ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthadhaare Serial: ಅಜ್ಜಿ ಆಸೆ ಈಡೇರ್ಲೇ ಬೇಕು! ಗೌತಮ್- ಭೂಮಿಕಾ ಒಂದಾಗ್ಲೇ ಬೇಕು! ಅಂತ್ಯ ಹಾಡುತ್ತಾ ಅಮೃತಧಾರೆ?

Amruthadhaare Serial End: ಭೂಮಿಕಾ-ಗೌತಮ್‌ ದೂರ ಇರೋದು ಕಂಡು ಅಜ್ಜಿ ಒಂದು ಮಾಡಲು ಪಣ ತೊಟ್ಟಿದ್ದಾಳೆ. ಅಜ್ಜಿ ಆಸೆ - ಅಭಿಮಾನಿಗಳ ಆಸೆ ಈಡೇರ್ಲೇ ಬೇಕು! ಗೌತಮ್- ಭೂಮಿಕಾ ನೂರ್ಕಾಲ ಜೊತೆಯಾಗೇ ಇರ್ಬೇಕು ಎನ್ನೋ ಕ್ಯಾಪ್ಷನ್‌ ಕೂಡ ಕೊಟ್ಟಿದೆ ವಾಹಿನಿ. ಇನ್ನು ಧಾರಾವಾಹಿ ಕಥೆ ನೋಡಿ ಸೀರಿಯಲ್‌ ಅಂತ್ಯ ಕಾಣುತ್ತಾ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhaare serial ) ಕುತೂಹಲ ಘಟ್ಟ ತಲುಪಿದೆ. ಅದರಲ್ಲೂ ಭೂಮಿಕಾ-ಗೌತಮ್‌ (Bhoomika Goutham) ದೂರ ಇರೋದು ಕಂಡು ಅಜ್ಜಿ ಒಂದು ಮಾಡಲು ಪಣ ತೊಟ್ಟಿದ್ದಾಳೆ. ಅಜ್ಜಿ ಆಸೆ - ಅಭಿಮಾನಿಗಳ ಆಸೆ ಈಡೇರ್ಲೇ ಬೇಕು! ಗೌತಮ್- ಭೂಮಿಕಾ ನೂರ್ಕಾಲ ಜೊತೆಯಾಗೇ ಇರ್ಬೇಕು ಎನ್ನೋ ಕ್ಯಾಪ್ಷನ್‌ (Caption) ಕೂಡ ಕೊಟ್ಟಿದೆ ವಾಹಿನಿ. ಇನ್ನು ಧಾರಾವಾಹಿ ಕಥೆ ನೋಡಿ ಸೀರಿಯಲ್‌ ಅಂತ್ಯ ಕಾಣುತ್ತಾ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ಜೈದೇವ್‌ ಪ್ಲ್ಯಾನ್‌ ಸಕ್ಸೆಸ್‌

ಜೈದೇವ್‌ ಪ್ಲ್ಯಾನ್‌ ಸಕ್ಸೆಸ್‌ ಆಗಿದೆ. ಅಜ್ಜಿ ಆಸ್ತಿಗೆಲ್ಲಾ‌ ಈಗ ಕೇಡಿನೇ ಒಡೆಯ. ಇತ್ತ ಅಜ್ಜಿಗೆ ತನ್ನ ಆಸ್ತಿಯ ಮೇಲಿದ್ದ ಹಕ್ಕನ್ನೇ ಜೈದೇವ್ (Jaidev) ದುರುಪಯೋಗ ಮಾಡಿಕೊಂಡು, ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿರುವುದು ಎಲ್ಲರಿಗೂ ದೊಡ್ಡ ಶಾಕ್ ನೀಡಿದೆ.

ಇದನ್ನೂ ಓದಿ: Kannada Serial TRP: ಫೀನಿಕ್ಸ್​ನಂತೆ ಎದ್ದು ಬಂದ ಅಮೃತಧಾರೆ: ಟಿಆರ್​ಪಿಯಲ್ಲಿ ಜಿಗಿತ, ಆದರೆ..

. ಅದರ ಜೊತೆಗೆ ಅಜ್ಜಿ ಒಂದು ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ. ಅನಾರೋಗ್ಯ ಅಂತ ಸುಳ್ಳು ಹೇಳಿ, ಭಾಗ್ಯಮ್ಮ ಜೊತೆ ಡ್ರಾಮ ಮಾಡಿ ಅಂತೂ ಗೌತಮ್‌ ಕುಟುಂಬವನ್ನು ಕರೆಸಿಕೊಂಡಿದ್ದಾರೆ ಅಜ್ಜಿ. ಪ್ಲ್ಯಾನ್‌ ಮಾಡಿ ಮಕ್ಕಳು ಮತ್ತು ಗೌತಮ್‌, ಭೂಮಿಕಾ ಒಂದಾಗೋ ಹಾಗೇ ಮಾಡ್ತಿದ್ದಾರೆ ಅಜ್ಜಿ.



