Tanisha Kuppanda: ಅಸಭ್ಯವಾಗಿ ವರ್ತಿಸಿದ ಫೋಟೋಗ್ರಾಫರ್ ಮೇಲೆ ತನಿಷಾ ಕುಪ್ಪಂಡ ಕೆಂಡ; ಫೋಟೋ ವೈರಲ್
ಬಿಗ್ ಬಾಸ್ ಮನೆಯಲ್ಲೂ ತಮ್ಮ ನೇರ ನಡೆ ಹಾಗೂ ಬೋಲ್ಡ್ ಸ್ವಭಾವದಿಂದಲೇ ಗುರುತಿಸಿಕೊಂಡಿದ್ದ ತನಿಷಾ, ಈಗ ಸೋಶಿಯಲ್ ಮೀಡಿಯಾ (Social Media) ಕಿರುಕುಳದ ವಿರುದ್ಧವೂ ಧ್ವನಿ ಎತ್ತಿರುವುದಕ್ಕೆ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಬಿಗ್ ಬಾಸ್‌ನ ಬೆಂಕಿ, ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮಿಂಚಿರುವ ತನಿಷಾ ನಿರ್ಮಾಪಕಿಯೂ ಹೌದು. ಉದ್ಯಮಿಯೂ ಹೌದು.
ತನಿಷಾ ಕುಪ್ಪಂಡ -
ಕಿರುತೆರೆಯ "ಫೈರ್ ಬ್ರ್ಯಾಂಡ್", ಬಿಗ್ ಬಾಸ್ ಕನ್ನಡದ ಸೀಸನ್ 10ರ ಖಡಕ್ ಸ್ಪರ್ಧಿ ತನಿಷಾ ಕುಪ್ಪಂಡ (tanisha kuppanda) ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ ಫೋಟೋಗ್ರಾಫರ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ತಮ್ಮ ನೇರ ನಡೆ ಹಾಗೂ ಬೋಲ್ಡ್ ಸ್ವಭಾವದಿಂದಲೇ ಗುರುತಿಸಿಕೊಂಡಿದ್ದ ತನಿಷಾ, ಈಗ ಸೋಶಿಯಲ್ ಮೀಡಿಯಾ (Social Media) ಕಿರುಕುಳದ ವಿರುದ್ಧವೂ ಧ್ವನಿ ಎತ್ತಿರುವುದಕ್ಕೆ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಬಿಗ್ ಬಾಸ್‌ನ ಬೆಂಕಿ, ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮಿಂಚಿರುವ ತನಿಷಾ ನಿರ್ಮಾಪಕಿಯೂ ಹೌದು. ಉದ್ಯಮಿಯೂ ಹೌದು.
ವೃತ್ತಿಯಲ್ಲಿ ಫೋಟೊಗ್ರಾಫರ್ ಎಂದು ಹೇಳಿಕೊಳ್ಳುವ ಅನಿಲ್ ಕುಮಾರ್ ಆರಂಭದಲ್ಲಿ ತನಿಷಾ ಅವರ ಜೊತೆ ವೃತ್ತಿಪರ ಸಂಭಾಷಣೆ ನಡೆಸಿದ್ದಾರೆ. ಛಾಯಾಗ್ರಾಹಕ ಫೋಟೋಗ್ರಾಫಿ ಹೆಸರಲ್ಲಿ ಡೇಟ್ಗೆ ಕರೆದಿದ್ದಾರೆ.
ಇದನ್ನೂ ಓದಿ: Rukmini Vasanth: ಬಿಕಿನಿ ವಿಡಿಯೋಗೆ ಕೊನೆಗೂ ಸ್ಪಷ್ಟನೆ ಕೊಟ್ಟ ರುಕ್ಮಿಣಿ ವಸಂತ್!
ಅನಿಲ್ ಕುಮಾರ್ ಇನ್‌ಸ್ಟಾಗ್ರಾಮ್ ಐಡಿ ಕಾಣಿಸುವಂತೆ ಸ್ಕ್ರೀನ್ ಶಾಟ್ ತೆಗೆದಿದ್ದಾರೆ. ಕೆಲವು ಕೆಟ್ಟ ಫೋಟೋಗ್ರಾಫರ್ಗಳು ಬಂದು ಕಲಾವಿದರ ಬಳಿ ನಾನ್ಸೆನ್ಸ್ ಮಾತನಾಡುತ್ತಾರೆ. ಫೋಟೋಶೂಟ್ ಮಾಡುವ ಯೋಗ್ಯತೆ ಇಲ್ಲ ಅಂದರೆ ಕೇಳಬಾರದು. ನಿಮ್ಮಂತ 3ರ್ಡ್ ಕ್ಲಾಸ್ ಫೋಟೋಗ್ರಾಫರ್ಗಳಿಂದ ಬೇರೆ ಛಾಯಾಗ್ರಹಕರಿಗೆ ಅವಮಾನ ಎಂದು ತಪರಾಕಿ ಹಾಕಿದ್ದಾರೆ. ಈ ಮೂಲಕ ಅನಿಲ್ ಕುಮಾರ್ ಮಾನ ಹರಾಜು ಹಾಕಿದ್ದಾರೆ. ಇಷ್ಟೇ ಅಲ್ಲ ಫೋಟೋಗ್ರಾಫರ್ ಅಂತ ಹೇಳಿಕೊಳ್ಳುವ ಇಂತಹ ಈಡಿಯಟ್‌ನ ರಿಪೋರ್ಟ್ ಮಾಡಿ ಎಂದು ತಮ್ಮ ಅಪಾರ ಅಭಿಮಾನಿ ಬಳಗಕ್ಕೆ ಕರೆ ನೀಡಿದ್ದಾರೆ.

ಈಗ ಸೋಶಿಯಲ್ ಮೀಡಿಯಾ ಕಿರುಕುಳದ ವಿರುದ್ಧವೂ ಧ್ವನಿ ಎತ್ತಿರುವುದಕ್ಕೆ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಜಾಲಕ್ಕೆ ಬ್ರೇಕ್ ಬೀಳಲೇಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Tumbadchi Manjula Trailer: ಮರಾಠಿಗೆ ‘ಸು ಫ್ರಮ್ ಸೋ’ ರಿಮೇಕ್; ಹೇಗಿದೆ ಟ್ರೈಲರ್?
ತನಿಷಾ ಕುಪ್ಪಂಡ ಅಭಿನಯದ ''ಶೇರ್'' ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ತನಿಷಾ ಕಾಣಿಸಿಕೊಂಡಿದ್ದಾರೆ. ಕಿರಣ್ ರಾಜ್ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ಧಾರೆ.