ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Muddu Sose Serial: ಮುದ್ದು ಸೊಸೆ ಹೊಸ ಪ್ರೊಮೋ ರಿಲೀಸ್: ತ್ರಿವಿಕ್ರಮ್ ಮಾತಿನ ಶೈಲಿ ಕೇಳಿ ಫಿದಾ ಆದ ಫ್ಯಾನ್ಸ್

Muddu Sose Kannada Serial: ಕಲರ್ಸ್ ಕನ್ನಡಲ್ಲಿ ಮತ್ತೊಂದು ಹೊಸ ಧಾರಾವಾಹಿ ಬರುತ್ತಿದೆ. ಈ ಹೊಸ ಧಾರಾವಾಹಿಗೆ ಮುದ್ದು ಸೊಸೆ ಎಂದು ಹೆಸರಿಡಲಾಗಿದೆ. ಈ ಸೀರಿಯಲ್ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ ಮುಖ್ಯಭೂಮಿಕೆಯಲ್ಲಿ ನಾಯಕನಾಗಿ ಕಾಣಿಸಿಕೊಂಡರೆ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಾಯಕಿದ್ದಾರೆ.

ಮುದ್ದು ಸೊಸೆ: ತ್ರಿವಿಕ್ರಮ್ ಮಾತಿನ ಶೈಲಿ ಕೇಳಿ ಫಿದಾ ಆದ ಫ್ಯಾನ್ಸ್

Trivikram Muddu Sose

Profile Vinay Bhat Mar 12, 2025 7:03 AM

ಕಲರ್ಸ್​ ಕನ್ನಡದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಒಂದು ಶುರುವಾಗಲಿದೆ. ಈ ಸೀರಿಯಲ್​ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್​ ಮುಖ್ಯಭೂಮಿಕೆಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹೊಸ ಧಾರಾವಾಹಿಗೆ ಮುದ್ದು ಸೊಸೆ (Muddu Sose Kannada Serial) ಎಂದು ಹೆಸರಿಡಲಾಗಿದೆ. ಇತ್ತೀಚೆಗಷ್ಟೆ ಪ್ರೋಮೋ ಕೂಡ ರಿಲೀಸ್​ ಆಗಿತ್ತು. ಇದೀಗ ಕಲರ್ಸ್ ಕನ್ನಡ ಮತ್ತೊಂದು ಹೊಸ ಪ್ರೊಮೋ ಬಿಡುಗಡೆ ಮಾಡಿದೆ.

ಈ ಸೀರಿಯಲ್​ಗೆ ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ. ಮೊದಲ ಪ್ರೋಮೋದಲ್ಲಿ ತ್ರಿವಿಕ್ರಮ್ ಹೆಣ್ಣು ನೋಡುವ ಗೆಟಪ್​ನಲ್ಲಿ ಕಾಣಿಸಿಕೊಂದ್ದರು. ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ಈಗ ಹೊಸ ಪ್ರೊಮೋದಲ್ಲಿ ಹೀರೋ-ಹೀರೋಯಿನ್‌ ಮದುವೆ ನಡೆಯುತ್ತಿರುತ್ತದೆ. ಇನ್ನೂ ಹತ್ತನೇ ಕ್ಲಾಸ್‌ ಓದುತ್ತಿದ್ದ ನಾಯಕಿ ವಿದ್ಯಾಗೆ ಈಗಲೇ ಮದುವೆ ಆಗೋ ಆಸೆ ಇರೋದಿಲ್ಲ. ಈ ಮದುವೆ ಬೇಡ ಎಂದರೂ ಯಾರೂ ಅವಳ ಮಾತನ್ನು ಕೇಳಲು ರೆಡಿ ಇರೋದಿಲ್ಲ. ಹೀಗಾಗಿ ಅವಳು ಮದುವೆ ದಿನ ಪೊಲೀಸರಿಗೆ ಫೋನ್‌ ಮಾಡಿ, ಬಾಲ್ಯವಿವಾಹ ಆಗುತ್ತಿದೆ ಎಂದು ವಿಷಯ ತಿಳಿಸುತ್ತಾಳೆ. ಇನ್ನೇನು ಹೀರೋ, ವಿದ್ಯಾಗೆ ತಾಳಿ ಕಟ್ತಾನೆ ಎನ್ನುವಷ್ಟರಲ್ಲಿ ಪೊಲೀಸರ ಆಗಮನ ಆಗುತ್ತದೆ.

