ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದ ʻಧುರಂಧರ್‌ 2ʼ; ರಣವೀರ್‌ ಸಿಂಗ್‌ ಅಬ್ಬರದ ಎದುರು ʻಬಾಹುಬಲಿ 2ʼ ರೆಕಾರ್ಡ್‌ ಪೀಸ್‌ ಪೀಸ್!‌

ಧುರಂಧರ್‌ 2 ಸಿನಿಮಾವು ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ವಿಶ್ವದಾದ್ಯಂತ 1365 ಕೋಟಿ ರೂ. ಗಳಿಸಿದ್ದು, ಕರ್ನಾಟಕದಲ್ಲಿಯೂ ದಾಖಲೆ ಮೊತ್ತವನ್ನು ಬಾಚಿಕೊಂಡಿದೆ. ಜೊತೆಗೆ 'ಬಾಹುಬಲಿ 2' ದಾಖಲೆಯನ್ನು ಅತಿ ವೇಗವಾಗಿ ಮುರಿದಿದೆ. ಉತ್ತರ ಅಮೆರಿಕಾದಲ್ಲೂ 22 ಮಿಲಿಯನ್ ಡಾಲರ್ ಗಳಿಸಿ ಭಾರತೀಯ ಚಿತ್ರರಂಗದ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಕರ್ನಾಟಕದಲ್ಲಿ ಧುರಂಧರ್ 2 ಅಬ್ಬರ: 11 ದಿನದಲ್ಲಿ ಹೊಸ ದಾಖಲೆ ಸೃಷ್ಟಿ

-

Avinash GR
Avinash GR Mar 30, 2026 5:09 PM

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌ 2ʼ ಸಿನಿಮಾವು ಆಗಲೇ ಹಲವು ಬಾಕ್ಸ್‌ ಆಫೀಸ್‌ ದಾಖಲೆಗಳನ್ನು ಸೃಷ್ಟಿಸಿದೆ. 11 ದಿನಗಳಲ್ಲಿ ವಿಶ್ವಾದ್ಯಂತ ಈ ಚಿತ್ರದ ಗಳಿಕೆಯು 1365 ಕೋಟಿ ರೂ. ದಾಟಿದೆ. ಇಷ್ಟೊಂದು ವೇಗವಾಗಿ ಈ ಮಟ್ಟದ ಗಳಿಕೆಯನ್ನ ಭಾರತದ ಯಾವ ಸಿನಿಮಾಗಳನ್ನು ಮಾಡಿರಲಿಲ್ಲ. ಆದರೆ ʻಧುರಂಧರ್‌ 2ʼ ಆ ಸಾಧನೆಯನ್ನ ಮಾಡಿದೆ. ಅದೇ ರೀತಿ ಕರ್ನಾಟಕದಲ್ಲೂ ಈ ಚಿತ್ರಕ್ಕೆ ಸಖತ್‌ ರೆಸ್ಪಾನ್ಸ್‌ ಸಿಕ್ಕಿದ್ದು, ದಾಖಲೆ ಪ್ರಮಾಣದ ಗಳಿಕೆ ಆಗಿದೆ.

ಕರ್ನಾಟಕದಲ್ಲಿ ಶತಕೋಟಿ ಬಾಚಿಕೊಂಡ ʻಧುರಂಧರ್‌ 2ʼ

ಕರ್ನಾಟಕದಲ್ಲಿ ನೂರು ಕೋಟಿ ರೂಪಾಯಿ ಬಾಚಿಕೊಂಡ ಸಿನಿಮಾಗಳು ಸಿಗುವುದು ತುಂಬಾ ವಿರಳ. ಆದರೆ ಪರಭಾಷೆಯ ಧುರಂಧರ್‌ 2 ಸಿನಿಮಾವು ಕರ್ನಾಟಕದಲ್ಲಿ ನೂರು ಕೋಟಿ ರೂ. ಬಾಚಿಕೊಂಡು ದಾಖಲೆ ಬರೆದಿದೆ. ಈ ರೀತಿ ಕರ್ನಾಟಕದಲ್ಲಿ ನೂರು ಕೋಟಿ ರೂ. ಗಳಿಕೆ ಮಾಡಿದ ಎರಡನೇ ಪರಭಾಷಾ ಸಿನಿಮಾ ಇದಾಗಿದೆ. ಇದಕ್ಕೂ ಮುನ್ನ 2017ರಲ್ಲಿ ಬಾಹುಬಲಿ 2 ಸಿನಿಮಾವು ಈ ಸಾಧನೆಯನ್ನು ಮಾಡಿತ್ತು. ಆದರೆ ಬಾಹುಬಲಿ 2ಗಿಂತ ವೇಗವಾಗಿ, ಅಂದರೆ ಬರೀ 11 ದಿನಗಳಲ್ಲಿ ಶತಕೋಟಿ ರೂ. ಕ್ಲಬ್‌ಗೆ ಸೇರಿದ್ದು ʻಧುರಂಧರ್‌ 2ʼ ಚಿತ್ರದ ಹೊಸ ದಾಖಲೆ ಆಗಿದೆ.

