ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmam Review: ಅಸಮಾನತೆಯನ್ನು ಮಟ್ಟ ಹಾಕಲು ಧರ್ಮಯುದ್ಧ ಮಾಡುವ ಧರ್ಮಂ!

Dharmam Movie Review: ಸ್ಯಾಂಡಲ್‌ವುಡ್‌ನಲ್ಲಿ ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ ಧರ್ಮಂ ಸಿನಿಮಾವು ಈ ವಾರ (ಡಿ.5) ತೆರೆಕಂಡಿದೆ. ಈ ಚಿತ್ರದಲ್ಲಿ ಅಸಮಾನತೆ, ಉಳ್ಳವರು - ಇಲ್ಲದವರ ನಡವಿನ ಹೋರಾಟ.. ಮುಂತಾದ ವಿಚಾರಗಳನ್ನು ಹೇಳಲಾಗಿದೆ. ಇಲ್ಲಿದೆ ʻಧರ್ಮಂʼ ಚಿತ್ರದ ವಿಮರ್ಶೆ.

Sai Shashi Kumar: ʻಧರ್ಮಂʼ ಕನ್ನಡ ಸಿನಿಮಾ ರಿವ್ಯೂ

-

Avinash GR
Avinash GR Dec 5, 2025 4:30 PM

"ನಿನ್‌ ಧರ್ಮ ಉಳಿಬೇಕು ಎಂದರೆ, ನಿನ್‌ ಜಾತಿ ಸಾಯಬೇಕು" ಎನ್ನುವ ಡೈಲಾಗ್‌ ಬರುವ ಹೊತ್ತಿಗೆ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗಿರುತ್ತವೆ. ʻಧರ್ಮಂʼ ಕಥೆ ಸಾಗುವುದು ರಾಯದುರ್ಗ ಎಂಬ ಊರಿನ ಸಮೀಪದಲ್ಲಿರುವ ಒಂದು ಹಳ್ಳಿಯಲ್ಲಿ. ಅಲ್ಲಿ ದುಡ್ಡಿದ್ದವರದ್ದು ದರ್ಪದ ಹಾಡಿ. "ಇಲ್ಲಿರುವವರೆಲ್ಲಾ ಜಾತಿಯಲ್ಲಿ ಹಿಂದುಳಿಯುವುದಲ್ಲ, ಜೀವನದಲ್ಲಿ ಮುಂದೆ ಬರದೇ ಇರೋ ಥರ ನೋಡಿಕೊಳ್ಳಬೇಕು" ಎಂಬ ಮನಸ್ಥಿತಿಯಲ್ಲಿ ತುಳಿತಕ್ಕೆ ಒಳಗಾದವರನ್ನು ಇನ್ನಷ್ಟು ತುಳಿಯುವಂತಹ, ಬಡವರನ್ನ ತಮಗೆ ಬೇಕಾದಂತೆ ಆಳುವ ವರ್ಗ ಬಳಸಿಕೊಳ್ಳುವ ಊರು ಅದು. ಅಂತಹ ಊರಿನಲ್ಲಿ ಕರಿಮುತ್ತು (ಸಾಯಿ ಶಶಿಕುಮಾರ್)‌ ಎಂಬಾತ ಎಲ್ಲದರ ವಿರುದ್ಧ ತಿರುಗಿಬೀಳುತ್ತಾನೆ. ಆನಂತರ ಇಡೀ ಕಥೆ ಹೇಗೆಲ್ಲಾ ಸಾಗುತ್ತದೆ ಎಂಬುದನ್ನು ನಿರ್ದೇಶಕರು ಹೊಸ ರೀತಿಯ ನಿರೂಪಣೆಯೊಂದಿಗೆ ಕಟ್ಟಿಕೊಟ್ಟಿದ್ದಾರೆ.

ಗಮನಸೆಳೆಯುವ ಮೇಕಿಂಗ್‌

ʻಧರ್ಮಂʼ ಸಿನಿಮಾದಲ್ಲಿ ಮುಖ್ಯವಾಗಿ ಹೈಲೈಟ್‌ ಎನಿಸುವುದು ಮೇಕಿಂಗ್.‌ ಈ ಡಾರ್ಕ್‌ಶೇಡ್‌ನ ಕಥೆಗೆ ನಿರ್ದೇಶಕ ನಾಗಮುಖ ಅವರು ಒಂದು ಡಾರ್ಕ್‌ಶೇಡ್‌ನ ಥೀಮ್‌ನಲ್ಲೇ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕರ ಈ ಕ್ರಿಯೆಟಿವಿಗೆ ಛಾಯಾಗ್ರಾಹಕ ನಾಗಶೆಟ್ಟಿ ಅವರ ಸಹಕಾರ ದೊಡ್ಡದು. ಇಡೀ ಸಿನಿಮಾವನ್ನು ಬೇರೆಯದೇ ಕಲರ್‌ ಟೋನ್‌ನಲ್ಲಿ ಕಟ್ಟಿಕೊಟ್ಟಿರುವುದು, ಇಟ್ಟಿರುವ ಫ್ರೇಮ್‌ಗಳು ಭಿನ್ನವಾಗಿವೆ. ಸ್ವಾಮಿನಾಥನ್‌ ಅವರ ಹಿನ್ನೆಲೆ ಸಂಗೀತ ಕೂಡ ಕಥೆಯ ಆಶಯಕ್ಕೆ ಹೊಂದಿಕೆ ಆಗುವಂತೆ ಇದೆ. ನಿರ್ದೇಶಕರು ತಾವು ಹೇಳಬೇಕೆಂದಿರುವ ಕಥೆಯನ್ನು ಅಚ್ಚುಕಟ್ಟಾಗಿ ಹೇಳಿದ್ದಾರೆ.

