ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

BBK 11: ಇಂದು ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ: ಎಷ್ಟು ಗಂಟೆಗೆ?, ಆನ್ಲೈನ್ನಲ್ಲಿ ನೋಡೋದು ಹೇಗೆ?

ಬಿಗ್ ಬಾಸ್ ಕನ್ನಡ ಸೀಸನ್ 11ರ ಫೈನಲ್ನಲ್ಲಿ ಮೋಕ್ಷಿತಾ ಪೈ, ತ್ರಿವಿಕ್ರಮ್, ಹನುಮಂತ, ಉಗ್ರಂ ಮಂಜು, ಭವ್ಯಾ ಗೌಡ, ರಜತ್ ಇದ್ದಾರೆ. ಇವರಲ್ಲಿ ಒಬ್ಬರಷ್ಟೆ ವಿಜೇತರಾಗಿ ಹೊರಹೊಮ್ಮಲಿದ್ದಾರೆ. ಆ ವಿಜೇತ ಯಾರಾಗಲಿದ್ದಾರೆ ಎಂಬುದನ್ನು ಜನರ ಮತಗಳು ನಿರ್ಧಾರ ಮಾಡುತ್ತವೆ.

ಇಂದು ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ: ಎಷ್ಟು ಗಂಟೆಗೆ?, ಆನ್ಲೈನ್ನಲ್ಲಿ ನೋಡೋದು ಹೇಗೆ?

BBK 11 Final

Profile Vinay Bhat Jan 25, 2025 7:05 AM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಶೋ ಮುಕ್ತಾಯದ ಹಂತಕ್ಕೆ ಬಂದಿದ್ದು, ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಇಂದು ಜನವರಿ 25 ಹಾಗೂ ನಾಳೆ 26ರಂದು ಬಿಗ್ ಬಾಸ್ ಸೀಸನ್‌ 11 ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಮೂಲಗಳ ಪ್ರಕಾರ ಇಂದು ಎರಡು ಎಲಿಮಿನೇಷನ್‌ ಪ್ರಕ್ರಿಯೆ ನಡೆಯಲಿದೆ. ಜನವರಿ 26ರ ಭಾನುವಾರ ಬಿಗ್‌ ಬಾಸ್ ಸೀಸನ್ 11 ಕಪ್ ಗೆದ್ದವರು ಯಾರು ಅನ್ನೋದು ಗೊತ್ತಾಗಲಿದೆ. ಭಾನುವಾರ ಗಣರಾಜ್ಯೋತ್ಸವ ಇದೆ. ಈ ವಿಶೇಷ ದಿನದಂದೇ ಫಿನಾಲೆ ನಡೆಯುತ್ತಿದೆ.

ಬಿಗ್ ​ಬಾಸ್​ ಕನ್ನಡ ಸೀಸನ್​ 11ರ ಫೈನಲ್​ನಲ್ಲಿ ಮೋಕ್ಷಿತಾ ಪೈ, ತ್ರಿವಿಕ್ರಮ್, ಹನುಮಂತ, ಉಗ್ರಂ ಮಂಜು, ಭವ್ಯಾ ಗೌಡ, ರಜತ್ ಇದ್ದಾರೆ. ಇವರಲ್ಲಿ ಒಬ್ಬರಷ್ಟೆ ವಿಜೇತರಾಗಿ ಹೊರಹೊಮ್ಮಲಿದ್ದಾರೆ. ಆ ವಿಜೇತ ಯಾರಾಗಲಿದ್ದಾರೆ ಎಂಬುದನ್ನು ಜನರ ಮತಗಳು ನಿರ್ಧಾರ ಮಾಡುತ್ತವೆ. ಬಿಗ್ ಬಾಸ್ ಮನೆಯಲ್ಲಿ ಉಳಿದ 6 ಸ್ಪರ್ಧಿಗಳಲ್ಲಿ ಒಬ್ಬರಿಗೆ ಸೀಸನ್ 11ರ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.

ಎಲ್ಲಾ ಸೀಸನ್‌ನಂತೆಯೇ ಯಾವುದೇ ಬದಲಾವಣೆ ಇಲ್ಲದೆ, ಗೆದ್ದ ಸ್ಪರ್ಧಿಗಳಿಗೆ ಈ ಬಾರಿ ಕೂಡ ಟ್ರೋಫಿಯೊಂದಿಗೆ 50 ಲಕ್ಷ ರೂಪಾಯಿ ನಗದು ಬಹುಮಾನವಾಗಿ ಸಿಗಲಿದೆ. ಇದರ ಜೊತೆಗೆ ಸ್ಪಾನ್ಸರ್ಸ್ ಕಡೆಯಿಂದ ಒಂದಿಷ್ಟು ಗಿಫ್ಟ್ ಹ್ಯಾಂಪರ್ಸ್ ಮತ್ತು ಸಣ್ಣ ಮೊತ್ತ ಪಡೆಯಲಿದ್ದಾರೆ.

ಬಿಬಿಕೆ 11ನ ಪ್ರತಿ ದಿನ ಎಪಿಸೋಡ್ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿತ್ತು. ವೀಕೆಂಡ್ ಎಪಿಸೋಡ್ ರಾತ್ರಿ 9 ಗಂಟೆಗೆ ಪ್ರಸಾರ ಕಾಣುತ್ತಿತ್ತು. ಆದರೆ, ಫಿನಾಲೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಯಿಂದ ಫಿನಾಲೆ ಪ್ರಸಾರ ಆರಂಭ ಆಗಲಿದೆ. ಆನ್​ಲೈನ್​ನಲ್ಲಿ ನೋಡಲು ಇಚ್ಚಿಸುವವರು ಜಿಯೋ ಸಿನಿಮಾದಲ್ಲಿ ಲೈವ್ ವೀಕ್ಷಿಸಬಹುದು.

ಇನ್ನು ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ನೀವು ಅಮೂಲ್ಯ ಮತದಾನ ಮಾಡಬೇಕು. ಜಿಯೋ ಸಿನಿಮಾ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡು ವೋಟ್ ಮಾಡಬೇಕು. ನಿಮ್ಮ ನೆಚ್ಚಿನ ಸ್ಪರ್ಧಿ ಮೇಲೆ ವೋಟ್ ಬಟನ್ ಕ್ಲಿಕ್ಕಿಸಿದಲ್ಲಿ ಅವರ ಖಾತೆಗೆ ಒಂದು ಮತ ಸೇರಿಕೊಳ್ಳುತ್ತದೆ. ಹೀಗೆ ಒಬ್ಬ ವ್ಯಕ್ತಿ ಒಂದು ದಿನದಲ್ಲಿ ನೂರು ಮತಗಳನ್ನು ಮಾಡಬಹುದಾಗಿರುತ್ತದೆ. ನೆನಪಿರಲಿ ವೋಟ್ ಮಾಡುವ ಅವಕಾಶ ಇಂದು (ಶನಿವಾರ) ಮಧ್ಯಾಹ್ನದ ವರೆಗೆ ಮಾತ್ರವೇ ಇದೆ.

BBK 11: ಎಲ್ಲರ ಮುಂದೆ ಕೈಮುಗಿದು ಕ್ಷಮೆ ಕೇಳಿದ ಭವ್ಯಾ ಗೌಡ: ಕಾರಣವೇನು?