ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಧನುಷ್‌ ನಂಗೆ ತಂದೆಸಮಾನ.. ಅವ್ರ ಸ್ನೇಹ ಕಳೆದುಕೊಂಡಿದ್ದು ಬೇಸರ ನೀಡಿದೆʼ; ನಯನತಾರಾ ಪತಿ ಇದ್ದಕ್ಕಿದ್ದಂತೆಯೇ ಹಿಂಗ್ಯಾಕೆ ಹೇಳಿದ್ರು?

ನಿರ್ದೇಶಕ ವಿಘ್ನೇಶ್ ಶಿವನ್ ಅವರು ತಮ್ಮ ಮುಂದಿನ ಸಿನಿಮಾ 'ಲವ್ ಇನ್ಶೂರೆನ್ಸ್ ಕಂಪನಿ' ಪ್ರಚಾರದ ವೇಳೆ ನಟ ಧನುಷ್ ಅವರೊಂದಿಗಿನ ಸ್ನೇಹ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಧನುಷ್‌ರನ್ನು ತಮ್ಮ ತಂದೆಯ ಸ್ಥಾನದಲ್ಲಿ ಕಂಡಿದ್ದಾಗಿ ಹೇಳಿರುವ ವಿಘ್ನೇಶ್, ಅವರ ಸ್ನೇಹ ಕಳೆದುಕೊಂಡಿರುವುದು ನನ್ನ ಜೀವನದ ದೊಡ್ಡ ನಷ್ಟ ಎಂದು ಹೇಳಿಕೊಂಡಿದ್ದಾರೆ.

ʻಧನುಷ್ ನಂಗೆ ತಂದೆ ಸಮಾನ'; ನಟಿ ನಯನತಾರಾ ಪತಿ ಹಿಂಗ್ಯಾಕೆ ಹೇಳಿದ್ರು?

-

Avinash GR
Avinash GR Apr 5, 2026 7:51 PM

ನಟ ಧನುಷ್‌ ಮತ್ತು ನಯನತಾರಾ ನಡುವೆ ವೈಮನಸ್ಸು ಇರುವುದು ಎಲ್ಲರಿಗೂ ಗೊತ್ತಿದೆ. ಇದರ ಬಗ್ಗೆ ಈಗ ನಯನತಾರಾ ಪತಿ ವಿಘ್ನೇಶ್ ಶಿವನ್ ಪ್ರತಿಕ್ರಿಯಿಸಿದ್ದಾರೆ. ಅಸಲಿಗೆ, ನಯನತಾರಾ ಮತ್ತು ವಿಘ್ನೇಶ್ ಶಿವನ್ ಪ್ರೀತಿಯಲ್ಲಿ ಬೀಳುವುದಕ್ಕೆ ಧನುಷ್‌ ನಿರ್ಮಾಣ ಮಾಡಿದ್ದ ‌ʻನಾನು‌ಮ್ ರೌಡಿ ಧಾನ್ʼ ಸಿನಿಮಾವೇ ಕಾರಣ. ಸದ್ಯ ಧನುಷ್‌ ಜೊತೆಗಿನ ಮನಸ್ತಾಪದ ಬಗ್ಗೆ ಮಾತನಾಡಿರುವ ವಿಘ್ನೇಶ್ ಶಿವನ್, "ಧನುಷ್‌ ಅವರ ಸ್ನೇಹವನ್ನು ಕಳೆದುಕೊಂಡಿರುವುದು ನನಗೆ ದೊಡ್ಡ ಪಶ್ಚಾತ್ತಾಪ" ನೀಡಿದೆ ಎಂದು ಹೇಳಿಕೊಂಡಿದ್ದಾರೆ.

ಸಂದರ್ಶನದಲ್ಲಿ ಮನಬಿಚ್ಚಿ ಮಾತಾಡಿದ ವಿಕ್ಕಿ

ತಮ್ಮ ಮುಂದಿನ 'ಲವ್ ಇನ್ಶೂರೆನ್ಸ್ ಕಂಪನಿ' (LIK) ಸಿನಿಮಾದ ಬಿಡುಗಡೆಯ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ವಿಘ್ನೇಶ್ ಶಿವನ್‌, ನಟ ಧನುಷ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ನಮ್ಮ ನಡುವೆ ಈಗ ಅಂತರವಿದೆ. ಆದರೂ ಧನುಷ್ ಸರ್‌ ನನ್ನ ಜೀವನದ ಪ್ರಮುಖ ವ್ಯಕ್ತಿ. ನನಗೆ ಅವರೆಂದರೆ ತುಂಬಾ ಇಷ್ಟ. ಧನುಷ್ ಅವರ ಜನ್ಮದಿನ ಜುಲೈ 28.‌ ಅದೇ ದಿನವೇ ನನ್ನ ತಂದೆಯೂ ನಿಧನರಾದರು. ಹಾಗಾಗಿ, ಧನುಷ್‌ ಅವರಲ್ಲಿ ನಾನು ನನ್ನ ತಂದೆಯನ್ನು ಕಾಣುತ್ತೇನೆ" ಎಂದು ವಿಘ್ನೇಶ್‌ ಹೇಳಿದ್ದಾರೆ.

