ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajkummar Rao: 'ಬೆಹೆನ್ ಹೋಗಿ ತೇರಿ' ಪ್ರಕರಣ: ನಟ ರಾಜ್‌ಕುಮಾರ್ ರಾವ್‌ಗೆ ಬಿಗ್ ರಿಲೀಫ್

2017ರ ಏಪ್ರಿಲ್ 4ರಂದು ಬಿಡುಗಡೆಯಾದ 'ಬೆಹೆನ್ ಹೋಗಿ ತೇರಿ' ಹಿಂದಿ ಚಿತ್ರದ ಡಿಜಿಟಲ್ ಪೋಸ್ಟರ್‌ನಲ್ಲಿ ನಟ ರಾಜ್‌ ಕುಮಾರ್‌ರಾವ್‌ ಶಿವನ ವೇಷ ಧರಿಸಿ ಬೆಳ್ಳಿ ಮೋಟಾರ್‌ ಸೈಕಲ್‌ನಲ್ಲಿ ಕುಳಿತಿರುವುದನ್ನು ತೋರಿಸಲಾಗಿತ್ತು. ಇದರಲ್ಲಿ ಅವರು ಚಂದ್ರ, ರುದ್ರಾಕ್ಷಿ ಮಣಿಗಳಂತಹ ಹಲವಾರು ಶಿವನ ಸಾಂಕೇತಿಕ ಅಂಶಗಳು ಬಳಸಿಕೊಂಡಿದ್ದರು. ಇದು ಜಲಂಧರ್‌ನಲ್ಲಿ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಬಳಿಕ ಪ್ರಕರಣ ದಾಖಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಜಲಂಧರ್ ನ್ಯಾಯಾಲಯ ನಟ ರಾಜ್‌ಕುಮಾರ್ ರಾವ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ನಟ ರಾಜ್‌ಕುಮಾರ್ ರಾವ್‌ಗೆ ಜಾಮೀನು

ಮುಂಬೈ: ʼಬೆಹೆನ್ ಹೋಗಿ ತೇರಿʼ( Behen Hogi Teri) ಹಿಂದಿ ಚಿತ್ರದ ಪ್ರಕರಣಕ್ಕೆ ಸಂಬಂಧಿಸಿ ನಟ (Bollywood actor) ರಾಜ್‌ಕುಮಾರ್ ರಾವ್‌ಗೆ ( Rajkummar Rao) ಜಾಮೀನು ನೀಡಲಾಗಿದೆ. 2017ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದ ಡಿಜಿಟಲ್ ಪೋಸ್ಟರ್‌ನಲ್ಲಿ ನಟ ರಾಜ್ ಕುಮಾರ್ ರಾವ್ ಶಿವನ ವೇಷ ಧರಿಸಿ ಉತ್ತರಪ್ರದೇಶದ (Uttar Pradesh) ನಂಬರ್ ಪ್ಲೇಟ್ ಹೊಂದಿದ್ದ ಬೈಕ್‌ನಲ್ಲಿ ಕುಳಿತಿರುವುದನ್ನು ತೋರಿಸಲಾಗಿತ್ತು. ಇದು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಪ್ರಕರಣ ಕೂಡ ದಾಖಲಾಗಿತ್ತು. ಇದರ ವಿಚಾರಣೆ ಹಿನ್ನೆಲೆಯಲ್ಲಿ ಸೋಮವಾರ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಜಲಂಧರ್‌ನ ನ್ಯಾಯಾಲಯದ (Jalandhar court) ಮುಂದೆ ಶರಣಾಗಿದ್ದು ಅವರಿಗೆ ಜಾಮೀನು ನೀಡಲಾಗಿದೆ.

2017ರಲ್ಲಿ ಬಿಡುಗಡೆಯಾದ ʼಬೆಹೆನ್ ಹೋಗಿ ತೇರಿʼ ಚಿತ್ರದ ಡಿಜಿಟಲ್ ಪೋಸ್ಟರ್‌ನಲ್ಲಿ ನಟ ರಾಜ್‌ಕುಮಾರ್ ಶಿವನ ವೇಷ ಧರಿಸಿ ಬೈಕ್ ಮೇಲೆ ಕುಳಿತಿದ್ದರು. ಈ ದೃಶ್ಯವು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಜಲಂಧರ್‌ನಲ್ಲಿ ದೂರು ದಾಖಲಾಗಿತ್ತು. ಈ ಕುರಿತು ಸೋಮವಾರ ನ್ಯಾಯಾಲಯದ ಮುಂದೆ ಹಾಜರಾದ ನಟ ರಾಜ್‌ಕುಮಾರ್‌ಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.



