ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ತಾಂಡವ್ ಮತ್ತೊಮ್ಮೆ ಫ್ಲಾಫ್: ತನ್ಮಯ್ ಸ್ಕೂಲ್ ಫೀಸ್ ಕಟ್ಟಿದ ಭಾಗ್ಯ

Bhagya Lakshmi Kannada Serial: ತಾಂಡವ್ ಸ್ಕೂಲ್ ಫೀಸ್ ಕಟ್ಟಲು ತನ್ಮಯ್ ಶಾಲೆಗೆ ತೆರಳುತ್ತಾನೆ. ಆದರೆ, ಅಲ್ಲಿನ ಪ್ರಾಂಶುಪಾಲರು ಹೇಳಿದ ಮಾತು ಕೇಳಿ ತಾಂಡವ್ಗೆ ಶಾಕ್ ಆಗುತ್ತಿದೆ. ತನ್ಮಯ್ ಫೀಸ್ ಈಗಾಗಲೇ ಕಟ್ಟಿ ಆಗಿದೆ ಎಂದು ಅವರು ಹೇಳಿದ್ದಾರೆ.

ತಾಂಡವ್ ಮತ್ತೊಮ್ಮೆ ಫ್ಲಾಫ್: ತನ್ಮಯ್ ಸ್ಕೂಲ್ ಫೀಸ್ ಕಟ್ಟಿದ ಭಾಗ್ಯ

Bhagya Lakshmi Serial

Profile Vinay Bhat Apr 7, 2025 2:16 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತನಗೆ ಎಷ್ಟೇ ಕಷ್ಟ ಬಂದರು ಅದನ್ನು ಯಾರೊಂದಿಗೆ ತೋರಿಸಿಕೊಂಡಿಲ್ಲ. ಮನೆಯಲ್ಲಾಗಲಿ ಅಥವಾ ಮಕ್ಕಳಿಗಾಗಲಿ ಯಾವ ಕಷ್ಟವನ್ನೂ ಹೇಳಿಕೊಂಡಿಲ್ಲ.. ಏನೂ ಕಡಿಮೆ ಆಗದಂತೆ ನೋಡಿಕೊಂಡು ಬಂದಿದ್ದಾಳೆ. ಆದರೆ, ಅತ್ತ ತಾಂಡವ್ ಭಾಗ್ಯಾಳ ಸೋಲಿಗೆ ಕಾದು ಕುಳಿತಿದ್ದಾನೆ. ಭಾಗ್ಯಾಳನ್ನು ತುಳಿಯಲು ಒಂದಲ್ಲ ಒಂದು ಪ್ಲ್ಯಾನ್ ಮಾಡುತ್ತಲೇ ಇದ್ದಾನೆ.. ಅದರಲ್ಲಿ ಫ್ಲಾಫ್ ಕೂಡ ಆಗುತ್ತಲೇ ಇದ್ದಾನೆ. ಆಗ ಮತ್ತೊಮ್ಮೆ ಭಾಗ್ಯಾಳ ಮಾನಕಳೆಯಲು ಹೋಗಿ ತಾಂಡವ್​ ತಾನೇ ಪೇಚಿಗೆ ಸಿಲುಕಿಕೊಂಡಿದ್ದಾನೆ.

ತನ್ಮಯ್​ನ ಸ್ಕೂಲ್ ಫೀಸ್ ಕಟ್ಟಲು ದಿನಾಂಕ ಹತ್ತಿರಬಂದಿದೆ. ಆದರೆ, ಭಾಗ್ಯ ಬಳಿ ಹಣವಿಲ್ಲ. ಕೆಲ ದಿನಗಳ ಹಿಂದೆ ಇದನ್ನು ಅರಿತ ತನ್ಮಯ್, ಅಮ್ಮನ ಕಷ್ಟ ಕಂಡು ಶೂ ಪಾಲೀಶ್ ಮಾಡಲು ಮುಂದಾಗಿದ್ದ. ಫೀಸ್ ಕಟ್ಟಲು ಈ ಹಣವಾದರೂ ಸಹಾಯವಾಗಲಿ ಎಂದು ರೋಡ್ ಬದಿಯಲ್ಲಿ ಎರಡು ದಿನ ಶೂ ಪಾಲೀಶ್ ಮಾಡಿದ್ದ, ಬಳಿಕ ಈ ವಿಚಾರ ತಾಂಡವ್-ಭಾಗ್ಯಾಗೆ ತಿಳಿದು ಬುದ್ದಿ ಹೇಳಿ ಎಲ್ಲವೂ ಸರಿಯಾಗಿತ್ತು. ಈಗ ಮತ್ತೆ ಫೀಸ್ ಕಟ್ಟು ಡೇಟ್ ಹತ್ತಿರವಾಗಿದೆ.

ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ತಾಂಡವ್, ಶ್ರೇಷ್ಠಾ ಜೊತೆ ಡಿಸ್ಕಸ್ ಮಾಡುತ್ತಾನೆ. ಭಾಗ್ಯ ಯಾವುದೇ ಕಾರಣಕ್ಕೂ ಫೀಸ್ ಕಟ್ಟಲ್ಲ.. ಅವಳ ಹತ್ರ ಹಣ ಇಲ್ಲ ಎಂದು ಶ್ರೇಷ್ಠಾ ಹೇಳುತ್ತಾಳೆ. ತಾಂಡವ್, ತನ್ವಿಗೆ ಫೋನ್ ಮಾಡಿ, ನಿನ್ನ ಮೇಲೆ ಇನ್ನೂ ಕೋಪ ಇದೆ, ನಾನು ತನ್ಮಯ್‌ ಜೊತೆ ಮಾತನಾಡಬೇಕು ಎನ್ನುತ್ತಾನೆ. ತನ್ಮಯ್ ಸ್ಕೂಲ್ ಫೀಸ್ ನಾನೇ ಕಟ್ಟುವೆ, ಭಾಗ್ಯ ಬಳಿ ದುಡ್ಡಿಲ್ಲ ಎನ್ನುತ್ತಾನೆ. ಆಗ ಕುಸುಮಾ, ಭಾಗ್ಯ ಫೀಸ್ ಕಟ್ಟುತ್ತಾಳೆ, ನೀನೇನು ಚಿಂತಿಸಬೇಡ, ನಿನ್ನ ಕೆಲಸ ನೋಡಿಕೋ ಎಂದು ಹೇಳುತ್ತಾಳೆ. ಅದನ್ನು ಕೇಳಿ ತಾಂಡವ್‌ಗೆ ಮುಖಭಂಗವಾಗುತ್ತದೆ.

ಈ ಸಲ ನೀನು ಸೋತು ಸುಣ್ಣ ಆಗಿ ನನ್ನ ಮುಂದೆ ಮಂಡಿ ಊರ್ತೀಯ ಎಂದು ತಾಂಡವ್ ಸ್ಕೂಲ್ ಫೀಸ್ ಕಟ್ಟಲು ತನ್ಮಯ್ ಶಾಲೆಗೆ ತೆರಳುತ್ತಾನೆ. ಆದರೆ, ಅಲ್ಲಿನ ಪ್ರಾಂಶುಪಾಲರು ಹೇಳಿದ ಮಾತು ಕೇಳಿ ತಾಂಡವ್​ಗೆ ಶಾಕ್ ಆಗುತ್ತಿದೆ. ತನ್ಮಯ್ ಫೀಸ್ ಈಗಾಗಲೇ ಕಟ್ಟಿ ಆಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಕೇಳಿ ತಾಂಡವ್​ ಆಘಾತಕ್ಕೊಳಗಾಗಿ ಯಾರು ಫೀಸ್ ಕಟ್ಟಿರಬಹುದು ಎಂದು ಯೋಚಿಸುತ್ತಾನೆ. ಆಗ ಭಾಗ್ಯ ಅಲ್ಲೆ ಹಿಂಬದಿಯಲ್ಲಿ ನಿಂತಿರುವುದು ಕಾಣುತ್ತದೆ. ಇಬ್ಬರೂ ಪರಸ್ಪರ ಮುಖಾಮುಖಿ ಆಗುತ್ತಾರೆ. ಅತ್ತ ಕುಸುಮಾ ಕಾಲ್​ನಲ್ಲಿ ತಾಂಡವ್​ಗೆ ಮೈಚಳಿ ಬಿಡಿಸುತ್ತಾಳೆ. ನೀನು ಎಷ್ಟು ಸಲ ಭಾಗ್ಯ ಸೋಲಬೇಕು ಅಂತ ಅಂದುಕೊಳ್ತೀಯೊ.. ಅಷ್ಟೇ ಗೆಲ್ತಾಳೆ ಅವಳು ಎಂದು ಹೇಳಿ ಕಾಲ್ ಇಡುತ್ತಾಳೆ. ಈ ಮೂಲಕ ತಾಂಡವ್​ಗೆ ಮತ್ತೊಮ್ಮೆ ಮುಖಭಂಗ ಆಗಿದೆ.



