ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Niveditha Gowda: ಬಾಯ್ಸ್‌ v/s ಗರ್ಲ್ಸ್ ಶೋನಲ್ಲಿ ಆ ವಿಚಾರ ನೆನೆದು ಕಣ್ಣೀರಿಟ್ಟ ನಿವೇದಿತಾ ಗೌಡ

ಚಂದನ್ ಶೆಟ್ಟಿ ಜೊತೆಗೆ ಮದುವೆಯಾಗಿ, ಬಳಿಕ ವಿಚ್ಛೇದನ ಪಡೆದಿರುವ ನಿವೇದಿತಾ, ಬಾಯ್ಸ್ ವರ್ಸಸ್‌ ಗರ್ಲ್ಸ್ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಇದೀಗ ಈ ಶೋನಲ್ಲಿ ನಿವೇದಿತಾ ಗೌಡ ತನ್ನ ತಂದೆ ಎಷ್ಟು ಬೆಂಬಲ ನೀಡಿದ್ರು ಎಂಬುವುದರ ಬಗ್ಗೆ ಮಾತಾಡುತ್ತಾ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.

ಬಾಯ್ಸ್‌ v/s ಗರ್ಲ್ಸ್ ಶೋನಲ್ಲಿ ಆ ವಿಚಾರ ನೆನೆದು ಕಣ್ಣೀರಿಟ್ಟ ನಿವೇದಿತಾ

Niveditha Gowda and Dhanraj Achar

Profile Vinay Bhat Apr 7, 2025 7:10 AM

ಬಿಗ್ ಬಾಸ್‌ ಕನ್ನಡ ಸೀಸನ್ 5ರಲ್ಲಿ ಖ್ಯಾತಿಯಾಗಿ ಕನ್ನಡಿಗರ ಮನಸ್ಸಿನಲ್ಲಿ ಗೊಂಬೆಯಾಗಿ ಮಿಂಚಿದ ನಿವೇದಿತಾ ಗೌಡ (Niveditha Gowda) ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ತನ್ನ ಬ್ಯೂಟಿ ಮತ್ತು ಗ್ಲಾಮರಸ್‌ ಲುಕ್‌ಗಳಿಂದ ನಿವೇದಿತಾ ವೇಗವಾಗಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದವರು. ಅಂದು ಟಿಕ್‌ ಟಾಕ್‌ ಮೂಲಕವೇ ಖ್ಯಾತಿಯಾಗಿದ್ದ ನಿವೇದಿತಾ ಗೌಡ ಇಂದು ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಮೂಲಕ ಮಿಂಚುತ್ತಿದ್ದಾರೆ. ಜೊತೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಾಯ್ಸ್‌ v/s ಗರ್ಲ್ಸ್ ಶೋನಲ್ಲೂ ಭಾಗವಹಿಸುತ್ತಿದ್ದಾರೆ.

ಚಂದನ್ ಶೆಟ್ಟಿ ಜೊತೆಗೆ ಮದುವೆಯಾಗಿ, ಬಳಿಕ ವಿಚ್ಛೇದನ ಪಡೆದಿರುವ ನಿವೇದಿತಾ, ಬಾಯ್ಸ್ ವರ್ಸಸ್‌ ಗರ್ಲ್ಸ್ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಇದೀಗ ಈ ಶೋನಲ್ಲಿ ಅವರು ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ನನ್ನ ಜೀವನದಲ್ಲಿ ಏನೇನೋ ಆಯ್ತು, ಆಗ ನನ್ನ ಜೊತೆ ನಿಂತಿದ್ದು ಅಪ್ಪ ಎಂದು ಶೋನಲ್ಲಿ ನಿವೇದಿತಾ ಗೌಡ ಅವರು ಹೇಳಿಕೊಂಡಿದ್ದಾರೆ.

