ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare serial: ಕೈ ಕುಯ್ದುಕೊಂಡ ಮಹಿಮಾ; ಮಿಂಚುನ ದೂರ ಮಾಡಿಕೊಳ್ತಾರಾ ಗೌತಮ್ ಜೋಡಿ?

Amruthadhaare serial: ಅಮೃತಧಾರೆಯಲ್ಲಿ ಮಹಿಮಾ ಜೀವಕ್ಕೆ ಅಪಾಯ ತಂದುಕೊಳ್ಳುವ ಹಂತದಲ್ಲಿ ಇದ್ದಾಳೆ. ಮಗು ಇಲ್ಲ ಎಂಬ ಕೊರಗಿನಲ್ಲಿ ಕೈ ಕುಯ್ದುಕೊಂಡಿದ್ದಾಳೆ. ಇಷ್ಟವಿಲ್ಲದಿದ್ರೂ ಮನೆಯವರಿಗಾಗಿ ಮಿಂಚುನ ದೂರ ಮಾಡಿಕೊಳ್ಳಲು ಗೌತಮ್ – ಭೂಮಿಕಾ ಸಜ್ಜಾಗಿದ್ದಾರೆ. ಹೀಗಾಗಿ ಭೂಮಿನೇ ಗೌತಮ್‌ಗೆ, ಸ್ವಲ್ಪ ದಿನ ಮಿಂಚುಳನ್ನು ಮಹಿಮಾ ಬಳಿ ಇರಿಸಲು ನಿರ್ಧರಿಸಿದ್ದಾರೆ. ಭೂಮಿ ಕೂಡ ಮಿಂಚುಗೆ ರಿಕ್ವೆಸ್ಟ್‌ ಕೂಡ ಮಾಡಿದ್ದಾಳೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ಮಹಿಮಾ ಜೀವಕ್ಕೆ ಅಪಾಯ ತಂದುಕೊಳ್ಳುವ ಹಂತದಲ್ಲಿ ಇದ್ದಾಳೆ. ಮಗು ಇಲ್ಲ ಎಂಬ ಕೊರಗಿನಲ್ಲಿ ಕೈ ಕುಯ್ದುಕೊಂಡಿದ್ದಾಳೆ. ಇಷ್ಟವಿಲ್ಲದಿದ್ರೂ ಮನೆಯವರಿಗಾಗಿ ಮಿಂಚುನ ದೂರ ಮಾಡಿಕೊಳ್ಳಲು ಗೌತಮ್ – ಭೂಮಿಕಾ (Gowtham Bhoomika) ಸಜ್ಜಾಗಿದ್ದಾರೆ.

ಕೈ ಕುಯ್ದುಕೊಂಡ ಮಹಿಮಾ

ಅಪ್ಪಿ ಅಮ್ಮನಿಗೆ ಕಾಲ್‌ ಮಾಡಿದ್ದಾಳೆ. ಮಹಿಮಾ ಪರಿಸ್ಥಿತಿ ಬಗ್ಗೆ ಭೂಮಿ ತಾಯಿ ಮಾತನಾಡಿದ್ದಾರೆ. ನಾವು ಯಾರೂ ಮಹಿಮಾ ಮುಂದೆ ಮಗು ವಿಚಾರ ಮಾತನಾಡುತ್ತಿಲ್ಲ. ಡಾಕ್ಟರ್‌ ಚೆನ್ನಾಗಿ ನೋಡಿಕೊಳ್ಳಲು ಹೇಳಿದ್ದಾರೆ. ಭೂಮಿ ಮಕ್ಕಳನ್ನು ನೋಡಿ, ಮಕ್ಕಳ ಮೇಲೆ ರೀತಿ ಹುಟ್ಟಿದೆ ಎಂದಿದ್ದಾರೆ. ಆ ಹೊತ್ತಿಗೆ ಮಹಿಮಾ ನೋವಿನಲ್ಲಿ ಕೈ ಕುಯ್ದುಕೊಂಡಿದ್ದಾಳೆ.

ಇದನ್ನೂ ಓದಿ: Ambareesh Birthday: ಅಂಬಿ ಮನಸ್ಸು ಸಮುದ್ರದಷ್ಟೇ ವಿಶಾಲ; ಸುಮಲತಾ ಭಾವುಕ ಪೋಸ್ಟ್!

ಇದನ್ನು ಮೊದಲು ನೋಡಿದ್ದು ಅಪೇಕ್ಷಾ. ಭೂಮಿ ತಾಯಿ ಈ ವಿಚಾರವನ್ನು ಗೌತಮ್‌ ಹಾಗೂ ಭೂಮಿಕಾಗೆ ತಿಳಿಸಿದ್ದಾರೆ. ಹೀಗಾಗಿ ಭೂಮಿನೇ ಗೌತಮ್‌ಗೆ, ಸ್ವಲ್ಪ ದಿನ ಮಿಂಚುಳನ್ನು ಮಹಿಮಾ ಬಳಿ ಇರಿಸಲು ನಿರ್ಧರಿಸಿದ್ದಾರೆ. ಭೂಮಿ ಕೂಡ ಮಿಂಚುಗೆ ರಿಕ್ವೆಸ್ಟ್‌ ಕೂಡ ಮಾಡಿದ್ದಾಳೆ.

