Ram Charan: ಮಗಳ ಮುಖವನ್ನು ಅಂತೂ ರಿವೀಲ್ ಮಾಡಿದ್ರು ರಾಮ್ ಚರಣ್ ದಂಪತಿ
Ram Charan: ಉಪಾಸನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಾಮ್ ಚರಣ್ ಮತ್ತು ಅವರ ಮಗಳು ಕ್ಲಿನ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ . ಈ ಫೋಟೋವನ್ನು ಹಂಚಿಕೊಂಡ ಅವರು, "ನಮ್ಮ ಪ್ರೀತಿಯ ಪುಟ್ಟ ಮಗುವಿಗೆ ಹುಟ್ಟುಹಬ್ಬದ ಶುಭಾಶಯಗಳು ಕ್ಲಿನ್ ಕಾರ" ಎಂಬ ಶೀರ್ಷಿಕೆಯೊಂದಿಗೆ ಬರೆದಿದ್ದಾರೆ.
ರಾಮ್ ಚರಣ್ -
ನಟ ರಾಮ್ ಚರಣ್ (Ram Charan) ತೇಜ ಹಾಗೂ ಉಪಾಸನಾ ಕೊನಿಡೆಲ (Upasana Konidela) ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ. ಮಗಳು ಕ್ಲಿನ್ ಕಾರಾಗೆ ಈಗ ಮೂರನೇ ವರ್ಷದ ಸಂಭ್ರಮ. ಈ ಖುಷಿಯಲ್ಲಿ ಈ ಜೋಡಿ ಫೋಟೋಶೂಟ್ ಮಾಡಿಸಿದ್ದು, ಮಗಳ ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಅನೇಕರು ಕ್ಲಿನ್ ಕಾರಾಗೆ (Klin Kaara) ಶುಭಾಶಯಗಳನ್ನು ತಿಳಿಸಿದ್ದಾರೆ.
ಶೀರ್ಷಿಕೆ ಏನು?
ಉಪಾಸನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಾಮ್ ಚರಣ್ ಮತ್ತು ಅವರ ಮಗಳು ಕ್ಲಿನ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ . ಈ ಫೋಟೋವನ್ನು ಹಂಚಿಕೊಂಡ ಅವರು, "ನಮ್ಮ ಪ್ರೀತಿಯ ಪುಟ್ಟ ಮಗುವಿಗೆ ಹುಟ್ಟುಹಬ್ಬದ ಶುಭಾಶಯಗಳು ಕ್ಲಿನ್ ಕಾರ" ಎಂಬ ಶೀರ್ಷಿಕೆಯೊಂದಿಗೆ ಬರೆದಿದ್ದಾರೆ.
ಇದನ್ನೂ ಓದಿ: Cocktail 2 and Ma Inti Bangaram: ಸಮಂತಾ ಮೂವಿ ಗಳಿಸಿದ್ದೆಷ್ಟು? ‘ಕಾಕ್‌ಟೇಲ್ 2’ ಕಲೆಕ್ಷನ್ ಇದು
ಚಿತ್ರದಲ್ಲಿ, ರಾಮ್ ಚರಣ್ ಕ್ಲಿನ್ ಅವರನ್ನು ತಮ್ಮ ತೋಳುಗಳಲ್ಲಿ ಹಿಡಿದಿಟ್ಟುಕೊಂಡಿದ್ದರೆ, ಉಪಾಸನಾ ಹಿಂದಿನಿಂದ ಆಕೆಯ ಕೈಗಳನ್ನು ಹಿಡಿದಿದ್ದಾರೆ.
ಇತ್ತೀಚೆಗೆ ರಾಮ್ ಚರಣ್ ತೇಜ ಅವರ ಪೆದ್ದಿ ಸಿನಿಮಾ ಪ್ರಚಾರದ ವೇಳೆ ಕ್ಲಿನ್ ಕಾರಾ ತನ್ನ ತಂದೆಗೆ ವಿಶ್ ಮಾಡಿದ ಆಡಿಯೋ ವೈರಲ್ ಆಗಿತ್ತು. ಮುದ್ದಾದ ಧ್ವನಿಯಲ್ಲಿ "ಇದು ನಿಮಗಾಗಿ ನಾನ್ನಾ ( ಅಪ್ಪ), ಐ ಲವ್ ಯೂ ಸೋ ಮಚ್" ಎಂದು ಹೇಳಿದ್ದರು. ಜನವರಿ 31, 2026 ರಂದು ಉಪಾಸನಾ ಅವರು ಶಿವ ರಾಮ್ ಮತ್ತು ಅನ್ವೀರಾ ದೇವಿ (Shivram & Anveera Devi) ಎಂಬ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ರಾಮ್ ಚರಣ್ ತೇಜ ತಂದೆ ಮೆಗಾಸ್ಟಾರ್ ಚಿರಂಜೀವಿ ಅಸಲಿ ಹೆಸರು ಶಿವ ಶಂಕರ ವರ ಪ್ರಸಾದ್.
ಜೂನ್ 12, 2012 ರಂದು ಹೈದರಾಬಾದ್‌ನಲ್ಲಿ ವಿವಾಹವಾದ ರಾಮ್ ಚರಣ್ ಮತ್ತು ಉಪಾಸನ, ಚೆನ್ನೈನಲ್ಲಿ ತಮ್ಮ ಶಾಲಾ ದಿನಗಳಿಂದಲೂ ಸ್ನೇಹಿತರಾಗಿದ್ದರು.
ಮದುವೆಯಾಗಿ 10 ವರ್ಷಗಳ ನಂತರ ರಾಮ್ ಚರಣ್ ಮತ್ತು ಉಪಾಸನಾ ಬಾಳಲ್ಲಿ 2023 ರಲ್ಲಿ ಮೊದಲ ಮಗು ಪುತ್ರಿ ಕ್ಲಿನ್ ಕಾರಾಳನ್ನು ಬರಮಾಡಿಕೊಂಡಿದ್ದರು.
ಇದನ್ನೂ ಓದಿ: Sunil Grover: ಗಂಗಾ ತೀರದಲ್ಲಿ ಮಲಗಿದ ಸುನೀಲ್ ಗ್ರೋವರ್; ಮೆಚ್ಚಿದ ಫ್ಯಾನ್ಸ್
ಅವಳಿ ಮಕ್ಕಳು ಬಂದಾಗ “ಈ ಪುಟ್ಟ ಮಕ್ಕಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುವುದು ಅಜ್ಜ-ಅಜ್ಜಿಯರಾದ ನಮಗೆ ಶುದ್ಧ ಸಂತೋಷ ಮತ್ತು ದೈವಿಕ ಆಶೀರ್ವಾದದ ಕ್ಷಣವಾಗಿದೆ. ನಿಮ್ಮೆಲ್ಲರ ಪ್ರಾರ್ಥನೆ, ಪ್ರೀತಿ, ಆಶೀರ್ವಾದ ಮತ್ತು ಶುಭ ಹಾರೈಕೆಗಳಿಗಾಗಿ ನಾವು ಎಲ್ಲರಿಗೂ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ'' ಎಂದು ಹೇಳಿಕೊಂಡಿದ್ದರು.