ದಯವಿಟ್ಟು ಏಷ್ಯಾ ಕಪ್ ಪುನರಾವರ್ತನೆ ಬೇಡ; ಪಾಕ್ ಮಾಜಿ ನಾಯಕನ ವಿನಂತಿ
IND-PAK boycott drama ends: ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಹಫೀಜ್, ನಿಜವಾದ ಕ್ರೀಡಾ ಮನೋಭಾವವನ್ನು ಮರಳಿ ತರಬೇಕೆಂದು ಒತ್ತಾಯಿಸಿದ್ದಾರೆ. ವಿಶ್ವಕಪ್‌ನಲ್ಲೂ ಅದೇ ರೀತಿ ನಡೆದರೆ, ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ತಾನು ಬಯಸುವುದಿಲ್ಲ ಎಂದು ಹಫೀಜ್ ಹೇಳಿದ್ದಾರೆ.
Suryakumar Yadav and Salman Agha -
ಲಾಹೋರ್, ಫೆ.10: ಟಿ20 ವಿಶ್ವಕಪ್(T20 World Cup)ನಲ್ಲಿ ಭಾರತ ವಿರುದ್ಧ ಫೆ.15ರಂದು ನಿಗದಿಯಾಗಿರುವ ಪಂದ್ಯದಲ್ಲಿ ಆಡಲ್ಲ ಎಂದಿದ್ದ ಪಾಕಿಸ್ತಾನ ಈಗ ತನ್ನ ನಿರ್ಧಾರದಿಂದ ಬಹುತೇಕ ಹಿಂದಕ್ಕೆ ಸರಿದಿದೆ. ಪಾಕಿಸ್ತಾನ ಸರ್ಕಾರ ಭಾರತ ವಿರುದ್ಧ ಆಡಲು ಅನುಮತಿ(IND-PAK boycott drama ends) ನೀಡಿದೆ ಎನ್ನಲಾಗಿದೆ. ಇದರೊಂದಿಗೆ ಹಲವು ದಿನಗಳ ಹೈಡ್ರಾಮಕ್ಕೆ ಬ್ರೇಕ್ ಬೀಳುವ ಸಮಯ ಬಂದಿದ್ದು, ಭಾರತ-ಪಾಕ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ‘ನೋ ಹ್ಯಾಂಡ್ ಶೇಕ್’ ನಿಯಮದ ಬಗ್ಗೆ ಚರ್ಚೆ ಶರುವಾಗಿದೆ.
ಹೌದು, ಕಳೆದ ವರ್ಷ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನಿ ಆಟಗಾರರು, ಸಹಾಯಕ ಸಿಬ್ಬಂದಿ ಜತೆ ಭಾರತ ಕ್ರಿಕೆಟ್ ತಂಡ ‘ನೋ ಹ್ಯಾಂಡ್ ಶೇಕ್’ ನಿಯಮ ಪಾಲಿಸಿತ್ತು. ಪ್ರಶಸ್ತಿ ಗೆದ್ದ ಬಳಿಕ ಭಾರತ ತಂಡ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ, ಪಾಕ್ ಗೃಹ ಸಚಿವ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಹಿಂದೇಟು ಹಾಕಿತ್ತು. ಗಂಟೆಗಳ ಕಾಲ ನಡೆದ ನಾಟಕೀಯ ಬೆಳವಣಿಗೆ ಬಳಿಕ ನಖ್ವಿ ಹೋಟೆಲ್‌ಗೆ ತೆರಳಿದ್ದರು. ಜೊತೆಗೆ ಸಿಬ್ಬಂದಿ ಜತೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದರು. ದುಬೈನ ಎಸಿಸಿ ಮುಖ್ಯ ಕಚೇರಿಯಲ್ಲಿದ್ದ ಏಷ್ಯಾಕಪ್ ಟ್ರೋಫಿಯನ್ನು ಅಬುಧಾಬಿಯ ಗುಪ್ತ ಸ್ಥಳವೊಂದರಲ್ಲಿ ಅಡಗಿಸಿಟ್ಟಿದಾರೆ. ಈಗಲೂ ಭಾರತಕ್ಕೆ ಟ್ರೋಫಿ ಸಿಗಲಿಲ್ಲ.