ಸ್ವಲ್ಪ ದಿನದ ಮಟ್ಟಿಗೆ ಮಹಿಮಾ ಬಳಿ ಇರಲು ಹೇಳಿದ್ದಾಳೆ, ಆದರೆ ಮಿಂಚು ಈ ಬಗ್ಗೆ ಏನು ಹೇಳ್ತಾಳೆ ಅನ್ನೋದು ವೀಕ್ಷರಲ್ಲಿ ಇರೋ ಕುತೂಹಲ.



ಮಿಂಚುನೇ ತನ್ನ ಮಗಳು ಅನ್ನೋದು ಇದುವರೆಗೆ ಭೂಮಿ ಹಾಗೂ ಗೌತಮ್‌ಗೆ ಗೊತ್ತಿಲ್ಲ. ಹೀಗಾಗಿ ತಾವಾಗಿಯೇ ಮಗಳನ್ನು ದೂರ ಮಾಡ್ಕೊತಾರಾ ಅನ್ನೋದು ಪ್ರಶ್ನೆ ಆಗಿದೆ. ಮಿಂಚು ಕೂಡ ಈ ಮೊದಲು ತಂದೆ ತಾಯಿಯಿಂದ ದೂರ ಆಗಿದ್ದಳು. ಹೀಗಾಗಿ ಆಕೆಯ ಮನಸ್ಸಲ್ಲಿ ಮತ್ತೆ ನೆಗೆಟಿವ್‌ ಮೂಡಲು ಬಹುದು.

ಇನ್ನೊಂದು ಕಡೆ ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌ ಮಾಡುತ್ತಲೇ ಇದ್ದಾನೆ. ದಿಯಾ ಕೂಡ ಜೈದೇವ್‌ ಮೇಲೆ ಕಣ್ಣಿಟ್ಟಿದ್ದಾಳೆ.

ಮಹಿಮಾಗೆ ಮಿಂಚು ದತ್ತು ಕೊಡ್ತಾರಾ?

ಭೂಮಿ ತಾಯಿ ಈಗ ಹೊಸ ಬೇಡಿಕೆ ಇಟ್ಟಿದ್ದಾರೆ. ಮಿಂಚುಳನ್ನು ಮಹಿಮಾಗೆ ದತ್ತು ಕೊಡಿ ಎಂದಿದ್ದಾರೆ. ಇದನ್ನು ಕೇಳಿ ಭೂಮಿ ಹಾಗೂ ಗೌತಮ್‌ ಶಾಕ್‌ ಆಗಿದ್ದಾರೆ. ಅಷ್ಟೇ ಅಲ್ಲ ದೂರದಲ್ಲಿ ಕೇಳಿಸಿಕೊಂಡ ಅಪ್ಪು ಕೂಡ ಶಾಕ್‌ ಆಗಿದ್ದಾನೆ. ಇಷ್ಟೆಲ್ಲ ಆದ ಬಳಿಕ ಗೌತಮ್‌ ಹಾಗೂ ಭೂಮಿ ಈ ಬಗ್ಗೆ ಚರ್ಚಸಿದ್ದಾರೆ. ಯಾಕೆ ಈ ರೀತಿ ಹೇಳಿದ್ದರು ಅರ್ಥ ಆಗಿಲ್ಲ. ಮಹಿಮಾಗೆ ಇಷ್ಟ ಆಗೋ ಥರ ಬೇರೆ ಯಾವುದಾದರೂ ಮಗುವನ್ನು ದತ್ತು ತೆಗೆದುಕೊಳ್ಳಲಿ. ಮಿಂಚುನೇ ಏಕೆ? ಪ್ರಪಂಚದಲ್ಲಿ ಸಾವಿರ ಅನಾಥ ಮಕ್ಕಳು ಇದ್ದಾರೆ. ಅವರಿಗೂ ಆಸರೆ ಆಗುತ್ತೆ ಎಂದು ಭೂಮಿ ಮುಂದೆ ಹೇಳಿದ್ದಾನೆ ಗೌತಮ್‌. ಆದರೆ ಇದೀಗ ಪರಿಸ್ಥಿರಿ ಬದಲಾಗಿದೆ.

ಇದನ್ನೂ ಓದಿ: Amruthadhaare Serial: ಮುದ್ದಿನ ಮಗಳನ್ನು ಮನೆಯಿಂದ ಆಚೆ ಹಾಕ್ತಾನಾ ಗೌತಮ್‌? ಜೋಡಿಯ ಮುಂದಿನ ನಿರ್ಧಾರ ಏನು?

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author