Bhagya Lakshmi Serial: ಹೊಸ ಟ್ವಿಸ್ಟ್: ತಾಂಡವ್ನನ್ನು ಹೀಯಾಳಿಸಿದ ತಂಗಿಗೇ ಬೈದ ಭಾಗ್ಯ
ಹೋಟೆಲ್ನಲ್ಲಿ ತಾಂಡವ್ ಸ್ಥಿತಿ ಕಂಡು ಭಾಗ್ಯ ತಂಗಿ ಸರಿಯಾಗೆ ತಿರುಗೇಟು ಕೊಡುತ್ತಾಳೆ. ನೋಡಮ್ಮ ಭಾವ ಅಕ್ಕನ ತರ ಅಲ್ಲ.. ಅವರಿಗೆ ಇಲ್ಲಿಲ್ಲಂದ್ರೆ ಬೇರೆಕಡೆ ಪಟ್ ಅಂತ ಕೆಲಸ ಸಿಗುತ್ತೆ ಅಂತ ಹೇಳಿದ್ದೆ.. ಆದ್ರೆ ಇಲ್ಲಿ ನೋಡು ಉಗಿಸಿಕೊಳ್ಳುತ್ತಾ ಇದ್ದಾರೆ ಭಾವ ಎಂದು ಕಾಲೆಳೆದಿದ್ದಾರೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯ ಮಹತ್ವದ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಭಾಗ್ಯಳನ್ನ ತುಳಿಯೋದಕ್ಕೆ ತಾಂಡವ್, ಶ್ರೇಷ್ಠಾ, ಕನ್ನಿಕಾ ಮಾಡಿರುವ ಕೇಡು ಕೆಲಸ ಈಗ ಅವರಿಗೇ ಉಲ್ಟಾ ಹೊಡೆಯಲು ಶುರುಮಾಡಿದೆ. ಇವರೆಲ್ಲ ಎಷ್ಟೇ ಕಿರುಕುಳ ಕೊಟ್ಟರೂ ಎಲ್ಲಾ ಸವಾಲುಗಳನ್ನ ಮೆಟ್ಟಿ ನಿಂತು ಈಗ ತಾಂಡವ್ ಆಫೀಸ್‌ನಲ್ಲೇ ಭಾಗ್ಯ ಕೈತುತ್ತು ಕ್ಯಾಂಟೀನ್ ಓಪನ್ ಮಾಡಿದ್ದಾಳೆ. ಕಾಕತಾಳೀಯ ಅಂದ್ರೆ, ಕ್ಯಾಂಟೀನ್ ಉದ್ಘಾಟನೆ ದಿನವೇ ತಾಂಡವ್, ಶ್ರೇಷ್ಠಾಗೆ ಆಫೀಸ್ನಿಂದ ಬಾಸ್ ಗೇಟ್ ಪಾಸ್ ನೀಡಲಾಗಿದೆ.
ಬಾಸ್ ಹೆಂಡತಿ ತಾಂಡವ್ ಮತ್ತು ಶ್ರೇಷ್ಠಾಳ ಕೈಗೆ ಕವರ್ ಒಂದನ್ನು ನೀಡಿ ಭಾಗ್ಯಳಿಗೆ ಕಿರುಕುಳ ಕೊಟ್ಟಿರುವುದಕ್ಕೆ ಇದು ನಿಮಗೆ ಉಡುಗೊರೆ ಎಂದು ಹೇಳುತ್ತಾರೆ. ಇಬ್ಬರೂ ಕವರ್ ತೆಗೆದು ನೋಡಿದಾಗ ಅದರಲ್ಲಿ ಕೆಲಸದಿಂದ ತೆಗೆದುಹಾಕಿರುವ ಟರ್ಮಿನೇಶನ್ ಲೆಟರ್ ಇರುತ್ತದೆ. ಈಗಿರುವುದಕ್ಕಿಂತ ದೊಡ್ಡ ಕಂಪನಿಯಲ್ಲಿ ನನಗೆ ಕೆಲಸ ಸಿಗುತ್ತೆ ಎಂದು ಅಹಂಕಾರದಿಂದ ಆಫೀಸ್ನಿಂದ ಹೊರಬಂದ ತಾಂಡವ್ಗೆ ಎಲ್ಲೂ ಕೆಲಸ ಸಿಗುವುದಿಲ್ಲ.
