ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ತಾಂಡವ್ ಆಫೀಸಲ್ಲಿ ಭಾಗ್ಯಂಗೆ ಸಿಕ್ತು ಭಾರೀ ಗೌರವ: ದಂಗಾದ ಶ್ರೇಷ್ಠಾ

ಕುತೂಹಲ ತಡೆಯಲಾಗದೆ ತಾಂಡವ್-ಶ್ರೇಷ್ಠಾ, ಭಾಗ್ಯ ಬಳಿಯೇ ಹೋಗಿ ನಿನೇನು ಮಾಡ್ತಾ ಇದ್ದೀಯ ಇಲ್ಲಿ? ಎಂದು ಪ್ರಶ್ನಿಸಿದ್ದಾರೆ. ಆಗ ಭಾಗ್ಯ ಏನೋ ಸ್ವಲ್ಪ ಕೆಲಸ ಇತ್ತು, ಅದಕ್ಕಾಗಿ ಬಂದೆ ಎಂದು ಅಲ್ಲಿಂದ ಹೊರಟು ಹೋಗಿದ್ದಾಳೆ. ಶ್ರೇಷ್ಠಾ ನಾನಾ ಪ್ಲ್ಯಾನ್ ಮಾಡಿ ಹೆಚ್ಆರ್ ಬಳಿ ಹೋಗಿ ಭಾಗ್ಯ ಯಾಕೆ ಬಂದಿದ್ದಳು ಎಂಬ ವಿಚಾರವನ್ನು ತಿಳಿಯಲು ಮುಂದಾಗುತ್ತಾಳೆ. ಆದರೆ,

ತಾಂಡವ್ ಆಫೀಸಲ್ಲಿ ಭಾಗ್ಯಂಗೆ ಸಿಕ್ತು ಭಾರೀ ಗೌರವ: ದಂಗಾದ ಶ್ರೇಷ್ಠಾ

Bhagya Lakshmi Serial

Profile Vinay Bhat Apr 25, 2025 12:20 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತನ್ನ ಮಾಜಿ ಪತಿ ಆಫೀಸ್​ನಲ್ಲೇ ಅದ್ಧೂರಿಯಾಗಿ ಕ್ಯಾಂಟೀನ್ ಶುರು ಮಾಡಿದ್ದಾಳೆ. ತಾಂಡವ್ ಆಫೀಸ್​ನಲ್ಲೇ ಕೈ ತುತ್ತು ಬ್ಯುಸಿನೆಸ್ ದೊಡ್ಡದಾಗಿ ಶುರುಮಾಡಿದ್ದಾಳೆ. ತಾಂಡವ್ ಆಫೀಸ್​ನಿಂದ ಭಾಗ್ಯಾಗೆ ಪ್ರತಿ ದಿನ ಒಳ್ಳೆಯ ಆರ್ಡರ್ ಬರುತ್ತಿದೆ. ಇದನ್ನು ಗಮನಿಸಿದ ಆಕೆ, ಅಲ್ಲಿಯ ಹೆಚ್​ಆರ್ ಅನ್ನು ಹೋಗಿ ಭೇಟಿ ಮಾಡಿದ್ದಾಳೆ. ಅವಳು ಆಫೀಸ್‌ಗೆ ಬಂದಿರುವುದನ್ನು ತಾಂಡವ್ ಮತ್ತು ಶ್ರೇಷ್ಠಾ ಗಮನಿಸಿದ್ದಾರೆ. ಇವಳು ಯಾಕೆ ಇಲ್ಲಿ ಬಂದಳು ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಕುತೂಹಲ ತಡೆಯಲಾಗದೆ ತಾಂಡವ್-ಶ್ರೇಷ್ಠಾ, ಭಾಗ್ಯ ಬಳಿಯೇ ಹೋಗಿ ನಿನೇನು ಮಾಡ್ತಾ ಇದ್ದೀಯ ಇಲ್ಲಿ? ಎಂದು ಪ್ರಶ್ನಿಸಿದ್ದಾರೆ. ಆಗ ಭಾಗ್ಯ ಏನೋ ಸ್ವಲ್ಪ ಕೆಲಸ ಇತ್ತು, ಅದಕ್ಕಾಗಿ ಬಂದೆ ಎಂದು ಅಲ್ಲಿಂದ ಹೊರಟು ಹೋಗಿದ್ದಾಳೆ. ಶ್ರೇಷ್ಠಾ ನಾನಾ ಪ್ಲ್ಯಾನ್ ಮಾಡಿ ಹೆಚ್​ಆರ್ ಬಳಿ ಹೋಗಿ ಭಾಗ್ಯ ಯಾಕೆ ಬಂದಿದ್ದಳು ಎಂಬ ವಿಚಾರವನ್ನು ತಿಳಿಯಲು ಮುಂದಾಗುತ್ತಾಳೆ. ಆದರೆ, ಹೆಚ್​ಆರ್ ಯಾವುದೇ ವಿಚಾರ ರಿವೀಲ್ ಮಾಡಲ್ಲ. ಹೀಗಾಗಿ ಭಾಗ್ಯ ಯಾಕೆ ಆಫೀಸ್‌ಗೆ ಬಂದಿದ್ದಳು ಎನ್ನುವುದು ತಾಂಡವ್ ಮತ್ತು ಶ್ರೇಷ್ಠಾಗೆ ಪ್ರಶ್ನೆಯಾಗೇ ಉಳಿಯುತ್ತದೆ.

