Yash Birthday: ʻನಮ್ಮ ಮೆಟ್ರೋʼ ತುಂಬೆಲ್ಲಾ ರಾರಾಜಿಸಿದ ʻರಾಕಿ ಭಾಯ್ʼ; ಸರ್ಪ್ರೈಸ್ ನೀಡಿದ ಅಣ್ತಮ್ಮನ ಸ್ನೇಹಿತರು!
Yash 40th Birthday: ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಅವರ 40ನೇ ಹುಟ್ಟುಹಬ್ಬವಿದ್ದು, ಇದಕ್ಕಾಗಿ ಬೆಂಗಳೂರಿನ 'ನಮ್ಮ ಮೆಟ್ರೋ' ರೈಲುಗಳ ಮೇಲೆ ಅವರ ಹುಟ್ಟುಹಬ್ಬದ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಸ್ನೇಹಿತರು ಅಚ್ಚರಿಯ ಉಡುಗೊರೆ ನೀಡಿದ್ದಾರೆ. ಇದರ ಜೊತೆಗೆ ಅಭಿಮಾನಿಗಳು 'ಟಾಕ್ಸಿಕ್' ಸಿನಿಮಾದಿಂದ ಯಶ್ ಅವರ ಫಸ್ಟ್ ಲುಕ್ ಅಥವಾ ಟೀಸರ್ ಬಿಡುಗಡೆಯಾಗಲಿದೆ ಎಂಬ ಭಾರಿ ನಿರೀಕ್ಷೆಯಲ್ಲಿದ್ದಾರೆ.
-
ʻರಾಕಿಂಗ್ ಸ್ಟಾರ್ʼ ಯಶ್ ಅವರಿಗೆ ಜನವರಿ 8ರಂದು ಹುಟ್ಟುಹಬ್ಬ. ರಾಕಿ ಭಾಯ್ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈಗಾಗಲೇ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಇದೇ ಮೊದಲ ಬಾರಿಗೆ ಮೆಟ್ರೋ ಮೇಲೆ ಜಾಹೀರಾತು ನೀಡಿ, ಯಶ್‌ಗೆ ಹುಟ್ಟುಹಬ್ಬ ಶುಭಾಶಯಗಳನ್ನು ತಿಳಿಸಿರುವುದು ಅಚ್ಚರಿ ತಂದಿದೆ.
ನಮ್ಮ ಮೆಟ್ರೋ ಮೇಲೆ ಯಶ್
ಯಶ್ ಅವರ ಸ್ನೇಹಿತರು ನಮ್ಮ ಮೆಟ್ರೋ ಮೇಲೆ ರಾಕಿ ಭಾಯ್‌ಗೆ ಹುಟ್ಟುಹಬ್ಬ ಶುಭಾಶಯಗಳನ್ನು ಕೋರುತ್ತಿರುವ ಪೋಸ್ಟರ್‌ಗಳನ್ನು ಅಂಟಿಸಿ, ಜಾಹೀರಾತು ನೀಡಿದ್ದಾರೆ. ಇದೇ ಮೊದಲ ಬಾರಿಗೆ ಇಂಥ ಪ್ರಯೋಗ ನಡೆದಿರುವುದು ವಿಶೇಷ. ಸದ್ಯ ಬೆಂಗಳೂರಿನ ಮೆಟ್ರೋಗಳಲ್ಲಿ ಯಶ್ ಅವರ ಹುಟ್ಟುಹಬ್ಬದ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಅಣ್ತಮ್ಮನ ಸ್ನೇಹಿತರು ಯಶ್ ಹುಟ್ಟುಹಬ್ಬದ ಮೆರುಗನ್ನು ಈ ಬಾರಿ ಹೆಚ್ಚಿಸಿದ್ದಾರೆ ಎನ್ನಬಹುದು. ಜೊತೆಗೆ ಹೈವೇಗಳಲ್ಲಿ ದೊಡ್ಡ ಜಾಹೀರಾತು ಬೋರ್ಡ್‌ಗಳಲ್ಲಿಯೂ ಯಶ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಫ್ಲೆಕ್ಸ್ ಹಾಕಲಾಗಿದೆ.
Yash Meets Shivanna: ರಾಕಿಭಾಯ್ ಮೀಟ್ಸ್ ಶಿವಣ್ಣ; ಶಿವ ರಾಜ್‌ಕುಮಾರ್ ಆರೋಗ್ಯ ವಿಚಾರಿಸಿದ ಯಶ್-ರಾಧಿಕಾ ಪಂಡಿತ್
ಟಾಕ್ಸಿಕ್‌ನಿಂದ ಗಿಫ್ಟ್!