ಇದರ ಮಧ್ಯೆ ಬಾಸ್ಗೆ ಫೋನ್ ಮಾಡಿ ನಮ್ಮನ್ನು ಯಾಕೆ ಕೆಲಸದಿಂದ ತೆಗೆದಿದ್ದು ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಬಾಸ್ ಕೂಡ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ. ನಾನು ಈ ವರ್ಷದ ಬೆಸ್ಟ್ ಎಂಪ್ಲಾಯಿ, ಅಲ್ಲದೆ, ಕಂಪನಿಗೆ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ, ವಿವಿಧ ಪ್ರಾಜೆಕ್ಟ್‌ಗಳನ್ನು ನಿರ್ವಹಿಸಿದ್ದೇನೆ, ಕಂಪನಿಗೆ ಉತ್ತಮ ಆದಾಯ ತಂದುಕೊಟ್ಟಿದ್ದೇನೆ ಎಂದು ತಾಂಡವ್ ಬಾಸ್ ಬಳಿ ಹೇಳಿದ್ದಾನೆ. ನನ್ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ತಾಂಡವ್ ಬಾಸ್ ಬಳಿ ಗೋಗರೆದಿದ್ದಾನೆ.
ಆದರೆ ಬಾಸ್ ಅವನ ಮಾತನ್ನು ಕೇಳಲು ತಯಾರಿಲ್ಲ. ಈ ಕಂಪನಿಯಲ್ಲಿ ನನಗೆ ಎಷ್ಟು ಹಕ್ಕಿದೆಯೋ, ನನ್ನ ಹೆಂಡತಿಗೂ ಅಷ್ಟೇ ಹಕ್ಕಿದೆ. ಅವಳು ಸರಿಯಾಗಿ ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿರುತ್ತಾಳೆ, ಅದನ್ನು ನೀನು ಪ್ರಶ್ನಿಸುವ ಹಾಗಿಲ್ಲ ಎಂದು ಹೇಳುತ್ತಾರೆ. ಅಲ್ಲದೇ, ಕಂಪನಿಯಲ್ಲಿ ಕೆಲಸ ಮಾಡಿದರೆ ಸಾಲದು, ಮೌಲ್ಯಗಳು, ಸಂಬಂಧಕ್ಕೆ ಬೆಲೆ ಕೊಡುವುದನ್ನು ಕೂಡ ಕಲಿತಿರಬೇಕು, ಅಬಲೆ ಎಂದು ಹೆಣ್ಣಿಗೆ ಕಿರುಕುಳ ಕೊಡುವುದು ಸರಿಯಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಇದಾದ ಬಳಿಕ ತಾಂಡವ್ ಹೊಸ ಕೆಲಸಕ್ಕಾಗಿ ಅಲೆಯುವಂತಾಗಿದೆ. ಒಬ್ಬರು ಇಂಟರ್ವ್ಯೂಗೆ ಎಂದು ಹೋಟೆಲ್ ಒಂದರಲ್ಲಿ ಭೇಟಿ ಆಗಲು ಕರೆದಿದ್ದಾರೆ. ಅದೇ ಹೋಟೆಲ್ನಲ್ಲಿ ಆಕಸ್ಮಿಕವಾಗಿ ಭಾಗ್ಯಾ ಸೇರಿದಂತೆ ಅವರ ಮನೆಯವರು ಕೂಡ ಊಟಕ್ಕೆಂದು ಬಂದಿರುತ್ತಾರೆ. ಇಂಟರ್ವ್ಯೂನಲ್ಲಿ ತಾಂಡವ್ ದುರಂಕರಾದ ಮಾತನ್ನು