ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ತನ್ವಿಯನ್ನು ಪೊಲೀಸರಿಂದ ಸೇವ್ ಮಾಡಿದ ಭಾಗ್ಯ: ಮನೆಗೆ ಬಂದು ತಾಂಡವ್ ರಂಪಾಟ

ರೋಡ್ ಮಧ್ಯೆಯೇ ತನ್ವಿಗೆ ಭಾಗ್ಯ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ನಾನು, ಅಜ್ಜಿ ಎಲ್ಲರೂ ಹೋಗೋದು ಬೇಡ ಅಂತ ಹೇಳಿದ್ರು ನಮ್ಮೆಲ್ಲರ ಮಾತು ಮೀರಿ ಹೋಗುವಂತ ಧೈರ್ಯ ಬಂದು ಬಿಡ್ತಾ ನಿಂಗೆ. ನೀನು ತರ ಮಾಡ್ತಿ ಅಂತ ನಾನು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾಳೆ.

ತನ್ವಿಯನ್ನು ಪೊಲೀಸರಿಂದ ಸೇವ್ ಮಾಡಿದ ಭಾಗ್ಯ: ಮನೆಗೆ ಬಂದು ತಾಂಡವ್ ರಂಪಾಟ

Bhagya Lakshmi Serial

Profile Vinay Bhat Apr 2, 2025 12:30 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಸದ್ಯ ತನ್ವಿ ಮಾಡಿರುವ ಎಡವಟ್ಟಿನಿಂದ ಇಡೀ ಮನೆಗೆ ಟೆನ್ಶನ್ ಶುರುವಾಗಿದೆ. ಹೆತ್ತವರ ಪರ್ಮಿಷನ್ ಇಲ್ಲದೆ ರೆಸಾರ್ಟ್​ಗೆ ಟ್ರಿಪ್ ಹೋಗಿರುವ ತನ್ವಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ತನ್ವಿ ತನ್ನ ಫ್ರೆಂಡ್ಸ್ ಜೊತೆ ರೆಸಾರ್ಟ್‌ಗೆ ಟ್ರಿಪ್ ಹೋಗಲು ನಾನಾ ಕಸರತ್ತು ನಡೆಸಿದ್ದಳು. ಆದರೆ ಇದಕ್ಕೆ ಅಜ್ಜಿ-ಅಮ್ಮ-ಅಪ್ಪನವರಿಂದ ಪರ್ಮೀಷನ್ ಸಿಕ್ಕಿರಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಪೇಪರ್​ಗೆ ಸಹಿ ಹಾಕಲು ಶ್ರೇಷ್ಠಾ ಬಳಿ ಹೋಗಿ ಸೈನ್ ಹಾಕಿಸಿಕೊಂಡಿದ್ದಳು. ಶಾಲೆಯಲ್ಲಿ ಸ್ಪೆಷಲ್ ಕ್ಲಾಸ್ ಇದೆ, ಹೋಗಲೇಬೇಕು ಎಂದು ಮನೆಯಲ್ಲಿ ಕಥೆ ಹೇಳಿ ರೆಸಾರ್ಟ್​ಗೆ ತೆರಳಿದ್ದಳು.

ರೆಸಾರ್ಟ್​ನಲ್ಲಿ ಇವರು ಡ್ಯಾನ್ಸ್ ಮೂಲಕ ಎಂಜಾಯ್ ಮಾಡುತ್ತಿರುವಾಗ ಅಲ್ಲಿಗೆ ಪೊಲೀಸರ ಎಂಟ್ರಿ ಆಗಿದೆ. ಇವರೆಲ್ಲ ನೋಡಲು ಮೈನರ್ ರೀತಿ ಕಾಣುತ್ತಾರೆ, ಐಡಿ ಕಾರ್ಡ್ ಚೆಕ್ ಮಾಡಿ ಎಂದು ಇನ್ಸ್‌ಪೆಕ್ಟರ್ ಅವರು ಕಾನ್​ಸ್ಟೇಬಲ್ ಬಳಿ ಹೇಳಿದ್ದಾರೆ. ಅದರಂತೆ ಐಡಿ ನೋಡಿದಾಗ ಎಲ್ಲರೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ತಿಳಿದುಬಂದಿದೆ. ಬಳಿಕ ಎಲ್ಲ ಮಕ್ಕಳ ಮನೆಯವರನ್ನು ಕರೆಸಬೇಕು ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.

