Ramayana Movie: ದೀಪಾವಳಿಗೂ ಮುನ್ನವೇ 'ರಾಮಾಯಣ' ರಿಲೀಸ್?
Ramayana Movie: ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನದಲ್ಲಿ ನಮಿತ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಸೇರಿದಂತೆ ಅನೇಕ ನಟರು ನಟಿಸಿದ್ದಾರೆ. ಇದರ ಮೊದಲ ಭಾಗ 2026ರಲ್ಲಿ ಮತ್ತು ಮುಂದಿನ ಭಾಗ 2027ರಲ್ಲಿ ಬಿಡುಗಡೆಯಾಗಲಿದೆ. 'ರಾಮಾಯಣ' 2026ರ ಅಕ್ಟೋಬರ್ 30 ರಂದು ಬಿಡುಗಡೆಯಾಗಬಹುದು. ಅಂದಹಾಗೆ, ಈ ವರ್ಷದ ಆರಂಭದಲ್ಲಿ ಚಿತ್ರತಂಡ ರಣಬೀರ್ ಕಪೂರ್ ಅವರ ರಾಮನ ಅವತಾರದ ಪ್ರೋಮೋವನ್ನು ಬಿಡುಗಡೆ ಮಾಡಿತ್ತು.
ರಾಮಾಯಣ ಸಿನಿಮಾ -
ರಣಬೀರ್ ಕಪೂರ್ (Ranbir Kapoor), ಸಾಯಿ ಪಲ್ಲವಿ, ಯಶ್ ಮತ್ತು ಸನ್ನಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರ, ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಈ ಸಿನಿಮಾ ದೀಪಾವಳಿಗೆ (Deepavali) ತೆರೆಗೆ ಬರಲಿದೆ ಎಂದು ಮೊದಲು ಹೇಳಲಾಗಿತ್ತು. ಚಿತ್ರವು ನಿಗದಿತ ಸಮಯಕ್ಕಿಂತ ಒಂದು ವಾರ ಮುಂಚಿತವಾಗಿ, ಅಂದರೆ ಅಕ್ಟೋಬರ್ 30, 2026 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿ ಆಗಿದೆ.
ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ
ಮೂಲಗಳ ಪ್ರಕಾರ, ರಾಮಾಯಣವನ್ನು ಯೋಜಿಸಿದ್ದಕ್ಕಿಂತ ಒಂದು ವಾರ ಮುಂಚಿತವಾಗಿ ಬಿಡುಗಡೆ ಮಾಡುವ ನಿರ್ಧಾರದಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಇದ್ದಾರೆ ಎನ್ನಲಾಗುತ್ತಿದೆ.
ಮೊದಲ ವಾರಕ್ಕಿಂತ ಎರಡನೇ ವಾರದಲ್ಲಿ ಹೆಚ್ಚು ಗಳಿಕೆ ಮಾಡಿ, ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುವುದು ಅವರ ಗುರಿ. ಸಿನಿಮಾವನ್ನು ಒಂದು ವಾರ ಮುಂಚಿತವಾಗಿ ರಿಲೀಸ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬೀಳಲಿದೆ. 'ರಾಮಾಯಣ' ಚಿತ್ರದ ವಿತರಣಾ ಒಪ್ಪಂದಗಳು ಅಂತಿಮವಾದ ನಂತರ, ನಿರ್ಮಾಪಕರು ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Rukmini Vasanth: ಬಿಕಿನಿಯಲ್ಲಿ ರುಕ್ಮಿಣಿ ವಸಂತ್ ಬೋಲ್ಡ್ ಅವತಾರ? ಲೀಕ್ ಆಯ್ತು ಫೋಟೋ
ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನದಲ್ಲಿ ನಮಿತ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಸೇರಿದಂತೆ ಅನೇಕ ನಟರು ನಟಿಸಿದ್ದಾರೆ.
