ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chandan Shetty-Niveditha: ವಿಚ್ಛೇದನದ ಬಗ್ಗೆ ಗೊತ್ತಾದಾಗ ಚಂದನ್ ಶೆಟ್ಟಿ ಅಮ್ಮ ಏನು ಹೇಳಿದ್ರಂತೆ ಗೊತ್ತೇ?

ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಎರಡನೇ ಮದುವೆ ಆಗ್ತಾರೆ ಎಂದು ಹೇಳಲಾಗಿತ್ತು. ಬಳಿಕ ಇತ್ತೀಚೆಗಷ್ಟೆ ಈ ಗಾಳಿ ಸುದ್ದಿಗಳಿಗೆ ಒಂದೇ ವೇದಿಕೆಯಲ್ಲಿ ನಿಂತು ಚಂದನ್‌ ಶೆಟ್ಟಿ ಮತ್ತು ಸಂಜನಾ ಆನಂದ್‌ ಸ್ಪಷ್ಟನೆ ಕೊಟ್ಟರು. ಇದೀಗ ಚಂದನ್ ಶೆಟ್ಟಿ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ.

ವಿಚ್ಛೇದನದ ಬಗ್ಗೆ ಗೊತ್ತಾದಾಗ ಚಂದನ್ ಅಮ್ಮ ಏನು ಹೇಳಿದ್ರಂತೆ ಗೊತ್ತೇ?

Chandan Shetty

Profile Vinay Bhat Apr 2, 2025 7:58 AM

ನಿವೇದಿತಾ ಗೌಡ ಅವರಿಂದ ದೂರವಾದ ಬಳಿಕ ಚಂದನ್ ಶೆಟ್ಟಿ (Chandan Shetty) ಸದಾ ಸುದ್ದಿಯಲ್ಲಿದ್ದಾರೆ, ಸಿನಿಮಾ ವಿಚಾರವಾಗಿ ಹಾಗೂ ವೈಯಕ್ತಿಕ ವಿಷಯಗಳ ಬಗ್ಗೆಯೂ ಗಾಸಿಪ್ ಹರಿದಾಡುತ್ತಿದೆ. ಇತ್ತೀಚೆಗಷ್ಟೆ ಸಲಗ ಸುಂದರಿ ಸಂಜನಾ ಆನಂದ್ ಅವರ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಎರಡನೇ ಮದುವೆ ಆಗ್ತಾರೆ ಎಂದು ಹೇಳಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಅನೇಕ ಪೋಸ್ಟ್​ಗಳು ಹರಿದಾಡಿದವು. ಬಳಿಕ ಇತ್ತೀಚೆಗಷ್ಟೆ ಈ ಗಾಳಿ ಸುದ್ದಿಗಳಿಗೆ ಒಂದೇ ವೇದಿಕೆಯಲ್ಲಿ ನಿಂತು ಚಂದನ್‌ ಶೆಟ್ಟಿ ಮತ್ತು ಸಂಜನಾ ಆನಂದ್‌ ಸ್ಪಷ್ಟನೆ ಕೊಟ್ಟರು.

ಇದೀಗ ಚಂದನ್ ಶೆಟ್ಟಿ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ಖಾಸಗಿ ಯೂಟ್ಯೂಬ್ ಚಾನೆಲ್​ವೊಂದರ ಸಂದರ್ಶನದಲ್ಲಿ ‘ನಿಮ್ಮ ಅಮ್ಮನಿಗೆ ನಿಮ್ಮ ವಿಚ್ಛೇದನದ ಬಗ್ಗೆ ಗೊತ್ತಾದಾಗ ಏನು ಅಂದ್ರು?' ಎಂಬ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಚಂದನ್ ಶೆಟ್ಟಿ ‘ಅಮ್ಮನಿಗೆ ಡಿವೋರ್ಸ್ ವಿಷಯ ಗೊತ್ತಾಗಿದ್ದು ಮೊದಲಲ್ಲ, ನಮ್ಮ ನಡುವೆ ಹೊಂದಾಣಿಕೆಯ ಸಮಸ್ಯೆ ಇದೆ ಎಂಬುದು ಅವರಿಗೆ ಮೊದಲೇ ಗೊತ್ತಿತ್ತು. ಅಮ್ಮ ಅಂದ್ರೆನೇ ಹಾಗೆ, ಅವರಿಗೆ ಮಕ್ಕಳ ಬಗ್ಗೆ, ಮಕ್ಕಳ ಮನಸ್ಸಿನಲ್ಲಿ ಇರೋದರ ಬಗ್ಗೆ ಹೇಳದಿದ್ದರೂ ಗೊತ್ತಾಗುತ್ತೆ, ಅದೇ ಅಮ್ಮಂದಿರ ಸ್ಪೆಷಾಲಿಟಿ ಎನ್ನಬಹುದು. ನಾನು ಹೇಳದಿದ್ದರೂ ಅಮ್ಮನಿಗೆ ನಮ್ಮಿಬ್ಬರ ನಡುವೆ ಹೊಂದಾಣಿಕೆ ಆಗುತ್ತಿಲ್ಲ ಎಂಬ ಸೂಕ್ಷ್ಮ ವಿಷಯ ಗಮನಕ್ಕೆ ಬಂದಿತ್ತು’ ಎಂದು ಹೇಳಿದ್ದಾರೆ.