ದಿವಾನ್ ಮನೆತನದ ಹಿರಿಯ ಜೀವ ಅಜ್ಜಿ ಮರಳಿ ಬಂದಿದ್ದು ಸದ್ಯ ಜೈದೇವ್ ದೆಸೆಯಿಂದ ವೃದ್ಧಾಶ್ರಮದಲ್ಲಿದ್ದಾಳೆ. ಆದರೆ, ದುಃಖದಲ್ಲಿರುವ ಅಜ್ಜಿಗೆ ಭಾಗ್ಯಮ್ಮ ಸಿಕ್ಕಿದ್ದು, ಮಾತನಾಡಿದ್ದು ಕಂಡು ಖುಷಿಯಾಗಿದೆ. ಭಾಗ್ಯಮ್ಮ ಮತ್ತು ಆನಂದ್ ಮೂಲಕ ಗೌತಮ್ ಮತ್ತು ಭೂಮಿಕಾಗೆ ವಿಚಾರ ತಲುಪಿಸಿರುವ ಅಜ್ಜಿ ಇಬ್ಬರನ್ನೂ ಜೊತೆಯಲ್ಲಿ ನೋಡುವುದೇ ನನ್ನ ಕೊನೆಯಾಸೆ ಎಂದು ಹೇಳಿದ್ದಳು. ಅಜ್ಜಿಯ ಆಸೆ ಮತ್ತು ಅನಾರೋಗ್ಯದ ಸುದ್ದಿ ಕೇಳಿ ಗೌತಮ್ ಮತ್ತು ಭೂಮಿಕಾ ಚಿಂತೆಯಲ್ಲಿ ಮುಳುಗಿ ದಿಕ್ಕು ತೋಚದಂತಾಗಿ ಮಕ್ಕಳನ್ನು ಕರೆದುಕೊಂಡು ಅಜ್ಜಿ ಬಳಿ ಬಂದಿದ್ದಾರೆ.

ಸೀರಿಯಲ್ ಕಥೆ ಬಹುತೇಕ ಅಂತ್ಯ?

ಈಗಲೋ ಆಗಲೋ ಎಂಬಂತೆ ಇರುವುದಾಗಿ ಹೇಳುವ ಅಜ್ಜಿ ಕೈಯಲ್ಲಿ ಜೀವ ಹಿಡಿದುಕೊಂಡು ಕಾಯುತ್ತಿದ್ದೇನೆ ಆದಷ್ಟು ಬೇಗ ಭೂಮಿಕಾನ‌ ಕರೆದುಕೊಂಡು ಬಾ ಗುಂಡು ಎಂದು ನಾಟಕ ಮಾಡಿ ಗುಂಡಗೆ ಕಾಲ್‌ ಮಾಡಿದ್ದಳು ಅಜ್ಜಿ. ಅದರಂತೆ ಮಕ್ಕಳು ಅಪ್ಪ ಅಮ್ಮ ಜೊತೆ ಅಜ್ಜಿ ಮೀಟ್‌ ಮಾಡಲು ಹೋಗಿದ್ದಾರೆ. ಇನ್ನೂ ಇಬ್ಬರು ಒಂದು ವೇಳೆ ಒಂದಾದರೆ ಸೀರಿಯಲ್ ಕಥೆ ಬಹುತೇಕ ಮುಗಿದಂತೆಯೇ ಹೀಗಾಗಿ ಅಮೃತಧಾರೆ ಮುಗಿಯುವ ಹಂತಕ್ಕೆ ಬಂದಿದೆಯಾ ಎನ್ನುವ ಅನುಮಾನ ಕೂಡ ಸದ್ಯ ಹಲವರನ್ನು ಕಾಡುತ್ತಿದೆ.

ಇದನ್ನೂ ಓದಿ: Kannada Serial TRP: ಕುಸಿದ ಅಣ್ಣಯ್ಯ ಧಾರಾವಾಹಿ ಟಿಆರ್​ಪಿ: ನಂಬರ್ 1 ಧಾರಾವಾಹಿ ಇದುವೇ ನೋಡಿ

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author