Mother Promise: ಗೆಳೆಯರ ಗ್ಯಾಂಗ್ ಜೊತೆಗೆ ಬಂದು ʻತಾಯಾಣೆʼ ಮನರಂಜನೆ ಮಿಸ್ ಆಗಲ್ಲ ಅಂತಿದ್ದಾರೆ ʻಡಾಲಿʼ ಧನಂಜಯ್
ʻಮದರ್ ಪ್ರಾಮೀಸ್ʼ ಚಿತ್ರದ ಮೂಲಕ ನಟ ಡಾಲಿ ಧನಂಜಯ್ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ನಟ ಪೂರ್ಣ ಮೈಸೂರು ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಚುಕ್ಕಾಣಿ ಹಿಡಿದಿದ್ದು, ಡಾಲಿ ಪಿಕ್ಚರ್ಸ್ ಸಹಯೋಗದೊಂದಿಗೆ ಹರ್ಷ ಮುರುಂಡಿ ಶಿವಲಿಂಗಪ್ಪ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
-
ನಟ ಡಾಲಿ ಧನಂಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಲೇ ನಿರ್ಮಾಣದಲ್ಲೂ ಸಕ್ರಿಯವಾಗಿದ್ದಾರೆ. ಇತ್ತೀಚಿಗಷ್ಟೇ ‘ಹೆಗ್ಗಣ ಮುದ್ದು’ ಎಂಬ ಸಿನಿಮಾವನ್ನು ಅವರು ಅನೌನ್ಸ್ ಮಾಡಿದ್ದರು. ಇದೀಗ ತಮ್ಮ ನಟನೆಯ, ಪೂರ್ಣಚಂದ್ರ ಮೈಸೂರು ನಿರ್ದೇಶನದ ಹೊಸ ಸಿನಿಮಾವೊಂದನ್ನು ಅನೌನ್ಸ್ ಮಾಡಿದ್ದಾರೆ. ಇದರ ಟೈಟಲ್ ಗೆಸ್ ಮಾಡಿ ಅಂತ ಕಳೆದ 2-3 ದಿನಗಳಿಂದ ಸಿನಿಪ್ರೇಮಿಗಳ ತಲೆಗೆ ಹುಳ ಬಿಟ್ಟಿದ್ದ ಡಾಲಿ ಟೀಮ್, ಇದೀಗ ಶೀರ್ಷಿಕೆಯನ್ನು ಬಹಿರಂಗಪಡಿಸಿದೆ. ಅಂದಹಾಗೆ, ಈ ಹೊಸ ಸಿನಿಮಾದ ಹೆಸರು ʻಮದರ್ ಪ್ರಾಮಿಸ್ʼ!
ಡಾಲಿ ಧನಂಜಯ್ ಅವರು ತಮ್ಮದೇ ಸ್ನೇಹಿತರ ಬಳಗವೆಲ್ಲಾ ಸೇರಿಸಿಕೊಂಡು ಈ ಸಿನಿಮಾ ಮಾಡಿದ್ದು, ಪೂರ್ಣ ಮೈಸೂರು ಮೊದಲ ಬಾರಿಗೆ ನಿರ್ದೇಶನ ಮಾರುವುದು ವಿಶೇಷ. ಡಾಲಿ ಪಿಕ್ಚರ್ಸ್ ಸಹಯೋಗದೊಂದಿಗೆ ಧನಂಜಯ ಅವರ ಗೆಳೆಯ ಹರ್ಷ ಮುರುಂಡಿ ಶಿವಲಿಂಗಪ್ಪ ʻಮದರ್ ಪ್ರಾಮೀಸ್ʼ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. "ತಾಯಾಣೆ ಹೇಳ್ತೀವಿ, ಈ ಸಿನಿಮಾದಿಂದ ಮನರಂಜನೆ ಮಿಸ್ ಆಗಲ್ಲ" ಅಂತಿದ್ದಾರೆ ʻಡಾಲಿʼ ಧನಂಜಯ್ ಮತ್ತು ಗೆಳೆಯರು.