ನಮ್ಮಿಬ್ಬರ ನಡುವೆ ಹೊಂದಾಣಿಕೆ ಮೂಡಿಸಲ ಅಮ್ಮ ಕೂಡ ಸಾಧ್ಯವಾದಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ, ಅದು ಸಾಧ್ಯವೇ ಇಲ್ಲ ಅಂದಾಗ, ಇಬ್ಬರೂ ದೂರವಾದರೇ ಲೈಫ್ ಚೆನ್ನಾಗಿ ಇರುತ್ತೆ ಅಂತಾದರೆ ಹಾಗಾದ್ರೂ ಆಗ್ಲಿ ಎಂದು ಅಮ್ಮನೇ ಹೇಳಿದ್ದಾರೆ. ಆದ್ದರಿಂದ ಅಮ್ಮನಿಗೆ ಡಿವೋರ್ಸ್ ಆದ್ಮೇಲೆ ಗೊತ್ತಾಗಿದ್ದಲ್ಲ, ಡಿವೋರ್ಸ್ ಆಗೋದು ಕೂಡ ಅವರಿಗೆ ಗೊತ್ತಿತ್ತು ಎಂಬ ವಿಚಾರವನ್ನು ಚಂದನ್ ಹೇಳಿದ್ದಾರೆ.

Karna Serial: ಕರ್ಣನಿಗೆ ಸಿಕ್ಕೇ ಬಿಟ್ಟಳು ನಾಯಕಿ?: ಯಾರು ನೋಡಿ

ಇನ್ನು ಎರಡನೇ ಮದುವೆ ಬಗ್ಗೆ ಮಾತನಾಡಿದ ಚಂದನ್ ಶೆಟ್ಟಿ, ‘ಫಸ್ಟ್ ಆಪ್ ಆಲ್, ನಂಗೆ ಅವಳನ್ನ ಮದುವೆ ಆಗಬೇಕು ಅಂತ ಅನಿಸಬೇಕು, ಹಾಗೆ ಆ ಹುಡ್ಗಿ ಇರಬೇಕು. ಬರುವಂತಹ ಹುಡುಗಿ ನನ್ನ ಅಷ್ಟು ಜಾಸ್ತಿ ಪ್ರೀತಿ ಮಾಡಬೇಕು.. ನಾನಂತೂ ನನ್ ಲೈಫಲ್ಲಿ ಬರೋ ಹುಡುಗಿನಾ ಪ್ರೀತಿ ಮಾಡ್ತೀನಿ, ಆದ್ರೆ ಅವಳು ನನಗಿಂತ ಜಾಸ್ತಿ ಪ್ರೀತಿ ಮಾಡಬೇಕು.. ಆ ರೀತಿಯಾಗಿರುವ ಹುಡುಗಿ ನಂಗೆ ಸಿಕ್ಕಿದರೆ ಖಂಡಿತವಾಗಿಯೂ ನಾನು ಆ ಬಗ್ಗೆ ಯೋಚ್ನೆ ಮಾಡುತ್ತೇನೆ, ಮದುವೆ ಆಗುತ್ತೇನೆ’ ಎಂದು ಹೇಳಿದ್ದಾರೆ.