Dhurandhar 2: ಭಾರತದಲ್ಲೇ ಸಾವಿರ ಕೋಟಿ ಕಲೆಕ್ಷನ್! ಧುರಂಧರ್ 2 ಬಾಕ್ಸ್ ಆಫೀಸ್ ಹೊಸ ದಾಖಲೆ

ಸದ್ಯ ಕರ್ನಾಟಕದಲ್ಲಿ ʻಧುರಂಧರ್‌ 2ʼ ಸಿನಿಮಾವು 11 ದಿನಗಳಿಗೆ 102 ಕೋಟಿ ರೂ. ಬಾಚಿಕೊಂಡಿದ್ದು, ಚಿತ್ರದ ಗಳಿಕೆಯು ಅನಾಯಾಸವಾಗಿ 125 ಕೋಟಿ ರೂ. ದಾಟುತ್ತದೆ ಎಂಬ ಲೆಕ್ಕಾಚಾರದ ಮಾತುಗಳು ಕೇಳಿಬಂದಿವೆ. ಅದು ನಿಜವೇ ಆದಲ್ಲಿ ಮತ್ತೊಂದು ಮಹೋನ್ನತ ದಾಖಲೆಯು ʻಧುರಂಧರ್‌: ದಿ ರಿವೆಂಜ್‌ʼ ಚಿತ್ರದ ಹೆಸರಿಗೆ ದಾಖಲಾಗಲಿದೆ.

ಧುರಂಧರ್‌ 2 ಸಿನಿಮಾದ ಗಳಿಕೆ ಬಗ್ಗೆ ಮಾಹಿತಿ



ಅಮೆರಿಕದಲ್ಲೂ ಬಾಹುಬಲಿ ದಾಖಲೆ ಉಡೀಸ್

ಕಳೆದ ಒಂಬತ್ತು ವರ್ಷಗಳಿಂದ 'ಬಾಹುಬಲಿ 2: ದಿ ಕನ್ ಕ್ಲೂಷನ್' ಹೊಂದಿದ್ದ ದಾಖಲೆಯನ್ನು ಧುರಂಧರ್‌ 2 ಚಿತ್ರ ಮುರಿದಿದೆ. ಹೌದು, ಧುರಂಧರ್‌ 2 ಚಿತ್ರವು ಉತ್ತರ ಅಮೆರಿಕಾದಲ್ಲಿ ಈವರೆಗೆ 22 ಮಿಲಿಯನ್ ಡಾಲರ್ (ಸುಮಾರು 205 ಕೋಟಿ ರೂ.) ಗಳಿಕೆ ಮಾಡಿದೆ. ಈ ಮೂಲಕ 'ಬಾಹುಬಲಿ 2' ಗಳಿಸಿದ್ದ 20 ಮಿಲಿಯನ್ ಡಾಲರ್ (ಸುಮಾರು 186 ಕೋಟಿ ರೂ.) ದಾಖಲೆಯನ್ನು ಹಿಂದಿಕ್ಕಿದೆ.

ಈ ಸಾಧನೆಗೆ 'ಬಾಹುಬಲಿ 2' ಚಿತ್ರತಂಡವು ಆದಿತ್ಯ ಧರ್ ಮತ್ತು ಧುರಂಧರ್‌ 2 ತಂಡಕ್ಕೆ ಅಭಿನಂದನೆ ಸಲ್ಲಿಸಿದೆ. "ಭಾರತ, ಯುಎಸ್ಎ ಮತ್ತು ವಿಶ್ವಾದ್ಯಂತ ಹೊಸ ಮೈಲಿಗಲ್ಲು ಸ್ಥಾಪಿಸಿದ ಧುರಂಧರ್ 2 ಚಿತ್ರಕ್ಕೆ ಅಭಿನಂದನೆಗಳು" ಎಂದು ಹೇಳಿದೆ. 'ಬಾಹುಬಲಿ 2' ನಿರ್ಮಾಪಕ ಶೋಬು ಯಾರ್ಲಗಡ್ಡ ಕೂಡ ಧುರಂಧರ್‌ 2 ಚಿತ್ರವನ್ನು ಶ್ಲಾಘಿಸಿ ಸಂತಸ ವ್ಯಕ್ತಪಡಿಸಿದ್ದಾರೆ.