Vrusshabha Movie: ಕೊನೆಗೂ ವೃಷಭ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ನಟ ಮೋಹನ್ ಲಾಲ್!
Vrusshabha Movie Release Date: ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಅಭಿನಯದ ಬಹು ನಿರೀಕ್ಷಿತ ವೃಷಭ ಸಿನಿಮಾದ ಟೀಸರ್ ಇದೇ ಸೆಪ್ಟಂಬರ್ ತಿಂಗಳಲ್ಲಿ ಟೀಸರ್ ರಿಲೀಸ್ ಆಗಿತ್ತು. 1 ನಿಮಿಷ 43 ಸೆಕೆಂಡ್ ಇರುವ ಈ ಟೀಸರ್ ನಲ್ಲಿ ಅವರ ಲುಕ್ , ಮಾಸ್ ಎಂಟ್ರಿ ಅಭಿಮಾನಿಗಳ ಮನ ಸೆಳೆದಿತ್ತು. ಇದೀಗ ಅದೇ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎಂಬ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ.
Vrusshabha Movie -
ನವದೆಹಲಿ: ಭಾರತೀಯ ಸಿನಿಮಾ ರಂಗದಲ್ಲಿ ನಟ ಮೋಹನ್ ಲಾಲ್ (Mohanlal) ಅವರು ತಮ್ಮ ಅದ್ಭುತ ಅಭಿನಯದಿಂದ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚೆಗೆ ಕೆಲವು ಸಿನಿಮಾಕ್ಕೆ ಅತಿಥಿ ಪಾತ್ರ ಮಾಡಿ ಇವರು ಫೇಮಸ್ ಆಗಿದ್ದರು.ಇದೀಗ ಅವರ ಅಭಿನಯದ ವೃಷಭ (Vrushabha)ಹೆಸರಿನ ಸಿನಿಮಾದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ಅನ್ನು ಮೋಹನ್ ಲಾಲ್ ಅವರು ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿ ದ್ದಾರೆ. ಅದರ ಜೊತೆಗೆ ವಿಶೇಷ ಕ್ಯಾಪ್ಶನ್ ಅನ್ನು ಕೂಡ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದೆ.ಯೋಧನ ಲುಕ್ ನಲ್ಲಿ ನಟ ಮೋಹನ್ ಲಾಲ್ ಅವರು ಕಾಣಿಸಿಕೊಂಡಿದ್ದು ಅವರ ಹೊಸ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಉಂಟಾಗುವಂತೆ ಮಾಡಿದೆ.
ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಅಭಿನಯದ ಬಹು ನಿರೀಕ್ಷಿತ ವೃಷಭ ಸಿನಿಮಾದ ಟೀಸರ್ ಇದೇ ಸೆಪ್ಟಂಬರ್ ತಿಂಗಳಲ್ಲಿ ಟೀಸರ್ ರಿಲೀಸ್ ಆಗಿತ್ತು. 1 ನಿಮಿಷ 43 ಸೆಕೆಂಡ್ ಇರುವ ಈ ಟೀಸರ್ ನಲ್ಲಿ ಅವರ ಲುಕ್ , ಮಾಸ್ ಎಂಟ್ರಿ ಅಭಿಮಾನಿಗಳ ಮನ ಸೆಳೆದಿತ್ತು. ಇದೀಗ ಅದೇ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎಂಬ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ನಟ ಮೋಹನ್ ಲಾಲ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಪೋಸ್ಟರ್ ಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ರಿಲೀಸ್ ಡೇಟ್ ಅನ್ನು ಅಧಿಕೃತವಾಗಿ ತಿಳಿಸಿದ್ದಾರೆ. “ನೆಲ ನಡುಗುತ್ತದೆ. ಆಕಾಶ ಉರಿಯುತ್ತದೆ. ವಿಧಿ ತನ್ನ ಯೋಧನನ್ನು ಆರಿಸಿದೆ. ವೃಷಭ ನವೆಂಬರ್ 6 ರಂದು ಆಗಮಿಸುತ್ತದೆ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ನಟ ಮೋಹನ್ ಲಾಲ್ ಯೋಧನ ಲುಕ್ ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನಲ್ಲಿ ಹಳೆಕಾಲದ ರಾಜ ವಿಜಯೇಂದ್ರ ಕಥೆಯನ್ನು ಆಧರಿಸಿದೆ. ನಟ ಮೋಹನ್ ಲಾಲ್ ಅವರಿಗೆ ಡಬಲ್ ಆ್ಯಕ್ಟಿಂಗ್ ಇರಬಹುದು ಎನ್ನಲಾಗಿದೆ.ಎರಡು ಯುಗಗಳ ಸಂಗ್ರಾಮ ಎಂಬರ್ಥದಲ್ಲಿ ಪೋಸ್ಟ್ ನಲ್ಲಿ ಕಾಣಬಹುದು. ಇದೀಗ ವೃಷಭ ಸಿನಿಮಾ ಹೊಸ ಭರವಸೆಯನ್ನು ಉಂಟುಮಾಡುವಂತಿದೆ.
ಈ ಸಿನಿಮಾಕ್ಕೆ ಬಹುದೊಡ್ಡ ಮಟ್ಟಿಗೆ ನಿರ್ಮಾಪಕರ ಬಳಗವು ಕೈ ಜೋಡಿಸಿದೆ. ಶೋಭಾ ಕಪೂರ್, ಏಕ್ತಾ ಕಪೂರ್, ಸಿ.ಕೆ.ಪದ್ಮ ಕುಮಾರ್, ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್ ವ್ಯಾಸ್, ಪ್ರವೀರ್ ಸಿಂಗ್, ವಿಶಾಲ್ ಗುರ್ನಾನಿ ಮತ್ತು ಜೂಹಿ ಪರೇಖ್ ಮೆಹ್ತಾ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಕನೆಕ್ಟ್ ಮೀಡಿಯಾ ಮತ್ತು ಬಾಲಾಜಿ ಟೆಲಿಫಿಲ್ಮ್ಸ್, ಅಭಿಷೇಕ್ ಎಸ್ ವ್ಯಾಸ್ ಸ್ಟುಡಿಯೋಸ್ ಜೊತೆಗೂಡಿ `ವೃಷಭ’ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದು ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸುತ್ತಿದೆ.
ಇದನ್ನು ಓದಿ:Kannada New Movie: ವಿಭಿನ್ನ ಶೀರ್ಷಿಕೆಯ ‘4.30 - 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲ’ ಚಿತ್ರಕ್ಕೆ ಮುಹೂರ್ತ
ಆಂಥೋನಿ ಸ್ಯಾಮ್ಸನ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಸ್ಯಾಮ್ ಸಿ.ಎಸ್. ಸಂಗೀತವು ಈ ಸಿನಿಮಾಕ್ಕೆ ಪ್ಲಸ್ ಪಾಂಯ್ಟ್ ಆಗಲಿದೆ. ನಂದ ಕಿಶೋರ್ ಕಥೆ ರಚನಾಕಾರ ರಾಗಿದ್ದು ಈ ಚಿತ್ರಕ್ಕೆ ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಚಿತ್ರದಲ್ಲಿ ಬಹುಸಂಖ್ಯಾತ ತಾರಾಗಣ ಇದೆ ಎಂದು ಸಹ ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಮೋಹನ್ ಲಾಲ್ ಮಗನಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸರ್ಮಜಿತ್ ಅವರು ನಟಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಹುಭಾಷೆಯಲ್ಲಿ ನವೆಂಬರ್ 6 ರಂದು ರಿಲೀಸ್ ಆಗಲಿದ್ದು ಪೋಸ್ಟರ್ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