Kantara: Chapter -1: 2025ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಕಾಂತಾರ ಚಾಪ್ಟರ್- 1 ಸಿನಿಮಾ!
Kantara: Chapter -1: ಕಾಂತಾರ ಚಾಪ್ಟರ್ -1 ಸಿನಿಮಾ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಕಂಡಿದ್ದು ಅನೇಕ ಸೂಪರ್ ಹಿಟ್ ಸಿನಿಮಾಗಳ ದಾಖಲೆ ಯನ್ನು ಕೂಡ ಮೀರಿಸಿದೆ. ವಾರ್ 2, ಸೈಯಾರಾ, ಛಾವಾ, ಕೂಲಿ ಸಿನಿಮಾಗಳ ದಾಖಲೆಯನ್ನು ಮೀರಿಸಿ ಹೊಸ ದಾಖಲೆ ಮಾಡಿದೆ. ಈ ಮೂಲಕ ಕಾಂತಾರಾ ಸಿನಿಮಾ 2025 ರಲ್ಲಿ ತೆರೆಕಂಡ ಸಿನಿಮಾದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ್ದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
-
ಬೆಂಗಳೂರು: ನಟ ರಿಷಭ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿದ್ದ ಕಾಂತಾರ ಚಾಪ್ಟರ್ 1 ಸಿನಿಮಾ (Kantara: Chapter -1) ರಿಲೀಸ್ ಗೂ ಮೊದಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿತ್ತು. ಕದಂಬರ ಕಾಲದ ಐತಿಹಾಸಿಕ ಕಥೆಗೆ ದೈವತ್ವದ ನಂಬುಗೆ ಬೆರೆಸಿದ್ದ ಕಾಂತಾರ ಸಿನಿಮಾ ವಿಶ್ಚ ವ್ಯಾಪಿಯಲ್ಲಿ ಬಹುಸಂಖ್ಯಾತ ಪ್ರೇಕ್ಷಕರ ವರ್ಗದ ಮನ ಸೆಳೆದಿತ್ತು. ಕಾಂತಾರ ಚಾಪ್ಟರ್ -1 ಸಿನಿಮಾ ಚಿತ್ರಮಂದಿರ ದಲ್ಲಿ ಭರ್ಜರಿ ಯಾಗಿ ಪ್ರದರ್ಶನ ಕಾಣುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಕಂಡಿದ್ದು ಅನೇಕ ಸೂಪರ್ ಹಿಟ್ ಸಿನಿಮಾಗಳ ದಾಖಲೆಯನ್ನು ಕೂಡ ಮೀರಿಸಿದೆ. ವಾರ್ 2, ಸೈಯಾರಾ, ಛಾವಾ, ಕೂಲಿ ಸಿನಿಮಾಗಳ ದಾಖಲೆಯನ್ನು ಮೀರಿಸಿ ಹೊಸ ದಾಖಲೆ ಮಾಡಿದೆ. ಈ ಮೂಲಕ ಕಾಂತಾರ ಸಿನಿಮಾ 2025 ರಲ್ಲಿ ತೆರೆಕಂಡ ಸಿನಿಮಾದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ್ದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ನಟನೆಯ 'ಛಾವಾ' ಚಿತ್ರವು ಈವರೆಗೂ ಅತಿ ಹೆಚ್ಚು ಗಳಿಕೆ ಮಾಡಿರುವ ಭಾರತೀಯ ಚಿತ್ರಗಳ ಪೈಕಿ ಮೊದಲ ಸ್ಥಾನ ಪಡೆದಿತ್ತು..ಇದೀಗ ಈ ದಾಖಲೆಯನ್ನು ಕೂಡ ಕಾಂತಾರ ಚಾಪ್ಟರ್-1 ಮೀರಿಸಿದೆ. ಈ ಮೂಲಕ ಕಾಂತಾರ: ಚಾಪ್ಟರ್ 1' ಸಿನಿಮಾವು ವಿಶ್ವಾ ದ್ಯಂತ 818 ಕೋಟಿ ರೂ. ಗಳಿಸಿ, ಛಾವಾ ಚಿತ್ರದ ದಾಖಲೆಯನ್ನು ಅಳಿಸಿ ಹಾಕಿದೆ ಮತ್ತು ಈ ವರ್ಷದ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಪ್ರಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ.
ಇದನ್ನು ಓದಿ:Vrusshabha Movie: ಕೊನೆಗೂ ವೃಷಭ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ನಟ ಮೋಹನ್ ಲಾಲ್!
ಇದೇ ಮೊದಲ ಬಾರಿಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತಮ್ಮ ಸಿನಿಮಾಗಳ ಬಾಕ್ಸಾಫೀಸ್ ಲೆಕ್ಕ ನೀಡಿದೆ. ಮೊದಲ ವಾರವೇ ಸಿನಿಮಾ ವಿಶ್ವದಾದ್ಯಂತ 509.25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದು ಎರಡು ವಾರಕ್ಕೆ 717.50 ಕೋಟಿ ರೂ. ಗಳಿಸಿದೆ. ಹಾಗಾಗಿ ಸಿನಿಮಾವು ಕರ್ನಾಟಕ ರಾಜ್ಯವೊಂದರಲ್ಲೇ ರೂ 250 ಕೋಟಿ ಗಳಿಕೆಯ ಗಡಿ ದಾಟಿದ ಮೊದಲ ಕನ್ನಡ ಚಲನಚಿತ್ರ ಎಂಬ ಐತಿಹಾಸಿಕ ದಾಖಲೆಯನ್ನು ಕಾಂತಾರ ಬರೆದಿದೆ.
ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರವು ತುಳುನಾಡಿನ ಸಂಸ್ಕೃತಿಯ ವೈಭವವನ್ನು ಪ್ರದರ್ಶನ ಮಾಡಿದ್ದು ಪ್ರೇಕ್ಷಕರು ಫಿದಾ ಆಗಿದ್ದಾರೆ.. ಚಿತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯದ 'ಬೆರ್ಮೆ' ನೋಡುಗ ರನ್ನು ರೋಮಾಂಚನಗೊಳಿಸುತ್ತದೆ. ಸಿನಿಮಾದ ಅದ್ದೂರಿ ಮೇಕಿಂಗ್ ಮತ್ತು ಸಾಹಸಮಯ ದೃಶ್ಯವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.