ಇದರ ಮೊದಲ ಭಾಗ 2026ರಲ್ಲಿ ಮತ್ತು ಮುಂದಿನ ಭಾಗ 2027ರಲ್ಲಿ ಬಿಡುಗಡೆಯಾಗಲಿದೆ. 'ರಾಮಾಯಣ' 2026ರ ಅಕ್ಟೋಬರ್ 30 ರಂದು ಬಿಡುಗಡೆಯಾಗಬಹುದು. ಅಂದಹಾಗೆ, ಈ ವರ್ಷದ ಆರಂಭದಲ್ಲಿ ಚಿತ್ರತಂಡ ರಣಬೀರ್ ಕಪೂರ್ ಅವರ ರಾಮನ ಅವತಾರದ ಪ್ರೋಮೋವನ್ನು ಬಿಡುಗಡೆ ಮಾಡಿತ್ತು.
ರಾಮಾಯಣ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೇವಲ ಹಿಂದಿ ಅವೃತ್ತಿಯ ಥಿಯೇಟ್ರಿಕಲ್ ವಿತರಣಾ ಹಕ್ಕುಗಳಿಗಾಗಿಯೇ ಬರೋಬ್ಬರಿ 450 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಈ ಮೊತ್ತಕ್ಕೆ ಡೀಲ್ ಕುದುರಿದರೆ, ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಇದು ಸಾರ್ವಕಾಲಿಕ ದಾಖಲೆಯಾಗಲಿದೆ. ವಿತರಕರು ಸದ್ಯಕ್ಕೆ ಈ ಒಪ್ಪಂದಕ್ಕೆ ಸಹಿ ಹಾಕಲು ಹಿಂಜರಿಯುತ್ತಿದ್ದಾರೆ. ಈ ಮೊತ್ತಕ್ಕೆ ಡೀಲ್ ಮುಗಿಸಲು ಸಿದ್ಧರಿಲ್ಲ ಎನ್ನಲಾಗಿದೆ.
ಈ ಡೀಲ್ 450 ಕೋಟಿ ರೂ. ಬದಲು, ಅಂತಿಮವಾಗಿ 300-400 ಕೋಟಿ ರೂಪಾಯಿಗೆ ಓಕೆ ಆದರೂ, ಅದು ಹಿಂದಿ ಚಿತ್ರರಂಗದ ವ್ಯಾಪಾರ ವಲಯದಲ್ಲಿ ಹೊಸ ಮೈಲಿಗಲ್ಲಾಗಲಿದೆ. ಸದ್ಯಕ್ಕಂತೂ ನಿರ್ಮಾಪಕ ನಮೀತ್ ಮಲ್ಹೋತ್ರಾ 450 ಕೋಟಿ ರೂ.ಗಿಂತ ಕಡಿಮೆಗೆ ಒಪ್ಪುತ್ತಿಲ್ಲ ಎನ್ನಲಾಗಿದೆ. ಈ ಸಿನಿಮಾವನ್ನು 450 ಕೋಟಿ ರೂ. ಖರೀದಿ ಮಾಡಿದರೂ ಗೆಲುವು ಕಾಣಬಹುದು. ಯಾಕೆಂದರೆ, ಈ ಸಿನಿಮಾಕ್ಕೆ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿಯೇ 1,000 ಕೋಟಿಯಿಂದ 1,500 ಕೋಟಿ ರೂ.ವರೆಗೂ ನೆಟ್ ಕಲೆಕ್ಷನ್ ಮಾಡುವ ಸಾಮರ್ಥ್ಯ ಇದೆ.
ಇದನ್ನೂ ಓದಿ: Tanisha Kuppanda: ಅಸಭ್ಯವಾಗಿ ವರ್ತಿಸಿದ ಫೋಟೋಗ್ರಾಫರ್ ಮೇಲೆ ತನಿಷಾ ಕುಪ್ಪಂಡ ಕೆಂಡ; ಫೋಟೋ ವೈರಲ್
ಇದರಿಂದ ವಿತರಕರಿಗೆ ಲಾಭವಾಗಲಿದೆ ಎಂಬ ವಾದವನ್ನು ನಮೀತ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು, ಡಿಜಿಟಲ್ ಹಕ್ಕುಗಳಿಂದಲೇ 1 ಸಾವಿರ ಕೋಟಿ ರೂಪಾಯಿ ಗಳಿಸುವ ಗುರಿಯೂ ಅವರದ್ದಾಗಿದೆ ಎಂಬ ಟಾಕ್ ಇದೆ.