ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Max Manju: ತ್ರಿವಿಕ್ರಮ್ ಮುದ್ದು ಸೊಸೆ ಧಾರಾವಾಹಿಯಲ್ಲಿ ಉಗ್ರಂ ಮಂಜು?: ಕುತೂಹಲ ಕೆರಳಿಸಿದ ಫೋಟೋ

ಮಂಜು ಅವರು ತಮ್ಮ ದೋಸ್ತ ತ್ರಿವಿಕ್ರಮ್ ಜೊತೆಗೆ ಫೋಟೋ ಒಂದನ್ನು ಹಂಚಿಕೊಂಡಿದ್ದು ಸಂಚಲನ ಸೃಷ್ಟಿಸಿದೆ. ತ್ರಿವಿಕ್ರಮ್ ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಆರಂಭವಾಗಿ ನಾಲ್ಕು ದಿನ ಆಗಿದೆಯಷ್ಟೆ. ಹೀಗಿರುವಾಗ ಮಂಜು ಅವರು ತ್ರಿವಿಕ್ರಮ್ ಜೊತೆಗೆ ಹಂಚಿಕೊಂಡಿರುವ ಫೋಟೋ ಕುತೂಹಲ ಕೆರಳಿಸಿದೆ.

ತ್ರಿವಿಕ್ರಮ್ ಮುದ್ದು ಸೊಸೆ ಧಾರಾವಾಹಿಯಲ್ಲಿ ಉಗ್ರಂ ಮಂಜು?

Trivikram and Ugramm Manju

Profile Vinay Bhat Apr 17, 2025 7:30 AM

ಬಿಗ್ ಬಾಸ್​ಗೆ (Bigg Boss Kannada) ಹೋದು ಬಂದ ಬಳಿಕ ಅದೆಷ್ಟೊ ಕಲಾವಿದರ ಬದುಕು ಬದಲಾಗಿದೆ. ಹಿಂದೆ ಮೂಲೆಗುಂಪಾಗಿದ್ದ ಕೆಲ ಕಲಾವಿದರು ಈ ರಿಯಾಲಿಟಿ ಶೋಗೆ ಹೋಗಿ ಬಂದ ಬಳಿಕ ಅವರ ಬದಕು ಬಂಗಾರವಾಗಿದೆ. ಈ ಸಾಲಿನಲ್ಲಿ ಇಂದು ನಮಗೆ ಮುಂಚೂಣಿಯಲ್ಲಿ ಕಾಣುತ್ತಿರುವ ವ್ಯಕ್ತಿ ಎಂದರೆ ಅದು ಉಗ್ರಂ ಮಂಜು. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ಮಂಜು, ತಮ್ಮದೇ ಮ್ಯಾಜರಿಸಂ ಮೂಲಕ ಕರ್ನಾಟಕ ಜನತೆಗೆ ಇಷ್ಟವಾದವರು. ಆರಂಭದಲ್ಲಿ ಅಬ್ಬರಿಸುತ್ತಿದ್ದ ಮಂಜು ಬಳಿಕ ಗೌತಮಿ ಜಾಧವ್ ಜೊತೆ ಸೇರಿ ಸಂಪೂರ್ಣ ಬದಲಾದರು. ಕತ್ತಲೆಯಿಂದ ಬೆಳಕಿನೆಡೆಗೆ ಬಂದರು.

