Kiran Raj Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ಕಿರಣ್ ರಾಜ್: ಝೀ ಕನ್ನಡದಲ್ಲಿ ಬರುತ್ತಿದೆ ಕರ್ಣ ಧಾರಾವಾಹಿ
ಕಿರಣ್ ರಾಜ್ ಸದ್ಯ ಹೊಸ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ಕಲರ್ಸ್ ಕನ್ನಡದ ಬದಲು ಝೀ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕರ್ಣನಾಗಿ ಮತ್ತೆ ಕಿರುತೆರೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಅವರು ಸಜ್ಜಾಗಿದ್ದಾರೆ. ಝೀ ಕನ್ನಡ ವಾಹಿನಿಯು ಕರ್ಣ ಎಂಬ ಹೊಸ ಧಾರಾವಾಹಿಯನ್ನು ಶೀಘ್ರದಲ್ಲೇ ಪ್ರಸಾರ ಮಾಡಲಿದೆ.

Kiran Raj Karna Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿ (Serial) ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟ ಕಿರಣ್ ರಾಜ್ಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಇವರ ಸ್ಟೈಲ್, ಮಾತುಗಾರಿಕೆಗೆ ಅನೇಕ ಮಂದಿ ಫ್ಯಾನ್ಸ್ ಇದ್ದಾರೆ. ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೆ ಹಿರಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಆದರೆ, ಅವರಿಗೆ ಹೆಚ್ಚು ಯಶಸ್ಸು ತಂದುಕೊಟ್ಟಿದ್ದು ಸೀರಿಯಲ್. ಆದರೆ, ಕಳೆದ ಕೆಲವು ಸಮಯದಿಂದ ಇವರು ಹೆಚ್ಚಾಗಿ ಎಲ್ಲೂ ಕಾಣಿಸುತ್ತಿರಲಿಲ್ಲ. ಇದೀಗ ಇವರು ಮತ್ತೆ ಕಿರುತೆರೆಗೆ ಮರಳಿದ್ದಾರೆ.
ಹೌದು, ಕಿರಣ್ ರಾಜ್ ಸದ್ಯ ಹೊಸ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ಕಲರ್ಸ್ ಕನ್ನಡದ ಬದಲು ಝೀ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕರ್ಣನಾಗಿ ಮತ್ತೆ ಕಿರುತೆರೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಅವರು ಸಜ್ಜಾಗಿದ್ದಾರೆ. ಝೀ ಕನ್ನಡ ವಾಹಿನಿಯು ಹೊಸ ಧಾರಾವಾಹಿಯನ್ನು ಶೀಘ್ರದಲ್ಲೇ ಪ್ರಸಾರ ಮಾಡಲಿದೆ. ಈಗಾಗಲೇ ಹೊಸ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದೆ. ಕುಟುಂಬದವರೆಲ್ಲ ಕುಳಿತು ನೋಡುವಂತ ಫ್ಯಾಮಿಲಿ ಡ್ರಾಮಾ ಕಥೆ ಹೊಂದಿರುವ ಧಾರಾವಾಹಿಯನ್ನು ಪರಿಚಯಿಸುತ್ತಿದೆ. ಕಿರಣ್ ರಾಜ್ ಈ ಹೊಸ ಧಾರಾವಾಹಿಯಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಅನಾವರಣಗೊಳಿಸಿರುವ ಝೀ ಕನ್ನಡ, ‘‘ತನ್ನವರ ಮಧ್ಯಾನೇ ಅನಾಥವಾಗಿರೋ ಮನೆ ಮಗನ ಕಥೆ!’’ ಕರ್ಣ, ಅತೀ ಶೀಘ್ರದಲ್ಲಿ ಎಂದು ಬರೆದುಕೊಂಡಿದೆ.
ಮನೆಯಲ್ಲಿ ಯಾರು ಯಾವುದೇ ಕೆಲಸ ಹೇಳಿದರೂ ಸಹ ಇಲ್ಲ ಎನ್ನದೆ ಮಾಡಿಕೊಡುವ ಗುಣ ಕರ್ಣನದು. ಕರ್ಣ ದೊಡ್ಡ ಸ್ತ್ರೀರೋಗ ತಜ್ಞ. ಅವನಿಗೆ ಅವಾರ್ಡ್ ಕೂಡ ಬಂದಿದೆ. ಅವನು ಹೊರಗೆ ದೊಡ್ಡ ವೈದ್ಯನಾಗಿರಬಹುದು, ಆದರೆ, ಮನೆಯಲ್ಲಿ ಆತ ಕೆಲಸ ಮಾಡುವ ವ್ಯಕ್ತಿಯಷ್ಟೇ! ಹೌದು, ಆತನನ್ನು ಮನೆಯಲ್ಲಿ ಎಲ್ಲರೂ ಕೆಲಸದವರಂತೆ ನೋಡುತ್ತಾರೆ. ಏನೇ ಬೇಕಿದ್ದರೂ ಆತನ ಬಳಿ ಹೇಳುತ್ತಾರೆ. ಚಪ್ಪಲಿ ಹೊಲಸಿಕೊಂಡು ಬರುವ ಕೆಲಸವೂ ಆತನದ್ದೇ.
ಕರ್ಣನನ್ನು ಈ ರೀತಿ ನೋಡುವುದಕ್ಕೆ ಕಾರಣವೂ ಇದೆ. ಕರ್ಣನ ತಂದೆ ಈತ ಮಗ ಎಂದು ಒಪ್ಪಿಕೊಳ್ಳಲು ರೆಡಿ ಇಲ್ಲ. ಆತನನ್ನು ತಿಪ್ಪೆಯಿಂದ ಎತ್ತಿಕೊಂಡು ಬಂದಿದ್ದು ಎಂದು ಹೇಳುತ್ತಾನೆ. ಮನೆಯಲ್ಲಿ ಯಾವುದೇ ಕೆಲಸ ಆಗಬೇಕಿದ್ದರೂ ಆತನಿಗೆ ಹೇಳಲಾಗುತ್ತದೆ. ಅಜ್ಜಿ ಮತ್ತು ಅಮ್ಮ ಬಿಟ್ಟರೆ ಕರ್ಣನನ್ನು ಇಷ್ಟಪಡುವವರು ಆ ಮನೆಯಲ್ಲಿ ಯಾರೂ ಇಲ್ಲ. ಈ ರೀತಿಯಲ್ಲಿ ಧಾರಾವಾಹಿ ಮೂಡಿ ಬರುತ್ತಿದೆ. ಸದ್ಯ ಧಾರಾವಾಹಿ ಯಾವಾಗ ಬರುತ್ತದೆ ಎಂದು ಇನ್ನೂ ರಿವೀಲ್ ಮಾಡಿಲ್ಲ. ಕರ್ಣ ಪ್ರೋಮೋ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ಜೊತೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Bhagya Lakshmi Serial: ಕೂಲಿಂಗ್ ಗ್ಲಾಸ್ ಹಾಕಿ ಲಕ ಲಕನೆ ಮಿಂಚಿದ ಭಾಗ್ಯ-ಕುಸುಮಾ: ಏನಿದು ಹೊಸ ಅವತಾರ?