ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhaare Serial) ಧಾರಾವಾಹಿಯಲ್ಲಿ ಅಂತೂ ಮಲ್ಲಿ ವಿವಾಹದ ಬಗ್ಗೆ ಗೌತಮ್ ಚರ್ಚೆ ಮಾಡಿದ್ದಾನೆ. ಪೈಲ್ವಾನ್ ಸುನಿಯನ್ನು ಮನೆಗೆ ಕರೆಸಿ ಗೌತಮ್ ಮಾತಾಡಿದ್ದೂ ಆಗಿದೆ. ಜೊತೆಗೆ ಮಲ್ಲಿ (Malli) ಮನಸಲ್ಲಿ ಪ್ರೀತಿ ಬಿತ್ತನೆಯೂ ಆಗಿದೆ. ಇದರ ಜೊತೆಗೆ ಸುನಿ ಬಗ್ಗೆ ಲಕ್ಷ್ಮೀಕಾಂತನ ಮಾತು ಅಪೇಕ್ಷಾ (Apeksha) ಅನುಮಾನಕ್ಕೆ ಕಾರಣವಾಗಿದೆ. ಅಪೇಕ್ಷಾ ಈ ಬಗ್ಗೆ ಭೂಮಿ ಜೊತೆಗೆ ಚರ್ಚೆ ಮಾಡ್ತಾಳಾ?
ಗೌತಮ್ ದಿವಾನ್ ಎದುರು ಸುನಿ
ಗೌತಮ್ ಈ ಮೊದಲೇ ಸುನಿಯನ್ನು ಭೇಟಿ ಮಾಡಿದ್ದರೂ, ಮತ್ತೊಮ್ಮೆ ಮನೆಗೆ ಕರೆಸಿ ಮಾತನಾಡಿದ್ದಾನೆ. ಈ ಮುಂಚೆ ಮಲ್ಲಿಯ ಭಾವನೇ ಗೌತಮ್ ಅನ್ನೋದು ಸುನಿಗೆ ಗೊತ್ತಿರೊದಿಲ್ಲ. ಹೀಗಾಗಿ ಮನೆಗೆ ಬಂದು ಗೌತಮ್ ನೋಡಿದೊಡನೆ ಶಾಕ್ ಆಗಿದ್ದಾನೆ. ಮಲ್ಲಿ ಬಗ್ಗೆ ಗೌತಮ್ ನೇರವಾಗಿ ಪ್ರಶ್ನೆ ಕೇಳಿದ್ದಾನೆ. ಆದರೆ ಸುನಿ ಮೊದಲಿಗೆ ಸಖತ್ ಭಯಭೀತನಾಗಿ, ಜೈದೇವ್ ಪ್ಲ್ಯಾನ್ ಬಗ್ಗೆ ಹೇಳಲೋ ಬೇಡವೋ ಅನ್ನೋ ತಾಕಲಾಟದಲ್ಲೇ ಇರುತ್ತಾನೆ. ಆದರೆ ಜೈದೇವ್ ಹೇಳೋ ಮುಂಚೆಯೇ ಮಲ್ಲಿಯನ್ನು ಸುನಿ ಪ್ರೀತಿಸಿದ್ದ. ಹೀಗಾಗಿ ಗೌತಮ್ ಮುಂದೆ ಮಲ್ಲಿ ಮದುವೆ ಆಗೋದರ ಬಗ್ಗೆ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: Annayya Kannada Serial: ಪರಶು ಮುಖವಾಡ ಬಯಲಾಗುತ್ತಾ? ರತ್ನಾಗೆ ಮಂಗಳ ಸೂತ್ರದ ಭಾಗ್ಯ ಸಿಗುತ್ತಾ?
ಮಲ್ಲಿ ಮನಸಲ್ಲಿ ಪ್ರೀತಿ ಬಿತ್ತನೆಯಾಯ್ತು!
