ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಯಾರಾಗುತ್ತಾರೆ ಸ್ಟೂಡೆಂಟ್ ಆಫ್ ದಿ ವೀಕ್?: ಕಠಿಣ ಟಾಸ್ಕ್ ನೀಡಿದ ಬಿಗ್ ಬಾಸ್

ಒಂದು ತಂಡದ ಸದಸ್ಯರು ಎದುರಾಳಿ ತಂಡದ ಸದಸ್ಯರನ್ನು ಮನವೊಲಿಸಿ ನಮಗೆ ವೋಟ್ ಹಾಕಬೇಕೆಂದು ರೆಕ್ವೆಸ್ಟ್ ಮಾಡಬೇಕು. ಸದ್ಯ ಈರೀತಿ ನಡೆದ ಪ್ರಕ್ರಿಯೆಯಲ್ಲಿ ಒಟ್ಟು ನಾಲ್ಕು ಜನ ಕಾವ್ಯಾ ಶೈವಾ, ಧನುಷ್, ಜಾನ್ವಿ ಮತ್ತು ಅಭಿ ಸ್ಟೂಡೆಂಟ್ ಆಫ್ ದಿ ವೀಕ್ ಟಾಸ್ಕ್ಗೆ ಆಯ್ಕೆ ಆಗಿದ್ದಾರೆ. ಈ ಟಾಸ್ಕ್ ಇಂದು ನಡೆಯಲಿದೆ. ಬಿಗ್ ಬಾಸ್ ಕಠಿಣ ಟಾಸ್ಕ್ ಅನ್ನೇ ನೀಡಿದ್ದಾರೆ.

BBK 12: ಯಾರಾಗುತ್ತಾರೆ ಸ್ಟೂಡೆಂಟ್ ಆಫ್ ದಿ ವೀಕ್?

Student of the week task -

Profile Vinay Bhat Oct 31, 2025 8:25 AM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada 12) ಈ ವಾರ ಡೊಡ್ಡ ಡ್ರಾಮವೇ ನಡೆದು ಹೋಗಿದೆ. ಸ್ಟೂಡೆಂಟ್ ಆಫ್ ದಿ ವೀಕ್​ಗಾಗಿ ನಡೆದ ಟಾಸ್ಕ್​ಗಳಲ್ಲಿ ಒಂದು ತಂಡ ಜಯ ಸಾಧಿಸಿದರೂ ಅವರಲ್ಲಿ ಒಮ್ಮತದ ನಿರ್ಧಾರ ಇರದ ಕಾರಣ ಬಿಗ್ ಬಾಸ್ ದೊಡ್ಡ ನಿರ್ಧಾರ ತೆಗೆದುಕೊಂಡರು. ಇದೀಗ ಇಂದು ಕ್ಯಾಪ್ಟನ್ ಪಟ್ಟಕ್ಕಾಗಿ ಸ್ಟೂಡೆಂಟ್ ಆಫ್ ದಿ ವೀಕ್ ಟಾಸ್ಕ್ ನಡೆಯಲಿದೆ. ಇದರಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ನೋಡಬೇಕಿದೆ. ರೇಸ್​ನಲ್ಲಿ ಒಟ್ಟು ನಾಲ್ಕು ಜನ ಸ್ಪರ್ಧಿಗಳಿದ್ದಾರೆ.

ಈವಾರ ಕ್ಯಾಪ್ಟನ್ಸಿ ಓಟಕ್ಕಾಗಿ ನಡೆದ ನೀಲಿ ತಂಡ- ಕೆಂಪು ತಂಡ ನಡುವಣ ಟಾಸ್ಕ್​ನಲ್ಲಿ ಅಂತಿಮವಾಗಿ ಕೆಂಪು ತಂಡ ಜಯ ಸಾಧಿಸಿತು. ಹೀಗಾಗಿ ಇವರ ತಂಡದಿಂದ ಓರ್ವ ಸದಸ್ಯನನ್ನು ಸ್ಟೂಡೆಂಟ್ ಆಫ್ ದಿ ವೀಕ್​ಗೆ ಆಯ್ಕೆ ಮಾಡಬೇಕಿತ್ತು. ಅವರದ್ದೇ ತಂಡದ ಸದಸ್ಯರು ಒಮ್ಮತದ ನಿರ್ಧಾರ ಕೈಗೊಳ್ಳಬೇಕಿತ್ತು. ಅಶ್ವಿನಿ ಗೌಡ, ಕಾಕ್ರೋಚ್ ಸುಧಿ, ಧನುಷ್, ರಾಶಿಕಾ ಹಾಗೂ ಮಾಲು ರಾಶಿಕಾ ಹೆಸರನ್ನು ತೆಗೆದುಕೊಂಡರು. ಆದರೆ, ಗಿಲ್ಲಿ ಮತ್ತು ಸ್ಪಂದನಾ ತಮ್ಮ ತಮ್ಮ ಹೆಸರನ್ನು ತೆಗೆದುಕೊಂಡರು.