ಅಂದು ಏನಾಗಿತ್ತು?

2017ರ ಏಪ್ರಿಲ್ 4ರಂದು ಬಿಡುಗಡೆಯಾದ ಚಿತ್ರದ ಡಿಜಿಟಲ್ ಪೋಸ್ಟರ್‌ನಲ್ಲಿ ನಟ ರಾಜ್‌ಕುಮಾರ್ ಶಿವನ ವೇಷ ಧರಿಸಿ ಬೆಳ್ಳಿ ಮೋಟಾರ್‌ಸೈಕಲ್‌ನಲ್ಲಿ ಕುಳಿತಿರುವುದನ್ನು ತೋರಿಸಲಾಗಿತ್ತು. ಇದರಲ್ಲಿ ಅವರು ಚಂದ್ರ, ರುದ್ರಾಕ್ಷಿ ಮಣಿಗಳಂತಹ ಹಲವಾರು ಶಿವನ ಸಾಂಕೇತಿಕ ಅಂಶಗಳು ಬಳಸಿಕೊಂಡಿದ್ದರು. ಇದು ಜಲಂಧರ್‌ನಲ್ಲಿ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಲ್ಲಿ ಖಾಸಗಿ ಕ್ರಿಮಿನಲ್ ಕೇಸು ದಾಖಲಾಗಿತ್ತು.



ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಅಜಯ್ ಕೆ. ಪನ್ನಾಲಾಲ್, ನಿರ್ಮಾಪಕ ಟೋನಿ ಡಿ'ಸೋಜಾ ಅವರನ್ನು 2017ರ ಮೇ 26ರಂದು ಮುಂಬೈನಲ್ಲಿ ಬಂಧಿಸಲಾಗಿದ್ದು, ಅನಂತರ ಜಾಮೀನು ನೀಡಲಾಯಿತು.

ಇದನ್ನೂ ಓದಿ: Viral News: ಚೀನಾ ಒಡೆತನದ ಕಂಪನಿಯ ಡೋರ್‌ಮ್ಯಾಟ್ ಮೇಲೆ ಪುರಿ ಜಗನ್ನಾಥ ದೇವರ ಚಿತ್ರ; ಹಿಂದೂ ಭಕ್ತರಿಂದ ಆಕ್ರೋಶ

ಚಿತ್ರಕ್ಕೆ ಸಂಬಂಧಿಸಿ ಹಿಂದೂ ನಾಯಕ ಮತ್ತು ಚಲನಚಿತ್ರ ನಿರ್ಮಾಪಕ ಇಶಾಂತ್ ಶರ್ಮಾ ಜಲಂಧರ್‌ನ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಚಿತ್ರದಲ್ಲಿ ಶಿವನಿಗೆ 'ಅಗೌರವ' ತೋರಲಾಗಿದೆ. ಇದು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದ್ದರು.

ಬಳಿಕ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಶಿವನ ಅವತಾರದಲ್ಲಿ ರಾಜ್‌ಕುಮಾರ್ ಬೈಕ್‌ನಿಂದ ಬೀಳುತ್ತಿರುವ ದೃಶ್ಯವನ್ನು ತೆಗೆದುಹಾಕುವಂತೆ ನಿರ್ಮಾಪಕರನ್ನು ಕೇಳಿಕೊಂಡಿತ್ತು. ಆದರೂ ಚಿತ್ರ ಯಾವುದೇ ಕಡಿತಗಳಿಲ್ಲದೆ 2017ರ ಜೂನ್ 9ರಂದು ಬಿಡುಗಡೆಯಾಯಿತು. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ವಿಶ್ವಾದ್ಯಂತ ಒಟ್ಟು 3.06 ಕೋಟಿ ರೂ. ಗಳಿಸಲಷ್ಟೇ ಶಕ್ತವಾಗಿತ್ತು.