ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಮನೆಯಲ್ಲಿ ಸುಳ್ಳು ಹೇಳಿ ಲಗೇಜ್ ಹಿಡ್ಕೊಂಡು ಭಾಗ್ಯ ಮನೆಗೆ ಬಂದ ಆದೀ

ಮನೆಯಲ್ಲಿ ಏನು ಹೇಳಬೇಕೆಂದು ತಿಳಿಯದೆ ಆದ ರಾಮ್​ದಾಸ್ ಬಳಿ ಪ್ರಾಜೆಕ್ಟ್ ವಿಚಾರವಾಗಿ ಒಂದು ವಾರ ಹೊರಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿ ಡ್ರೆಸ್ ಎಲ್ಲ ಪ್ಯಾಕ್ ಮಾಡಿಕೊಂಡು ಭಾಗ್ಯ ಮನೆಗೆ ಸ್ಯೂಟ್ ಕೇಸ್ ಹಿಡಿದುಕೊಂಡು ಬಂದಿದ್ದಾನೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್, ಭಾಗ್ಯಾಗೆ ಚಾಲೆಂಜ್ ಮಾಡಿ ಒಂದು ವಾರ ನಾನು ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಭಾಗ್ಯ ಕೂಡ ಒಪ್ಪಿದ್ದಾಳೆ. ಅದರಂತೆ ಆದೀ ಭಾಗ್ಯ ಮನೆಗೆ ಬಂದು ಏಳು ದಿನಗಳ ಚಾಲೆಂಜ್ ಅನ್ನು ಆದೀ ಶುರುಮಾಡಿದ್ದಾನೆ. ಮನೆಯಲ್ಲಿ ಏನು ಹೇಳಬೇಕೆಂದು ತಿಳಿಯದೆ ರಾಮ್​ದಾಸ್ ಬಳಿ ಪ್ರಾಜೆಕ್ಟ್ ವಿಚಾರವಾಗಿ ಒಂದು ವಾರ ಹೊರಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿ ಡ್ರೆಸ್ ಎಲ್ಲ ಪ್ಯಾಕ್ ಮಾಡಿಕೊಂಡು ಭಾಗ್ಯ ಮನೆಗೆ ಸ್ಯೂಟ್ ಕೇಸ್ ಹಿಡಿದುಕೊಂಡು ಬಂದಿದ್ದಾನೆ.

ಇದಕ್ಕೆಲ್ಲ ಕಾರಣವಾಗಿದ್ದು ಆ 25 ಲಕ್ಷ ಹಣ. ಆದೀಶ್ವರ್ ಹಾಗೂ ತಾಂಡವ್ ಬಿಸಿನೆಸ್ ಪಾರ್ಟ್ನರ್ಸ್ ಆಗಿದ್ದಾರೆ. ಪ್ರಾಜೆಕ್ಟ್ ಪ್ರೆಸೆಂಟೇಷನ್ ಸಂದರ್ಭದಲ್ಲಿ ಬಹುಮುಖ್ಯ ಫೈಲ್‌ವೊಂದನ್ನ ತಾಂಡವ್‌ ಮಿಸ್ ಮಾಡಿಕೊಂಡಿದ್ದ. ಅದೇ ಫೈಲ್‌ ಅನ್ನು ಭಾಗ್ಯ ಸರಿಯಾದ ಸಮಯಕ್ಕೆ ತಂದುಕೊಟ್ಟಳು. ಭಾಗ್ಯ ಸಮಯಪ್ರಜ್ಞೆಯಿಂದ ಪ್ರಾಜೆಕ್ಟ್ ಓಕೆ ಆಯ್ತು. ಹೀಗಾಗಿ, ಭಾಗ್ಯಗೆ ಪ್ರಾಜೆಕ್ಟ್‌ನಲ್ಲಿ ಪಾಲು ಕೊಡುವ ರೂಪದಲ್ಲಿ 25 ಲಕ್ಷ ರೂಪಾಯಿಯನ್ನ ಆದಿ ನೀಡಿದನು. ಆದರೆ, ಆ ಹಣವನ್ನ ಸ್ವೀಕರಿಸಲು ಭಾಗ್ಯ ತಯಾರಿಲ್ಲ.

