈಲರ್ 2' ಚಿತ್ರದ ಟೀಸರ್ ಔಟ್
ಇದರ ಬಜೆಟ್ ಎಷ್ಟು?
200 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಜೈಲರ್ ಸಿನಿಮಾವು 650 ಕೋಟಿ ರೂ. ಬಾಚಿಕೊಂಡಿತ್ತು. ಇದೀಗ ಜೈಲರ್ 2 ಸಿನಿಮಾವನ್ನು 300 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆಯಂತೆ. ಈ ಬಾರಿ ಚಿತ್ರತಂಡ 1000 ಕೋಟಿ ರೂ. ಕ್ಲಬ್ ಮೇಲೆ ಕಣ್ಣಿಟ್ಟಿದೆ. ಡಾರ್ಕ್ ಕ್ರೈಮ್ ಕಾಮಿಡಿ ಥ್ರಿಲ್ಲರ್ ಆಗಿದ್ದ ಮೊದಲ ಭಾಗದಂತೆ, ಎರಡನೇ ಭಾಗದ ಕಥೆಯ ಬಗ್ಗೆಯೂ ಕುತೂಹಲ ಮೂಡಿದೆ. ಚಿತ್ರದಲ್ಲಿ ರಜನಿಕಾಂತ್ ಅವರ ಪತ್ನಿಯಾಗಿ ರಮ್ಯಾ ಕೃಷ್ಣ ಇದ್ದಾರೆ. ಇನ್ನುಳಿದಂತೆ ಮಿಥುನ್ ಚಕ್ರವರ್ತಿ, ಎಸ್. ಜೆ. ಸೂರ್ಯ, ವಸಂತ್ ರವಿ, ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಅಲ್ಲದೆ, ಮೊದಲ ಭಾಗದಲ್ಲಿದ್ದ ಶಿವರಾಜ್‌ಕುಮಾರ್ ಮತ್ತು ಮೋಹನ್ ಲಾಲ್ ಅವರೊಂದಿಗೆ ಈ ಬಾರಿ ವಿಜಯ್ ಸೇತುಪತಿ ಕೂಡ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ.
ರಜನಿಕಾಂತ್ ನಟನೆಯ ಜೈಲರ್ 2 ಶೂಟಿಂಗ್ ಮುಕ್ತಾಯ
Alapparai Kelappurom, Thalaivaru Nerandharam! ⭐💥 It's a wrap for #Jailer2 😎@rajinikanth @Nelsondilpkumar @anirudhofficial pic.twitter.com/75kLIQBF4w
— Sun Pictures (@sunpictures) April 21, 2026
ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಚಿತ್ರೀಕರಣದ ಕೆಲವು ದೃಶ್ಯಗಳು ಲೀಕ್ ಆಗಿದ್ದು, ಚಿತ್ರತಂಡಕ್ಕೆ ಶಾಕ್ ನೀಡಿತ್ತು. ಕೂಡಲೇ ಎಚ್ಚೆತ್ತುಕೊಂಡ ನಿರ್ಮಾಣ ಸಂಸ್ಥೆ ಅಂತಹ ದೃಶ್ಯಗಳನ್ನು ಇಂಟರ್‌ನೆಟ್‌ನಿಂದ ತೆರವುಗೊಳಿಸಿದೆ ಮತ್ತು ಈ ರೀತಿ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದೆ.