ಭಾಜಪ ಹೇಳಿಕೆಗೆ ತೀವ್ರ ಆಕ್ಷೇಪ: ದೀಪಕ ದೊಡ್ಡೋರ್
ಕಳೆದ ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಆರ್.ವಿ.ದೇಶಪಾಂಡೆ ಅವರು, ನಿರಂತರವಾಗಿ ಆಯ್ಕೆಯಾಗುತ್ತಿರುವುದು ಜನ ಅವರಲ್ಲಿ ಇಟ್ಟಿರುವ ವಿಶ್ವಾಸವನ್ನು ಸೂಚಿಸು ತ್ತದೆ. ರಾಮಕೃಷ್ಣ ಹೆಗಡೆಯವರಂತ ಮುತ್ಸದ್ದಿ ನೇತಾರರು ಹೆಮ್ಮೆ ಪಡುವಂತೆ ಜಿಲ್ಲೆ ಹಾಗೂ ರಾಜ್ಯದ ಸೇವೆಯನ್ನು ಮಾಡುತ್ತಾ ಬಂದಿರುವ ಘನತೆ ದೇಶಪಾಂಡೆ ಅವರದು.
-
ಶಿರಸಿ: ರಾಜ್ಯದ ಹಿರಿಯ ಹಾಗೂ ಅನುಭವಿ ರಾಜಕಾರಣಿಗಳಾದ ಆರ್.ವಿ.ದೇಶಪಾಂಡೆ ಅವರ ಕುರಿತು ಲಘುವಾಗಿ ಮಾತನಾಡಿದ ಹಳಿಯಾಳದ ಮಾಜಿ ಶಾಸಕ ಸುನಿಲ ಹೆಗಡೆ ಹಾಗೂ ಇತರ ಬಿಜೆಪಿ ನಾಯಕರ ಹೇಳಿಕೆಯನ್ನು ಕೆಪಿಸಿಸಿ ಸದಸ್ಯ ದೀಪಕ ದೊಡ್ದುರ್ ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ಹಾಗೂ ಜಿಲ್ಲೆಯಲ್ಲಿ ಬಹು ಪಾಲು ವಿಧಾನಸಭಾ ಕ್ಷೇತ್ರಗಳಲ್ಲಿ ಸೋತು ಜನರಿಂದ ತಿರಸ್ಕೃತವಾಗಿರುವ ಬಿಜೆಪಿ ಪಕ್ಷದವರು ಹತಾಶೆಯಿಂದ ಈ ಬಗೆಯ ಮಾತುಗಳನ್ನು ಹೇಳುತ್ತಿದ್ದು, ಅದನ್ನು ಅರ್ಥ ಮಾಡಿಕೊಳ್ಳು ವಷ್ಟು ಪ್ರಾಜ್ಯತೆ ಜಿಲ್ಲೆಯ ಜನರಿಗೆ ಇದೆ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಆರ್.ವಿ.ದೇಶಪಾಂಡೆ ಅವರು, ನಿರಂತರವಾಗಿ ಆಯ್ಕೆಯಾಗುತ್ತಿರುವುದು ಜನ ಅವರಲ್ಲಿ ಇಟ್ಟಿರುವ ವಿಶ್ವಾಸವನ್ನು ಸೂಚಿಸುತ್ತದೆ. ರಾಮಕೃಷ್ಣ ಹೆಗಡೆಯವರಂತ ಮುತ್ಸದ್ದಿ ನೇತಾರರು ಹೆಮ್ಮೆ ಪಡುವಂತೆ ಜಿಲ್ಲೆ ಹಾಗೂ ರಾಜ್ಯದ ಸೇವೆಯನ್ನು ಮಾಡುತ್ತಾ ಬಂದಿರುವ ಘನತೆ ದೇಶ ಪಾಂಡೆ ಅವರದು.
ಇದನ್ನೂ ಓದಿ: Sirsi Marikamba Jatre 2026: ಫೆ. 24ರಿಂದ ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅನೇಕ ಆಯಾಮಗಳಲ್ಲಿ ಅವರು ಶ್ರಮ ಅನಿಸುತ್ತದೆ ಬಂದಿರುವುದು ಜಿಲ್ಲೆಯ ಜನರಿಗೆ ಅರಿವಿದೆ. ಅವರು ಅಧಿಕಾರದಲ್ಲಿದ್ದಾಗ, ಜಿಲ್ಲಾ ಆಡಳಿತ ಹಾಗೂ ಇಲಾಖೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಆಡಳಿತ ನೀಡಿದ ಹಿರಿಮೆ ಅವರದು.
ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ವಿದ್ಯುತ್ ಸಂಪರ್ಕ, ರಸ್ತೆ, ಪ್ರವಾಸೋದ್ಯಮ ಇತ್ಯಾದಿ ಮೂಲಸಕೋರಿ ಅಭಿವೃದ್ಧಿ ಅನೇಕ ಯೋಜನೆಗಳನ್ನು ಜಾರಿಗೆ ತರಲವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯಾದ್ಯಂತ ಹಲವಾರು ಕಾಲೇಜುಗಳು, ಹಾಸ್ಟೆಲ್ʼಗಳು, ನಾಡಕಚೇರಿಗಳು ಆರಂಭವಾಗಿದ್ದನ್ನು ಹಾಗೂ ಬಹಳಷ್ಟು ರಸ್ತೆ ಹಾಗೂ ಸೇತುವೆ ಕಾಮ ಗಾರಿಗಳು ಆಗಿರುವುದನ್ನು ಗುರುತಿಸಬೇಕಿದೆ. ಹೀಗೆ, ಜಿಲ್ಲೆಯ ಭೌಗೋಳಿಕ ಹಾಗೂ ಪರಿಸರದ ಸೂಕ್ಷ್ಮತೆಗಳಿಗೆ ಅನುಗುಣವಾಗಿ, ಇಲ್ಲಿ ಹಮ್ಮಿಕೊಳ್ಳಬಹುದಾದ ಅಭಿವೃದ್ಧಿಯ ಪ್ರಯತ್ನಗಳನ್ನು ಅವರು ಮಾಡುತ್ತಿದ್ದಾರೆ.
ಹೀಗಾಗಿ, ಜಿಲ್ಲೆ ಯಾವುದೇ ಸಂಕಷ್ಟದ ಅಥವಾ ಸವಾಲಿನ ಸಂದರ್ಭಗಳನ್ನು ಎದುರಿಸುವ ಪರಿಸ್ಥಿತಿ ಬಂದಾಗ, ಜಿಲ್ಲೆಯ ಜನ ಹಾಗೂ ಜನಪ್ರತಿನಿಧಿಗಳು ಅವರ ನೇತೃತ್ವ ಹಾಗೂ ಮಾರ್ಗದರ್ಶನ ನಿರೀಕ್ಷಿಸುತ್ತಾರೆ. ಅವರು ಇಂದಿಗೂ ಜಿಲ್ಲೆಯಾದ್ಯಂತ ಗೌರವಿಸಲ್ಪಡು ತ್ತಿರುವುದರ ಪ್ರತೀಕವಿದು.
ವಾಸ್ತವ ಹೀಗಿರುವಾಗ, ದೇಶಪಾಂಡೆಯವರ ಕುರಿತು ಬಿಜೆಪಿಯು ತೀರಾ ಲಘುವಾಗಿ ಟೀಕೆ ಮಾಡಿರುವುದು ಖಂಡನೀಯ ಹಾಗೂ ಇದು ಅವರ ಹತಾಶ ಮತ್ತು ಕ್ಷುಲ್ಲಕ ಮನಸ್ಥಿತಿ ಯನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.