ಹೆಚ್ಚು ದುಡ್ಡಿನಿಂದ ಭಾರವಾಗುತ್ತಿದೆ ಎಂದು ಭಾಗ್ಯ ಪದೇ ಪದೇ ಹೇಳಿದಳು. ಆಫೀಸ್​ಗೆ ಬಂದು ಆ ಹಣವನ್ನು ಪುನಃ ಆದೀಗೆ ನೀಡಲು ಮುಂದಾದಳು. ಹೀಗಾಗಿ, ಭಾಗ್ಯಳಂತೆ ತಾನೂ ಮಿಡಲ್‌ ಕ್ಲಾಸ್‌ ಜೀವನ ನಡೆಸುತ್ತೇನೆ. ಈ ಚಾಲೆಂಜ್‌ನಲ್ಲಿ ಗೆದ್ದರೆ ಭಾಗ್ಯ 25 ಲಕ್ಷ ರೂಪಾಯಿ ತೆಗೆದುಕೊಳ್ಳಬೇಕು ಇಲ್ಲಾಂದ್ರೆ ಬಿಸಿನೆಸ್‌ ಪಾರ್ಟ್ನರ್ ಆಗಬೇಕು ಅಂತ ಆದೀಶ್ವರ್ ಸವಾಲು ಹಾಕಿದ್ದಾನೆ. ಒಂದು ವಾರ ನಾನು ನಿಮ್ಮತರ ಜೀವನ ಮಾಡಿ ನೋಡ್ತೀನಿ.. ಅದೇನೊ ಕಷ್ಟ ಅದು-ಇದು ಅಂತ ಹೇಳ್ತೀತಿ ಅಲ್ವಾ ಅದೇನು ಅಂತ ನಾನೂ ನೋಡ್ತೀನಿ ಎಂದು ಹೇಳಿದ್ದಾನೆ.



ಚಾಲೆಂಜ್‌ಗೆ ಭಾಗ್ಯ ಸಹ ಒಪ್ಪಿಕೊಂಡಿದ್ದಾಳೆ. ಜೊತೆಗೆ ಆದೀಶ್ವರ್ ಕಾಮತ್‌ಗೆ ಒಂದಷ್ಟು ಕಂಡೀಷನ್ಸ್ ಹಾಕಿದ್ದಾಳೆ. ಕಂಡೀಷನ್ ಪ್ರಕಾರ, ಭಾಗ್ಯ ಮನೆಯ ಮೇಲಿರುವ ರೂಮ್‌ನಲ್ಲೇ ಆದಿ ವಾಸ ಮಾಡಬೇಕು. ಆದಿ ಸ್ವತಃ ಮನೆಯ ಕೆಲಸ ಮಾಡಬೇಕು. ಒಂದು ವಾರಕ್ಕೆ 3 ಶರ್ಟ್‌ ಮತ್ತು 2 ಪ್ಯಾಂಟ್ ಮಾತ್ರ ಬಳಕೆ ಮಾಡಬೇಕು. ದಿನಕ್ಕೆ 150 ರೂಪಾಯಿ ಮಾತ್ರ ಖರ್ಚು ಮಾಡಬೇಕು. ಕಾಮತ್ ಮನೆತನದ ಹೆಸರನ್ನ ಆದಿ ಎಲ್ಲೂ ಬಳಸುವಂತಿಲ್ಲ.

ಮರುದಿನ ಆದೀ ಈ ಸವಾಲಿಗೆ ಸಜ್ಜಾಗಿದ್ದಾನೆ. ಮನೆಯಲ್ಲಿ ಆದೀ ಈ ಚಾಲೆಂಜ್ ಬಗ್ಗೆ ಹೇಳುವಂತಿಲ್ಲ.. ಹೀಗಾಗಿ ಸುಳ್ಳು ಹೇಳಿದ್ದಾನೆ. ತುಂಬಾ ಇಂಪಾರ್ಟೆಂಟ್ ಕೆಲಸ ಒಂದಿದೆ.. ಒಂದು ವಾರದ ಮಟ್ಟಿಗೆ ನಾನು ಹೊರಗೆ ಹೋಗುತ್ತಿದ್ದೇನೆ.. ನಾನು ಅಲ್ಲೇ ಇದ್ದು ಆ ಕೆಲಸ ಮಾಡಿಕೊಳ್ಳಬೇಕು, ಹೀಗಾಗಿ ಅಲ್ಲೆ ಉಳಿದುಕೊಳ್ಳುತ್ತೇನೆ.. ಹೀಗಾಗಿ ಮನೆ ಕಡೆ ಬರೋಕೆ ಆಗಲ್ಲ.. ಯಾವ ಕಡೆ ಅಂತ ಈಗಲೇ ಹೇಳೋಕೆ ಆಗಲ್ಲ.. ಹೇಳಿದ್ರೆ ಸರ್​ಪ್ರೈಸ್ ಎಲ್ಲ ಹಾಳಾಗುತ್ತೆ, ಬಂದ ಮೇಲೆ ಎಲ್ಲ ಹೇಳುತ್ತೇನೆ ಅಂತ ಹೇಳಿ ಹೊರಟಿದ್ದಾನೆ.



