ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹುಟ್ಟುಹಬ್ಬದಂದೇ ʻರೌದ್ರಾವತಾರʼ ತಾಳಿದ ನಟಿ ರಶ್ಮಿಕಾ ಮಂದಣ್ಣ; ಜನ್ಮದಿನಕ್ಕಾಗಿ ಪವರ್‌ಫುಲ್ ಪೋಸ್ಟರ್ ರಿಲೀಸ್‌ ಮಾಡಿದ ʻಮೈಸಾ' ಟೀಮ್‌

ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ (ಏ.5) ಪ್ರಯುಕ್ತ 'ಮೈಸಾ' ಚಿತ್ರತಂಡ ಪವರ್‌ಫುಲ್ ಪೋಸ್ಟರ್ ಬಿಡುಗಡೆ ಮಾಡಿದೆ. ಮದುವೆಯ ನಂತರದ ಮೊದಲ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ರಶ್ಮಿಕಾ, ರವೀಂದ್ರ ಪುಲ್ಲೆ ನಿರ್ದೇಶನದ ಈ ಚಿತ್ರದಲ್ಲಿ ಗೋಂಡು ಬುಡಕಟ್ಟಿನ ಹೋರಾಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ʻಬರ್ತ್‌ಡೇ ಗರ್ಲ್‌ʼ ರಶ್ಮಿಕಾಗೆ 'ಮೈಸಾ' ಚಿತ್ರತಂಡದಿಂದ ಪವರ್‌ಫುಲ್ ಗಿಫ್ಟ್

-

Avinash GR
Avinash GR Apr 5, 2026 6:30 PM

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇಂದು (ಏ.5) ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬ ರಶ್ಮಿಕಾಗೆ ತುಂಬಾ ಸ್ಪೆಷಲ್.‌ ಯಾಕೆಂದರೆ, ಇದು ಮದುವೆಯಾದ ಮೇಲೆ ಅವರಿಗೆ ಮೊದಲ ಜನ್ಮದಿನ. ಇನ್ನು, ಅವರ ಹುಟ್ಟುಹಬ್ಬವನ್ನು ಇನ್ನಷ್ಟು ರಂಗೇರಿಸಿರುವುದು ಅವರ ಮುಂದಿನ ʻಮೈಸಾʼ ಚಿತ್ರತಂಡ. ರಶ್ಮಿಕಾಗೆ ಬರ್ತ್ಡೇ ಗಿಫ್ಟ್‌ ಆಗಿ ಮೈಸಾ ಚಿತ್ರದ ಪವರ್‌ ಫುಲ್‌ ಪೋಸ್ಟ್‌ ಅನ್ನು ರಿಲೀಸ್‌ ಮಾಡಲಾಗಿದೆ.

ಸಖತ್‌ ರಗಡ್‌ ಆಗಿದೆ ರಶ್ಮಿಕಾ ಮಂದಣ್ಣ ಲುಕ್‌

ಸದ್ಯ ರಿಲೀಸ್ ಆಗಿರುವ ‌ಹೊಸ ಪೋಸ್ಟರ್‌ನಲ್ಲಿ ಪೋಸ್ಟರ್‌ನಲ್ಲಿ ರಶ್ಮಿಕಾ ಹಿಂದೆಂದೂ ಕಾಣದ ‘ರಾ ಅಂಡ್ ರಸ್ಟಿಕ್’ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖದ ಮೇಲೆ ರಕ್ತದ ಕಲೆಗಳು ಮತ್ತು ಗಾಯಗಳಿದ್ದರೂ, ಅವರ ಕಣ್ಣುಗಳಲ್ಲಿನ ತೀಕ್ಷ್ಣತೆ ಮತ್ತು ಛಲ ಎಲ್ಲರನ್ನು ಒಂದೇ ಏಟಿಗೆ ಸೆಳೆಯುವಂತಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಈ ಬಾರಿ ದೊಡ್ಡ ಮಟ್ಟದ ಆಕ್ಷನ್‌ ಇರಲಿದೆ ಎಂಬುದನ್ನು ಈ ಚಿತ್ರದ ಟೀಸರ್‌ ಮತ್ತು ಪೋಸ್ಟರ್‌ಗಳು ಸಾಕ್ಷಿಕರಿಸುತ್ತಿವೆ.

Photos: ಯುಗಾದಿ ಹಬ್ಬದಂದು ರಶ್ಮಿಕಾ ಮಂದಣ್ಣಗೆ ಡಬಲ್‌ ಸಂಭ್ರಮ; ಅತ್ತೆಯೊಂದಿಗೆ ಖುಷಿಯನ್ನು ಹಂಚಿಕೊಂಡಿದ್ದು ಹೀಗೆ!