ಕೇಳಿ ನಿನ್ನಂತವರಿಗೆ ಕೆಲಸ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಹೋಟೆಲ್ನಲ್ಲಿ ತಾಂಡವ್ ಸ್ಥಿತಿ ಕಂಡು ಭಾಗ್ಯ ತಂಗಿ ಸರಿಯಾಗೆ ತಿರುಗೇಟು ಕೊಡುತ್ತಾಳೆ. ನೋಡಮ್ಮ ಭಾವ ಅಕ್ಕನ ತರ ಅಲ್ಲ.. ಅವರಿಗೆ ಇಲ್ಲಿಲ್ಲಂದ್ರೆ ಬೇರೆಕಡೆ ಪಟ್ ಅಂತ ಕೆಲಸ ಸಿಗುತ್ತೆ ಅಂತ ಹೇಳಿದ್ದೆ.. ಆದ್ರೆ ಇಲ್ಲಿ ನೋಡು ಉಗಿಸಿಕೊಳ್ಳುತ್ತಾ ಇದ್ದಾರೆ ಭಾವ ಎಂದು ಕಾಲೆಳೆದಿದ್ದಾರೆ. ತಾಂಡವ್ ಇಲ್ಲಿ ಏನೂ ಮಾತನಾಡದೆ ಸೀದಾ ಎದ್ದು ಹೋಗಿದ್ದಾರೆ. ಆದರೆ, ತಂಗಿ ಆಡಿದ ಮಾತು ಭಾಗ್ಯಾಳಿಗೆ ಬೇಸರ ತಂದಿದೆ. ತನ್ನ ಮಾಜಿ ಗಂಡ ಕೆಲಸ ಕಳೆದುಕೊಂಡಿದ್ದಾನೆ ಎಂಬ ನೋವು ಕೂಡ ಭಾಗ್ಯಾಳಿಗೆ ಮೂಲೆಯಲ್ಲಿ ಮೂಡಿದೆ.
ಮನೆಗೆ ಬಂದ ತಕ್ಷಣ ಭಾಗ್ಯ ತಂಗಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ತಪ್ಪು ಪೂಜಾ ಆ ತರ ಎಲ್ಲ ಮಾತನಾಡಬಾರದು. ಅವರು ನಮಗೆ ಏನಾದರು ಮಾಡಿರಬಹುದು. ನಾವು ಸೋತು ಕೆಳಕ್ಕೆ ಬಿದ್ದಾಗ ಅವರು ಆಡಿಕೊಂಡು ನಕ್ಕಿದ್ರು.. ಅದಕ್ಕೆ ತಾಂಡವ್ಗೆ ಹೀಗೆಲ್ಲ ಆಗ್ತಿದೆ ಅಂತ ನೀವು ಹೇಳಿದ್ಯಲ್ಲ.. ಈಗ ನಾವು ಅವರ ಸೋಲಿಗೆ ಇದೇರೀತಿ ಸಂಭ್ರಮ ಪಟ್ರೆ ನಮಗೂ ಅವರಿಗು ಏನು ವ್ಯತ್ಯಾಸ ಇದೆ.. ಆ ತರ ಎಲ್ಲ ಮಾತನಾಡಬೇಡ ಎಂದು ನೇರವಾಗಿ ಹೇಳಿದ್ದಾಳೆ. ಸದ್ಯ ತಾಂಡವ್ಗೆ ಹೇಗೆ ಕೆಲಸ ಸಿಗುತ್ತೆ?, ಶ್ರೇಷ್ಠಾ ಏನು ಮಾಡ್ತಾಳೆ?, ಭಾಗ್ಯಾಳನ್ನು ಸೋಲಿಸಲು ಪ್ಲ್ಯಾನ್ ಮಾಡ್ತಾರ ಅಥವಾ ಕೆಲಸಕ್ಕಾಗಿ ಅಂಗಲಾಚುತ್ತಾರ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Bhagya Lakshmi Serial: ಆಫ್ ಸ್ಕ್ರೀನ್ನಲ್ಲಿ ಭಾಗ್ಯ-ಶ್ರೇಷ್ಠಾ ಭರ್ಜರಿ ಡ್ಯಾನ್ಸ್: ವೈರಲ್ ಆಗುತ್ತಿದೆ ವಿಡಿಯೋ