ಇನ್ನೊಂದು ಕಡೆ ಗೌತಮ್ ಹಾಗೂ ಭೂಮಿಕಾ ಇಬ್ಬರು ಸುನಿ ಹೋದ ಬಳಿಕ ಮಲ್ಲಿ ಜೊತೆ ಕೂತು ಮಾತನಾಡಿದ್ದಾರೆ. ಮಲ್ಲಿ ಮೊದಲಿಗೆ ಸುನಿ ಜೊತೆ ಇದ್ದಾಗ ನಾನು ಸಂತೋಷವಾಗಿರುತ್ತಿದ್ದೆ, ಅದು ಸ್ನೇಹನಾ! ಪ್ರೀತೀನಾ ಗೊತ್ತಾಗ್ತ ಇಲ್ಲ ಎಂದಿದ್ದಾಳೆ. ಆಗ ಗೌತಮ್, ಸ್ನೇಹ ಇದ್ದ ಕಡೆಯೇ ಪ್ರೀತಿ ಇರೋದು ಎಂದು ಮನವರಿಕೆ ಮಾಡಿಕೊಟ್ಟಿದ್ದಾನೆ. ಮಲ್ಲಿ ಕೂಡ ಕೊನೆಯಲ್ಲಿ ಮದುವೆ ನಾಚಿ ನೀರಾಗಿ ಒಪ್ಪಿಗೆ ಕೊಟ್ಟಿದ್ದಾಳೆ.
ಸುನಿ ಬಗ್ಗೆ ಲಕ್ಷ್ಮೀಕಾಂತನ ಮಾತು ಅಪೇಕ್ಷಾ ಅನುಮಾನಕ್ಕೆ ಕಾರಣವಾಯ್ತು!
ಮತ್ತೊಂದು ಕಡೆ ಜೈದೇವ್ ಮನೆಯಲ್ಲಿ ಲಕ್ಷ್ಮೀಕಾಂತ ಕೆಡಿ ಜೈದೇವ್ ಮೇಲೆ ಒಂದು ಕಣ್ಣು ಇಟ್ಟಿದ್ದಾನೆ. ಪಾರ್ಥ ಜೊತೆ ಜೈದೇವ್ ಜೊತೆ ಇರುವ ಸುನಿ ಬಗ್ಗೆ ಚರ್ಚಿಸಿದ್ದಾನೆ. ಪಾರ್ಥ ಯಾವುದೇ ವಿಚಾರವನ್ನು ಅಷ್ಟಾಗಿ ಸೀರೆಯೆಸ್ ಆಗಿ ತೆಗೆದುಕೊಳ್ಳದೇ ಇದ್ದರೂ, ಲಕ್ಷ್ಮೀಕಾಂತ ಮಾವ ಮಾತ್ರ ಜೈದೇವ್‌ನ ಹಾಗೇ ನಂಬೋ ಹಾಗಿಲ್ಲ.
ಯಾವುದೇ ಉದ್ದೇಶ ಇಲ್ಲದೇ ಆತ ಯಾರ ಬಳಿ ಇಷ್ಟು ಕ್ಲೋಸ್ ಆಗಲ್ಲ. ಜೈದೇವ್ ಹಾಗೂ ಸುನಿ ಮೇಲೆ ಒಂದು ಕಣ್ಣಿಡು ಎಂದು ಹೇಳುತ್ತಾನೆ. ಪಾರ್ಥ ಜೊತೆ ಲಕ್ಷ್ಮೀಕಾಂತ ಚರ್ಚೆ ಮಾಡಿರುವುದನ್ನು ಅಪೇಕ್ಷಾ ಕೇಳಿಸಿಕೊಂಡಿದ್ದಾಳೆ. ಈ ಬಗ್ಗೆ ಅಪೇಕ್ಷಾಳಿಗೆ ಅನುಮಾನ ಮೂಡಿರುವಂತಿದೆ. ಈ ಬಗ್ಗೆ ಸ್ವತಃ ಅಪೇಕ್ಷಾ, ಭೂಮಿ ಹಾಗೂ ಗೌತಮ್ ಬಳಿ ಚರ್ಚಿಸುತ್ತಾಳಾ? ಸುನಿ ಮದುವೆಗೂ ಮುಂಚೆ ಗೌತಮ್ ಬಳಿ ಸಿಕ್ಕಿ ಹಾಕಿಕೊಳ್ತಾನಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Amruthadhaare Serial: ಜಯದೇವ್ ಕುತಂತ್ರ ಗೌತಮ್‌ಗೆ ಗೊತ್ತಾಗದೇ ಹೋಯ್ತಾ? ಜೆಡಿ ಅನಾಚಾರ ಒಂದೆರಡಲ್ಲ
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