ಬಳಿಕ ಭಾಗ್ಯ ಮನೆಗೆ ಸ್ಯೂಟ್ ಕೇಸ್ ಹಿಡಿದುಕೊಂಡು ಬಂದಿದ್ದಾನೆ. ಆದೀ ಬರಲ್ಲ ಎಂದು ಭಾಗ್ಯ ಅಂದುಕೊಂಡಿದ್ದಳು.. ಆದರೆ ಆದೀ ಬಂದಿರುವುದನ್ನು ಆಕೆಗೆ ಶಾಕ್ ಆಗಿದೆ.. ಕುಸುಮಾ ಸೇರಿದಂತೆ ಮನೆಯವರೆಲ್ಲ ಮತ್ತೊಮ್ಮೆ ಆದೀ ಬಳಿ ಇದೆಲ್ಲ ಬೇಡ ಎಂದು ಹೇಳಿದ್ದಾರೆ.. ಅದಕ್ಕೆ ಆದೀ, ನನಗೆ ಗೊತ್ತು ನಿಮಗೆಲ್ಲ ಇದು ಇಷ್ಟವಿಲ್ಲ ಎಂದು.. ಆದರೆ, ಇದನ್ನ ನಾನು ಮಾಡಲೇ ಬೇಕಿದೆ ಎಂದು ಹೇಳಿದ್ದಾನೆ. ಬಳಿಕ ಭಾಗ್ಯ ಆದೀಶ್ವರ್​ಗೆ ಉಳಿದುಕೊಳ್ಳಲು ರೂಮ್​ ಕೀ ಕೊಟ್ಟಿದ್ದಾಳೆ.

ಮತ್ತೊಂದೆಡೆ ಅತ್ತ ಆದೀಶ್ವರ್ ಆಫೀಸ್​ನಲ್ಲಿ ಪ್ರಾಜೆಕ್ಟ್ ವಿಚಾರವಾಗಿ ಇಂಪಾರ್ಟೆಂಟ್ ಮೀಟಿಂಗ್ ಏರ್ಪಡಿಸಲಾಗಿದೆ. ಆದೀಶ್ವರ್, ತಾಂಡವ್​ಗೆ ಕಾಲ್ ಮಾಡಿ ನಾನು ಬರೋದು ಸ್ವಲ್ಪ ತಡವಾಗಬಹುದು.. ನೀವೇ ಮ್ಯಾನೇಜ್ ಮಾಡಿ ಎಂದು ಹೇಳಿದ್ದಾನೆ. ಆದರೆ, ಮೀಟಿಂಗ್ ಶುರುವಾಗುವ ಹೊತ್ತಿಗೆ ಎಲ್ಲರೂ ಆದೀ ಎಲ್ಲಿ ಎಂದು ತಾಂಡವ್ ಬಳಿ ಕೇಳಿದ್ದಾರೆ. ಅತ್ತ ತಾಂಡವ್ ಎಷ್ಟು ಕಾಲ್ ಮಾಡಿದರೂ ಆದೀಶ್ವರ್ ಫೋನ್ ಪಿಕ್ ಮಾಡುತ್ತಿಲ್ಲ.. ಸದ್ಯ ಈ ಪ್ರಾಜೆಕ್ಟ್​ಯೇ ಕೈಬಿಟ್ಟೋಗುತ್ತ ಎಂಬುದು ನೋಡಬೇಕಿದೆ. ಮತ್ತೊಂದೆಡೆ ಏಳು ದಿನಗಳ ಈ ಸವಾಲ್​ ಅನ್ನು ಆದೀ ಯಾವರೀತಿ ಮಾಡುತ್ತಾರೆ ಎಂಬುದು ರೋಚಕತೆ ಸೃಷ್ಟಿಸಿದೆ.

Sanjana Burli: ಬಿಗ್ ಬಾಸ್ ಶಿಶಿರ್ ಹೊಸ ಧಾರಾವಾಹಿಗೆ ಪುಟ್ಟಕ್ಕನ ಮಕ್ಕಳು ಸಂಜನಾ ನಾಯಕಿ