ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಸಾಹಸ ಸಿಂಹʼ ಖ್ಯಾತಿಯ ಹಿರಿಯ ನಿರ್ದೇಶಕ ಜೋ ಸೈಮನ್‌ ಇನ್ನಿಲ್ಲ; ಫಿಲ್ಮ್‌ ಚೇಂಬರ್‌ನಲ್ಲಿ ಹೃದಯಾಘಾತದಿಂದ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ಮತ್ತು ನಿರ್ದೇಶಕ ಜೋ ಸೈಮನ್ ಅವರು ಇಂದು (ಫೆ.13) ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದಾಗ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಕುಸಿದುಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾನ್ನಪ್ಪಿದ್ದಾರೆ.

ನಿರ್ದೇಶಕ ಜೋ ಸೈಮನ್‌ ಹೃದಯಾಘಾತದಿಂದ ನಿಧನ

-

Avinash GR
Avinash GR Feb 13, 2026 5:45 PM

ಹಿರಿಯ ನಟ, ನಿರ್ದೇಶಕ ಜೋ ಸೈಮನ್ ಅವರು ಶುಕ್ರವಾರ (ಫೆ.13) ಮಧ್ಯಾಹ್ನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ್ದ ಅವರು, ಅಲ್ಲಿಯೇ ಕುಸಿದುಬಿದ್ದ ನಿಧರಾಗಿದ್ದಾರೆ. ನಾಲ್ಕೈದು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕರಾಗಿ ಜೋ ಸೈಮನ್‌ ಅವರು ಜನಪ್ರಿಯರಾಗಿದ್ದರು. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಮೀಟಿಂಗ್‌ ನಡೆಯುವಾಗಲೇ ನಿಧನ

ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ವಿಸಿ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ಭಾಗಿಯಾಗಿದ್ದ ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆಯೇ ಏರುಪೇರಾಗಿದೆ. ಬಳಿಕ ಅವರು ಶೌಚಾಲಯಕ್ಕೆ ತೆರಳಿದ್ದಾರೆ. ಆ ವೇಳೆ ಅಲ್ಲಿಯೇ ಅವರು ಹೃದಯಾಘಾತದಿಂದ ಕುಸಿದುಬಿದ್ದು ಸಾನ್ನಪ್ಪಿದ್ದಾರೆ. ಸುಮಾರು 4.30ಕ್ಕೆ ಈ ಘಟನೆ ನಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅವರು ಬದುಕುಳಿಯಲಿಲ್ಲ.

Vishnu Prasad: ಚಿಕಿತ್ಸೆಗೆ ಹಣ ಹೊಂದಿಸಲು ಕುಟುಂಬ ಪರದಾಟ; ಆಸ್ಪತ್ರೆಯಲ್ಲೇ ಖ್ಯಾತ ನಟ ನಿಧನ

ವಿಷ್ಣುವರ್ಧನ್‌ಗೆ ಹೆಚ್ಚು ಸಿನಿಮಾ

ನಿರ್ದೇಶಕ, ನಟ, ಕಥೆಗಾರ, ಗೀತರಚನೆಕಾರರಾಗಿ ಗುರುತಿಸಿಕೊಂಡಿದ್ದ ಜೋ ಸೈಮನ್‌ ಅವರು 1977ರಲ್ಲಿ ನಿರ್ದೇಶನ ಆರಂಭಿಸಿದ್ದರು. ಅಲ್ಲಿಂದ ಮುಂದೆ ಸುಮಾರು 18 ವರ್ಷಗಳ ಬಹಳ ಬೇಡಿಕೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಜೋ ಸೈಮನ್‌ ಅವರು ಅತೀ ಹೆಚ್ಚು ಸಿನಿಮಾಗಳನ್ನು ಮಾಡಿದ್ದು ಡಾ. ವಿಷ್ಣುವರ್ಧನ್‌ ಅವರಿಗೆ. ಜೋ ಸೈಮನ್‌ ಅವರ ಮೊದಲ ಸಿನಿಮಾ ಒಂದು ಪ್ರೇಮ ಕಥೆಯಲ್ಲಿ ರಜನಿಕಾಂತ್‌ ಅವರು ವಿಲನ್‌ ಪಾತ್ರ ಮಾಡಿದ್ದರು. ಅಶೋಕ್‌ ಆ ಸಿನಿಮಾದ ಹೀರೋ.

Harish Rai Death: ʼಕೆಜಿಎಫ್ ಚಾಚಾʼ ಹರೀಶ್ ರಾಯ್ ನಿಧನ, ಕ್ಯಾನ್ಸರ್‌ಗೆ ನಟ ಬಲಿ

ನಂತರ 1980ರಲ್ಲಿ ಸಿಂಹ ಜೋಡಿ ಸಿನಿಮಾವನ್ನು ನಿರ್ದೇಶಿಸಿದರು. ಅದರಲ್ಲಿ ಡಾ. ವಿಷ್ಣುವರ್ಧನ್‌ ಹೀರೋ ಆಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ವಿಷ್ಣು - ಜೋ ಸೈಮನ್‌ ಜೋಡಿ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದೆ. ನನ್ನ ರೋಷ ನೂರು ವರುಷ, ಮಹಾ ಪ್ರಚಂಡರು, ಸಾಹಸ ಸಿಂಹ, ಸಿಡಿದೆದ್ದ ಸಹೋದರ, ಊರಿಗೆ ಉಪಕಾರಿ, ಟೈಮ್‌ ಬಾಂಬ್‌, ರವಿವರ್ಮ ಮುಂತಾದ ಸಿನಿಮಾಗಳನ್ನು ಈ ಜೋಡಿ ಒಟ್ಟಿಗೆ ಮಾಡಿದೆ.

ವಿಷ್ಣವರ್ಧನ್‌ ಜೊತೆಗೆ ಅಂಬರೀಷ್‌, ಸುನೀಲ್‌, ಅರ್ಜುನ್‌ ಸರ್ಜಾ ಮುಂತಾದ ಹೀರೋಗಳಿಗೂ ಜೋ ಸೈಮನ್‌ ನಿರ್ದೇಶನ ಮಾಡಿದ್ದಾರೆ. 2019ರಲ್ಲಿ ತೆರೆಕಂಡ ಪಯಣ, ಜೋ ಸೈಮನ್‌ ನಿರ್ದೇಶನದ ಕೊನೇ ಸಿನಿಮಾ. ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದ ಜೋ ಸೈಮನ್‌ ಅವರು ನಟನೆಯಲ್ಲೂ ಫೇಮಸ್‌ ಆಗಿದ್ದರು.