ಇನ್ನು, ಯಶ್ ಅವರ ಮುಂದಿನ ಸಿನಿಮಾ ʻಟಾಕ್ಸಿಕ್ʼನ ನಾಯಕಿಯ ಪರಿಚಯದ ಒಂದೊಂದೇ ಪೋಸ್ಟರ್‌ಗಳು ರಿಲೀಸ್ ಆಗುತ್ತಿವೆ. ಇದೀಗ ಜನವರಿ 8ರಂದು ಯಶ್ ಅವರ ಹುಟ್ಟುಹಬ್ಬಕ್ಕೆ ಏನಾದರೂ ಗಿಫ್ಟ್ ಸಿಗಬಹುದಾ ಎಂಬ ಕುತೂಹಲ ಫ್ಯಾನ್ಸ್‌ಗೆ ಕಾಡುತ್ತಿದೆ. ಹೌದು, ಜನವರಿ 8ರಂದು ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ʻಟಾಕ್ಸಿಕ್ʼ ಸಿನಿಮಾದಿಂದ ಫಸ್ಟ್ ಲುಕ್ ಅಥವಾ ಟೀಸರ್ ರಿಲೀಸ್ ಆಗಬಹುದು ಎಂಬ ನಿರೀಕ್ಷೆಯಲ್ಲಿ ರಾಕಿ ಭಾಯ್ ಫ್ಯಾನ್ಸ್ ಇದ್ದಾರೆ.
Ram Charan: ನಟ ರಾಮ್ ಚರಣ್ ನೋಡಿ ಯಶ್ ಎಂದು ಕರೆದ ಕ್ಯಾಮೆರಾ ಮೆನ್; ಮುಜುಗರಕ್ಕೀಡಾದ ನಟ, ವಿಡಿಯೊ ವೈರಲ್
ಈಗಾಗಲೇ ಈ ಚಿತ್ರದ ನಾಯಕಿಯರ ಫಸ್ಟ್ ಲುಕ್ ಮತ್ತು ಅವರ ಪಾತ್ರದ ಪರಿಚಯ ಮಾಡಲಾಗಿದೆ. ನಾದಿಯಾ ಪಾತ್ರವನ್ನು ಕಿಯಾರಾ ಅಡ್ವಾಣಿ ಮಾಡುತ್ತಿದ್ದು, ಗಂಗಾ ಪಾತ್ರದಲ್ಲಿ ನಯನತಾರ ಕಾಣಿಸಿಕೊಂಡಿದ್ದಾರೆ. ಮೆಲ್ಲಿಸಾ ಆಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡರೆ, ರೆಬೆಕಾ ಪಾತ್ರದಲ್ಲಿ ತಾರಾ ಸುತಾರಿಯಾ ಇದ್ದಾರೆ. ಎಲಿಜಿಬೆತ್ ಆಗಿ ಹುಮಾ ಖುರೇಷಿ ನಟಿಸಿದ್ದಾರೆ. ಇದೀಗ ಯಶ್ ಅವರಿಗೆ ಏನು ಪಾತ್ರ ಅನ್ನೋದು ಎಲ್ಲರಲ್ಲಿಯೂ ಇರುವ ಕುತೂಹಲ.
ಯಶ್ ಅವರ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ
Bengaluru witnessed history 🔥
— Yash Trends ™ (@YashTrends) January 6, 2026
Metro takeover for a birthday celebration 🎉
For the one & only…
ROCKING STAR YASH 👑🔥#Yash #ToxicTheMovie@TheNameIsYash
pic.twitter.com/ea0Y4ok2i8
ರಾಮಾಯಣ ತಂಡದಿಂದ ಉಡುಗೊರೆ?
ಇದೇ ವೇಳೆ ಯಶ್ ಅವರು ಹಿಂದಯ ರಾಮಾಯಣ ಸಿನಿಮಾದಲ್ಲೂ ನಟಿಸಿದ್ದಾರೆ. ಜೊತೆಗೆ ಅದರ ಸಹ ನಿರ್ಮಾಪಕರು ಕೂಡ ಆಗಿದ್ದಾರೆ. ಹಾಗಾಗಿ, ರಾಮಾಯಣ ತಂಡದಿಂದ ಏನಾದರೂ ಉಡುಗೊರೆಯನ್ನು ಯಶ್ ಹುಟ್ಟುಹಬ್ಬಕ್ಕೆ ನೀಡಬಹುದೇ ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ. ಸದ್ಯದ ಮಾಹಿತಿ ಪ್ರಕಾರ, ಆ ರೀತಿ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲವಂತೆ. ಕೊನೇ ಕ್ಷಣದಲ್ಲಿ ಏನಾದರೂ ಬದಲಾವಣೆಯಾದರೂ ಅಚ್ಚರಿ ಇಲ್ಲ.