ಇನ್ನು ಭಾಗ್ಯಾಳ ಕೈ ತುತ್ತಿಗೆ ಉತ್ತಮ ರೆಸ್ಪಾನ್ಸ್ ಕೇಳಿಬರುತ್ತಿದೆ. ಪ್ರತಿದಿನ ಒಳ್ಳೆಯ ಆರ್ಡರ್ ಬರುತ್ತಿದೆ. ಇದರಿಂದ ಮನೆಯವರೆಲ್ಲ ಖುಷಿ ಆಗಿದ್ದಾರೆ. ಭಾಗ್ಯ ಯುಗಾದಿ ಹಬ್ಬದ ಅಡುಗೆ ಊಟ ತಲುಪಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸೈಕಲ್‌ ಓಡಿಸಿಕೊಂಡೇ ಲೊಕೇಷನ್‌ನತ್ತ ಸಾಗುವಾಗ ಟಯರ್ ಪಂಚರ್‌ ಆಗುತ್ತದೆ. ಅತ್ತ ಆರ್ಡರ್ ನೀಡಿದವರು ಈಯಮ್ಮ ಇನ್ನೂ ಬಂದಿಲ್ಲವಲ್ಲ ಎಂದು ಕೋಪದಲ್ಲಿರುತ್ತಾರೆ. ಪಂಚರ್ ಹಾಕಲು ಲೇಟ್ ಆಗುತ್ತೆ ಎಂದಾಗ ತಾನೇ ಪಂಚರ್ ಹಾಕಲು ಭಾಗ್ಯ ಮುಂದಾಗುತ್ತಾಳೆ. ಪಂಚರ್ ಹಾಕಿ ಪುನಃ ಸೈಕಲ್ ತುಳಿದು ಭಾಗ್ಯ ಸರಿಯಾದ ಸಮಯಕ್ಕೆ ಆರ್ಡರ್ ಮುಟ್ಟಿಸಿದ್ದಾಳೆ.

ಆದರೆ, ಆರ್ಡರ್ ಕೊಟ್ಟವರು ಭಾಗ್ಯ ರೋಡ್​ನಲ್ಲೇ ಭಾಗ್ಯ ಮಾಡಿರುವ ಅಡುಗೆಯ ರುಚಿ ನೋಡಿ, ಆಹಾ.. ಎಂದಿದ್ದಾರೆ, ನಂತರ ಊಟ ತೆಗೆದುಕೊಂಡು, ದುಡ್ಡು ಕೊಟ್ಟಿದ್ದಾರೆ. ಮುಂದೆ ಯಾವುದೇ ಕಾರ್ಯಕ್ರಮ ಇದ್ದರೂ, ಊಟದ ಆರ್ಡರ್ ನೀಡುವುದಾಗಿ ಹೇಳಿದ್ದಾರೆ.

Niveditha Gowda: ಬಾಯ್ಸ್‌ v/s ಗರ್ಲ್ಸ್ ಶೋನಲ್ಲಿ ಆ ವಿಚಾರ ನೆನೆದು ಕಣ್ಣೀರಿಟ್ಟ ನಿವೇದಿತಾ ಗೌಡ