ತನ್ವಿ ಅಮ್ಮನಿಗೆ ಕಾಲ್ ಮಾಡಿ, ನಾನು ಪೊಲೀಸರು ಕೈಯಲ್ಲಿ ಸಿಕ್ಕಾಕಿಕೊಂಡಿದ್ದೇನೆ ಎಂದು ಹೇಳುತ್ತಾಳೆ, ಪೊಲೀಸರು ಭಾಗ್ಯಾಳ ಜೊತೆ ಮಾತನಾಡಿ, ಇಲ್ಲಿ ನಿಮ್ಮ ಮಗಳು ರೆಸಾರ್ಟ್​ಗೆ ಬಂದಿದ್ದಾಳೆ.. ನಾವೆಲ್ಲರನ್ನು ಇಲ್ಲಿ ರೈಡ್ ಮಾಡಿ ನಿಲ್ಲಿಸಿದ್ದೇವೆ ಎಂದು ಹೇಳುತ್ತಾರೆ. ತಕ್ಷಣ ಭಾಗ್ಯ ರೆಸಾರ್ಟ್​ಗೆ ಓಡಿ ಬರುತ್ತಾಳೆ. ತಾನು ರೆಸಾರ್ಟ್ ಗೆ ಹೋಗಲು ಪರ್ಮಿಷನ್ ಕೊಟ್ಟಿಲ್ಲ. ಆದರೂ ಅದು ಹೇಗೆ ಪರ್ಮಿಷನ್ ಸಿಕ್ಕಿತು ಎನ್ನುವ ಆಲೋಚನೆಯಲ್ಲಿರುತ್ತಾಳೆ.

ಅಲ್ಲಿ ಹೇಗೋ ಮಾಡಿ ಪೊಲೀಸರ ಕೈಯಿಂದ ಮಗಳನ್ನು ಬಿಡಿಸಿಕೊಂಡು ಬರುತ್ತಾಳೆ. ನಂತರ ರೋಡ್ ಮಧ್ಯೆಯೇ ತನ್ವಿಗೆ ಭಾಗ್ಯ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ನಾನು, ಅಜ್ಜಿ ಎಲ್ಲರೂ ಹೋಗೋದು ಬೇಡ ಅಂತ ಹೇಳಿದ್ರು ನಮ್ಮೆಲ್ಲರ ಮಾತು ಮೀರಿ ಹೋಗುವಂತ ಧೈರ್ಯ ಬಂದು ಬಿಡ್ತಾ ನಿಂಗೆ. ನೀನು ತರ ಮಾಡ್ತಿ ಅಂತ ನಾನು ಅಂದುಕೊಂಡಿರಲಿಲ್ಲ. ಸ್ಪೆಷಲ್ ಕ್ಲಾಸ್ ಅಂತ ಹೇಳಿ ಈ ಕೆಲಸ ಮಾಡೋಕೆ ಶುರು ಮಾಡಿದ್ದೀಯ.. ನನಗೆ ನೀನು ಬೆಳಗ್ಗೆ ಹೋಗೊವಾಗ್ಲೆ ಡೌಟ್ ಬಂತು.. ಆದ್ರೆ ಯಾವುದೇ ಕಾರಣಕ್ಕೂ ನನ್ನ ಮಗಳು ನನ್ ಹತ್ರ ಸುಳ್ಳು ಹೇಳಲ್ಲ ಎಂಬ ನಂಬಿಕೆ ನನಗಿತ್ತು ಎಂದು ಹೇಳಿದ್ದಾಳೆ.