ಬಿಗ್ ಬಾಸ್ ಬರುವುದಕ್ಕೂ ಮುನ್ನ ಲೈಫ್ ಅನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಬೇಕಾಬಿಟ್ಟಿ ಹಣ ಖರ್ಚು, ಕುಡಿತದ ಚಟಕ್ಕೆ ಒಳಗಾಗಿದ್ದರು. ಇದನ್ನು ಸ್ವತಃ ಅವರೇ ದೊಡ್ಮನೆಯೊಳಗೆ ಹೇಳಿದ್ದರು. ಆದರೀಗ ಮಂಜು ಸಂಪೂರ್ಣವಾಗಿ ಬದಲಾಗಿದ್ದಾರೆ. ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಮಂಜು ಹೊಸ ಜೀವನ ಶುರುಮಾಡಿದ್ದಾರೆ. ಕುಡಿತದ ಚಟದಿಂದ ಹೊರಬಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಮಂಜು ಅವರಿಗೆ ಸದ್ಯ ಸಿನಿಮಾದಲ್ಲಿ ಆಫರ್​ಗಳು ಹುಡುಕಿ ಬರುತ್ತಿವೆ. ಅವರು ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಭರ್ಜರಿ ಆಗಿ ನಡೆಯುತ್ತಿದೆ. ಇದರ ಜೊತೆಗೆ ಮತ್ತೊಂದು ಸಿನಿಮಾದಲ್ಲೂ ಮಂಜು ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆ ಮಂಜು ಅವರು ತಮ್ಮ ದೋಸ್ತ ತ್ರಿವಿಕ್ರಮ್ ಜೊತೆಗೆ ಫೋಟೋ ಒಂದನ್ನು ಹಂಚಿಕೊಂಡಿದ್ದು ಸಂಚಲನ ಸೃಷ್ಟಿಸಿದೆ.

ತ್ರಿವಿಕ್ರಮ್ ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಆರಂಭವಾಗಿ ನಾಲ್ಕು ದಿನ ಆಗಿದೆಯಷ್ಟೆ. ಹೀಗಿರುವಾಗ ಮಂಜು ಅವರು ತ್ರಿವಿಕ್ರಮ್ ಜೊತೆಗೆ ಹಂಚಿಕೊಂಡಿರುವ ಫೋಟೋ ಕುತೂಹಲ ಕೆರಳಿಸಿದೆ. ‘ಅನಿರೀಕ್ಷಿತ ಕ್ಷಣಗಳು ಎಂದಿಗೂ ಅತ್ಯುತ್ತಮ! ಇಂದು ಸೆಟ್‌ನಲ್ಲಿ ನನ್ನ ಆತ್ಮೀಯ ಗೆಳೆಯ ತ್ರಿವಿಕ್ರಮ್ ಅವರನ್ನು ಭೇಟಿಯಾದೆ. ಅದ್ಭುತ ಅನುಭವ!’ ಎಂದು ಮಂಜು ಈ ಫೋಟೋ ಹಂಚಿಕೊಂಡಿದ್ದಾರೆ.

ವಿಶೇಷ ಎಂದರೆ ತ್ರಿವಿಕ್ರಮ್ ಅವರು ತಮ್ಮ ಧಾರಾವಾಹಿಯ ಕಾಸ್ಟ್ಯೂಮ್​ನಲ್ಲಿದ್ದಾರೆ. ಅತ್ತ ಮಂಜು ಕೂಡ ಪಂಚೆ ಶರ್ಟ್ ಧರಿಸಿದ್ದಾರೆ. ಹೀಗಾಗಿ ಮುದ್ದು ಸೊಸೆ ಧಾರಾವಾಹಿಯಲ್ಲಿ ತ್ರಿವಿಕ್ರಮ್ ಜೊತೆಗೆ ಉಗ್ರಂ ಮಂಜು ಕೂಡ ಕಾಣಿಸಿಕೊಳ್ಳುತ್ತಾರ ಎಂಬ ಅನುಮಾನ ಮೂಡಿದೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಇಡೀ ಮನೆಯನ್ನೇ ಇವರಿಬ್ಬರು ಅಲ್ಲಾಡಿಸಿದ್ದರು. ಇದೀಗ ಧಾರಾವಾಹಿಯಲ್ಲೂ ಇವರಿಬ್ಬರು ಒಂದಾದರೆ ಹೇಗಿರುತ್ತೆ ಎಂಬುದು ನೋಡಬೇಕಿದೆ.

Vinay Gowda: ರಜತ್ ಪರಪ್ಪನ ಅಗ್ರಹಾರಕ್ಕೆ: ವಿನಯ್ ಗೌಡ ಬಚಾವ್ ಆಗಿದ್ದು ಹೇಗೆ?, ಇಲ್ಲಿದೆ ಕಾರಣ