Rishab Shetty: ಕಡಲ ತೀರದಲ್ಲಿ, ಅಲೆಗಳ ಸಪ್ಪಲದ ನಡುವೆ ಆ್ಯನಿವರ್ಸರಿ ಸೆಲೆಬ್ರೆಟ್ ಮಾಡಿಕೊಂಡ ರಿಷಬ್ ಶೆಟ್ಟಿ; ಇಲ್ಲಿದೆ ವಿಡಿಯೊ
ʼನನ್ನ ಸಂಗಾತಿಯಾಗಿ ಹೃದಯಕ್ಕೆ ಒಲವನ್ನು, ಸಾಧನೆಗೆ ವಿಶ್ವಾಸವನ್ನು, ನಾಳೆಗೆ ಭರವಸೆಯನ್ನು ತಂದವಳು ನೀನು. ಈ ಸಂಸಾರವೆಂಬ ಸಾರ್ಥಕತೆಯಲ್ಲಿ ನನ್ನ ಸಹನೆ, ಶಕ್ತಿ, ಸರ್ವಸ್ವಗಳಾಗಿ ಸದಾ ಜತೆಗಿರುʼ ಎಂದು ಬರೆದು ರಿಷಬ್ ಶೆಟ್ಟಿ ಅವರು ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು: 'ಕಾಂತಾರ’ ಸಿನಿಮಾ ಮೂಲಕ ಪ್ರಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ತಮ್ಮ ಮಡದಿ ಪ್ರಗತಿ ಶೆಟ್ಟಿಯ ಜತೆಗೆ 9ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಕಡಲ ತೀರದಲ್ಲಿ ಅಲೆಗಳ ಸಪ್ಪಳದ ಮಧ್ಯೆ ತಮ್ಮ ಮನದ ಒಡತಿಗೆ ವಿಶೇಷವಾಗಿ ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನು ತಿಳಿಸಿದ್ದು, ತಮ್ಮ ಮಕ್ಕಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಅವರು ಫೆ. 9ರಂದು 9ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಸಡಗರ -ಸಂಭ್ರಮದಿಂದ ಆಚರಿಸಿಕೊಂಡಿದ್ದು, ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳ ಜತೆಗೆ ಕಳೆದ ಸುಮಧುರ ಕ್ಷಣಗಳ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ರಿಷಬ್ ಶೆಟ್ಟಿ ಅವರು ತಮ್ಮ ವೆಡ್ಡಿಂಗ್ ಆ್ಯನಿವರ್ಸರಿಯ ವಿಶೇಷವಾದ ವಿಡಿಯೊ ಹಂಚಿಕೊಂಡಿದ್ದು, ʼʼನನ್ನ ಸಂಗಾತಿಯಾಗಿ ಹೃದಯಕ್ಕೆ ಒಲವನ್ನು, ಸಾಧನೆಗೆ ವಿಶ್ವಾಸವನ್ನು, ನಾಳೆಗೆ ಭರವಸೆಯನ್ನು ತಂದವಳು ನೀನು. ಈ ಸಂಸಾರವೆಂಬ ಸಾರ್ಥಕತೆಯಲ್ಲಿ ನನ್ನ ಸಹನೆ, ಶಕ್ತಿ, ಸರ್ವಸ್ವಗಳಾಗಿ ಸದಾ ಜತೆಗಿರು...ʼʼಎಂದು ರಿಷಬ್ ಶೆಟ್ಟಿ ಅವರು ಆ ವಿಡಿಯೊಕ್ಕೆ ಕ್ಯಾಪ್ಷನ್ ನೀಡಿದ್ದಾರೆ.
ಚಂದನವನದ ಜನಪ್ರಿಯ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದಾದ ರಿಷಬ್ ಮತ್ತು ಪ್ರಗತಿ ಅವರದ್ದು ಮ್ಯಾರೇಜ್ ಅನ್ನೋದು ವಿಶೇಷ. 'ಉಳಿದವರು ಕಂಡಂತೆ' ಸಿನಿಮಾ ನೋಡಿ ಪ್ರಗತಿ ಅವರು ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದರು. ಹಾಗಾಗಿ ಸ್ನೇಹಿತರ ಜತೆ ʼರಿಕ್ಕಿʼ ಸಿನಿಮಾ ನೋಡೋದಕ್ಕೆ ಹೋಗಿದ್ದರಂತೆ. ಆ ಸಂದರ್ಭದಲ್ಲಿ ಥಿಯೇಟರ್‌ಗೆ ಚಿತ್ರತಂಡ ಭೇಟಿ ಕೊಟ್ಟಿತ್ತು. ಆ ಸಂದರ್ಭದಲ್ಲಿ ಪ್ರಗತಿಗೆ ರಿಷಬ್ ʼರಿಕ್ಕಿʼ ಸಿನಿಮಾದ ನಿರ್ದೇಶಕರು ಅನ್ನೋದು ಗೊತ್ತಾಗಿದೆ. ಎಲ್ಲರೂ ಸೆಲ್ಫಿ ತೆಗೆಯುವಂತೆ ತಾವು ಹೋಗಿ ಅವರ ಜತೆ ಫೋಟೊ ತೆಗೆಸಿಕೊಂಡಿದ್ದರು. ಈ ರೀತಿ ಪರಿಚಯವಾದ ರಿಷಬ್ ಮತ್ತು ಪ್ರಗತಿ ಮಧ್ಯೆ ಪ್ರೀತಿ ಚಿಗುರಿ 2017ರ ಫೆ. 9ರಂದು ಮನೆಯವರನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಇದನ್ನು ಓದಿ: Rishabh Shetty: ಕುಂದಾಪುರಕ್ಕೆ ಬಂದು ರಿಷಬ್ ಶೆಟ್ಟಿಯನ್ನು ಭೇಟಿಯಾದ ರಾಣಾ ದಗ್ಗುಬಾಟಿ; 'ಕಾಂತಾರ'ದಲ್ಲಿ ನಟಿಸ್ತಾರಾ ಟಾಲಿವುಡ್ ನಟ?
ಇನ್ನು ‘ಕಾಂತಾರ’ ಸಿನಿಮಾದ ಗೆಲುವಿನ ಬಳಿಕ ರಿಷಬ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದು, ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಈಗ ಅವರು ‘ಕಾಂತಾರ 2’ ಚಿತ್ರದ ಶೂಟಿಂಗ್ ನಡೆಸುತ್ತಿದ್ದಾರೆ.
ಇತ್ತ ಪ್ರಗತಿ ಶೆಟ್ಟಿ ಅವರು ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ರಿಷಬ್ ಶೆಟ್ಟಿ ಸಿನಿಮಾ ಮಾತ್ರವಲ್ಲ ಬೇರೆ ಬೇರೆಯ ಸಿನಿಮಾಗಳಿಗೂ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪ್ರಗತಿ ಶೆಟ್ಟಿ ಅವರು ರಿಷಬ್ ಶೆಟ್ಟಿ ಅವರ ಸಿನಿಮಾ ಬಗ್ಗೆಯೂ ಮಾಹಿತಿ ಹಂಚಿಕೊಳ್ತಾರೆ, ಅಷ್ಟೇ ಅಲ್ಲದೆ ಹಬ್ಬ-ಹರಿದಿನ, ಸಮಾರಂಭಗಳ ಫೋಟೊಗಳನ್ನು ಕೂಡ ಶೇರ್ ಮಾಡುತ್ತಾರೆ.