ʻನಂಗೆ ನಯನತಾರಾ ಬೇಕು, ಮದುವೆ ಮಾಡಿಸ್ತಾರಾʼ; ಎಐಎಡಿಎಂಕೆ ಸಂಸದನ ಕೀಳುಮಟ್ಟದ ಹೇಳಿಕೆ, ನೆಟ್ಟಿಗರಿಂದ ತೀವ್ರ ತರಾಟೆ!

"ಅವರ ಜೊತೆಗಿನ ಸ್ನೇಹ ಸಂಬಂಧವನ್ನು ಕಳೆದುಕೊಂಡಿರುವುದು ನನಗೆ ದೊಡ್ಡ ನಷ್ಟ ಎನ್ನಬಹುದು. ಆ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ಎಲ್ಲೋ ಒಂದು ಕಡೆ ತಪ್ಪು ನಡೆದಿರಬೇಕು. ಸದ್ಯ ನಾನು ಈಗ ನಡೆಸುತ್ತಿರುವ ಜೀವನಕ್ಕೆ ಧನುಷ್ ಸರ್ ಬಹಳ ಮುಖ್ಯವಾದ ವ್ಯಕ್ತಿ. . ʻವಿಐಪಿʼ ಚಿತ್ರದ ಶೂಟಿಂಗ್ ಸಮಯದಲ್ಲಿ ನಾನು 2 ವರ್ಷ ಧನುಷ್‌ ಸರ್‌ ಜೊತೆಗಿದ್ದೆ. ಅವರು ಊಟ ಮಾಡಿದ ನಂತರವೇ ನಾನು ಊಟ ಮಾಡುತ್ತಿದ್ದೆ" ಎಂದು ವಿಘ್ನೇಶ್‌ ಶಿವನ್‌ ಹೇಳಿಕೊಂಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ-ನಿರ್ದೇಶಕ ವಿಘ್ನೇಶ್​

ವಿರಸಕ್ಕೆ ಕಾರಣವೇನು?

ಧನುಷ್‌ ನಿರ್ಮಾಣ ಮಾಡಿದ ʻನಾನುಮ್‌ ರೌಡಿ ಧಾನ್‌ʼ ಚಿತ್ರದ ಮೂಲಕ ವಿಘ್ನೇಶ್ ಶಿವನ್‌ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದರು. ಜೊತೆಗೆ ಆ ಚಿತ್ರದ ನಾಯಕಿ ನಯನತಾರಾ ಜೊತೆ ಪ್ರೀತಿಯಲ್ಲಿ ಬಿದ್ದರು. ಇದೀಗ ನಯನತಾರಾ ಅವರನ್ನೇ ಮದುವೆಯಾಗಿ, ಎರಡು ಮಕ್ಕಳ ತಂದೆಯೂ ಆಗಿದ್ದಾರೆ. ಈ ಮಧ್ಯೆ ವಿಘ್ನೇಶ್ ಮತ್ತು ನಯನತಾರಾ ಅವರ ಕುರಿತ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ನಲ್ಲಿ ʻನಾನುಮ್‌ ರೌಡಿ ಧಾನ್‌ʼ ಚಿತ್ರದ ಒಂದು ತುಣುಕನ್ನ ಬಳಸಿದ್ದರಿಂದ ಕಾನೂನು ತೊಡಕು ಉಂಟಾಗಿತ್ತು.

ವಿಘ್ನೇಶ್‌ ಶಿವನ್‌ ಸಂದರ್ಶನದ ತುಣುಕು



ಧನುಷ್‌ ಕಾಪಿರೈಟ್‌ ಉಲ್ಲಂಘನೆ ಕೇಸ್‌ ಹಾಕಿದ್ದರಿಂದ, ಇಬ್ಬರ ನಡುವಿನ ಬಿರುಕು ಸಾರ್ವಜನಿಕವಾಗಿ ಚರ್ಚೆಗೆ ಬಂದಿತ್ತು. ಇದಾದ ಮೇಲೆ ನಟಿ ನಯನತಾರಾ ಅವರು ಬಹಿರಂಗ ಪತ್ರವೊಂದನ್ನು ಬರೆಯುವ ಮೂಲಕ ಈ ವಿವಾದ ಇನ್ನಷ್ಟು ದೊಡ್ಡದಾಗಿತ್ತು. ಅಂದಿನಿಂದ ವಿಘ್ನೇಶ್‌ -ನಯನತಾರಾ ದಂಪತಿ ಮತ್ತು ಧನುಷ್‌ ನಡುವೆ ಬಿರುಕು ಮೂಡಿದೆ.