ಇದೀಗ ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಹಫೀಜ್, ನಿಜವಾದ ಕ್ರೀಡಾ ಮನೋಭಾವವನ್ನು ಮರಳಿ ತರಬೇಕೆಂದು ಒತ್ತಾಯಿಸಿದ್ದಾರೆ. ವಿಶ್ವಕಪ್‌ನಲ್ಲೂ ಅದೇ ರೀತಿ ನಡೆದರೆ, ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ತಾನು ಬಯಸುವುದಿಲ್ಲ ಎಂದು ಹಫೀಜ್ ಹೇಳಿದ್ದಾರೆ.
"ಭಾರತ vs ಪಾಕಿಸ್ತಾನ ಪಂದ್ಯಗಳ ಪರವಾಗಿರುವುದಾಗಿ ಮತ್ತು ಅದು ನಿಯಮಿತವಾಗಿ ನಡೆಯುವುದನ್ನು ನೋಡಲು ಬಯಸುತ್ತೇನೆ" ಎಂದು ಹೇಳಿದರು.
"ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಮಾತು ಬಂದಾಗಲೆಲ್ಲಾ, ನಾನು ಯಾವಾಗಲೂ ಅದರ ಪರವಾಗಿರುತ್ತೇನೆ. ಏಕೆಂದರೆ ಈ ಪಂದ್ಯ ಪೈಪೋಟಿ, ಮತ್ತು ಇಡೀ ಜಗತ್ತಿಗೆ ಸ್ಫೂರ್ತಿ ನೀಡುತ್ತದೆ. ದೇವರು ಬಯಸಿದರೆ ಪಂದ್ಯ ನಡೆಯಲಿ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಮತ್ತು ಇದು ಕೇವಲ ಈ ಒಂದು ಪಂದ್ಯದ ಬಗ್ಗೆ ಅಲ್ಲ. ನಾನು ಈ ಪಂದ್ಯದಲ್ಲಿ ಮಾತ್ರ ಆಸಕ್ತಿ ಹೊಂದಿಲ್ಲ. ಭಾರತ-ಪಾಕಿಸ್ತಾನ ಪಂದ್ಯಗಳು ನಿಯಮಿತ ಆಧಾರದ ಮೇಲೆ ನಡೆಯಬೇಕು, ರಾಜಕೀಯವನ್ನು ಅದರಿಂದ ಶಾಶ್ವತವಾಗಿ ದೂರವಿಡಬೇಕು ಎಂಬುದು ನನ್ನ ಬಯಕೆ" ಎಂದರು.
ಪಾಕ್ ಯೂಟರ್ನ್?; ಭಾರತ ಜತೆ ಟಿ20 ಪಂದ್ಯದ ಕುರಿತು ಇಂದು ಘೋಷಣೆ?
"ಎರಡೂ ದೇಶಗಳು ಆಟವನ್ನು ಬೆಳೆಸುವಲ್ಲಿ ಮತ್ತು ಹರಡುವಲ್ಲಿ ತಮ್ಮಿಂದ ಸಾಧ್ಯವಾದಷ್ಟು ಪಾತ್ರವನ್ನು ಸಂಪೂರ್ಣವಾಗಿ ನಿರ್ವಹಿಸಲು ಅವಕಾಶ ನೀಡಬೇಕು ಮತ್ತು ರಾಜಕೀಯದ ಕಾರಣದಿಂದಾಗಿ ಕ್ರಿಕೆಟ್ ಅನ್ನು ಎಂದಿಗೂ ನಿಲ್ಲಿಸಬಾರದು. ಎರಡನೆಯದಾಗಿ, ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಯಾವುದೇ ಸನ್ನಿವೇಶ ಉದ್ಭವಿಸಿದರೂ, ನಾವು ಯಾವಾಗಲೂ ಸಮಗ್ರತೆ ಮತ್ತು ಆಟದ ಉತ್ಸಾಹವನ್ನು ಉನ್ನತ ಮಟ್ಟದಲ್ಲಿ ಇಟ್ಟುಕೊಳ್ಳಬೇಕು. ಈ ಪಂದ್ಯವನ್ನು ಆಡಿದಾಗಲೆಲ್ಲಾ ಸಂಪೂರ್ಣ ಕ್ರೀಡಾ ಮನೋಭಾವದಿಂದ ಆಡಬೇಕು" ಎಂದರು.