BBK 11: ಎಲ್ಲರ ಮುಂದೆ ಕೈಮುಗಿದು ಕ್ಷಮೆ ಕೇಳಿದ ಭವ್ಯಾ ಗೌಡ: ಕಾರಣವೇನು?
ನಾಳೆ ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೇ ನಡೆಯಲಿದೆ. ಭಾನುವಾರ ವಿಜೇತರು ಯಾರು ಎಂಬುದು ಘೋಷಣೆ ಆಗಲಿದೆ. ಇದಕ್ಕೂ ಮುನ್ನ ಭವ್ಯಾ ಗೌಡ ಅವರು ನಾನು ಆಡಿರುವ ಆಟಗಳಿಂದ, ಮಾತುಗಳಿಂದ, ವರ್ತನೆಯಿಂದ ಬೇಸರ ಆಗಿದ್ದಾರೆ ನನ್ನನ್ನು ಕ್ಷಮಿಸಿ ಬಿಡಿ ಎಂದು ಕೈ ಮುಗಿದು ವೋಟ್ಗಾಗಿ ಮನವಿ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇನ್ನೇನು ಕೆಲವೇ ಒಂದು ದಿನಗಳಲ್ಲಿ ಶೋ ಮುಕ್ತಾಯಗೊಳ್ಳಲಿದ್ದು, ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಸದ್ಯ ಮನೆಯಲ್ಲಿ ಆರು ಮಂದಿ ಇದ್ದಾರಷ್ಟೆ. ತ್ರಿವಿಕ್ರಮ್, ಹನುಮಂತ, ಭವ್ಯಾ ಗೌಡ, ರಜತ್, ಮೋಕ್ಷಿತಾ, ಉಗ್ರಂ ಮಂಜು ಉಳಿದುಕೊಂಡಿದ್ದಾರೆ. ಈ 6 ಸ್ಪರ್ಧಿಗಳಲ್ಲಿ ಯಾರು ವಿನ್ನರ್ ಆಗುತ್ತಾರೆ ಎಂಬುದು ಭಾನುವಾರ ಬಹಿರಂಗಗೊಳ್ಳಲಿದೆ. ಗೆದ್ದವರಿಗೆ ಟ್ರೋಫಿ ಜೊತೆಗೆ ದೊಡ್ಡ ಮಟ್ಟದ ಹಣ ಕೂಡ ಸಿಗಲಿದೆ.
ಇದಕ್ಕೂ ಮುನ್ನ ಎಲ್ಲ ಆರು ಸ್ಪರ್ಧಿಗಳು ನಮ್ಮನ್ನು ಗೆಲ್ಲಿಸಿ ಎಂದು ಬಿಗ್ ಬಾಸ್ ಮನೆಯೊಳಗೆನೇ ಪ್ರಚಾರ ಮಾಡಿದ್ದಾರೆ. ಇದಕ್ಕಾಗಿ ಬಿಗ್ ಬಾಸ್ ಗಾರ್ಡನ್ ಏರಿಯಾದಲ್ಲಿ ದೊಡ್ಡ ಸೆಟಪ್ ಕೂಡ ಮಾಡಿದ್ದರು. ಆರು ಸ್ಪರ್ಧಿಗಳಿಗೆ ಬಿಗ್ ಬಾಸ್ ಮನೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಬಿಗ್ ಬಾಸ್ ಜರ್ನಿ ಹೇಗಿತ್ತು, ಇಲ್ಲಿನ ಅಡೆತಡೆಗಳು ಏನು, ಯಾರು ಟಾರ್ಗೆಟ್ ಮಾಡಿದರು, ಟಾಸ್ಕ್ಗಳನ್ನು ಹೇಗೆಲ್ಲಾ ಆಡಲಾಯಿತು ಎನ್ನುವ ಮಾಹಿತಿಯನ್ನು ಅಭಿಮಾನಿ ದೇವರುಗಳ ಜೊತೆ ಶೇರ್ ಮಾಡಿಕೊಳ್ಳಬೇಕು. ನನಗೆ ವೋಟ್ ಮಾಡಿ ಗೆಲ್ಲಿಸಿ ಎಂದು ತಮ್ಮದೇ ಮಾದರಿಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ವೋಟ್ ಕೇಳಬೇಕು.
ಇದಕ್ಕಾಗಿ ಬಿಗ್ ಬಾಸ್ ಗಾರ್ಡರ್ ಏರಿಯಾ ಪೂರ್ತಿ ಅಭಿಮಾನಿಗಳನ್ನು ಕರೆಸಿದ್ದರು. ಅವರು ತಮ್ಮ ನೆಚ್ಚಿನ ಸ್ಪರ್ಧಿಗಳ ಪೋಸ್ಟರ್ ಹಿಡಿದು ಬಂದಿದ್ದಾರೆ. ಫಿನಾಲೆ ಕಂಟೆಸ್ಟೆಂಟ್ಗಳು ಒಬ್ಬೊಬ್ಬರಾಗಿ ಗಾರ್ಡರ್ ಏರಿಯಾದಲ್ಲಿರುವ ಕಟಕಟೆಯಲ್ಲಿ ನಿಂತು ತಮ್ಮ ಜರ್ನಿಯ ಬಗ್ಗೆ ಹೇಳಿ ವೋಟ್ ಮಾಡುವಂತೆ ಕೇಳಿಕೊಳ್ಳಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ.
ಅದರಂತೆ ಭವ್ಯಾ ಗೌಡ ಅವರು, ನಾನು ಆಡಿರುವ ಆಟಗಳಿಂದ, ಮಾತುಗಳಿಂದ, ವರ್ತನೆಯಿಂದ ಬೇಸರ ಆಗಿದ್ದಾರೆ ನನ್ನನ್ನು ಕ್ಷಮಿಸಿ ಬಿಡಿ ಎಂದು ಕೈ ಮುಗಿದು ಕರ್ನಾಟಕದ ಜನತೆಯೆ ಮುಂದೆ ವೋಟ್ಗಾಗಿ ಮನವಿ ಮಾಡಿದ್ದಾರೆ. ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಮೂರು ಬಾರಿ ಕ್ಯಾಪ್ಟನ್ ಆದ ಏಕೈಕ ಸ್ಪರ್ಧಿ ಎಂದರೆ ಅದು ಭವ್ಯಾ. ಆದರೆ, ಭವ್ಯಾ 3 ಬಾರಿ ಕ್ಯಾಪ್ಟನ್ ಆದರೂ ಆರೋಪಗಳು ಅವರನ್ನ ಬಿಟ್ಟಿಲ್ಲ. ಬೇರೆಯವರ ಸಹಾಯದಿಂದ ಮೊದಲ ಬಾರಿಗೆ ಭವ್ಯ ಕ್ಯಾಪ್ಟನ್ ಆದರು. 2ನೇಯದು ಬಿಟ್ಟರೇ, 3ನೇ ಬಾರಿ ಮೋಸ ಮಾಡಿ ಕ್ಯಾಪ್ಟನ್ ಆದರು ಎನ್ನುವ ಆರೋಪಗಳಿವೆ. ಈ ಎಲ್ಲ ಕಾರಣಗಳಿಂದ ಇವರು ಜನತೆಯ ಮುಂದೆ ಕ್ಷಮೆ ಕೇಳಿದ್ದಾರೆ.
BBK 11 Finale, Rajath Kishan: ತಪ್ಪು ಮಾಡೋದು ಸಹಜ ಕಣೊ, ತಿದ್ದಿ ನಡೆಯೋನು ರಜತ ಕಣೊ ಎಂಬ ಬುಜ್ಜಿ