Gatha Vaibhava Review: ʻಸಿಂಪಲ್‌ʼ ಸುನಿ ಹೇಳಿದ ಜನ್ಮ ಜನ್ಮಾಂತರದ ಗತವೈಭವದ ಕಥೆ!

ಯಾವುದೇ ಅನಗತ್ಯ ದೃಶ್ಯಗಳಿಲ್ಲದೇ ಇರುವುದು ಈ ಚಿತ್ರದ ಮತ್ತೊಂದು ಹೆಚ್ಚುಗಾರಿಕೆ. ಹಾಗಾಗಿ, 1 ಗಂಟೆ 46 ನಿಮಿಷಗಳಲ್ಲೇ ಸಿನಿಮಾ ಮುಗಿದು ಹೋಗುತ್ತದೆ. ಇಲ್ಲೊಂದು ಲವ್‌ ಸ್ಟೋರಿ ಇದೆ. ಆದರೆ ಜಾಸ್ತಿ ಮರ ಸುತ್ತುವ ಸೀನ್‌ಗಳಿಲ್ಲ. ಮತ್ತೊಂದು ಹೈಲೈಟ್‌ ಆಗುವ ವಿಚಾರ ಏನಪ್ಪ ಅಂದ್ರೆ, ಈ ಚಿತ್ರದಲ್ಲಿ ನಟಿಸಿರುವ ಕಲಾವಿದರೆಲ್ಲಾ ಬಹುತೇಕ ಹೊಸಬರೇ. ನಟ ಅಶೋಕ್‌ ಹೆಗಡೆ ಬಿಟ್ಟರೆ ಮಿಕ್ಕಂತೆ ಎಲ್ಲರೂ ಹೊಸಬರೇ. ಹಾಗಾಗಿ, ಇಲ್ಲಿ ಯಾವ ಪಾತ್ರ ಹೇಗೆ ಬದಲಾಗಬಹುದು ಎಂದು ನಿರೀಕ್ಷೆ ಮಾಡುವುದು ಕಷ್ಟ. ಹೊಸಬರನ್ನೇ ಇಟ್ಟುಕೊಂಡು ಸಿನಿಮಾ ಮಾಡುವ ಸವಾಲನ್ನು ಸ್ವೀಕರಿಸಿ, ಬಹುತೇಕ ಅದರಲ್ಲಿ ನಾಗಮುಖ ಯಶಸ್ವಿಯಾಗಿದ್ದಾರೆ. ಜೊತೆಗೆ ಕಳ್ಳಬಟ್ಟಿಯಂತಹ ಸಾಮಾಜಿಕ ಪಿಡುಗುಗಳ ಬಗ್ಗೆಯೂ ಈ ಸಿನಿಮಾ ಮಾತನಾಡುತ್ತದೆ. ಒಟ್ಟಾರೆಯಾಗಿ ಇಡೀ ಸಿನಿಮಾವನ್ನು ಡಿಫರೆಂಟ್‌ ಆಗಿ ಕಟ್ಟಿಕೊಡುವುದಕ್ಕೆ ನಿರ್ದೇಶಕ ನಾಗಮುಖ ಪ್ರಯತ್ನಿಸಿದ್ದಾರೆ. 80-90ರ ದಶಕದಲ್ಲಿ ಕಥೆ ಸಾಗುತ್ತದೆ.

ಹೊಸ ಕಲಾವಿದರ ನಟನೆ ಹೇಗಿದೆ?

ಚಿತ್ರದ ಹೀರೋ ಸಾಯಿ ಶಶಿಕುಮಾರ್‌ ಬಹುತೇಕ ಮೌನದಲ್ಲಿ ಮಾತನಾಡಿದ್ದಾರೆ. ಅವರಿಗೆ ಹೆಚ್ಚು ಮಾತುಗಳಿಲ್ಲ. ಉತ್ತಮವಾಗಿ ನಟಿಸುವ ಪ್ರಯತ್ನ ಮಾಡಿದ್ದಾರೆ. ನೀಲಾ ಪಾತ್ರ ಮಾಡಿರುವ ನಾಯಕಿ ವಿರಾಣಿಕಾ ಶೆಟ್ಟಿ ಅವರಿಗೂ ಈ ಮಾತು ಅನ್ವಯ. ಉಳಿದಂತೆ, ಅಶೋಕ್‌ ಹೆಗಡೆ ಸಿಕ್ಕ ಪಾತ್ರವನ್ನು ಖಡಕ್‌ ಆಗಿಯೇ ನಿಭಾಯಿಸಿದ್ದಾರೆ. ನಿರ್ಮಾಪಕ ಡಾ. ಎಸ್‌ ಕೆ ರಾಮಕೃಷ್ಣ ಕೂಡ ಒಂದು ಪಾತ್ರದಲ್ಲಿ ಗಮನಾರ್ಹ ನಟನೆ ನೀಡಿದ್ದು,

ಮಾರ ಎಂಬ ಪಾತ್ರದಲ್ಲಿ ಭೀಷ್ಮ ರಾಮಯ್ಯ ನಟನೆ ಕೂಡ ಉತ್ತಮವಾಗಿದೆ. ಚಿತ್ರದಲ್ಲಿ ಬಹುತೇಕ ಹೊಸಬರೇ ನಟಿಸಿದ್ದು, ಎಲ್ಲರೂ ಶ್ರಮ ಹಾಕಿ ಅಭಿನಯಿಸಿದ್ದಾರೆ.