ಎಷ್ಟೇ ಚರ್ಚೆ ಮಾಡಿದರೂ ಗಿಲ್ಲಿ ಇತರರ ಹೆಸರು ಸೂಚಿಸಲು ತಯಾರಿರಲಿಲ್ಲ. ರಾಶಿಕಾಗೆ ಹೆಚ್ಚು ವೋಟ್ ಬಂದಿದ್ದರೂ ಇಲ್ಲಿ ಒಮ್ಮತದ ನಿರ್ಧಾರ ಇಲ್ಲದ ಕಾರಣ ಬಿಗ್ ಬಾಸ್ ಕೆಂಪು ತಂಡಕ್ಕೆ ಸಿಕ್ಕ ಸ್ಟೂಡೆಂಟ್ ಆಫ್ ದಿ ವೀಕ್ ಆಫರ್ ಅನ್ನು ರದ್ದುಗೊಳಿಸಿದರು. ಬಳಿಕ ಬಿಗ್ ಬಾಸ್ ಇನ್ನೊಂದು ಆಫರ್ ನೀಡಿದರು. ಒಂದು ತಂಡದ ಸದಸ್ಯರು ಎದುರಾಳಿ ತಂಡದ ಸದಸ್ಯರನ್ನು ಮನವೊಲಿಸಿ ನಮಗೆ ವೋಟ್ ಹಾಕಬೇಕೆಂದು ರೆಕ್ವೆಸ್ಟ್ ಮಾಡಬೇಕು. ಸದ್ಯ ಈರೀತಿ ನಡೆದ ಪ್ರಕ್ರಿಯೆಯಲ್ಲಿ ಒಟ್ಟು ನಾಲ್ಕು ಜನ ಕಾವ್ಯಾ ಶೈವಾ, ಧನುಷ್, ಜಾನ್ವಿ ಮತ್ತು ಅಭಿ ಸ್ಟೂಡೆಂಟ್ ಆಫ್ ದಿ ವೀಕ್ ಟಾಸ್ಕ್​ಗೆ ಆಯ್ಕೆ ಆಗಿದ್ದಾರೆ.



ಈ ಟಾಸ್ಕ್ ಇಂದು ನಡೆಯಲಿದೆ. ಬಿಗ್ ಬಾಸ್ ಕಠಿಣ ಟಾಸ್ಕ್ ಅನ್ನೇ ನೀಡಿದ್ದಾರೆ. ಟಾಸ್ಕ್ ಏನಪ್ಪ ಅಂದ್ರೆ, ಈ 4 ಜನ ಸ್ಪರ್ಧಿಗಳು ತಮ್ಮ ಎರಡೆರಡು ಭಾವಚಿತ್ರವನ್ನು ಬೇರೆ ಯಾರಿಗೂ ಸಿಗದಂತೆ ಬಚ್ಚಿಡಬೇಕು, ನಾಲ್ಕು ಅಭ್ಯರ್ಥಿಗಳ ಬೆಂಬಲಿಗರು ಉಳಿದ ಮೂವರ ಭಾವಚಿತ್ರವನ್ನು ಹುಡುಕಿ ಎಕ್ಸ್ ಗುರುತಿನ ಫ್ರೇಮ್ ಒಳಗೆ ಹಾಕಬೇಕು. ಖಾಲಿ ಪ್ರೇಮ್​ನಲ್ಲಿ ತನ್ನ ಭಾವಚಿತ್ರ ಹೊಂದಿರುವ ಅಭ್ಯರ್ಥಿ ಸ್ಟೂಡೆಂಟ್ ಆಫ್ ದಿ ವೀಕ್ ಆಗುತ್ತಾರೆ. ಈ ಟಾಸ್ಕ್​​ನಲ್ಲಿ ಯಾರು ಗೆಲ್ಲುತ್ತಾರೆ?, ಮನೆಯ ನೂತನ ಕ್ಯಾಪ್ಟನ್ ಯಾರು ಆಗುತ್ತಾರೆ ಎಂಬುದು ನೋಡಬೇಕಿದೆ.

Kannada Serial TRP: ಕರ್ಣ ನಂಬರ್ 1, ಅಮೃತಧಾರೆ ನಂಬರ್ 2: ಬಿಗ್ ಬಾಸ್​ಗೆ ಎಷ್ಟು ಟಿಆರ್​ಪಿ?