BBK 12: ನಡುರಾತ್ರಿ ಬೆಚ್ಚಿಬಿದ್ದ ಬಿಗ್ ಬಾಸ್ ಸ್ಪರ್ಧಿಗಳು: ಕೇಳಿಸಿದ ಆ ಸದ್ದು ಏನು?
bigg boss kannada 12: ಬಿಗ್ ಬಾಸ್ ಮನೆಯಲ್ಲಿ ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಗೆಜ್ಜೆ ಸದ್ದು ಕೇಳಿಸಿದೆ. ಜೋರಾಗಿ ಕೇಳಿದ ಗೆಜ್ಜೆ ಸದ್ದಿಗೆ ಮನೆ ಮಂದಿಯೆಲ್ಲ ನಿದ್ದೆಯಿಂದ ಎದ್ದು ಬಂದು ಹುಡುಕಾಡಿದ್ದಾರೆ. ಆದರೆ ಯಾರಿಗೂ ಸದ್ದು ಎಲ್ಲಿಂದ ಬಂದಿದ್ದು ಎಂದು ತಿಳಿದಿಲ್ಲ.

BBK 12 Promo -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಸರಿಯಾಗಿ ಮೂರು ವಾರ ಕೂಡ ಆಗಿಲ್ಲ, ಅದಾಗಲೇ ಶೋ ರೋಚಕತೆ ಸೃಷ್ಟಿಸುತ್ತಿದೆ. ಪ್ರತಿ ಎಪಿಸೋಡ್ನಲ್ಲಿ ಒಂದಲ್ಲ ಒಂದು ಬಿಗ್ ಟ್ವಿಸ್ಟ್ ಅನ್ನು ಬಿಗ್ ಬಾಸ್ ನೀಡುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಮಿಡ್ ಸೀಸನ್ ಫಿನಾಲೆ ಇರುವ ಕಾರಣ ಏನೆಲ್ಲ ಆಗಬಹುದು ಎಂಬುದು ನೋಡಬೇಕಿದೆ. ಇದರ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ನಡುರಾತ್ರಿ ಮಲಗಿರುವಾಗ ವಿಸೇಷ ಸದ್ದು ಕೇಳಿಸಿದೆ. ಇದನ್ನ ಕೇಳಿ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.
ಹೌದು, ಬಿಗ್ ಬಾಸ್ ಮನೆಯಲ್ಲಿ ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಗೆಜ್ಜೆ ಸದ್ದು ಕೇಳಿಸಿದೆ. ಜೋರಾಗಿ ಕೇಳಿದ ಗೆಜ್ಜೆ ಸದ್ದಿಗೆ ಮನೆ ಮಂದಿಯೆಲ್ಲ ನಿದ್ದೆಯಿಂದ ಎದ್ದು ಬಂದು ಹುಡುಕಾಡಿದ್ದಾರೆ. ಆದರೆ ಯಾರಿಗೂ ಸದ್ದು ಎಲ್ಲಿಂದ ಬಂದಿದ್ದು ಎಂದು ತಿಳಿದಿಲ್ಲ. ಗೆಜ್ಜೆ ಶಬ್ಧ ಬರ್ತಿದ್ದಂತೆ ಲೈಟ್ ಕೂಡ ಆನ್ ಆಫ್ ಆಗಿದೆ. ಈ ಮಧ್ಯೆ ಬಿಗ್ ಬಾಸ್ ಮನೆ ಬಾಗಿಲು ತೆರೆದಿದ್ದು, ಜಾನ್ವಿ ಸೇರಿದಂತೆ ಸ್ಪರ್ಧಿಗಳು ಭಯಗೊಂಡಿದ್ದಾರೆ. ಮೇನ್ ಡೋರ್ ಬಂದ್ ಮಾಡಿ ಅಂತ ರಿಕ್ವೆಸ್ಟ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ 12 ಇಂದಿನ ಎಪಿಸೋಡ್ನ ಪ್ರೋಮೋ:
ವೈಲ್ಡ್ ಕಾರ್ಡ್ ಸ್ಪರ್ಧಿಯೊಬ್ಬರು ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಗೆಜ್ಜೆ ಸದ್ದಿನ ಹಿಂದಿನ ರಹಸ್ಯ ಇದೇ ಇರಬಹುದಾ ಎಂಬುದು ನೋಡಬೇಕಿದೆ. ಯಾಕೆಂದರೆ ಈ ವೀಕೆಂಡ್ನಲ್ಲಿ ಅರ್ಧಕರ್ಧ ಮನೆ ಕಾಲಿ ಆಗಲಿದೆ. ಸದ್ಯ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ ಹಾಗೂ ಮಾಲು ಫೈನಲಿಸ್ಟ್ ಆಗಿದ್ದಾರೆ. ಈ ವಾರದ ಅಂತ್ಯದಲ್ಲಿ ಮಾಸ್ ಎಲಿಮಿನೇಷನ್ ನಡೆಯಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಮಿಡ್ ವೀಕ್ ಎಲಿಮಿನೇಷನ್ ಕೂಡ ಇದೆಯಂತೆ.
BBK 12: ಬಿಗ್ ಬಾಸ್ನಲ್ಲಿ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ಸತೀಶ್-ಮಂಜು ಔಟ್?
ಸದ್ಯ ಈ ವಾರ ಮನೆಯಿಂದ ಹೊರಹೋಗಲು ಫಿನಾಲೆ ಕಂಟೆಸ್ಟೆಂಟ್ ಬಿಟ್ಟು ಉಳಿದ ಎಲ್ಲ 13 ಮಂದಿ ನಾಮಿನೇಟ್ ಆಗಿದ್ದಾರೆ. ನಾಲ್ಕು ಮಂದಿ ಫೈನಲಿಸ್ಟ್ ಆಗಿರುವುದರಿಂದ ಅವರಿಗೆ ಇಮ್ಯೂನಿಟಿ ಕೂಡ ಸಿಕ್ಕಿದೆ. ಆದ್ದರಿಂದ ಎಲ್ಲ ಅವರು ನಾಮಿನೇಷನ್‌ನಿಂದ ಬಚಾವ್ ಆಗಿದ್ದಾರೆ. 13 ಸ್ಪರ್ಧಿಗಳನ್ನು ನೇರವಾಗಿ ಸ್ವತಃ ಬಿಗ್ ಬಾಸ್ ಅವರೇ ನಾಮಿನೇಟ್ ಮಾಡಿದ್ದಾರೆ. ಸದ್ಯ 13 ಮಂದಿ ನಾಮಿನೇಟ್ ಆಗಿರುವುದರಿಂದ ಇದರಲ್ಲಿ ಎಷ್ಟು ಮಂದಿಗೆ ಗೇಟ್ ಪಾಸ್ ಸಿಗಲಿದೆಯೋ ಗೊತ್ತಿಲ್ಲ. ಈ ಎಲ್ಲ ಟೆನ್ಶನ್ ಮಧ್ಯೆ ಸ್ಪರ್ಧಿಗಳಿಗೆ ಈ ಗೆಜ್ಜೆ ಸದ್ದಿನ ಗದ್ದಲ ಮನದಲ್ಲಿ ಮೂಡಿದೆ.