ಹಸೆಮಣೆ ಮೇಲೆ ಕೂತಿದ್ದ ತ್ರಿವಿಕ್ರಮ್​ಗೆ ಅರ್ಚಕರು ದೇವರಿಗೆ ನಮಸ್ಕಾರ ಮಾಡಿ ಎಂದಾಗ, ನನಗೆ ಹಾಗೂ ನಮ್ಮ ನೆರೆಯವರಿಗೆ ನಮ್ಮ ಅಪ್ಪಯ್ಯನ ದೇವರು. ಅವರಿಗೆ ಆಲ್ ರೆಡಿ ನಮಸ್ಕಾರ ಮಾಡಿ ಆಗಿದೆ. ನೀವೂ ಮುಂದುವರೆಸಿ ಎಂದಿದ್ದಾರೆ. ಹಾಗೇ ತಾಳಿ ಕಟ್ಟುವ ಸಮಯಕ್ಕೆ ಬಂದ ಪೊಲೀಸರು, ಇಷ್ಟು ಚಿಕ್ಕವಯಸ್ಸಿಗೆನೆ ಮದುವೆ ಮಾಡಿಕೊಳ್ಳುತ್ತಿರುವುದು ಅಪರಾಧ ಎಂದು ತ್ರಿವಿಕ್ರಮ್ ತಂದೆಯನ್ನ ಅರೆಸ್ಟ್ ಮಾಡಿಕೊಂಡು ಕರೆದುಕೊಂಡು ಹೋಗಿದ್ದಾರೆ.



ಈ ವೇಳೆ, ಈ ಮದುವೆನಾ ನಿಲ್ಲಿಸೋದಕ್ಕೆ ಪೊಲೀಸರನ್ನ ಕರೆಸಿ, ನಮ್ಮ ಅಪ್ಪಯ್ಯನ ಅರೆಸ್ಟ್ ಆಗುವಂತೆ ಮಾಡಿರೋರು ಇಲ್ಲಿನೇ ಇದ್ದೀರಾ ಅಂತ ಗೊತ್ತು. ಅದು ಯಾವನೇ ಆಗಿದ್ದರು ಸುಮ್ಮನೆ ಬಿಡಕ್ಕಿಲ್ಲ. ಏನಮ್ಮಿ ಈ ಜನ್ಮದಲ್ಲಿ ನೀನೆ ನನ್ನ ಹೆಂಡತಿ ಎಂಬ ಡೈಲಾಗ್ ಹೊಡೆದಿದ್ದಾರೆ ತ್ರಿವಿಕ್ರಮ್. ಇವರ ಹಳ್ಳಿ ಸೊಗಡಿನ ಮಾತಿನ ಶೈಲಿ ಕಂಡು ಅಭಿಮಾನಿ ಫಿದಾ ಆಗಿದ್ದು, ಹೊಸ ಧಾರಾವಾಹಿಗಾಗಿ ಕಾದು ಕುಳಿತಿದ್ದಾರೆ. ಅಂದಹಾಗೆ ಮುದ್ದು ಸೊಸೆ ತಮಿಳು ಧಾರಾವಾಹಿಯ ರಿಮೇಕ್​ ಆಗಿದೆ.

Kiran Raj Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ಕಿರಣ್ ರಾಜ್: ಝೀ ಕನ್ನಡದಲ್ಲಿ ಬರುತ್ತಿದೆ ಕರ್ಣ ಧಾರಾವಾಹಿ