ಇದಾದ ಬಳಿಕ ಭಾಗ್ಯ ಮಗಳನ್ನು ಕರೆದುಕೊಂಡು ಮನೆಗೆ ಬಂದಿದ್ದಾಳೆ. ಇದೇವೇಳೆ ಅಲ್ಲಿಗೆ ತಾಂಡವ್ ಕೂಡ ಬಂದಿದ್ದಾನೆ. ಮನೆಗೆ ಬಂದು ಸಂಬಂಧವೇ ಇಲ್ಲದ ಭಾಗ್ಯಾಳಿಗೆ ಮನಬಂದಂತೆ ಬೈದಿದ್ದಾನೆ. ಈ ನಿನ್ನ ಬಂಗಾರಿ ಪೊಲೀಸ ಕೈಗೆ ಸಿಕ್ಕಾಕಿಕೊಂಡಿದ್ದಳು. ಆ ರೆಸಾರ್ಟ್​ನಲ್ಲಿ 18 ವರ್ಷದ ಕೆಳಗಿನ ಮಕ್ಕಳಿಗೆ ಪರ್ಮಿಷನ್ ಇಲ್ಲ ಎಂದಿದ್ದಾನೆ. ಆಗ ಸೈನ್ ಮಾಡಿದವರು ಯಾರು ಎಂಬ ಪ್ರಶ್ನೆ ಬರುತ್ತದೆ. ತಾಂಡವ್, ಭಾಗ್ಯಾಳನ್ನೆ ಬೊಟ್ಟು ಮಾಡಿ ಹೇಳುತ್ತಾನೆ.



ಇದಕ್ಕೆ ಭಾಗ್ಯಾ ನಾನು ಯಾಕೆ ಸೈನ್ ಮಾಡ್ಲಿ ಎಂದು ಪ್ರಶ್ನಿಸುತ್ತಾಳೆ. ಆಗ ತಾಂಡವ್ ನೀನು ಸೈನ್ ಮಾಡಿಲ್ಲ ಅಂದ್ರೆ ಹೇಗೆ ಹೋಗ್ತಾಳೆ ಅವಳು ಎಂದು ಕೇಳುತ್ತಾನೆ. ಭಾಗ್ಯಾ ಮಗಳು ತನ್ವಿಗೆ ಜೋರು ಮಾಡಿ ಯಾರು ನಿನ್ಗೆ ಸೈನ್ ಹಾಕಿದ್ದು ಎಂದು ಜೋರು ಮಾಡಿ ಕೇಳುತ್ತಾಳೆ. ಟ್ವಿಸ್ಟ್ ಎಂದರೆ ಇಲ್ಲಿ ತಾಂಡವ್ ಜೊತೆಗೆ ಶ್ರೇಷ್ಠಾ ಕೂಡ ಮನೆಗೆ ಬಂದಿದ್ದಾಳೆ. ತನ್ವಿ ನೇರವಾಗಿ ಸೈನ್ ಹಾಕಿದ್ದು ಶ್ರೇಷ್ಠಾ ಎಂದೇ ಹೇಳುತ್ತಾಳ? ಅಥವಾ ಶ್ರೇಷ್ಠಾಳನ್ನು ಕಾಪಾಡಲು ನಾನೇ ಸೈನ್ ಹಾಕಿದ್ದು ಎಂದು ಹೇಳುತ್ತಾಳ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Chandan Shetty-Niveditha: ವಿಚ್ಛೇದನದ ಬಗ್ಗೆ ಗೊತ್ತಾದಾಗ ಚಂದನ್ ಶೆಟ್ಟಿ ಅಮ್ಮ ಏನು ಹೇಳಿದ್ರಂತೆ ಗೊತ್ತೇ?