ನಿವೇದಿತಾ ಗೌಡ ತನ್ನ ತಂದೆ ಎಷ್ಟು ಬೆಂಬಲ ನೀಡಿದ್ರು ಎಂಬುವುದರ ಬಗ್ಗೆ ಮಾತಾಡುತ್ತಾ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ನಿವೇದಿತಾ ಗೌಡ ತಂದೆಯ ಬಗ್ಗೆ ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರ ಕಣ್ಣಲ್ಲೂ ನೀರು ತುಂಬಿ ಬಂದಿದೆ. ಬಾಯ್ಸ್ ವರ್ಸಸ್‌ ಗರ್ಲ್ಸ್ ಶೋನಲ್ಲಿ ಎಲ್ಲಾ ಸ್ಪರ್ಧಿಗಳನ್ನು ಒಟ್ಟುಗೂಡಿಸಿ ಡ್ಯಾನ್ಸ್ ರೌಂಡ್ ಮಾಡಲಾಗಿದೆ. ಅದರಲ್ಲಿ ನಿವೇದಿತಾ ಗೌಡ ಮತ್ತು ಧನರಾಜ್ ಆಚಾರ್ ಅವರು ತಂದೆ-ಮಗಳಾಗಿ ಡ್ಯಾನ್ಸ್ ಮಾಡಿದ್ದಾರೆ. ರಮೇಶ್ ಅರವಿಂದ್ ನಟನೆಯ ಪುಷ್ಪಕ ವಿಮಾನ ಸಿನಿಮಾದ ಮುಗಿಲು ಬೆಳ್ಮುಗಿಲು ನನ್ನ ಈ ಮಗಳು.. ಹಾಡಿಗೆ ಧನು ಮತ್ತು ನಿವಿ ಭಾವುಕರಾಗಿ ಡ್ಯಾನ್ಸ್ ಮಾಡಿದ್ದಾರೆ. ಇದು ನೋಡಗರ ಮನಗೆದ್ದಿದೆ. ಇದೇ ವೇಳೆ ತಮ್ಮ ತಂದೆಯನ್ನು ನೆನಪು ಮಾಡಿಕೊಂಡಿರುವ ನಿವೇದಿತಾ ಗೌಡ ಕಣ್ಣೀರಿಟ್ಟಿದ್ದಾರೆ.

ನನ್ನ ಲೈಫ್‌ನಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿ ಆಗಿರೋಕೆ ನನ್ನ ತಂದೆಯೇ ಕಾರಣ. ನಾನು ನಿನ್ನ ಜೊತೆಗೆ ಇದೀನಿ, ತಲೆ ಕೆಡಿಸಿಕೊಳ್ಳಬೇಡ ಅಂತ ಹೇಳ್ತಾರೆ. ಇದು ಅವರಿಗೆ ನಿಜಕ್ಕೂ ಕಷ್ಟ ಎಂದು ನಿವೇದಿತಾ ಗೌಡ ಅವರು ಹೇಳಿದ್ದಾರೆ. ನಿವೇದಿತಾ ಮಾತು ಕೇಳಿ ಐಶ್ವರ್ಯಾ ಶಿಂಧೋಗಿ, ನಿವೇದಿತಾ ಗೌಡ, ರಜತ್‌ ಕಣ್ಣಾಲೆ ಕೂಡ ಒದ್ದೆಯಾಗಿದೆ.

ಈ ಶೋನಲ್ಲಿ ಅದಿತಿ ಪ್ರಭುದೇವ, ನೆನಪಿರಲಿ ಪ್ರೇಮ್‌ ಅವರು ಅತಿಥಿಗಳಾಗಿದ್ದರು. ಈ ಡ್ಯಾನ್ಸ್​ ಬಗ್ಗೆ ಮಾತಾಡಿದ ನಟ ಪ್ರೇಮ್‌, ಪ್ರಪಂಚದಲ್ಲಿ ತಂದೆ ಎನ್ನೋ ಜೀವನೇ ಹಾಗೆ. ವಿಶೇಷವಾಗಿ ಹೆಣ್ಣು ಮಕ್ಕಳು ಏನಾದರೂ ಕೇಳಿದಾಗ ಜೀವ ಬಿಟ್ಟು, ಏನು ಬೇಕಿದ್ರೂ ತಂದುಕೊಡ್ತಾರೆ ಎಂದು ಹೇಳಿದ್ದಾರೆ.

Rajath Kishan: ಬಾಯ್ಸ್ vs ಗರ್ಲ್ಸ್ ಶೋಗೆ ಬೆಂಕಿಯಂತೆ ಎಂಟ್ರಿಕೊಟ್ಟ ರಜತ್: ವಿನಯ್ ಗೌಡ ಅಬ್ಸೆಂಟ್