ಇನ್ನು, ಹೊಸ ಲುಕ್‌ ಅನ್ನು ರಿಲೀಸ್‌ ಮಾಡಿರುವ ಚಿತ್ರತಂಡ, "ಆಕೆ ತನ್ನ ಮನಮೋಹಕ ರೂಪದಿಂದ ಮನಸುಗಳನ್ನು ಕದ್ದಿದ್ದಾಳೆ.. ತನ್ನ ಗೌರವದಿಂದ ಎಲ್ಲರನ್ನೂ ಗೆದ್ದಿದ್ದಾಳೆ.. ಈಗ ರೌದ್ರ ರೂಪದೊಂದಿಗೆ ನಮ್ಮ ಮುಂದೆ ಬರಲಿದ್ದಾಳೆ" ಎಂದು ಕ್ಯಾಪ್ಶನ್ ನೀಡಿದೆ. ಇದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರದಲ್ಲಿ ರಶ್ಮಿಕಾ ಗೋಂಡು ಬುಡಕಟ್ಟಿನ ಮಹಿಳೆಯಾಗಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ‘ಮೈಸಾ’ ಚಿತ್ರದ ಮೂಲಕ ರವೀಂದ್ರ ಪುಲ್ಲೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅನ್‌ಫಾರ್ಮುಲಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅಜಯ್ ಮತ್ತು ಅನಿಲ್ ಸಯ್ಯಪುರೆಡ್ಡಿ ಈ ಭರ್ಜರಿ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಸೊಸೆ ರಶ್ಮಿಕಾ ಮಂದಣ್ಣ ಮಾತಿಗೆ ಆನಂದಭಾಷ್ಪ ಸುರಿಸಿದ ಅತ್ತೆ ಮಾಧವಿ; ದೇವರಕೊಂಡ ಫ್ಯಾಮಿಲಿಗೆ ಇದು ಸಂತಸದ ಕ್ಷಣ

ಮೈಸಾ ಸಿನಿಮಾಗೆ ಜೇಕ್ಸ್ ಬಿಜೋಯ್ ಸಂಗೀತ ನೀಡುತ್ತಿದ್ದು, ಸ್ಯಾಂಡಲ್‌ವುಡ್‌ ನಟ ತಾರಕ್ ಪೊನ್ನಪ್ಪ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಈ ಚಿತ್ರದ ಫಸ್ಟ್ ಗ್ಲಿಂಪ್ಸ್‌ನಲ್ಲಿ, "ನನ್ನ ಮಗುವಿನ ಉಸಿರನ್ನು ಹೊರಲು ಸಾಧ್ಯವಾಗದೆ ಬೆಂಕಿಯೇ ಬೂದಿಯಾಯಿತು... ನನ್ನ ಮಗುವನ್ನು ಕೊಲ್ಲಲಾಗದೆ ಕೊನೆಗೆ ಸಾವೇ ಸತ್ತುಹೋಯಿತು" ಎಂಬ ಡೈಲಾಗ್‌ಗಳು ಕಥೆಯ ತೀವ್ರತೆಯನ್ನು ಕಟ್ಟಿಕೊಟ್ಟಿದ್ದವು.

ರಶ್ಮಿಕಾ ಮಂದಣ್ಣ ಅವರ ಮೈಸಾ ಸಿನಿಮಾದ ಫಸ್ಟ್‌ ಲುಕ್



ಕೈಗೆ ಹಾಕಿದ್ದ ಬೇಡಿಗಳನ್ನು ಮುರಿದು, ಕೈಯಲ್ಲಿ ಗನ್ ಹಿಡಿದು ಶತ್ರುಗಳ ಮೇಲೆರಗುವ ರೆಬೆಲ್ ಪಾತ್ರದಲ್ಲಿ ರಶ್ಮಿಕಾ ಮಿಂಚಿದ್ದರು. ‘ಮೈಸಾ’ ಎಂದರೆ ಗೋಂಡು ಭಾಷೆಯಲ್ಲಿ ‘ತಾಯಿ’ ಎಂದು ಅರ್ಥವಿದೆ. ಅನ್ಯಾಯವನ್ನು ಎದುರಿಸುವ ಒಬ್ಬ ತಾಯಿ ಮತ್ತು ಒಬ್ಬ ಹೋರಾಟಗಾರ್ತಿಯ ಕಥೆ ಇದಾಗಿರಲಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವು ರಶ್ಮಿಕಾ ವೃತ್ತಿಜೀವನದಲ್ಲೇ ಅತ್ಯಂತ ಪವರ್‌ ಫುಲ್‌ ಸಿನಿಮಾ ಎನ್ನಲಾಗುತ್ತಿದೆ. ಈ ವರ್ಷವೇ ಮೈಸಾ ಸಿನಿಮಾ ತೆರೆಗೆ ಬರಲಿದೆ.