ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranveer Singh: 15 ದಿನಗಳಲ್ಲಿ 1500 ಕೋಟಿ ರೂ. ಲೂಟಿ! ʻಧುರಂಧರ್‌ 2ʼ ಆರ್ಭಟಕ್ಕೆ ಬಾಕ್ಸ್‌ ಆಫೀಸ್‌ ಥಂಡಾ

ಧುರಂಧರ್‌ 2 ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಮೈಲಿಗಲ್ಲು ಸ್ಥಾಪಿಸಿದೆ. ಕೇವಲ 15 ದಿನಗಳಲ್ಲಿ ವಿಶ್ವಾದ್ಯಂತ 1501 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ರಣವೀರ್ ಸಿಂಗ್ ಈಗ ಬಾಕ್ಸ್‌ ಆಫೀಸ್‌ಗೆ ಹೊಸ ಕಿಂಗ್‌ ಆಗಿದ್ದಾರೆ.

1500 ಕೋಟಿ ಕ್ಲಬ್‌ಗೆ 'ಧುರಂಧರ್ 2'; ಬಾಕ್ಸ್ ಆಫೀಸ್ ಕಿಂಗ್‌ ಈಗ ರಣವೀರ್

-

Avinash GR
Avinash GR Apr 3, 2026 12:32 PM

ಭಾರತೀಯ ಬಾಕ್ಸ್ ಆಫೀಸ್ ಇತಿಹಾಸದಲ್ಲಿಯೇ ಧುರಂಧರ್‌ 2 ಸಿನಿಮಾ ಹೊಸ ದಾಖಲೆ ಬರೆದಿದೆ. ಗಲ್ಲಾಪೆಟ್ಟಿಯನ್ನು ತನ್ನ ಕಂಟ್ರೋಲ್‌ಗೆ ತೆಗೆದುಕೊಂಡಿರುವ ʻಧುರಂಧರ್‌ 2ʼ ಸಿನಿಮಾವು ವಿಶ್ವಾದ್ಯಂತ 15 ದಿನಗಳಲ್ಲಿ 1500+ ಕೋಟಿ ರೂ. ಕಮಾಯಿ ಮಾಡಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಆಗಿದೆ.

ಹಿಂದಿ ಆವೃತ್ತಿಯಲ್ಲಿ ಆಗಲಿದೆ ಹೊಸ ದಾಖಲೆ

ರಣವೀರ್‌ ಸಿಂಗ್‌, ಸಾರಾ ಅರ್ಜುನ್‌ ನಟನೆಯ ಧುರಂಧರ್‌ 2 ಸಿನಿಮಾದ ಹಿಂದಿ ಆವೃತ್ತಿಯಿಂದಲೇ 961 ಕೋಟಿ ರೂ. ಆಗಿದೆ. ಒಟ್ಟಾರೆ ಭಾರತದಿಂದ 15 ದಿನಗಳಲ್ಲಿ 1134 ಕೋಟಿ ರೂ. ಹಣ ಸಿಕ್ಕಿದೆ. ಹಿಂದಿ ಆವೃತ್ತಿಯ ಗಳಿಕೆ ಕೂಡ 1000 ಕೋಟಿ ರೂ. ತಲುಪುವುದರಲ್ಲಿ ಅನುಮಾನವಿಲ್ಲ. ವಿದೇಶದಿಂದ 367 ಕೋಟಿ ರೂ. ಹಣ ಸಿಕ್ಕಿದ್ದು, ಒಟ್ಟು ಎರಡು ವಾರಗಳಲ್ಲಿ ವಿಶ್ವಾದ್ಯಂತ ಆಗಿರುವ ಗಳಿಕೆಯು 1501 ಕೋಟಿ ರೂ. ಎಂದು ಚಿತ್ರತಂಡ ಹೇಳಿಕೊಂಡಿದೆ.