Daali Dhananjay Birthday: ಡಾಲಿ ಧನಂಜಯ್‌ಗೆ ಹುಟ್ಟುಹಬ್ಬದ ಸಂಭ್ರಮ; ಹೊರಬಿತ್ತು ʼಜಿಂಗೋʼ ಚಿತ್ರದ ಪೋಸ್ಟರ್
ಪೋಸ್ಟರ್ ಮೂಲಕವೇ ಗಮನಸೆಳೆದಿದ್ದ ಟೀಮ್
ಕೆಲ ದಿನಗಳ ಹಿಂದಷ್ಟೇ ಈ ಸಿನಿಮಾದ ಇಂಟ್ರೆಸ್ಟಿಂಗ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಆ ಪೋಸ್ಟರ್‌ನಲ್ಲಿ ಯಾರ ಮುಖವನ್ನೂ ತೋರಿಸಿರಲಿಲ್ಲ. ಬದಲಿಗೆ ಅದರ ಕಲಾವಿದರೆಲ್ಲಾ ಕ್ಯಾಮೆರಾಗಿ ಬೆನ್ನು ಮಾಡಿ ನಿಂತಿದ್ದರು. ಸಿನಿಮಾದ ಟೈಟಲ್ ಅನ್ನು ಕೂಡ ಬೇರೆ ಬೇರೆ ಭಾಷೆಗಳಲ್ಲಿ ನೀಡಲಾಗಿತ್ತು. ಜೊತೆಗೆ ಸಿನಿಮಾದ ಹೆಸರು ಗೆಸ್ ಮಾಡಿ ಎಂಬ ಸವಾಲನ್ನು ಸಹ ಚಿತ್ರತಂಡ ಪ್ರೇಕ್ಷಕರಿಗೆ ನೀಡಿತ್ತು.
ಇದೀಗ ಟೈಟಲ್ ರಿವೀಲ್
ಇದೀಗ ಟೈಟಲ್ ಬಹಿರಂಗಪಡಿಸಿರುವ ಚಿತ್ರತಂಡ, ಜೊತೆಗೆ ಈ ಚಿತ್ರದಲ್ಲಿರುವ ದೊಡ್ಡ ಕಲಾವಿದರ ಬಳಗವನ್ನು ಪರಿಚಯಿಸಿದೆ. ʻಮದರ್ ಪ್ರಾಮಿಸ್ʼ ಎಂಬ ಟೈಟಲ್‌ನ ಈ ಸಿನಿಮಾದಲ್ಲಿ ಎಮೋಷನಲ್, ಕಾಮಿಡಿ ಹಾಗೂ ಥ್ರಿಲ್ಲರ್ ಅಂಶಗಳು ಇವೆಯಂತೆ. ಈ ಚಿತ್ರದಲ್ಲಿ ಧನಂಜಯ ಜೊತೆಗೆ ನಾಗಭೂಷಣ್, ಪೂರ್ಣ ಮೈಸೂರು, ಮಹದೇವ ಪ್ರಸಾದ್ ಮುಂತಾದವರು ನಟಿಸಿದ್ದಾರೆ. ಹಿರಿಯ ಕಲಾವಿದರಾದ ವಿನಯಾ ಪ್ರಸಾದ್, ಗೀತಾ, ಗುರುದತ್ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಬರೋಬ್ಬರಿ 36 ಮುಖ್ಯ ಕಲಾವಿದರನ್ನ ಪರಿಚಯಿಸಿರುವ ಚಿತ್ರತಂಡ ಈಗಾಗಲೇ ಚಿತ್ರದ ಬಗ್ಗೆ ಕೂತುಹಲ ಮೂಡಿಸಿದೆ.
ಡಾಲಿ ಪಿಕ್ಚರ್ಸ್‌ನಿಂದ ಹೊಸ ಸಿನಿಮಾ ಘೋಷಣೆ
ತಾಯಾಣೆ is a PAN UNIVERSE F̶i̶l̶m̶ Emotion 🥹
— Daali Pictures (@daali_pictures) April 3, 2026
Pakka Kannada Cinema ❤️💛
Daali Pictures x Team KEB 💪
100% Entertainment!
'MOTHER PROMISE' 🤝🎬@Dhananjayaka @PoornaMysore @dr_bhushana @ShashankSoghal @KmYadunandan @pinkticketsoff #FirstLook #MotherPromise #DaaliPictures pic.twitter.com/l2o2WFhg1Q
ಈ ಸಿನಿಮಾಕ್ಕೆ ಕ್ರಿಯೇಟಿವ್ ಡೈರೆಕ್ಟರ್ ಆಗಿ ‘ಡೇರ್ ಡೆವಿಲ್ ಮುಸ್ತಾಫ’ ಖ್ಯಾತಿಯ ಶಶಾಂಕ್ ಸೋಗಾಲ್ ಕೆಲಸ ಮಾಡುತ್ತಿದ್ದಾರೆ. ರಾಹುಲ್ ರಾಯ್ ಛಾಯಾಗ್ರಹಣ ಇರುವ ಈ ಸಿನಿಮಾಗೆ ನವನೀತ್ ಶ್ಯಾಮ್ ಸಂಗೀತ ಸಂಯೋಜಿಸಿದ್ದಾರೆ.