BBK 11: ಮೋಸದಾಟ ಆಡಿದ ಧನರಾಜ್ಗೆ ಬಿಗ್ ಬಾಸ್ ನೀಡಿದ ಶಿಕ್ಷೆ ಏನು?
ಬಿಗ್ ಬಾಸ್ ತೋರಿಸಿರುವ ವಿಡಿಯೋವನ್ನು ನೋಡಿರುವ ಧನರಾಜ್, ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಬಿಗ್ಬಾಸ್ ನನ್ನಿಂದ ಅಷ್ಟು ದೊಡ್ಡ ತಪ್ಪಾಗಿದೆ ಅಂತ ಗೊತ್ತಾಗಲಿಲ್ಲ. ಆ ಗೆಲುವು ನನ್ನದು ಅಲ್ಲ ಅಂತ ಅನಿಸುತ್ತಿದೆ. ನನ್ನನ್ನೂ ನಾಮಿನೇಟ್ ಮಾಡಿಕೊಂಡೆ ಪ್ರಕ್ರಿಯೆ ಶುರು ಮಾಡಿ ಪ್ಲಿಸ್ ಅಂತ ಕೇಳಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಿನ್ನೆಯ (ಬುಧವಾರ) ಎಪಿಸೋಡ್ನಲ್ಲಿ ಮಿಡ್ ವೀಕ್ ಎಲಿಮಿನೇಷನ್ ಮೂಲಕ ಓರ್ವ ಸ್ಪರ್ಧಿ ಆಚೆ ಹೋಗಬೇಕಿತ್ತು. ಆದರೆ, ಅಂತಿಮ ಹಂತದಲ್ಲಿ ಬಿಗ್ ಬಾಸ್ ಬಿಗ್ ಟ್ವಿಸ್ಟ್ ಕೊಟ್ಟು, ಮಿಡ್ ವೀಕ್ ಎಲಿಮಿನೇಷನ್ ಮುಂದೂಡಲಾಗಿದೆ ಎಂದು ಹೇಳಿದರು. ಆದರೆ, ಇದಕ್ಕೆ ಕಾರಣ ಏನು ಎಂಬುದು ನಿಗೂಡವಾಗಿ ಉಳಿದಿತ್ತು. ಹೀಗಿರುವಾಗ ಇಂದು ಬೆಳಗ್ಗೆ ಪ್ರೊಮೋ ಒಂದನ್ನು ರಿಲೀಸ್ ಮಾಡಿ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ಕೊಟ್ಟರು.
ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರಲಿದೆ ಎಂದು ಬಿಗ್ ಬಾಸ್ ವಾರದ ಮೊದಲ ದಿನವೇ ಹೇಳಿದ್ದರು. ಹಾಗೆಯೆ ಮಿಡ್ ವೀಕ್ ನಾಮಿನೇಷನ್ನಿಂದ ಪಾರಾಗಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಿದ್ದರು. ಈ ಟಾಸ್ಕ್ನಲ್ಲಿ ಅತಿ ಹೆಚ್ಚು ಪಾಯಿಂಟ್ಸ್ ಪಡೆದು ಧನರಾಜ್ ಆಚಾರ್ ಸೇವ್ ಆಗಿದ್ದರು. ಆದರೆ, ಕೊನೆಯ ಟಾಸ್ಕ್ನಲ್ಲಿ ಧನರಾಜ್ ಮೋಸದಾಟ ಆಡಿರುವುದು ಬೆಳಕಿಗೆ ಬಂದಿದೆ. ಧನು ಎದುರಿದ್ದ ಕನ್ನಡಿಯನ್ನು ನೋಡಿ ಪಜಲ್ ಗೇಮ್ ಆಡಿದ್ದರು. ಹೀಗಾಗಿ ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್ ತಡೆ ಹಿಡಿದಿದ್ದರು.
ಬಿಗ್ ಬಾಸ್ ತೋರಿಸಿರುವ ವಿಡಿಯೋವನ್ನು ನೋಡಿರುವ ಧನರಾಜ್, ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಬಿಗ್ಬಾಸ್ ನನ್ನಿಂದ ಅಷ್ಟು ದೊಡ್ಡ ತಪ್ಪಾಗಿದೆ ಅಂತ ಗೊತ್ತಾಗಲಿಲ್ಲ. ಆ ಗೆಲುವು ನನ್ನದು ಅಲ್ಲ ಅಂತ ಅನಿಸುತ್ತಿದೆ. ನನ್ನನ್ನೂ ನಾಮಿನೇಟ್ ಮಾಡಿಕೊಂಡೆ ಪ್ರಕ್ರಿಯೆ ಶುರು ಮಾಡಿ ಪ್ಲಿಸ್ ಅಂತ ಕೇಳಿಕೊಂಡಿದ್ದಾರೆ. ಆದರೆ, ಪುನಃ ನಾಮಿನೇಷನ್ ಪ್ರಕ್ರಿಯೆಗೆ ಇವರನ್ನು ಸೇರಿಸುವುದು ಅನುಮಾನ. ಆದರೆ, ಇದಕ್ಕೆ ಕಠಿಣ ಶಿಕ್ಷೆ ಇದ್ದೇ ಇರುತ್ತದೆ.
ಈ ಹಿಂದೆ ಭವ್ಯಾ ಕೂಡ ಇದೇ ರೀತಿಯ ತಪ್ಪು ಮಾಡಿದ್ದರು. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಮೋಸದಾಟ ಆಡಿದ್ದರು. ಬಳಿಕ ಹನುಮಂತ ಅವರಿಗೆ ಹೊಡೆದಿದ್ದರು. ಈ ವಿಚಾರಕ್ಕೆ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಅವರು ಭವ್ಯಾ ಅವರನ್ನು ಜೈಲಿಗೆ ಕಳುಹಿಸಿದ್ದರು. ಇದೀಗ ಧನರಾಜ್ ಆಚಾರ್ ಅವರನ್ನ ಕೂಡ ಇದೇರೀತಿ ಜೈಲಿಗೆ ಕಳುಹಿಸಬಹುದು ಎಂದು ಹೇಳಲಾಗಿದೆ.
BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