Deepika Padukone: ಹೀಗಿದ್ದಾಳೆ ನೋಡಿ ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ ಪುತ್ರಿ ದುವಾ; ಮೊದಲ ಬಾರಿ ಫೋಟೊ ರಿವೀಲ್‌

ಕಲೆಕ್ಷನ್‌ನಲ್ಲಿ ಕೊಂಚ ಇಳಿಕೆ ಆಗಿದ್ದರೂ, ವಿಕೇಂಡ್‌ಗಳಲ್ಲಿ ಗಳಿಕೆ ಹೆಚ್ಚುತ್ತಲೇ ಇದೆ. ಎರಡನೇ ವಾರಾಂತ್ಯದಲ್ಲಿಯೂ 180+ ಕೋಟಿ ರೂ. ಗಳಿಕೆ ಆಗಿರುವುದೇ ಇದಕ್ಕೆ ಸಾಕ್ಷಿ. ಆದರೆ ವಾರದ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಕುಸಿತ ಎದುರಾಗಿದೆ. ಕಳೆದ ನಾಲ್ಕು ದಿನಗಳ ಗಳಿಕೆಯು 100 ಕೋಟಿ ರೂ. ದಾಟಿಲ್ಲ.

ವಿತರಕರು ಹೇಳುವುದೇನು?

ವಿತರಕ ಅಕ್ಷಯ್ ರಾಠಿ ಈ ಯಶಸ್ಸನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ದಶಕಕ್ಕೊಮ್ಮೆ ಬರುವಂತಹ ಅದ್ಭುತ ಕ್ಷಣ ಇದು" ಎಂದು ಬಣ್ಣಿಸಿದ್ದಾರೆ. ಆದರೆ, "ಈ ವರ್ಷವೇ 'ರಾಮಾಯಣ'ದಂತಹ ಬೃಹತ್ ಚಿತ್ರಗಳು ಬರಲಿವೆ, ಅವುಗಳಿಗೆ 'ಧುರಂಧರ್' ದಾಖಲೆಯನ್ನು ಮುರಿಯುವ ಶಕ್ತಿಯಿದೆ. ಜೊತೆಗೆ ಎಸ್.ಎಸ್. ರಾಜಮೌಳಿ ಅವರ 'ವಾರಣಾಸಿ' ಚಿತ್ರವೂ ಇತಿಹಾಸ ಬರೆಯುವ ಮುನ್ಸೂಚನೆ ನೀಡುತ್ತಿದೆ" ಎನ್ನುತ್ತಾರೆ ಅವರು.

'ಧುರಂಧರ್ 2ʼ ಚಿತ್ರದ ಯಶಸ್ಸು ಇತರ ದೊಡ್ಡ ನಟರ ಆತ್ಮವಿಶ್ವಾಸವನ್ನು ಸ್ವಲ್ಪ ಮಟ್ಟಿಗೆ ಅಲುಗಾಡಿಸಿದೆ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಈ ಮಧ್ಯೆ ಉತ್ತರ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಯಶ್ ಅವರು ತಮ್ಮ 'ಟಾಕ್ಸಿಕ್' ಸಿನಿಮಾವನ್ನು ಮುಂದೂಡಿದ್ದು ಅತ್ಯಂತ ಬುದ್ಧಿವಂತ ನಿರ್ಧಾರ ಎಂದು ವಿತಕರು ಅಭಿಪ್ರಾಯಪಟ್ಟಿದ್ದಾರೆ.

ಧುರಂಧರ್‌ 2 ಸಿನಿಮಾದ ಕಲೆಕ್ಷನ್‌ ಮಾಹಿತಿ



ರಣವೀರ್‌ಗೆ ಭರ್ಜರಿ ಗೆಲುವು

ಧುರಂಧರ್‌ 1 ಸಿನಿಮಾವು 1300+ ಕೋಟಿ ರೂ. ಗಳಿಸಿತ್ತು. ಇದೀಗ ಧುರಂಧರ್‌ 2 ಸಿನಿಮಾದ ಗಳಿಕೆ 1500 ಕೋಟಿ ರೂ. ದಾಟಿದೆ. ಅಲ್ಲಿಗೆ ಇವೆರಡೇ ಸಿನಿಮಾಗಳಿಂದ 2800 ಕೋಟಿ ರೂ. ಗಳಿಕೆಯ ದಾಖಲೆ ರಣವೀರ್‌ ಸಿಂಗ್‌ ಹೆಸರಿಗೆ ಬಿದ್ದಿದೆ. ಧುರಂಧರ್‌ 2 ಚಿತ್ರದ ಗಳಿಕೆಯು 2000 ಕೋಟಿ ರೂ. ದಾಟುವ ನಿರೀಕ್ಷೆ ಇದೆ.