ಭಾಗ್ಯ ಮನೆಗೆ ಬಂದು ಅತ್ತೆ ಕುಸುಮಾ, ಮಾವನ ಬಳಿ ಎಲ್ಲ ನಾಳೆ ನೀವು ಎಲ್ಲರೂ ನನ್ನ ಜೊತೆ ಆಫೀಸ್​ಗೆ ಬರಬೇಕು ಎಂದು ಹೇಳುತ್ತಾಳೆ. ಅದರಂತೆ ಮರುದಿನ ಎಲ್ಲರಿಗೂ ಅಚ್ಚರಿ ಆಗುವಂತಹ ಘಟನೆ ಸಂಬವಿಸುತ್ತದೆ. ಮರುದಿನ ಆಫೀಸ್‌ಗೆ ಬಂದ ತಾಂಡವ್‌ಗೆ ಬಾಸ್ ಬಂದಿರುವುದು ಗೊತ್ತಾಗುತ್ತದೆ. ಬಾಸ್ ಯಾಕೆ ಸಡನ್ನಾಗಿ ಬಂದಿದ್ದಾರೆ, ಮುಂದಿನ ವಾರ ಅವರು ಬರಬೇಕಿತ್ತಲ್ಲ ಎಂದು ಸ್ನೇಹಿತರ ಬಳಿ ಕೇಳಿದಾಗ ಯಾರೂ ಸರಿಯಾದ ಉತ್ತರ ಕೊಡಲ್ಲ. ಬಾಸ್‌ನ ಭೇಟಿಯಾದರೂ ಅವರು ತಾಂಡವ್‌ಗೆ ಅಷ್ಟೇನೂ ಪ್ರಾಮುಖ್ಯತೆ ಕೊಡಲ್ಲ.



ಕಲೆ ಹೊತ್ತಿನ ಬಳಿಕ ತಾಂಡವ್​ನ ಬಾಸ್ ಬಂದು ಭಾಗ್ಯಾಳನ್ನು ಗ್ರ್ಯಾಂಡ್ ಆಗಿ ವೆಲ್​ಕಮ್ ಮಾಡಿದ್ದಾರೆ. ಇವತ್ತಿಂದ ನಮ್ಮ ಕ್ಯಾಂಟೀನ್​ನ ಎಲ್ಲ ಜವಾಬ್ದಾರಿ ಭಾಗ್ಯ ಮತ್ತು ತಂಡ ವಹಿಸಿಕೊಳ್ಳುತ್ತದೆ ಎಂದು ಬಾಸ್ ಹೇಳಿದ್ದಾರೆ. ಇದನ್ನ ಕೇಳಿ ತಾಂಡವ್-ಶ್ರೇಷ್ಠಾಗೆ ಶಾಕ್ ಆಗಿದೆ. ಸ್ವತಃ ಬಾಸ್ ಬಂದು ಕ್ಯಾಂಟೀನ್ ಉದ್ಘಾಟಿಸಿ, ಅದನ್ನು ಭಾಗ್ಯಾಗೆ ನೀಡಿರುವುದನ್ನು ತಾಂಡವ್-ಶ್ರೇಷ್ಠಾಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.



ಇದರ ಬೆನ್ನಲ್ಲೇ, ನನ್ನ ಕಾಲು ಎಳೆದು ಎದುರು ಹಾಕಿಕೊಳ್ಳಬಹುದು ಅಂದುಕೊಂಡಿದ್ದವರನ್ನೆಲ್ಲ ತುಳಿದು ಮೇಲೆ ಬಂದಿದ್ದೀನಿ ನಾನು ಎಂದು ಭಾಗ್ಯ ತಾಂಡವ್​ಗೆ ಹೇಳಿದ್ದಾಳೆ. ಸದ್ಯ ಭಾಗ್ಯ ತನ್ನ ಮಾಜಿ ಪತಿಯ ಆಫೀಸ್​ನಲ್ಲೇ ಕ್ಯಾಂಟೀನ್ ಶುರುಮಾಡಿರುವುದು ಯಾಕೆಂಬ ಕುತೂಹಲ ಕೆರಳಿಸಿದೆ. ಅಲ್ಲದೆ ಬಾಸ್ ಬಂದು ಇಷ್ಟು ದೊಡ್ಡ ಮಟ್ಟದಲ್ಲಿ ವೆಲ್​ಕಮ್ ಮಾಡಿರುವ ಕಾರಣ ಏನು ಎಂಬುದು ಕೂಡ ಸಸ್ಪೆನ್ಸ್ ಆಗಿ ಉಳಿದಿದೆ. ಇದಕ್ಕೆಲ್ಲ ಮುಂದಿನ ಸಂಚಿಕೆಯಲ್ಲಿ ಉತ್ತರ ಸಿಗಬಹುದು.

Sanvi Sudeep: ಟಾಲಿವುಡ್ ಸಿನಿಮಾದಲ್ಲಿ ಕಿಚ್ಚನ ಮಗಳು ಸಾನ್ವಿ: ಮುಂದಿನ ವಾರವೇ ಚಿತ್ರ ತೆರೆಗೆ